ಅಪ್ರಾಪ್ತೆಯ ಮೇಲೆ ಅಪರಿಚಿತರಿಂದ ಅತ್ಯಾಚಾರ; ಬಾತ್​ ಟಬ್​ನಲ್ಲಿ ಮುಳುಗಿಸಿ ಕೊಲೆ

news18
Updated:August 24, 2018, 2:56 PM IST
ಅಪ್ರಾಪ್ತೆಯ ಮೇಲೆ ಅಪರಿಚಿತರಿಂದ ಅತ್ಯಾಚಾರ; ಬಾತ್​ ಟಬ್​ನಲ್ಲಿ ಮುಳುಗಿಸಿ ಕೊಲೆ
news18
Updated: August 24, 2018, 2:56 PM IST
ನ್ಯೂಸ್​18 ಕನ್ನಡ

ಥಾಣೆ (ಆ. 24):  ಮಹಾರಾಷ್ಟ್ರದ ಭಿವಾಂಡಿಯಲ್ಲಿ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ.

ಅಪ್ರಾಪ್ತರ ಮೇಲೆ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ದೇಶಾದ್ಯಂತ ಈ ಬಗ್ಗೆ ಪ್ರತಿಭಟನೆಗಳು ನಡೆದಿದ್ದರೂ ಕ್ರೂರಿಗಳ ದೌರ್ಜನ್ಯ ಮಾತ್ರ ನಿಂತಿಲ್ಲ. ಎಳೆಯ ಹಸುಳೆಗಳ ಮೇಲೂ ಕಾಮತೃಷೆ ತೀರಿಸಿಕೊಳ್ಳುವ ಕೆಲ ನೀಚ ಮನಸುಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ.


ಇಂದು ಮಹಾರಾಷ್ಟ್ರದಲ್ಲಿ ಅಂಥದೇ ವಿಕೃತ ಪ್ರಕರಣವೊಂದು ಬೆಳಕಿಗೆ ಬಂದಿದೆ. 14 ವರ್ಷದ ಬಾಲಕಿಯನ್ನು ಆಕೆಯದೇ ಮನೆಯಲ್ಲಿ ಅತ್ಯಾಚಾರ ನಡೆಸಿ, ಯಾವುದೋ ವಸ್ತುವಿನಿಂದ ಥಳಿಸಿ, ಬಾತ್​ರೂಮಿನ ಟಬ್​ನಲ್ಲಿ ಮುಳುಗಿಸಿ ಕೊಲೆ ಮಾಡಲಾಗಿದೆ.  ನಿನ್ನೆ ಮಧ್ಯಾಹ್ನ ಆ ಬಾಲಕಿ ಒಬ್ಬಳೇ ಮನೆಯಲ್ಲಿದ್ದಾಗ ಮನೆಗೆ ನುಗ್ಗಿದ ಅಪರಿಚಿತರು ಈ ಕೃತ್ಯವೆಸಗಿದ್ದಾರೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣದಡಿ ದೂರು ದಾಖಲಿಸಿಕೊಳ್ಳಲಾಗಿದೆ.

ಎಷ್ಟು ಜನ ಸೇರಿ ಈ ಕೃತ್ಯ ಮಾಡಿದ್ದಾರೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಬಾಲಕಿಯ ಅಕ್ಕ ನಿನ್ನೆ ಸಂಜೆ ಮನೆಗೆ ವಾಪಾಸಾದಾಗ ಈ ವಿಷಯ ಗೊತ್ತಾಗಿದೆ. ಮೃತ ಬಾಲಕಿಯ ಅಪ್ಪ-ಅಮ್ಮ ಮನೆಗೆ ಹಿಂತಿರುಗಿದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

 
First published:August 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ