• Home
 • »
 • News
 • »
 • national-international
 • »
 • Rishi Sunak: 130 ವರ್ಷಗಳ ಹಿಂದೆ ಪ್ರಾರಂಭವಾದ "ಪಯಣ" ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತೀಯ ಮೂಲದ ರಿಷಿ ಸುನಕ್!

Rishi Sunak: 130 ವರ್ಷಗಳ ಹಿಂದೆ ಪ್ರಾರಂಭವಾದ "ಪಯಣ" ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತೀಯ ಮೂಲದ ರಿಷಿ ಸುನಕ್!

ರಿಷಿ ಸುನಕ್

ರಿಷಿ ಸುನಕ್

ಯುಕೆಯ ಉನ್ನತ ಸ್ಥಾನವಾದ ಪ್ರಧಾನಿ ಹುದ್ದೆಯು ರಿಷಿ ಸುನಕ್ (Rishi Sunak) ಅವರ ಪಾಲಾಗಿದೆ. ಇದು ಕೇವಲ ಅಲ್ಲಿನ ಭಾರತೀಯರು ಮಾತ್ರವಲ್ಲದೆ ಭಾರತ ದೇಶದ ಪ್ರತಿಯೊಬ್ಬರೂ ಹೆಮ್ಮೆಪಡುವಂತಹ ವಿಚಾರ. ಆದಾಗ್ಯೂ ಯುಕೆಯ ರಾಜಕೀಯ ಇತಿಹಾಸವನ್ನು ಸ್ವಲ್ಪ ಕೆದಕಿ ನೋಡಿದಾಗ ನಮಗೊಂದಿಷ್ಟು ರೋಚಕ ಸತ್ಯದ ಅರಿವಾಗುವುದರಲ್ಲಿ ಸಂಶಯವೇ ಇಲ್ಲ. ಹಾಗಾದರೆ, ಆ ರೋಚಕ ವಿಷಯ ಏನು ಎಂಬುದು ತಿಳಿಯಬೇಕೆ? ಮುಂದೆ ಓದಿ.

ಮುಂದೆ ಓದಿ ...
 • Share this:

  ಈಗ ಯುಕೆನಲ್ಲಿ ನೆಲೆಸಿರುವ ಹಲವು ಭಾರತೀಯ ಮೂಲದ (Indian Origin) ನಿವಾಸಿಗಳಿಗೆ ಸಂಭ್ರಮದ ಸಮಯ, ಕಾರಣ ಭಾರತೀಯ ಮೂಲದ ವ್ಯಕ್ತಿಯೊಬ್ಬ ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವುದು. ಹೌದು, ಯುಕೆಯ ಉನ್ನತ ಸ್ಥಾನವಾದ ಪ್ರಧಾನಿ ಹುದ್ದೆಯು ರಿಷಿ ಸುನಕ್ (Rishi Sunak) ಅವರ ಪಾಲಾಗಿದೆ. ಇದು ಕೇವಲ ಅಲ್ಲಿನ ಭಾರತೀಯರು ಮಾತ್ರವಲ್ಲದೆ ಭಾರತ ದೇಶದ ಪ್ರತಿಯೊಬ್ಬರೂ ಹೆಮ್ಮೆಪಡುವಂತಹ ವಿಚಾರ. ಆದಾಗ್ಯೂ ಯುಕೆಯ ರಾಜಕೀಯ ಇತಿಹಾಸವನ್ನು ಸ್ವಲ್ಪ ಕೆದಕಿ ನೋಡಿದಾಗ ನಮಗೊಂದಿಷ್ಟು ರೋಚಕ ಸತ್ಯದ ಅರಿವಾಗುವುದರಲ್ಲಿ ಸಂಶಯವೇ ಇಲ್ಲ. ಹಾಗಾದರೆ, ಆ ರೋಚಕ ವಿಷಯ ಏನು ಎಂಬುದು ತಿಳಿಯಬೇಕೆ? ಮುಂದೆ ಓದಿ.


  ಪ್ರಥಮ ಬ್ರಿಟಿಷ್ ಸಂಸದ


  ಸುಮಾರು 130 ವರ್ಷಗಳ ಹಿಂದೆ ಬಾಂಬೆಯಲ್ಲಿ ಪ್ರೊಫೆಸರ್ (ಇಂದಿನ ಮುಂಬೈ ನಗರಿ) ಆಗಿದ್ದ ಪಾರ್ಸಿ ಸಮುದಾಯದ ವ್ಯಕ್ತಿಯಾದ ದಾದಾಭಾಯ್ ನವರೋಜಿ ಅವರು ಏಷಿಯಾ ಮೂಲದ ಅದರಲ್ಲೂ ವಿಶೇಷವಾಗಿ ಭಾರತೀಯ ಮೂಲದ ಪ್ರಪ್ರಥಮ ಬ್ರಿಟಿಷ್ ಎಂಪಿಯಾಗಿ ಆಯ್ಕೆಯಾಗಿದ್ದರು. ಅಂದರೆ, ಒಂದು ಲೆಕ್ಕದಲ್ಲಿ ಭಾರತೀಯ ಮೂಲದವರ ಯುಕೆ ರಾಜಕೀಯ ವಲಯದಲ್ಲಿ ಉಪಸ್ಥಿತಿಯು 130 ವರ್ಷಗಳ ಹಿಂದೆಯೇ ಪ್ರಾರಂಭವಾಗಿದೆ ಅಂತ ಹೇಳಬಹುದು.


  ಆ ಸಮಯದ ಯುಕೆ


  ಇಂದು ಯುಕೆನಲ್ಲಿ ಬಹು ಸಂಸ್ಕೃತಿಯಿದೆ, ಸ್ವಾತಂತ್ರ್ಯವಿದೆ, ಎಲ್ಲರಿಗೂ ಸಮಾನತೆಯ ಹಕ್ಕುಗಳಿವೆ. ಆದರೆ, ನವರೋಜಿ ಅವರಿದ್ದ ಕಾಲದಲ್ಲಿ ಅಂದರೆ 1880 ರ ಸಮಯದಲ್ಲಿ ಯುಕೆ ಈಗಿನಂತಿರಲಿಲ್ಲ. ಅಲ್ಲಿ ಮಹಿಳೆಯರು ಮತ ಹಾಕುವ ಹಕ್ಕನ್ನೂ ಹೊಂದಿರಲಿಲ್ಲ ಹಾಗೂ ಇಂದು ಕಂಡುಬರುವಂತಹ ಬಹುಸಂಪ್ರದಾಯಗಳು ಅಷ್ಟೊಂದಾಗಿ ಇರಲಿಲ್ಲ. ಅಂದಿನ ಯುಕೆ ಸಾಕಷ್ಟು ಅಧಿಕಾರಶಾಹಿ ಹಾಗೂ ವಸಾಹತುಶಾಹಿ ಪ್ರಭಾವವನ್ನು ಹೊಂದಿತ್ತು.


  ನವರೋಜಿ ಅವರ ಪ್ರಯಣ


  ತಮ್ಮ 28ನೇ ವಯಸ್ಸಿನಲ್ಲಿ ನವರೋಜಿ ಅವರು ಅಂದಿನ ಬ್ರಿಟಿಷ್ ಆಡಳಿತವಿದ್ದ ಬಾಂಬೆಯ ಎಲ್ಫಿನ್ ಸ್ಟನ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಆಯ್ಕೆಯಾಗಿದ್ದರು. ಅವರು ಗಣಿತ ಮತ್ತು ಭೌತಶಾಸ್ತ್ರವನ್ನು ಪಾಠ ಮಾಡುತ್ತಿದ್ದರು. ಆದಾಗ್ಯೂ ಅವರಿಗೆ ತಮ್ಮ ವೃತ್ತಿಯಲ್ಲಿ ಅಷ್ಟೊಂದು ತೃಪ್ತಿ ಸಿಕ್ಕಿದ್ದಿಲ್ಲ. ಹಾಗಾಗಿ ಅವರು ಭಾರತದ್ದೇ ಒಂದು ಸಂಸ್ಥೆಯಾದ ಕಾಮಾ ಆಂಡ್ ಕಂಪನಿಯ ವ್ಯವಹಾರ ಪಾಲುದಾರರಾಗಿ ಯುಕೆಗೆ ತೆರಳಿದರು. ಅಷ್ಟಕ್ಕೂ, ಯುಕೆನಲ್ಲಿ ಸ್ಥಾಪಿತವಾದ ಮೊದಲ ಭಾರತೀಯ ಕಂಪನಿ ಇದೆ ಆಗಿತ್ತು.


  ತದನಂತರ ಅವರು ಅಲ್ಲಿ ನೆಲೆಸಿ ಅಲ್ಲಿನ ರಾಜಕೀಯದಲ್ಲಿ ಆಸಕ್ತಿ ತಳೆದರು. ಆದರೆ ಅವರ ಆರಂಭ ಅಷ್ಟೊಂದು ಮಧುರವಾಗಿರಲಿಲ್ಲ. ಏಕೆಂದರೆ ಅವರು ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿ ಸೋಲುಣ್ಣಬೇಕಾಯಿತು. ಅವರು ಲಿಬರಲ್ ಪಕ್ಷದ ಅಭ್ಯರ್ಥಿಯಾಗಿ ಲಂಡನ್ನಿನ ಹೊಲ್ಬೋರ್ನ್ ಸೀಟಿಗಾಗಿ ಸ್ಪರ್ಧಿಸಿದ್ದರು. ಇದಾದ ಬಳಿಕ ಅಂದಿನ ಕನ್ಸರ್ವೇಟಿವ್ ಪಕ್ಷದ ನಾಯಕ ಹಾಗೂ ಪಿಎಂ ಲಾರ್ಡ್ ಸಾಲ್ಸ್ ಬರಿ ಅವರು ಇಂಗ್ಲಿಷ್ ಸಂವಿಧಾನವು "ಕಪ್ಪು ಮನುಷ್ಯ" ನನ್ನು ಆಯ್ಕೆ ಮಾಡಲು ಸಜ್ಜಾಗಿಲ್ಲ ಎನ್ನುವ ಮೂಲಕ ತಮ್ಮ ಹೀನಾಯ ಹೇಳಿಕೆಯನ್ನು ಹರಿಬಿಟ್ಟಿದ್ದರು.


  ಆದರೆ, ಇದರಿಂದ ವಿಚಲಿತರಾಗದ ನವರೋಜಿ ಮುಂದೆ ಮತ್ತೊಮ್ಮೆ ಸ್ಪರ್ಧಿಸಿ 1892 ರಲ್ಲಿ ಲಿಬರಲ್ ಪಕ್ಷದ ಮೂಲಕ ಚುನಾವಣೆ ಗೆದ್ದರು. ಇದಾದ ಬಳಿಕ ಅಲ್ಲಿನ ಕೆಲ ರಾಜಕೀಯ ಧುರಿಣರು ನವರೋಜಿ ಒಂದೆಡೆ ಹಾಯಾಗಿ ಸೆಟಲ್ ಆಗಬಹುದೆಂದು ಅಂದುಕೊಂಡಿದ್ದರು. ಆದರೆ ಹಾಗಾಗಲಿಲ್ಲ. ಬದಲಿಗೆ ಅವರು ಆಡಳಿತದ ಪ್ರಭಾವಿ ನಾಯಕರಿಗೋಸ್ಕರ ಕಡಿಮೆ ಕೆಲಸ ಮಾಡುವುದಾಗಿಯೂ ಹಾಗೂ ಭ್ರಷ್ಟ ಅಧಿಕಾರಿಗಳು ಮಾಡಿರುವ ಕೆಟ್ಟ ಕೆಲಸಗಳನ್ನು ಹೆಚ್ಚು ಹೆಚ್ಚು ಜನರ ಮುಂದೆ ತರುವುದಾಗಿಯೂ ಘೋಷಿಸಿ ಕೆಲಸ ಮಾಡಿದರು.


  ಪ್ರಮಾಣ ವಚನ


  ನವರೋಜಿ ತಾವು ಆಯ್ಕೆಯಾದ ನಂತರ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಕ್ರೈಸ್ತರ ಪವಿತ್ರ ಗ್ರಂಥ ಬೈಬಲ್ ಮೇಲೆ ಕೈಯಿಟ್ಟು ಆಣೆ-ಪ್ರಮಾಣ ತೆಗೆದುಕೊಳ್ಳುವುದನ್ನು ನೇರವಾಗಿ ತೀರಸ್ಕರಿಸಿ ಬದಲಾಗಿ ಅವರು "ಖೊರ್ದೆಹ್ ಅವೆಸ್ತಾ" ಮೇಲೆ ಕೈಯಿಟ್ಟು ಪ್ರಮಾಣವಚನ ಸ್ವೀಕರಿಸಿದರು. ನವರೋಜಿ ಅವರು ಪಾರ್ಸಿ ಮತದವರಾಗಿದ್ದರಿಂದ ಅವರಿಗೆ ತಮ್ಮ ಪಂಥದ ಮೇಲಿನ ಪುಸ್ತಕದ ಮೇಲೆ ಅಪಾರ ನಂಬಿಕೆಯಿತ್ತು. ಇದೇ ರೀತಿಯ ಪ್ರಸಂಗವನ್ನು ನಾವು ಪ್ರಥಮ ಬಾರಿಗೆ ಸುನಕ್ ಅವರು ಎಂಪಿ ಆದಾಗಲೂ ನೋಡಿದ್ದೇವೆ. ಅವರೂ ಸಹ ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದರು.


  ಅಲ್ಲದೆ ನವರೋಜಿ ಅವರು, ಯಾವಾಗಲೂ ಬ್ರೀಟಿಷರನ್ನುದ್ದೇಶಿಸಿ ಅವರು ಭಾರತದಲ್ಲಿ ಬ್ರಿಟಿಷ್ ನಡೆದುಕೊಳ್ಳುತ್ತಿರುವ ರೀತಿಯನ್ನು ವಿರೋಧಿಸಿ ಸಕಲ ಭಾರತೀಯರನ್ನು ಇಲ್ಲಿ ಪ್ರತಿನಿಧಿಸುತ್ತಿರುವುದಾಗಿ ಹೇಳುತ್ತಿದ್ದರು. ತಮ್ಮ ಪುಸ್ತಕವಾದ "ಡ್ರೈನ್ ಆಫ್ ವೆಲ್ತ್" ನಲ್ಲಿ ಭಾರತದ ಸವೆಯುತ್ತಿದ್ದ ಸಂಪತ್ತಿನ ಬಗ್ಗೆ ಬರೆದಿದ್ದಾರೆ.


  ಇಂಡಿನಯನ್ ನ್ಯಾಷನಲ್ ಕಾಂಗ್ರೆಸ್


  ನವರೋಜಿ ಅವರು ಲಂಡನ್ನಿನಲ್ಲಿದ್ದರೂ ಸಹ ತಮ್ಮ ತಾಯ್ನಾಡು ಬ್ರಿಟಿಷರ ಆಡಳಿತದಿಂದ ಮುಕ್ತಿ ಪಡೆಯಬೇಕೆಂಬ ಅದಮ್ಯ ಬಯಕೆಯನ್ನು ಹೊಂದಿದ್ದರು. ತಮ್ಮ ಸಾಮರ್ಥ್ಯಕ್ಕನುಸಾರ ಹಲವು ಕ್ರಮಗಳನ್ನು ಅವರು ಅಲ್ಲಿ ತೆಗೆದುಕೊಂಡಿದ್ದರು. 1885 ರಲ್ಲಿ ಅಲನ್ ಒಕ್ಟಾವಿಯನ್ ಹ್ಯೂಮ್ ಹಾಗೂ ದಿನ್ಶಾವ್ ಎದುಲ್ಜಿ ವಾಚಾ ಅವರೊಂದಿಗೆ ಸೇರಿ ಇಂಡಿನಯನ್ ನ್ಯಾಷನಲ್ ಕಾಂಗ್ರೆಸ್ ಅನ್ನು ಹುಟ್ಟು ಹಾಕಿದರು.


  ಅಂದಿನ ಬಾಂಬೆಯಲ್ಲಿ ಹುಡುಗಿಯರಿಗಾಗಿ ಮೊದಲ ಬಾರಿಗೆ ಕೆಲವು ಶಾಲೆಗಳನ್ನು ಪ್ರಾರಂಭಿಸಿದ ಕೀರ್ತಿ ದಾದಾಭಾಯ್ ನವರೋಜಿ ಅವರಿಗೆ ಸಲ್ಲುತ್ತದೆ. ಹೀಗೆ ನವರೋಜಿ ಅವರೊಬ್ಬ ಧೀಮಂತ ನಾಯಕನಷ್ಟೇ ಅಲ್ಲದೆ, ರಾಜಕೀಯ ನಾಯಕ, ಯಶಸ್ವಿ ಉದ್ಯಮಿ, ಎಲ್ಲಕ್ಕೂ ಮೀಗಿಲಾಗಿ ಒಬ್ಬ ನಿಷ್ಠಾವಂತ ಸ್ವಾತಂತ್ರ್ಯ ಹೋರಾಟಗಾರರಾಗಿ ಇಂದಿಗೂ ಜನರ ಮನಸಿನಲ್ಲಿ ನೆಲೆಸಿದ್ದಾರೆ. ಹಾಗಾಗಿಯೇ ಇಂದು ಮುಂಬೈನ ಪ್ರತಿಷ್ಠಿತ ಸಿಎಸ್‍ಟಿ ನಿಲ್ದಾಣ, ಜೆ.ಎನ್ ಪೆಟಿಟ್ ಲೈಬ್ರರಿ ಹಾಗೂ ಪ್ರಸಿದ್ಧ ಒರಿಯೆಂಟಲ್ ಕಟ್ಟಡವಿರುವ ರಸ್ತೆಗೆ ಅವರ ಹೆಸರನ್ನು ಯಾಕಿರಿಸಲಾಗಿದೆ ಎಂಬುದನ್ನು ಮನಗಾಣಬಹುದು.

  Published by:Precilla Olivia Dias
  First published: