ಛತ್ತೀಸ್​ಗಡದಲ್ಲಿ ಭದ್ರತಾ ಪಡೆಗಳಿಂದ 14 ನಕ್ಸಲರ ಹತ್ಯೆ


Updated:August 6, 2018, 2:35 PM IST
ಛತ್ತೀಸ್​ಗಡದಲ್ಲಿ ಭದ್ರತಾ ಪಡೆಗಳಿಂದ 14 ನಕ್ಸಲರ ಹತ್ಯೆ
ಪ್ರಾತಿನಿಧಿಕ ಚಿತ್ರ

Updated: August 6, 2018, 2:35 PM IST
- ನ್ಯೂಸ್18 ಕನ್ನಡ

ರಾಯಪುರ(ಆ. 06): ಛತ್ತೀಸ್​ಗಡದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ 14 ಮಾವೋವಾದಿ ಹೋರಾಟಗಾರರು ಹತ್ಯೆಯಾಗಿದ್ದಾರೆ. ಬಸ್ತಾರ್ ಪ್ರದೇಶದ ಸುಕ್ಮಾ ಜಿಲ್ಲೆಯಲ್ಲಿ ಗೊಲ್ಲಪ್ಪಳ್ಳಿ ಮತ್ತು ಕೋಂಟಾ ನಡುವಿನ ಅರಣ್ಯ ಪ್ರದೇಶದ ಗ್ರಾಮವೊಂದರಲ್ಲಿ ಈ ಎನ್​ಕೌಂಟರ್ ನಡೆದಿದೆ. ಅರಣ್ಯ ಪ್ರದೇಶದಲ್ಲಿ ನಕ್ಸಲರು ಅಡಗಿರುವ ಮಾಹಿತಿ ಪಡೆದು ಭದ್ರತಾ ಪಡೆಗಳ ಮೂರು ಗುಂಪುಗಳು ಈ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ವೇಳೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿ ಮಾವೋವಾದಿ ಉಗ್ರರನ್ನು ಹತ್ಯೆಗೈದಿದ್ದಾರೆ. ಕೇಂದ್ರ ಮೀಸಲು ಪೊಲೀಸ್ ಪಡೆ, ಜಿಲ್ಲಾ ಮೀಸಲು ಕಾವಲುಪಡೆ ಮತ್ತು ವಿಶೇಷ ಕಾರ್ಯಪಡೆಗಳು ಈ ಕಾರ್ಯಾಚರಣೆ ನಡೆಸಿವೆ.

ಆದರೆ, ಈ ಎನ್​ಕೌಂಟರ್​ನಲ್ಲಿ ಎಷ್ಟು ನಕ್ಸಲರು ಹತ್ಯೆಯಾಗಿದ್ಧಾರೆಂಬ ನಿಖರ ಮಾಹಿತಿ ಲಭಿಸಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ 14 ಮಾವೊವಾದಿಗಳ ದೇಹಗಳು ಎನ್​ಕೌಂಟರ್ ನಡೆದ ಸ್ಥಳದಲ್ಲಿ ಸಿಕ್ಕಿವೆ.

ಅರಣ್ಯ ಪ್ರದೇಶಗಳಿಂದ ಆವೃತವಾಗಿರುವ ಹಾಗೂ ಬುಡಕಟ್ಟು ಜನಾಂಗಗಳು ಹೆಚ್ಚಾಗಿ ನೆಲಸಿರುವ ಬಸ್ತಾರ್ ಪ್ರದೇಶದಲ್ಲಿ ನಕ್ಸಲರ ಇರುವಿಗೆ ಪ್ರಬಲವಾಗಿದೆ. ಮುಂಗಾರಿನ ಸಮಯದಲ್ಲಿ ನಕ್ಸಲರು ದಟ್ಟಕಾನನದ ನಡುವೆ ಅಡಗಿಕೊಂಡಿರುವುದು ಸಾಮಾನ್ಯ. ನದಿ ಪ್ರವಾಹ ಹಾಗೂ ದಟ್ಟ ಮರಗಿಡಗಳಿಂದಾಗಿ ಭದ್ರತಾ ಪಡೆಗಳು ಸಾಮಾನ್ಯವಾಗಿ ಈ ಭಾಗಕ್ಕೆ ಹೋಗುವ ಸಾಹಸ ಮಾಡುವುದಿಲ್ಲ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ