• Home
  • »
  • News
  • »
  • national-international
  • »
  • ಸಮುದ್ರದಾಳದಲ್ಲಿ 14 ಕಾಲುಗಳ ಬೆತಿನೋಮಸ್ ರಾಕ್ಷಸ; ಸ್ಟಾರ್ ವಾರ್ಸ್​ನ ಡಾರ್ತ್ ವಾಡೆರ್ ಕ್ಯಾರೆಕ್ಟರ್ ಹೋಲುತ್ತೆ ಈ ಜೀವಿ

ಸಮುದ್ರದಾಳದಲ್ಲಿ 14 ಕಾಲುಗಳ ಬೆತಿನೋಮಸ್ ರಾಕ್ಷಸ; ಸ್ಟಾರ್ ವಾರ್ಸ್​ನ ಡಾರ್ತ್ ವಾಡೆರ್ ಕ್ಯಾರೆಕ್ಟರ್ ಹೋಲುತ್ತೆ ಈ ಜೀವಿ

ಬೆತಿನೋಮಸ್ ರಾಕ್ಷಸ ಜಿರಳೆ

ಬೆತಿನೋಮಸ್ ರಾಕ್ಷಸ ಜಿರಳೆ

ಸಿಂಗಾಪುರ ಮತ್ತು ಇಂಡೋನೇಷ್ಯಾದ ಸಾಗರ ಅನ್ವೇಷಕರ ತಂಡಗಳು ಜಂಟಿಯಾಗಿ ಆಳ ಸಮುದ್ರದ ಅನ್ವೇಷಣೆ ನಡೆಸುವ ವೇಳೆ ಈ ರಾಕ್ಷಸ ಜಿರಳೆ ಪತ್ತೆಯಾಗಿತ್ತು. ಬೆತಿನೋಮಸ್ ರಾಕ್ಷಸ ಎಂದು ಹೆಸರಿಸಲಾಗಿರುವ ಇದು ಒಂದೂವರೆ ಅಡಿ ಉದ್ದ ಬೆಳೆಯಬಲ್ಲುದು.

  • News18
  • Last Updated :
  • Share this:

    ಬೆಂಗಳೂರು: ನಮ್ಮ ಭೂಮಿಯಲ್ಲಿ ಲಕ್ಷಾಂತರ ಜೀವ ವೈವಿಧ್ಯತೆ ಇದೆ. ನಮ್ಮ ಕಣ್ಣಿಗೆ ಬೀಳದ ಅದೆಷ್ಟೋ ಜೀವಿಗಳು ಈಗಲೂ ಇವೆ. ಅದರಲ್ಲೂ ಆಳದ ನೀರಿನಲ್ಲಿ ಅತ್ಯಪರೂಪದ ಜೀವಿಗಳು ನೆಲಸಿರುವ ಅಂದಾಜು ಇದೆ. ಎರಡು ವರ್ಷದ ಹಿಂದೆ ಇಂಡೋನೇಷ್ಯಾ ದೇಶದ ಪಶ್ಚಿಮ ಜಾವಾ ದ್ವೀಪದ ಬಾಂಟೆನ್ ಸಾಗರತೀರ ಬಳಿ ಭಯಾನಕವಾಗಿ ಕಾಣುವ ದೈತ್ಯ ಜಿರಳೆಯೊಂದು ಕಾಣಿಸಿಕೊಂಡಿತ್ತು. ಮನುಷ್ಯರ ಕಣ್ಣಿಗೆ ಈ ಜಿರಳೆ ಬಿದ್ದದ್ದು ಇದೇ ಮೊದಲಾಗಿದೆ. ಈಗ ಈ ಜಿರಳೆಗೆ “ಬೆತಿನೋಮಸ್ ರಾಕ್ಷಸ” (Bathynomus Raksasa) ಎಂದು ಹೆಸರಿಡಲಾಗಿದೆ.


    ಸಿಂಗಾಪುರ ಮತ್ತು ಇಂಡೋನೇಷ್ಯಾದ ಸಾಗರ ಅನ್ವೇಷಕರ ತಂಡಗಳು ಜಂಟಿಯಾಗಿ ಆಳ ಸಮುದ್ರದ ಅನ್ವೇಷಣೆ ನಡೆಸುವ ವೇಳೆ ಈ ರಾಕ್ಷಸ ಜಿರಳೆ ಪತ್ತೆಯಾಗಿತ್ತು. ಹಾಲಿವುಡ್​ನ ಸ್ಟಾರ್ ವಾರ್ಸ್ ಸರಣಿ ಸಿನಿಮಾಗಳಲ್ಲಿ ಬರುವ ಡಾರ್ತ್ ವಾಡೆರ್ (Darth Vader) ಕಾಲ್ಪನಿಕ ಪಾತ್ರದ ಚರ್ಯೆಯನ್ನು ಈ ಜಿರಳೆ ಹೋಲುತ್ತದೆ.


    ಏಡಿ, ಸೀಗಡಿ ಇತ್ಯಾದಿಗಳಿರುವ ಐಸಾಪಡ ಕುಟುಂಬವರ್ಗಕ್ಕೆ ಸೇರಿದ 14 ಕಾಲುಗಳನ್ನ ಹೊಂದಿರುವ ಇದು ವಿಶ್ವದ ಎರಡನೇ ಅತಿದೊಡ್ಡ ಜಿರಳೆ ತಳಿ ಎನಿಸಿದೆ. ಬರೋಬ್ಬರಿ ಒಂದೂವರೆ ಅಡಿಯ ಆಕಾರ ಹೊಂದಿದೆ. ಬೇರಾವುದೇ ಜೀವಿಗಳು ಈ ಜಿರಳೆಯನ್ನು ಬೇಟೆಯಾಡಿ ತಿನ್ನುವುದಿಲ್ಲ. ಹೀಗಾಗಿ, ಆಳ ಸಮುದ್ರದಲ್ಲಿ ಜೀವಾಪಾಯ ಇಲ್ಲದೆ ಈ ಜಿರಳೆಗಳ ಬಹಳ ಹುಲುಸಾಗಿ ತಮ್ಮ ಸಂತತಿ ವೃದ್ಧಿಸಿಕೊಂಡಿವೆ. ಇವೂ ಕೂಡ ಬೇರೆ ಜೀವಿಗಳನ್ನ ಬೇಟೆಯಾಡುವುದು ಕಡಿಮೆಯೇ. ಸತ್ತು ಹೋಗಿರುವ ಸಮುದ್ರಜೀವಿಗಳ ದೇಹವೇ ಇದಕ್ಕೆ ಆಹಾರ. ನಮ್ಮ ಮನೆಗಳಲ್ಲಿರುವ ಜಿರಳೆಗಳಂತೆ ಈ ರಾಕ್ಷಸ ಅನೇಕ ಕಾಲದವರೆಗೆ ಆಹಾರ ಇಲ್ಲದೇ ಬದುಕಬಲ್ಲುದು.


    ಇದನ್ನೂ ಓದಿ: Vikas Dubey: ಎನ್​ಕೌಂಟರ್​ ವೇಳೆ ವಿಕಾಸ್​ ದುಬೆ ಮೇಲೆ 6 ಬಾರಿ ಗುಂಡಿನ ದಾಳಿ; ಪೋಸ್ಟ್​ ಮಾರ್ಟಂ ವರದಿಯಲ್ಲಿ ಬಹಿರಂಗ


    ಅಂದಹಾಗೆ, ಬೆತಿನೋಮುಸ್ ರಾಕ್ಷಸ ಹೆಸರಿನ ಈ ಜೀವಿಯು ಐಸಾಪಡ ವರ್ಗದ ಜೀವಿಗಳಲ್ಲೇ ಎರಡನೇ ಅತಿದೊಡ್ಡದ ಜೀವಿ ಎನಿಸಿದೆ. ಆದರೆ, ದಕ್ಷಿಣ ಅಮೆರಿಕದ ಸಮುದ್ರಭಾಗದಲ್ಲಿ ಕಾಣಸಿಗುವ ಬೆತಿನೋಮಸ್ ಗಿಗಾಂಟ್ಯೂಸ್ ಎಂಬ ಜೀವಿ ಅತಿದೊಡ್ಡ ಐಸಾಪಡ ವರ್ಗದ ಜೀವಿ ಎನಿಸಿದೆ. ಇದು ಒಂದೂವರೆ 20 ಅಂಗುಲಗಳವರೆಗೂ ಬೆಳೆಯುತ್ತವೆ.


    ಇನ್ನು, ಬೆತಿನೋಮಸ್ ರಾಕ್ಷಸ ಎಂಬ ಹೆಸರಿನ ರಾಕ್ಷಸ ಪದಕ್ಕೂ ಭಾರತಕ್ಕೂ ಸಂಬಂಧ ಇದೆಯಾ ಎಂದನಿಸಬಹುದು. ಆದರೆ, ಇಂಡೋನೇಷ್ಯಾದ ಸ್ಥಳೀಯ ಭಾಷೆಯಲ್ಲಿ ಸಂಸ್ಕೃತದ ಪದದಂತೆಯೇ ದೈತ್ಯ ಎಂಬರ್ಥವಿದೆ. ಹೀಗಾಗಿ, ಬೆತಿನೋಮಸ್ ರಾಕ್ಷಸ ಎಂದು ಈ ಹೊಸ ಜೀವಿಗೆ ಹೆಸರಿಸಲಾಗಿದೆ.

    Published by:Vijayasarthy SN
    First published: