HOME » NEWS » National-international » 14 KILLED AS BUS RAMS INTO STATIONARY TRUCK ON AGRA LUCKNOW EXPRESSWAY RMD

ಭೀಕರ ರಸ್ತೆ ಅಪಘಾತಕ್ಕೆ 14 ಜನರು ಬಲಿ!; 31 ಮಂದಿಗೆ ಗಂಭೀರ ಗಾಯ

ಲಾರಿ ಪಂಕ್ಚರ್​ ಆಗಿದ್ದ ಕಾರಣ, ಚಾಲಕ ಟೈಯರ್​ ಬದಲಿಸುತ್ತಿದ್ದ. ಈ ವೇಳೆ ವೇಗವಾಗಿ ಬಂದ ಬಸ್​ ಲಾರಿಗೆ ಗುದ್ದಿದೆ ಎನ್ನಲಾಗಿದೆ. ಗಾಯೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

news18-kannada
Updated:February 13, 2020, 11:40 AM IST
ಭೀಕರ ರಸ್ತೆ ಅಪಘಾತಕ್ಕೆ 14 ಜನರು ಬಲಿ!; 31 ಮಂದಿಗೆ ಗಂಭೀರ ಗಾಯ
ಅಪಘಾತಕ್ಕೀಡಾದ ಲಾರಿ-ಬಸ್
  • Share this:
ಫಿರೋಜಾಬಾದ್ (ಫೆ.13)​: ಆಗ್ರಾ-ಲಖನೌ ಎಕ್ಸ್​​ಪ್ರೆಸ್​ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಫಘಾತದಲ್ಲಿ 14 ಜನರು ಮೃತಪಟ್ಟಿದ್ದು, 31 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

50 ಜನರು ಪ್ರಯಾಣ ಮಾಡುತ್ತಿದ್ದ ಬಸ್​ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಸ್​ನಲ್ಲಿದ್ದ 13 ಜನ ಹಾಗೂ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 31 ಜನರು ತೀವ್ರವಾಗಿ ಗಾಯಗೊಂಡಿದ್ದು, 6 ಜನರ ಸ್ಥಿತಿ ಗಂಭೀರವಾಗಿದೆ.

ಲಾರಿ ಪಂಕ್ಚರ್​ ಆಗಿದ್ದ ಕಾರಣ, ಚಾಲಕ ಟೈಯರ್​ ಬದಲಿಸುತ್ತಿದ್ದ. ಈ ವೇಳೆ ವೇಗವಾಗಿ ಬಂದ ಬಸ್​ ಲಾರಿಗೆ ಗುದ್ದಿದೆ ಎನ್ನಲಾಗಿದೆ. ಗಾಯೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಬಸ್​ ದೆಹಲಿಯಿಂದ ಮೋತಿಹಾರಿಗೆ (ಬಿಹಾರ್​) ತೆರಳುತ್ತಿತ್ತು. ರಾತ್ರಿ 10 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಬಸ್​ ಚಾಲಕ ತುಂಬ ವೇಗವಾಗಿ ಬಸ್​ ಚಾಲನೆ ಮಾಡುತ್ತಿದ್ದ,” ಎಂದು ಪೊಲೀಸರು ತಿಳಿಸಿದ್ದಾರೆ.

ತಕ್ಷಣ ಸ್ಥಳಕ್ಕೆ ಧಾವಿಸಿ, ಗಾಯಾಳುಗಳಿಗೆ ಚಿಕಿತ್ಸೆ ನೀಡುವಂತೆ ಹಾಗೂ ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಅಪಘಾತ: ಚಿತ್ರದುರ್ಗ ಹಿರಿಯೂರು ಮೂಲದ ಇಬ್ಬರು ಸಾವು
Youtube Video
First published: February 13, 2020, 11:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories