HOME » NEWS » National-international » 14 KILLED 31 INJURED IN BUS AND TRUCK ACCIDENT AT AGRA LUCKNOW EXPRESSWAY ON WEDNESDAY NIGHT SCT

ಆಗ್ರಾ- ಲಕ್ನೋ ಹೆದ್ದಾರಿಯಲ್ಲಿ ಭೀಕರ ಅಪಘಾತ; ಬಸ್​- ಟ್ರಕ್ ಡಿಕ್ಕಿಯಾಗಿ 14 ಸಾವು, 32 ಜನರ ಸ್ಥಿತಿ ಗಂಭೀರ

ದೆಹಲಿಯಿಂದ ಬಿಹಾರದ ಮೋತಿಹರಿಗೆ ತೆರಳುತ್ತಿದ್ದ ಸ್ಲೀಪರ್ ಬಸ್ ಅಪಘಾತಕ್ಕೀಡಾಗಿದೆ. ಈ ಡಬಲ್ ಡಕ್ಕರ್ ಬಸ್ ಟ್ರಕ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.

Sushma Chakre | news18-kannada
Updated:February 13, 2020, 9:01 AM IST
ಆಗ್ರಾ- ಲಕ್ನೋ ಹೆದ್ದಾರಿಯಲ್ಲಿ ಭೀಕರ ಅಪಘಾತ; ಬಸ್​- ಟ್ರಕ್ ಡಿಕ್ಕಿಯಾಗಿ 14 ಸಾವು, 32 ಜನರ ಸ್ಥಿತಿ ಗಂಭೀರ
ಉತ್ತರ ಪ್ರದೇಶದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಬಸ್- ಟ್ರಕ್ ಅಪಘಾತ
  • Share this:
ಫಿರೋಜಾಬಾದ್ (ಫೆ. 13): ಬುಧವಾರ ರಾತ್ರಿ ಉತ್ತರಪ್ರದೇಶದ ಆಗ್ರಾ- ಲಕ್ನೋ ಎಕ್ಸ್​ಪ್ರೆಸ್​ವೇಯಲ್ಲಿ ಬಸ್​-ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ 14 ಜನರು ಸಾವನ್ನಪ್ಪಿದ್ದು, 31 ಜನರಿಗೆ ಗಂಭೀರ ಗಾಯವಾಗಿದೆ.

ಗಾಯಗೊಂಡವರನ್ನು ಸೈಫಾಯ್ ಪಿಜಿಐ ಆಸ್ಪತ್ರೆಗೆ ಸೇರಿಸಲಾಗಿದೆ. 31 ಜನರಿಗೆ ಗಂಭೀರ ಗಾಯವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ರಾಜೇಶ್ ಕುಮಾರ್, ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಬಸ್​ ಮತ್ತು ಟ್ರಕ್ ನಡುವೆ ಡಿಕ್ಕಿಯಾಗಿದೆ. ಫಿರೋಜಾಬಾದ್​ನ ನಗ್ಲಾ ಖಂಗರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದಿದ್ದಾರೆ.

ಇದನ್ನೂ ಓದಿ: ಸಾಲದ ಸುಳಿಯಲ್ಲಿ ಸಿಲುಕಿದ್ದವನಿಗೆ ಬಂಪರ್ ಲಾಟರಿ; ಕೇರಳದ ದಿನಗೂಲಿ ಕಾರ್ಮಿಕ ಈಗ 12 ಕೋಟಿ ಒಡೆಯ!ದೆಹಲಿಯಿಂದ ಬಿಹಾರದ ಮೋತಿಹರಿಗೆ ತೆರಳುತ್ತಿದ್ದ ಸ್ಲೀಪರ್ ಬಸ್ ಅಪಘಾತಕ್ಕೀಡಾಗಿದೆ. ಈ ಡಬಲ್ ಡಕ್ಕರ್ ಬಸ್ ಟ್ರಕ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ತಕ್ಷಣ ಸ್ಥಳಕ್ಕೆ ಧಾವಿಸಿ, ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವಂತೆ ಹಾಗೂ ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.(ವರದಿ: ಖಾಜಿ ಫರಾಜ್ ಅಹಮದ್)
Youtube Video
First published: February 13, 2020, 8:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories