• Home
  • »
  • News
  • »
  • national-international
  • »
  • Manipur Landslide: ಮಣಿಪುರ ಭೂಕುಸಿತಕ್ಕೆ 7 ಯೋಧರು ಸೇರಿದಂತೆ 14 ಮಂದಿ ಬಲಿ, 25 ಸೈನಿಕರು ನಾಪತ್ತೆ

Manipur Landslide: ಮಣಿಪುರ ಭೂಕುಸಿತಕ್ಕೆ 7 ಯೋಧರು ಸೇರಿದಂತೆ 14 ಮಂದಿ ಬಲಿ, 25 ಸೈನಿಕರು ನಾಪತ್ತೆ

ಘಟನಾ ಸ್ಥಳ

ಘಟನಾ ಸ್ಥಳ

ಈ ಘಟನೆ ನಡೆದಾಗ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರು ಇದ್ದರು. ಇದರಿಂದ ಹೆಚ್ಚಿನ ಸಾವು-ಸೋವು ಸಂಭವಿಸಿದೆ. 23 ಜನರನ್ನು ಸ್ಥಳಾಂತರಿಸಲಾಗಿದ್ದು, 14 ಜನರು ಸಾವನ್ನಪ್ಪಿದ್ದಾರೆ ಎಂದು ಡಿಜಿಪಿ ಪಿ ಡೊಂಗಲ್ ಖಚಿತಪಡಿಸಿದ್ದಾರೆ.

  • Share this:

Army Camp: ಮಣಿಪುರದ ನೋನಿ ಜಿಲ್ಲೆಯಲ್ಲಿನ ಸೇನಾ ಶಿಬಿರದಲ್ಲಿ ಭೂಕುಸಿತ (Landslide On Army Camp) ಸಂಭವಿಸಿದ್ದು, 7 ಸೇನಾ ಸಿಬ್ಬಂದಿ ಸೇರಿದಂತೆ 14 ಜನರು ಸಾವನ್ನಪ್ಪಿದ್ದಾರೆ. 25 ಯೋಧರು ಕಾಣೆಯಾಗಿದ್ದು (Soldiers Missing), ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಮಣಿಪುರದಲ್ಲಿ ಭೂಕುಸಿತದಿಂದ ಅಪಾರ ಪ್ರಮಾಣದ ನಾಶವಾಗಿದೆ. ಭಾರೀ ಮಳೆಯಿಂದಾಗಿ ರಾತ್ರಿ ದಿಢೀರನೆ ಗುಡ್ಡ ಬಿರುಕು ಬಿಟ್ಟಿದ್ದು, ಭಾರತೀಯ ಸೇನೆಯ ಶಿಬಿರ ಧ್ವಂಸಗೊಂಡಿತು. ಈ ಘಟನೆ ನಡೆದಾಗ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರು ಇದ್ದರು. ಇದರಿಂದ ಹೆಚ್ಚಿನ ಸಾವು-ಸೋವು ಸಂಭವಿಸಿದೆ. 23 ಜನರನ್ನು ಸ್ಥಳಾಂತರಿಸಲಾಗಿದ್ದು, 14 ಜನರು ಸಾವನ್ನಪ್ಪಿದ್ದಾರೆ ಎಂದು ಡಿಜಿಪಿ ಪಿ ಡೊಂಗಲ್ ಖಚಿತಪಡಿಸಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ.


ಸೇನಾ ಶಿಬಿರ ಸಂಪೂರ್ಣ ಹಾಳು


ಸೇನಾ ಸಿಬ್ಬಂದಿ, ರೈಲ್ವೆ ನೌಕರರು, ಗ್ರಾಮಸ್ಥರು ಮತ್ತು ಕಾರ್ಮಿಕರು ಸೇರಿದಂತೆ ಸುಮಾರು 60 ಮಂದಿ ಸಿಕ್ಕಿಬಿದ್ದಿರುವ ಶಂಕೆ ಇದೆ. ನಿನ್ನೆ ದಿನದ ಕಾರ್ಯಾಚರಣೆಯ ನಂತರ 7 ಸೇನಾ ಸಿಬ್ಬಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 13 ಯೋಧರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಹೆಚ್ಚಿನ ಸಂಖ್ಯೆಯ ಯೋಧರು ಇನ್ನೂ ನಾಪತ್ತೆಯಾಗಿದ್ದಾರೆ. ಸೇನಾ ಶಿಬಿರ ಸಂಪೂರ್ಣ ಹಾಳಾಗಿದೆ. ಹವಾಮಾನ ವೈಪರೀತ್ಯದಿಂದ ರಕ್ಷಣಾ ಕಾರ್ಯಾಚರಣೆಗೆ ಸಾಕಷ್ಟು ತೊಂದರೆಯಾಗುತ್ತಿದೆ.


ಇದನ್ನೂ ಓದಿ: Nupur Sharma: ಉದಯಪುರ ಪ್ರಕರಣದಲ್ಲಿ ನೂಪುರ್ ಶರ್ಮಾಗೆ ಸುಪ್ರೀಂ ಕ್ಲಾಸ್! ಕ್ಷಮೆ ಕೇಳಲು ಆದೇಶ


ಪ್ರಧಾನಿ ಮೋದಿ ನಿಗಾ


ಮಣಿಪುರದ ನೋನಿ ಜಿಲ್ಲೆಯಲ್ಲಿ ಇಂಫಾಲ್-ಜಿರಿಬಾಮ್ ರೈಲು ಮಾರ್ಗದ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇದಕ್ಕಾಗಿ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಭೂಕುಸಿತದಿಂದ ಟೆರಿಟೋರಿಯಲ್ ಆರ್ಮಿಯ 107 ಕಂಪನಿಗಳು ಹಾನಿಗೀಡಾಗಿವೆ. ಪ್ರಧಾನಿ ನರೇಂದ್ರ ಮೋದಿಯವರು ರಕ್ಷಣಾ ಕಾರ್ಯಾಚರಣೆಯ ಮೇಲೆ ನಿಗಾ ಇಟ್ಟಿದ್ದಾರೆ. ಪ್ರಧಾನಿ ಮೋದಿ ಅವರು ಮಣಿಪುರ ಸಿಎಂ ಬಿರೇನ್ ಸಿಂಗ್ ಅವರೊಂದಿಗೆ ಮಾತನಾಡಿದ್ದು, ಸಾಧ್ಯವಿರುವ ಎಲ್ಲ ಸಹಾಯವನ್ನು ಭರವಸೆ ನೀಡಿದ್ದಾರೆ.


107 ಕಂಪನಿಗೆ ಹೊಡೆತ ಬಿದ್ದಿದೆ


ಭಾರತೀಯ ಸೇನೆಯ ಪ್ರಕಾರ, ಜೂನ್ 29-30 ರ ರಾತ್ರಿ ತುಪಾಲ್ ರೈಲು ನಿಲ್ದಾಣದ ಬಳಿ ಭಾರೀ ಭೂಕುಸಿತದಿಂದ 107 TA ಕಂಪನಿಗಳು ಹಾನಿಗೊಳಗಾದವು. ಈ ಸ್ಥಳದಲ್ಲಿ, ನಿರ್ಮಾಣ ಹಂತದಲ್ಲಿರುವ ಮಣಿಪುರ-ಜಿರಿಬಾಮ್ ರೈಲು ಮಾರ್ಗದ ಭದ್ರತೆಗೆ ನಿಯೋಜಿಸಲಾದ ಸೈನಿಕರು ಉಪಸ್ಥಿತರಿದ್ದರು. ಭೂಕುಸಿತದ ನಂತರ, ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಪೂರ್ಣ ಪ್ರಮಾಣದ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ರೈಲ್ವೆಯ ಆನ್-ಸೈಟ್ ಎಂಜಿನಿಯರಿಂಗ್ ಘಟಕದ ಯಂತ್ರೋಪಕರಣಗಳನ್ನು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ ಬಳಸಲಾಯಿತು. ಮಾಹಿತಿ ಪ್ರಕಾರ ಬೆಳಗ್ಗೆ 5.30ರ ವರೆಗೆ 13 ಯೋಧರನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ. ಎಲ್ಲಾ ಗಾಯಾಳುಗಳು ಸೇನಾ ವೈದ್ಯಕೀಯ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯೋಧರನ್ನು ಇಂಫಾಲ್ ಮತ್ತು ಇತರ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.


ಕೆಟ್ಟ ಹವಾಮಾನದಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ


ಸೇನೆಯ ಪ್ರಕಾರ, ಪ್ರತಿಕೂಲ ಹವಾಮಾನ ಮತ್ತು ಪದೇ ಪದೇ ಭೂಕುಸಿತ ಸಂಭವಿಸುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ನಾಪತ್ತೆಯಾಗಿರುವ ಯೋಧರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸೇನಾ ಹೆಲಿಕಾಪ್ಟರ್‌ಗಳು ಸಹ ಕಾರ್ಯಾಚರಣೆಗೆ ಸಿದ್ಧವಾಗಿವೆ. ಹವಾಮಾನವನ್ನು ತೆರವುಗೊಳಿಸಲು ಕಾಯುತ್ತಿವೆ. ಇದುವರೆಗಿನ ಮಾಹಿತಿ ಪ್ರಕಾರ ಕನಿಷ್ಠ 25 ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಭೂಕುಸಿತದಿಂದಾಗಿ ಸ್ಥಳೀಯ ಇಲಜೈ ನದಿಯ ಹೊಳೆ ಕೂಡ ಹಾನಿಯಾಗಿದೆ.  ಹವಾಮಾನವನ್ನು ತೆರವುಗೊಳಿಸಲು ಕಾಯುತ್ತಿವೆ. ಇದುವರೆಗಿನ ಮಾಹಿತಿ ಪ್ರಕಾರ ಕನಿಷ್ಠ 25 ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಭೂಕುಸಿತದಿಂದಾಗಿ ಸ್ಥಳೀಯ ಇಲಜೈ ನದಿಯ ಹೊಳೆ ಕೂಡ ಹಾನಿಯಾಗಿದೆ.

Published by:Kavya V
First published: