ಟೆಕ್ನಾಲಜಿ (Technology) ಮುಂದುವರೆದಂತೆ ಜನರ ವಂಚನೆಗಳು ಕೂಡ ಹೆಚ್ಚಾಗಿದೆ. ಅದೇ ರೀತಿ ಇಲ್ಲೊಂದು ಜನರ ಆರೋಗ್ಯದ (Health) ಮೇಲು ಆಟವಾಡುತ್ತಿದ್ದಾರೆ. ಮಾಜಿ ಥೆರಾನೋಸ್ (Theranos) ಕಾರ್ಯನಿರ್ವಾಹಕ ಮತ್ತು ಅಮೇರಿಕನ್ ವಂಚಕಿ ಎಲಿಜಬೆತ್ ಅನ್ನಿ ಹೋಮ್ಸ್‌ನ ಮಾಜಿ ಗೆಳೆಯ ಸನ್ನಿ ಬಲ್ವಾನಿಗೆ (Ramesh Sunny Balwani) ಇದೀಗ ನಿಷ್ಕ್ರಿಯ ರಕ್ತಪರೀಕ್ಷೆಯ ಸ್ಟಾರ್ಟಪ್ ಹೆಸರಿನಲ್ಲಿ ಜನರನ್ನು ವಂಚಿಸಿದ್ದಕ್ಕಾಗಿ 13 ವರ್ಷಗಳ ಜೈಲುಶಿಕ್ಷೆಯನ್ನು ಯುಎಸ್ ನ್ಯಾಯಾಲಯ ವಿಧಿಸಿದೆ. ಕೆಲವೇ ವಾರಗಳ ಹಿಂದೆ ಸಿಲಿಕಾನ್ ವ್ಯಾಲಿಯ ದೊಡ್ಡ ದೊಡ್ಡ ಹಗರಣಗಳಲ್ಲಿ ಬಲ್ವಾನಿಗೆ ಸಹಚರಳಾಗಿದ್ದ ಎಲಿಜಬೆತ್ ಅನ್ನಿ ಹೋಮ್ಸ್‌ಗೆ ವಿಧಿಸಿದ್ದ ಶಿಕ್ಷೆಯ ಪ್ರಮಾಣಕ್ಕಿಂತ ಇದು ಕೊಂಚ ದೀರ್ಘವಾಗಿದೆ ಎಂದು ವರದಿಯಾಗಿದೆ.
ಥೆರಾನೋಸ್‌ನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾಗ ರಮೇಶ್ ಸನ್ನಿಯವರು ಹೂಡಿಕೆದಾರರು ಮತ್ತು ರೋಗಿಗಳ ಮೇಲೆ ರಕ್ತ ಪರೀಕ್ಷೆಯಲ್ಲಿ ವಂಚನೆ ನಡೆಸಿದ್ದಾರೆ. ಇದಕ್ಕಾಗಿ ಯುಎಸ್ ನ್ಯಾಯಾಲಯ ರಮೇಶ್ ಸನ್ನಿ ಬಲ್ವಾನಿಗೆ 13 ವರ್ಷಗಳ ಜೈಲು ವಾಸವನ್ನು ನೀಡಿದ್ದಾರೆ.
ಹೂಡಿಕೆದಾರರು ಹಾಗೂ ರೋಗಿಗಳಿಗೆ ವಂಚನೆ
ಯುಎಸ್ ಜಿಲ್ಲಾ ನ್ಯಾಯಾಧೀಶರಾದ ಎಡ್ವರ್ಡ್ ಡೇವಿಲಾ, ರಮೇಶ್ ಸನ್ನಿ ಬಲ್ವಾನಿಗೆ 13 ವರ್ಷಗಳ ಸೆರೆಮನೆವಾಸದ ಶಿಕ್ಷೆಯನ್ನು ವಿಧಿಸಿದ್ದು, ಬಲ್ವಾನಿ ಥೆರಾನೋಸ್ ಹೂಡಿಕೆದಾರರು ಮತ್ತು ರೋಗಿಗಳ ಮೇಲೆ ಭಾರಿ ವಂಚನೆ ನಡೆಸಿರುವುದಾಗಿ ಪ್ರಾಸಿಕ್ಯೂಟರ್‌ಗಳು ವಾದಿಸಿದ್ದರು.
ಇದನ್ನೂ ಓದಿ: ಭಾರತೀಯ ಸೈನಿಕರ ಹೊಡೆತಕ್ಕೆ ಓಡಿ ಹೋದ್ರಾ ಚೀನಾ ಸೈನಿಕರು? ವೈರಲ್ ವಿಡಿಯೋ ಹಿಂದಿನ ರಹಸ್ಯ ಇಲ್ಲಿದೆ!
ಈ ಕೃತ್ಯದಲ್ಲಿ ಬಲ್ವಾನಿಯ ಪಾತ್ರವೇನು ಎಂಬುದನ್ನು ಅರಿತುಕೊಳ್ಳಲು 3 ವರ್ಷಗಳ ಮೇಲ್ವಿಚಾರಣೆಯ ಬಿಡುಗಡೆಯನ್ನು ವಿಧಿಸಿದ್ದಾರೆ. ಮಾರ್ಚ್ 15 ರಂದು ಬಲ್ವಾನಿಯನ್ನು ಕಸ್ಟಡಿಗೆ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಬಲ್ವಾನಿ ಮಾಜಿ ಗೆಳತಿಗೂ ಸೆರೆಮನೆವಾಸ
ಯುಎಸ್ ಬಯೋಟೆಕ್ ಉದ್ಯಮಿ ಹಾಗೂ ಅಮೆರಿಕಾದ ಅಪರಾಧಿ ಎಲಿಜಬೆತ್ ಅನ್ನಿ ಹೋಮ್ಸ್ ಬಲ್ವಾನಿಯ ವಿಚಾರಣೆಗಿಂತ ಪ್ರತ್ಯೇಕವಾಗಿದ್ದು, ಆಕೆಯು ಅಪರಾಧವನ್ನು ರದ್ದುಗೊಳಿಸಲು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದು ಈ ಪರಿಣಾಮವಾಗಿ ಅನ್ನಿಗೆ ಹನ್ನೊಂದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
ತಪ್ಪಿತಸ್ಥನೆಂದು ತೀರ್ಪುನೀಡಿದ ನ್ಯಾಯಾಲಯ
ವೈದ್ಯಕೀಯ ಸಂಸ್ಥೆಯು ಆರಂಭಗೊಳ್ಳುವ ಮೊದಲೇ ಬಲ್ವಾನಿ ಹೂಡಿಕೆದಾರರ ಮನವೊಲಿಸುವ ನಿಟ್ಟಿನಲ್ಲಿ ವೈದ್ಯಕೀಯ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ ಎಂಬುದು ದಿ ವಾಲ್ ಸ್ಟ್ರೀಟ್ ಜರ್ನಲ್ ನಡೆಸಿದ ತನಿಖೆಯಿಂದ ಬಹಿರಂಗಗೊಂಡಿದೆ.
ಹೀಗೆ ನಾಲ್ಕು ಅಪರಾಧ ವಂಚನೆಗಳಿಗೆ ಬಲ್ವಾನಿಗೆ ಸೆರೆವಾಸದ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯದ ಪ್ರಕಾರ ಫೆಡರಲ್ ಪ್ರಾಸಿಕ್ಯೂಟರ್‌ಗಳು ಸಲ್ಲಿಸಿದ ಎಲ್ಲಾ 12 ವಂಚನೆ ಪ್ರಕರಣಗಳಲ್ಲಿ ಬಲ್ವಾನಿ ತಪ್ಪಿತಸ್ಥರೆಂದು ತೀರ್ಪುಗಾರರು ಕಂಡುಕೊಂಡಿದ್ದಾರೆ.
ರಕ್ತಪರೀಕ್ಷೆಯಿಂದ ರೋಗ ನಿರ್ಣಯ
ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿರುವ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದ ಡೇವಿಲ್ ಆದೇಶದಂತೆ ಗರ್ಭವತಿಯಾಗಿರುವ ಹೋಮ್ಸ್ ಮುಂದಿನ ವರ್ಷದ ಏಪ್ರಿಲ್‌ವರೆಗೆ ಶರಣಾಗಬೇಕಾಗಿಲ್ಲ ಎಂದು ತಿಳಿಸಿದ್ದಾರೆ.
ಕೆಲವೇ ರಕ್ತದ ಹನಿಗಳನ್ನು ಬಳಸಿಕೊಂಡು ರೋಗನಿರ್ಣಯ ಮಾಡಬಲ್ಲ ಪರೀಕ್ಷಾ ಕಿಟ್ ಅನ್ನು ತನ್ನ ಸ್ಟಾರ್ಟಪ್ ಅಭಿವೃದ್ಧಿಪಡಿಸಲಿದೆ ಎಂದು 38 ರ ಹರೆಯದ ಹೋಮ್ಸ್ ಜನರಿಗೆ ಭರವಸೆ ನೀಡಿದಾಗ ಆಕೆ ತಾರೆಯಾಗಿ ಮಾರ್ಪಟ್ಟರು.
ತನ್ನ ಸಂಸ್ಥೆಯಾದ ಥೆರಾನೋಸ್‌ನಲ್ಲಿ ಬಲ್ವಾನಿಗೂ ಪಾಲಿದೆ ಎಂದು ವಿಚಾರಣೆಯ ಸಮಯದಲ್ಲಿ ತಿಳಿಸಿದ್ದ ಹೋಮ್ಸ್, ಸಂಸ್ಥೆಯ ನಿಯಂತ್ರಕ ಶಕ್ತಿಯೇ ಆತ ಎಂದು ಹೇಳಿದ್ದರು.
ಬಲ್ವಾನಿ ಹಾಗೂ ಹೋಮ್ಸ್ ಜೊತೆ ಸೇರಿ ವಂಚನೆ
ಜನರನ್ನು ವಂಚಿಸುವುದರೊಂದಿಗೆ ಹೂಡಿಕೆದಾರರನ್ನು ವಂಚಿಸಿರುವ ಬಲ್ವಾನಿ ಹಾಗೂ ಹೋಮ್ಸ್ ಪ್ರಯೋಗದ ಹೆಸರಿನಲ್ಲಿ ಅಪರಾಧವನ್ನೆಸಗಿದ್ದಾರೆ ಎಂದು ನ್ಯಾಯಾಲಯ ತೀರ್ಪಿತ್ತಿದೆ.
57 ರ ಹರೆಯದ ಬಲ್ವಾನಿ, ಹೋಮ್ಸ್ ನಡೆಸುವ ಎಲ್ಲಾ ಕೃತ್ಯಗಳಲ್ಲಿ ಪಾಲುದಾರನಾಗಿದ್ದು, ಇವರಿಬ್ಬರೂ ಜೊತೆ ಸೇರಿಕೊಂಡು ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಯುಎಸ್ ಪ್ರಾಸಿಕ್ಯೂಟರ್ ರಾಬರ್ಟ್ ಲೀಚ್ ತಿಳಿಸಿದ್ದಾರೆ.
ಸ್ಟಾರ್ಟಪ್ ಲಾಭದಲ್ಲಿದೆ ಎಂದು ವಂಚಿಸಿದ್ದರು
ಬಲ್ವಾನಿ ಹಾಗೂ ಹೋಮ್ಸ್ ನ್ಯಾಯಾಲಯದಲ್ಲಿ ತಮ್ಮ ಮೇಲೆ ಮಾಡಿರುವ ಆಪಾದನೆಯನ್ನು ತಿರಸ್ಕರಿಸಿದ್ದು, ಥೆರಾನೋಸ್ ಸ್ಟಾರ್ಟಪ್‌ನ ಸಾಧನೆಯನ್ನು ನಂಬಿದ್ದರು ಹಾಗೂ ವಂಚಿಸುವ ಉದ್ದೇಶದಿಂದ ಉದ್ಯಮವನ್ನು ಆರಂಭಿಸಿಲ್ಲ ಎಂದು ತಿಳಿಸಿದ್ದಾರೆ. ಹೋಮ್ಸ್ 2003 ರಲ್ಲಿ ತನ್ನ 19 ರ ಹರೆಯದಲ್ಲಿ ಸ್ಥಾಪಿಸಿದ್ದ ಸಂಸ್ಥೆಯನ್ನು ಮುನ್ನಡೆಸಲು ಬಲ್ವಾನಿಯ ಸಹಾಯವನ್ನು ಕೋರಿದ್ದರು ಎಂಬುದು ತಿಳಿದುಬಂದಿದೆ.
ತಮ್ಮ ತಂತ್ರಜ್ಞಾನವು ಜಾಹೀರಾತು ನೀಡಿದ ಬಗೆಯಲ್ಲಿ ಕೆಲಸಮಾಡುತ್ತಿಲ್ಲ ಎಂಬುದನ್ನು ಇಬ್ಬರೂ ತಿಳಿದಿದ್ದರೂ ಕಂಪನಿಗೆ ಹಣ ಹೂಡಿದ ಹೂಡಿಕೆದಾರರು ಹಾಗೂ ರೋಗಿಗಳಿಗೆ ತಾವು ನಡೆಸುತ್ತಿರುವ ಸ್ಟಾರ್ಟಪ್ ಲಾಭದಲ್ಲಿದ್ದು ತಮ್ಮ ಪ್ರಯೋಗವು ಕ್ರಾಂತಿಕಾರಿಯಾಗಿದೆ ಎಂದು ಪ್ರಚಾರ ಮಾಡುವುದನ್ನು ಮುಂದುವರಿಸಿದ್ದರು ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ