• Home
 • »
 • News
 • »
 • national-international
 • »
 • Income Tax Notice: 14 ಕೋಟಿ ರಿಟರ್ನ್ಸ್ ಪಾವತಿ ದಿನಗೂಲಿ ಕಾರ್ಮಿಕನಿಗೆ ಬಂತು ಐಟಿ ನೋಟಿಸ್! ಕಾರಣವೇನು?

Income Tax Notice: 14 ಕೋಟಿ ರಿಟರ್ನ್ಸ್ ಪಾವತಿ ದಿನಗೂಲಿ ಕಾರ್ಮಿಕನಿಗೆ ಬಂತು ಐಟಿ ನೋಟಿಸ್! ಕಾರಣವೇನು?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕೆಲವೊಂದು ಬಾರಿ ನಮಗೆ ಗೊತ್ತಿಲ್ಲದ ಹಾಗೆಯೇ ಬ್ಯಾಂಕ್​ ಖಾತೆಗಳು ಕಾರ್ಯನಿರ್ವಹಿಸುತ್ತದೆ. ಇನ್ಯಾರದೋ ತಪ್ಪಿನಿಂದ ಇನ್ಯಾರಿಗೋ ಸಮಸ್ಯೆಗಳಾಗುತ್ತದೆ. ಅದೇ ರೀತಿ ಬಿಹಾರದಲ್ಲೊಂದು ದಿನಗೂಲಿ ಕಾರ್ಮಿಕನಿಗೆ ಆದಾಯ ತೆರಿಗೆ ಇಲಾಖೆಯು ಬರೋಬ್ಬರಿ 14 ಕೋಟಿ ರೂಪಾಯಿ ರಿಟರ್ನ್ಸ್​ ಪಾವತಿಸುವಂತೆ ನೋಟಿಸ್​ ನೀಡಿದೆ. ಅಷ್ಟಕ್ಕೂ ಈ ರೀತಿ ನೋಟಿಸ್​ ಬರಲು ಕಾರವೇನೆಂಬುದರ ಮಾಹಿತಿ ಇಲ್ಲಿದೆ.

ಮುಂದೆ ಓದಿ ...
 • Share this:

  ಕೆಲವೊಮ್ಮೆ ಕೆಲವು ಘಟನೆಗಳು ನಮಗೆ ಅರಿವಿಲ್ಲದಂತೆಯೇ ನಡೆದು ಹೋಗುತ್ತವೆ, ಯಾರೋ ಮಾಡಿದ ಕುತಂತ್ರಕ್ಕೆ ಇನ್ಯಾರೋ ಬಲಿಯಾಗುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಈ ಬ್ಯಾಂಕಿನ (Bank) ವಹಿವಾಟುಗಳು ಮತ್ತು ಆದಾಯ ತೆರಿಗೆ (Income Tax) ವಿಷಯಕ್ಕೆ ಬಂದರೆ ನಮ್ಮ ಬೆನ್ನ ಹಿಂದೆ ಏನೆಲ್ಲಾ ನಡೀತಾ ಇದೆ ಅಂತ ತಿಳಿದುಕೊಳ್ಳುವುದು ತುಂಬಾನೇ ಕಷ್ಟಕರವಾಗಿರುತ್ತದೆ ಅಂತ ಹೇಳಬಹುದು. ಕೆಲವು ಘಟನೆಗಳಲ್ಲಿ ಜನರ ಬ್ಯಾಂಕ್ ಖಾತೆಯಲ್ಲಿ (Bank Account) ಭಾರಿ ಮೊತ್ತದ ಹಣ ಬಂದು ಜಮೆಯಾಗಿರುವುದನ್ನು ನೋಡಿದ್ದೇವೆ ಮತ್ತು ಇನ್ನೂ ಕೆಲವು ಘಟನೆಗಳಲ್ಲಿ ಬ್ಯಾಂಕ್ ಖಾತೆಯಲ್ಲಿ ನಮಗೆ ಗೊತ್ತಿರದಂತೆ ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆದಿರುತ್ತದೆ. ಈ ರೀತಿಯ ಅನೇಕ ಘಟನೆಗಳು ನಮ್ಮ ಸುತ್ತಮುತ್ತಲಿನಲ್ಲಿಯೇ ನಡೆದಿರುತ್ತವೆ ಅಂತಾನೆ ಹೇಳಬಹುದು.


  ಕೆಲವೊಂದು ಬಾರಿ ನಮಗೆ ಗೊತ್ತಿಲ್ಲದ ಹಾಗೆಯೇ ಬ್ಯಾಂಕ್​ ಖಾತೆಗಳು ಕಾರ್ಯನಿರ್ವಹಿಸುತ್ತದೆ. ಇನ್ಯಾರದೋ ತಪ್ಪಿನಿಂದ ಇನ್ಯಾರಿಗೋ ಸಮಸ್ಯೆಗಳಾಗುತ್ತದೆ. ಅದೇ ರೀತಿ ಬಿಹಾರದಲ್ಲೊಂದು ದಿನಗೂಲಿ ಕಾರ್ಮಿಕನಿಗೆ ಆದಾಯ ತೆರಿಗೆ ಇಲಾಖೆಯು ಬರೋಬ್ಬರಿ 14 ಕೋಟಿ ರೂಪಾಯಿ ರಿಟರ್ನ್ಸ್​ ಪಾವತಿಸುವಂತೆ ನೋಟಿಸ್​ ನೀಡಿದೆ. ಅಷ್ಟಕ್ಕೂ ಈ ರೀತಿ ನೋಟಿಸ್​ ಬರಲು ಕಾರವೇನೆಂಬುದರ ಮಾಹಿತಿ ಇಲ್ಲಿದೆ.


  ದಿನಗೂಲಿ ಕಾರ್ಮಿಕನಿಗೆ ಬಂದಿದೆಯಂತೆ ಐಟಿ ನೋಟಿಸ್..


  ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದ್ದು, ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ವಾಸಿಸುತ್ತಿರುವ ದಿನಗೂಲಿ ಕಾರ್ಮಿಕನಿಗೆ ಆದಾಯ ತೆರಿಗೆ ಇಲಾಖೆಯು ಒಂದಲ್ಲ, ಎರಡಲ್ಲ ಬರೋಬ್ಬರಿ 14 ಕೋಟಿ ರೂಪಾಯಿ ರಿಟರ್ನ್ಸ್ ಪಾವತಿಸುವಂತೆ ಮನೆಗೆ ನೋಟಿಸ್ ನೀಡಿದೆ.


  ಇದನ್ನೂ ಓದಿ: ಚೀನಾದಲ್ಲಿ ಮತ್ತೆ ಕೊರೋನಾ ಹಾವಳಿ, ಜಾಗತಿಕ ಮಟ್ಟದಲ್ಲಿ ಇದರ ಪರಿಣಾಮ ಏನಾಗಬಹುದು?


  ಶನಿವಾರ, ಆದಾಯ ತೆರಿಗೆ ಇಲಾಖೆಯ ತಂಡವು ಕಾರ್ಮಿಕ ಮತ್ತು ಕರ್ಗಹರ್ ಗ್ರಾಮದ ನಿವಾಸಿ ಮನೋಜ್ ಯಾದವ್ ಎಂಬುವವರ ಮನೆಗೆ ತಲುಪಿತು ಮತ್ತು ಅವರಿಗೆ 14 ಕೋಟಿ ರೂಪಾಯಿಯ ಆದಾಯ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


  ಬೇರೆ ಕಥೆಯನ್ನೇ ಹೇಳುತ್ತಿವೆ ಕಾರ್ಮಿಕನ ಬ್ಯಾಂಕ್ ಖಾತೆಯ ದಾಖಲೆಗಳು..


  ಅಧಿಕಾರಿಗಳ ಪ್ರಕಾರ, ಅವರ ಬ್ಯಾಂಕ್ ದಾಖಲೆಗಳು ಕೋಟ್ಯಾಂತರ ರೂಪಾಯಿಗಳ ವಹಿವಾಟುಗಳನ್ನು ನಡೆಸುತ್ತಿರುವುದನ್ನು ತೋರಿಸುತ್ತವೆ, ಇದು ಅವರನ್ನು ಆದಾಯ ತೆರಿಗೆ ಪಾವತಿಸಲು ಜವಾಬ್ದಾರರನ್ನಾಗಿ ಮಾಡುತ್ತದೆ ಎಂದು ಹೇಳಲಾಗುತ್ತಿದೆ.


  ಆದಾಯ ತೆರಿಗೆಯಿಂದ ನೋಟಿಸ್ ಸ್ವೀಕರಿಸಿದ ನಂತರ, ಯಾದವ್ ಮತ್ತು ಅವರ ಕುಟುಂಬವು ಆಘಾತಕ್ಕೆ ಒಳಗಾಯಿತು. ತಾನು ದಿನಗೂಲಿ ಕಾರ್ಮಿಕನಾಗಿದ್ದು, ತನ್ನ ಸಂಪೂರ್ಣ ಆಸ್ತಿಯನ್ನು ಮಾರಾಟ ಮಾಡಿದ ನಂತರವೂ ಸಹ ಸದರಿ ಮೊತ್ತವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಯಾದವ್ ಅಧಿಕಾರಿಗಳಿಗೆ ತಿಳಿಸಿದರು.


  ಯಾದವ್ ಈ ಹಿಂದೆ ದೆಹಲಿ, ಹರಿಯಾಣ ಮತ್ತು ಪಂಜಾಬ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದರಂತೆ. ಆದರೆ 2020 ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಹೇರಲಾದ ಲಾಕ್ಡೌನ್ ನಂತರ ಬಿಹಾರದಲ್ಲಿರುವ ತಮ್ಮ ಮನೆಗೆ ಮರಳಿದ್ದರು ಎಂದು ವರದಿಯಾಗಿದೆ.


  ಈ ಘಟನೆಯ ಬಗ್ಗೆ ಕಾರ್ಮಿಕ ಹೇಳುವುದೇನು ನೋಡಿ..


  ಈ ಹಿಂದೆ ಯಾದವ್ ಅವರು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವಾಗ, ಕಂಪನಿಯವರು ಯಾದವ್ ಅವರ ಆಧಾರ್ ಮತ್ತು ಪ್ಯಾನ್ ಕಾರ್ಡ್ ಗಳ ಪ್ರತಿಗಳನ್ನು ತೆಗೆದುಕೊಂಡಿದ್ದರು ಎಂದು ಹೇಳುವ ಯಾದವ್ ಅವರು, ತಮ್ಮ ಹೆಸರಿನಲ್ಲಿ ಖಾತೆಗಳನ್ನು ಸೃಷ್ಟಿಸಿ ಅದರಲ್ಲಿ ಅವ್ಯವಹಾರ ನಡೆಸಿದ್ದಾರೆಂದು ಆರೋಪಿಸಿದ್ದಾರೆ. ಯಾದವ್ ಅವರಿಗೆ ನೋಟಿಸ್ ನೀಡಲು ಅವರ ಮನೆಗೆ ಭೇಟಿ ನೀಡಿದ ಆದಾಯ ತೆರಿಗೆ ಅಧಿಕಾರಿಗಳು ಕುಟುಂಬದ ಆರ್ಥಿಕ ಸ್ಥಿತಿಯನ್ನು ನೋಡಿ ತುಂಬಾನೇ ಆಶ್ಚರ್ಯಚಕಿತರಾದರು.


  ಕೇಂದ್ರ ಕಚೇರಿಯಿಂದ ಐಟಿ ನೋಟಿಸ್ ಕಳುಹಿಸಲಾಗಿದೆ ಎಂದು ಸಸಾರಾಮ್ ನ ಆದಾಯ ತೆರಿಗೆ ಅಧಿಕಾರಿ (ಐಟಿಒ) ಸತ್ಯ ಭೂಷಣ್ ಪ್ರಸಾದ್ ಹೇಳಿದ್ದಾರೆ.


  ಏತನ್ಮಧ್ಯೆ, ಸ್ಥಳೀಯರ ಪ್ರಕಾರ, ಯಾದವ್ ಅವರು ತಮ್ಮ ಮನೆಗೆ ಬೀಗ ಹಾಕಿಕೊಂಡು ಸೋಮವಾರ ಸಂಜೆ ತಮ್ಮ ಮನೆಯವರೆಲ್ಲರನ್ನೂ ಕರೆದುಕೊಂಡು ಯಾವುದೋ ಅಜ್ಞಾತ ಸ್ಥಳಕ್ಕೆ ತೆರಳಿದರು ಎಂದು ಹೇಳಲಾಗುತ್ತಿದೆ.

  Published by:Prajwal B
  First published: