ರಾಜಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ವೇಳೆ ಬೃಹತ್​​ ಪೆಂಡಾಲ್​​ ಕುಸಿತ; 14 ಮಂದಿ ಸಾವು

ಈ ಬೆನ್ನಲ್ಲೇ ಮೃತ ಕುಟುಂಬಗಳಿಗೆ ಸಿಎಂ ಅಶೋಕ್​​ ಗೆಹ್ಲೋಟ್​​ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ಧಾರೆ. 


Updated:June 24, 2019, 12:08 PM IST
ರಾಜಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ವೇಳೆ ಬೃಹತ್​​ ಪೆಂಡಾಲ್​​ ಕುಸಿತ; 14 ಮಂದಿ ಸಾವು
ರಾಜಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ವೇಳೆ ಪೆಂಡಾಲ್​​ ಕುಸಿತ: 14 ಮಂದಿ ಸಾವು
  • Share this:
ನವದೆಹಲಿ(ಜೂನ್​​.23): ರಾಜಸ್ಥಾನದ ಬರ್ಮಾರ್​​ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಬೃಹತ್ ಪೆಂಡಾಲ್ ಕುಸಿದು ಬಿದ್ದ ಪರಿಣಾಮ 14 ಮಂದಿ ಸಾವನ್ನಪ್ಪಿದ್ಧಾರೆ. ಇದೇ ವೇಳೆ 50ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರಗೆ ರವಾನಿಸಲಾಗಿದೆ.

ರಾಮ ಕಥಾ ಎಂಬ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಲ್ಲದೇ ಈ ಕಾರ್ಯಕ್ರಮಕ್ಕೆ ಬೃಹತ್​ ಪೆಂಡಾಲ್​​ ಕೂಡ ಹಾಕಲಾಗಿತ್ತು. ಆದರೆ, ಭೀಕರ ಗಾಳಿ ಬೀಸಿ ಕಾರಣ ಪೆಂಡಲ್​​ ಕುಸಿದು ಬಿದ್ದಿದೆ. ಹಾಗಾಗಿ ಪೆಂಡಲ್​​​ ಕೆಳಗೆ ಸೇರಿದ್ದ 14 ಮಂದಿ ಮೃತಪಟ್ಟಿದ್ದಾರೆ. ಜತೆಗೆ 50 ಮಂದಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಥಳೀಯ ಎಸ್​​ಪಿ ಖಿನ್ವ್​​ ಸಿಂಗ್​​ ತಿಳಿಸಿದ್ದಾರೆ.

ಇದನ್ನೂ ಓದಿ: ಮೈತ್ರಿ ಸರ್ಕಾರ ಪತನಕ್ಕೆ ಅಮಿತ್​​ ಶಾ ಮುಹೂರ್ತ; ಮುಂದಿನ ಚುನಾವಣೆಗೆ ದಲಿತ ಸಿಎಂ ಅಭ್ಯರ್ಥಿ ಘೋಷಿಸಿಲು ಬಿಜೆಪಿ ನಿರ್ಧಾರ?

ಈ ಬೆನ್ನಲ್ಲೇ ಮೃತ ಕುಟುಂಬಗಳಿಗೆ ಸಿಎಂ ಅಶೋಕ್​​ ಗೆಹ್ಲೋಟ್​​ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ಧಾರೆ.
--------------
First published: June 23, 2019, 6:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading