• Home
  • »
  • News
  • »
  • national-international
  • »
  • Necklace: ಪತ್ತೆಯಾಯ್ತು 1,300 ವರ್ಷ ಹಳೆಯ ನೆಕ್ಲೆಸ್‌! ಈ ಆಭರಣ ತೊಟ್ಟ ಚೆಲುವೆ ಯಾರಂತೆ?

Necklace: ಪತ್ತೆಯಾಯ್ತು 1,300 ವರ್ಷ ಹಳೆಯ ನೆಕ್ಲೆಸ್‌! ಈ ಆಭರಣ ತೊಟ್ಟ ಚೆಲುವೆ ಯಾರಂತೆ?

ಇದೇ ಆ ನೆಕ್ಲೇಸ್

ಇದೇ ಆ ನೆಕ್ಲೇಸ್

ಈ ನೆಕ್ಲೆಸ್‌ ಅನ್ನು ಸ್ಮಶಾನದಲ್ಲಿ ಸಂಶೋಧಿಸಲಾಗಿದೆ ಎಂದು ವಸ್ತುಸಂಗ್ರಹಾಲಯವು ಹೇಳುತ್ತದೆ. ಅದು ಉನ್ನತ ಸ್ಥಾನಮಾನದ ಮಹಿಳೆಗೆ ಸೇರಿದ್ದು. ಬಹುಶಃ ರಾಜಮನೆತನಕ್ಕೆ ಸೇರಿರುವ ಮಹಿಳೆಗೆ ಸಂಬಂಧಪಟ್ಟಿರಬಹುದೆಂದು ಊಹಿಸಲಾಗಿದೆ.

  • Share this:

ಜಗತ್ತಿನ ಎಲ್ಲೆಡೆ ಸದಾ ಒಂದಿಲ್ಲ ಒಂದು ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ಸಂಶೋಧನೆಗಳ ಪ್ರತಿಫಲದಿಂದಾಗಿ ಇತಿಹಾಸದ ಭೂಗರ್ಭದಲ್ಲಿ ಅಡಗಿರುವ ಅದೆಷ್ಟೋ ಹೊಸ ವಿಷಯಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಹಾಗೆಯೇ ಈಗ ಇಂಗ್ಲೆಡ್‌ನಲ್ಲಿ (England) ನಡೆದ ಸಂಶೋಧನೆಯ ಪ್ರತಿಫಲ 1, 300 ವರ್ಷಗಳಷ್ಟು ಹಳೆಯ ನೆಕ್ಲೆಸ್‌ ಪತ್ತೆಯಾಗಿದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ. ಈ ನೆಕ್ಲೇಸ್‌ 1,300 ವರ್ಷಗಳಷ್ಟು ಹಳೆಯದಾದ ಚಿನ್ನ (Gold) ಮತ್ತು ಕೆಲವು ಬೆಲೆ ಬಾಳುವ ಕಲ್ಲುಗಳಿಂದ (Stone) ತಯಾರಿಸಲಾಗಿದೆ ಎಂದು ಸಂಶೋಧನೆಯ ವೇಳೆ ತಿಳಿದು ಬಂದಿದೆ.


ಈ ನೆಕ್ಲೇಸ್ ಇಂಗ್ಲೆಂಡ್‌ನ ನಿರ್ಮಾಣ ಯೋಜನೆಯ ಅಡಿಯಲ್ಲಿ ಇರುವ ಆರಂಭಿಕ ಆಂಗ್ಲೋ ಸ್ಯಾಕ್ಸನ್ ಸಮಾಧಿ ಸ್ಥಳದಲ್ಲಿ ಕಂಡುಬಂದಿದೆ. ಮ್ಯೂಸಿಯಂ ಆಫ್ ಲಂಡನ್ ಆರ್ಕಿಯಾಲಜಿ (MOLA) ಯ ಪ್ರಕಾರ ಈ ಸ್ಥಳವನ್ನು ಬ್ರಿಟನ್‌ನ ಅತ್ಯಂತ ಮಹತ್ವದ ಸ್ತ್ರೀ ಪೂರ್ವ ಕ್ರಿಶ್ಚಿಯನ್ ಸಮಾಧಿ ಸ್ಥಳವೆಂದು ಘೋಷಣೆ ಮಾಡಲಾಗಿದೆ ಎಂದು ತಿಳಿಸಿದೆ.


ಜೀವಮಾನದ ಸಂಶೋಧನೆಯಂತೆ!
ಪುರಾತತ್ವಶಾಸ್ತ್ರಜ್ಞರು ಇದನ್ನು "ಒನ್ಸ್‌ ಇನ್‌ ಎ ಲೈಫ್‌ ಟೈಮ್‌” ಚಿನ್ನದ ನೆಕ್ಲೇಸ್ ಎಂದು ಗುರುತು ಮಾಡಿದ್ದಾರೆ. ಇದನ್ನು ಬ್ರಿಟನ್‌ನಲ್ಲಿಯೇ ಸಂಶೋಧಿಸಿದ ಮತ್ತು ಬಹಿರಂಗಪಡಿಸಿದ ಅತ್ಯಂತ ಬೆಲೆ ಬಾಳುವ ಆಭರಣ ಎಂದು ಇದರ ಕುರಿತು ಉಲ್ಲೇಖಿಸಲಾಗಿದೆ.


ಇದರ ಜೊತೆಗೆ ರೋಮನ್ ನಾಣ್ಯಗಳು, ಚಿನ್ನ, ಗಾರ್ನೆಟ್‌ಗಳು, ಗಾಜು ಮತ್ತು ಬೆಲೆ ಬಾಳುವ ಕಲ್ಲುಗಳಿಂದ ಮಾಡಿದ ಕನಿಷ್ಠ 30 ಪೆಂಡೆಂಟ್‌ಗಳು ಮತ್ತು ಮಣಿಗಳನ್ನು ನಾರ್ಥಾಂಪ್ಟನ್‌ ಪ್ರದೇಶದ ಸಮೀಪದಲ್ಲಿ ಪತ್ತೆಯಾಗಿರುವ ಆಭರಣಗಳ ದೊಡ್ಡ ಭಾಗವೆಂದೆ ಹೇಳಬಹುದು.


ಸಂಶೋಧನಾ ತಜ್ಞರು ಏನ್‌ ಹೇಳ್ತಿದಾರೆ?
ಈ ನೆಕ್ಲೇಸ್‌ ಕೆಂಪು ಗಾರ್ನೆಟ್‌ಗಳು ಮತ್ತು ಚಿನ್ನದಿಂದ ಮಾಡಿದ ದೊಡ್ಡ ಆಯತಾಕಾರದ ಪೆಂಡೆಂಟ್ ಅನ್ನು ಹೊಂದಿದೆ. ಚಿನ್ನದಲ್ಲಿ ಹೊಂದಿಸಲಾದ ಕೆಂಪು ಗಾರ್ನೆಟ್‌ಗಳಿಂದ ಮಾಡಲ್ಪಟ್ಟ ಈ ತುಣುಕನ್ನು ಮರುಬಳಕೆ ಮಾಡಲು ಯೋಚನೆ ಏನಾದರೂ ಮಾಡಿದರೆ ಅದರ ಅರ್ಧ ಭಾಗವನ್ನು ಮಾತ್ರ ಮಾಡಬಹುದು ಎಂದು ಸಂಶೋಧನಾ ತಜ್ಞರು ಹೇಳುತ್ತಾರೆ.


ಇದನ್ನೂ ಓದಿ: Himachal Pradesh CM: ಹಿಮಾಚಲ ಸಿಎಂ ಗದ್ದುಗೆ ಏರಿದ ಸುಖವಿಂದರ್ ಸಿಂಗ್ ಸುಖು, ಪ್ರಮಾಣವಚನಕ್ಕೆ ಸಾಕ್ಷಿಯಾದ ರಾಹುಲ್ ಗಾಂಧಿ


ಈ ನೆಕ್ಲೆಸ್‌ ಅನ್ನು ಸ್ಮಶಾನದಲ್ಲಿ ಸಂಶೋಧಿಸಲಾಗಿದೆ ಎಂದು ವಸ್ತುಸಂಗ್ರಹಾಲಯವು ತಿಳಿಸಿದೆ . ಅದು ಉನ್ನತ ಸ್ಥಾನಮಾನದ ಮಹಿಳೆಗೆ ಸೇರಿದ್ದು. ಬಹುಶಃ ರಾಜಮನೆತನಕ್ಕೆ ಸೇರಿರುವ ಮಹಿಳೆಗೆ ಸಂಬಂಧಪಟ್ಟಿರಬಹುದೆಂದು ಊಹಿಸಲಾಗಿದೆ. ಸಮಾಧಿಯಲ್ಲಿ ಅಲಂಕರಿಸಿದ ಎರಡು ಮಡಕೆಗಳು ಮತ್ತು ತಾಮ್ರದ ಕೆಲವು ವಸ್ತುಗಳು ಸಹ ಕಂಡುಬಂದಿವೆ.


MOLA ಸೈಟ್ ಮೇಲ್ವಿಚಾರಕರು ಏನ್‌ ಹೇಳ್ತಿದಾರೆ?
"ಸಮಾಧಿಯ ಶೋಧದ ಆರಂಭದಲ್ಲಿ ಮಣ್ಣಿನಲ್ಲಿ ಹೊಳಪಿರುವ ವಸ್ತುವೊಂದು ಕಂಡುಬಂದಿದೆ. ಇದು ಬಹಳ ಕುತೂಹಲಕಾರಿ ವಸ್ತು ಆಗಿರುತ್ತದೆ ಎಂದು ನಾವು ಮತ್ತಷ್ಟು ಆಳಕ್ಕೆ ಶೋಧ ಕಾರ್ಯವನ್ನು ಮುಂದುವರಿಸಿದೆವು. ಇದರ ಪರಿಣಾಮವಾಗಿ 1,300 ವರ್ಷಗಳಷ್ಟು ಹಳೆಯ ನೆಕ್ಲೆಸ್‌ ನಮ್ಮ ಕೈ ಸೇರಿತು. ಇಷ್ಟು ವಿಶೇಷವಾದ ಆಭರಣ ಪತ್ತೆಯಾಗಿರುವುದು ನಿಜಕ್ಕೂ ನಮಗೂ ಸಂತಸ ತಂದಿದೆ” ಎಂದು MOLA ಸೈಟ್ ಮೇಲ್ವಿಚಾರಕರಾದ ಲೆವೆಂಟೆ-ಬೆನ್ಸ್ ಬಾಲಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: Cyclone Mandous: ಇನ್ನೂ ತಗ್ಗದ 'ಮಾಂಡೌಸ್' ಅಬ್ಬರ! ಆಂಧ್ರದಲ್ಲಿ ಓರ್ವ ಸಾವು, ಜನಜೀವನ ಸ್ತಬ್ಧ


ಆ ನೆಕ್ಲೆಸ್‌ ಅನ್ನು ಇನ್ನೂ ಸೂಕ್ಷ್ಮವಾಗಿ ಉತ್ಖನನ ಮಾಡುತ್ತಿರುವಾಗ, ಎಕ್ಸ್-ರೇ ಅಲ್ಲಿ ಅದರ ಅದ್ಭುತ ವಿನ್ಯಾಸವು ಮತ್ತಷ್ಟು ಸ್ಪಷ್ಟವಾಗಿ ಕಾಣಿಸುತ್ತದೆ. ಈ ಸಮಾಧಿಯಲ್ಲಿ ಇನ್ನು ಒಂದು ಶಿಲುಬೆಯ ಎರಡು ತೋಳುಗಳಲ್ಲಿ ಬೆಳ್ಳಿಯಲ್ಲಿ ಎರಕಹೊಯ್ದ ಕೆಲವು ಮಾನವ ಮುಖಗಳು ಸಹ ಪತ್ತೆ ಆಗಿವೆ.

Published by:ಗುರುಗಣೇಶ ಡಬ್ಗುಳಿ
First published: