ಮಕ್ಕಳು ತಪ್ಪು ಮಾಡಿದಾಗ ತಂದೆ-ತಾಯಿ ಅವರಿಗೆ ಬೈಯ್ದು, ಹೊಡೆದು ಬುದ್ಧಿ ಹೇಳುವುದು ಸಹಜ. ಬೆಳೆಯುವ ವಯಸ್ಸಿನಲ್ಲಿ ಮಕ್ಕಳು ತಪ್ಪು ದಾರಿ ಹಿಡಿಯುವುದು ಸಹಜ. ಆಗ ಪೋಷಕರಾದವರು ತಮ್ಮ ಮಕ್ಕಳಿಗೆ ಬುದ್ಧಿ ಹೇಳಿ ಸರಿ ದಾರಿಗೆ ತರುವ ಪ್ರಯತ್ನ ಮಾಡುತ್ತಾರೆ. ಇತ್ತೀಚಿಗಂತೂ ಮೊಬೈಲ್ ಬಂದ ಮೇಲೆ ಮಕ್ಕಳಂತೂ ಸದಾ ಅವುಗಳಲ್ಲೇ ಮುಳುಗಿದ್ದಾರೆ. ಆನ್ಲೈನ್ ಗೇಮ್ಗಳಿಗೆ ಅಡಿಕ್ಟ್ ಆಗಿದ್ದಾರೆ. ತಂದೆ-ತಾಯಿ ಬುದ್ಧಿ ಹೇಳುವುದೇ ತಪ್ಪಾಗಿದೆ. ಮಧ್ಯಪ್ರದೇಶದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಆನ್ಲೈನ್ ಗೇಮ್ನ ಗೀಳು ಹಚ್ಚಿಕೊಂಡಿದ್ದ ಹುಡುಗನೊಬ್ಬ ಆ ಆಟದಿಂದ ಸುಮಾರು 40 ಸಾವಿರ ಹಣವನ್ನು ಕಳೆದುಕೊಂಡಿದ್ದಾನೆ. ಆತನ ತಾಯಿ ಯಾಕಿಷ್ಟು ಹಣ ಪೋಲು ಮಾಡಿದೆ ಎಂದು ಕೇಳಿದ್ದಕ್ಕೆ ಹುಡುಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಂದರೆ ಇಲ್ಲಿ ಮಕ್ಕಳು ತಪ್ಪು ಮಾಡಿದಾಗ ತಂದೆ-ತಾಯಿ ಬೈಯ್ಯುವುದೇ ಅಪರಾಧವಾಗಿದೆ. ತನ್ನ ತಾಯಿ ಬೈಯ್ದಿದ್ದಕ್ಕೆ ಮನನೊಂದ ಹುಡುಗ ಸಾವಿನ ಮನೆ ಕದ ತಟ್ಟಿದ್ದಾನೆ. ಈ ಘಟನೆ ಮಧ್ಯ ಪ್ರದೇಶದ ಚತ್ರಾಪುರ್ ಜಿಲ್ಲೆಯ ಶಾಂತಿನಗರದಲ್ಲಿ ನಡೆದಿದೆ.
ಇದನ್ನೂ ಓದಿ:Prepaid Recharge: 100 ರೂ. ಒಳಗಿನ ಪ್ರಿಪೇಯ್ಡ್ ರೀಚಾರ್ಜ್‌ನಲ್ಲಿ ಇನ್ಮುಂದೆ SMS ಆಫರ್ ಲಭ್ಯವಿಲ್ಲ..!
ಆತ್ಮಹತ್ಯೆ ಮಾಡಿಕೊಂಡ ಹುಡುಗ ಫ್ರೀ ಫೈಯರ್ ಎಂಬ ಬ್ಯಾಟಲ್ ರಾಯಲ್ ಗೇಮ್ ನ್ನು ಸದಾ ಆಡುತ್ತಿದ್ದ. ಜೊತೆಗೆ 40 ಸಾವಿರ ರೂಪಾಯಿಯನ್ನು ಆ ಆಟದಿಂದ ಕಳೆದುಕೊಂಡಿದ್ದ. ಇದು ಆತನ ತಂದೆ-ತಾಯಿಗೆ ಕೋಪ ಬರಿಸಿತ್ತು. ಇಷ್ಟು ಹಣ ಏನು ಮಾಡಿದೆ ಎಂದು ಕೇಳಿದ್ದಕ್ಕೆ ಹುಡುಗ ಸಾವಿಗೆ ಶರಣಾಗಿದ್ದಾನೆ.
ಈ ಘಟನೆ ನಡೆದಾಗ, ಮನೆಯಲ್ಲಿ ಹುಡುಗ ಮತ್ತು ಆಕೆಯ ತಂಗಿ ಮಾತ್ರ ಇದ್ದರು. ಪೊಲೀಸರ ಪ್ರಕಾರ, ಹುಡುಗನ ತಾಯಿ ಕೆಲಸಕ್ಕೆ ಹೋಗಿದ್ದಾಗ, ಆಕೆಯ ಬ್ಯಾಂಕ್ ಖಾತೆಯಿಂದ 1,500 ರೂಪಾಯಿ ಕಡಿತವಾಗಿದೆ ಎಂಬ ಮೆಸೇಜ್ ಹೋಗಿದೆ. ಆಗ ಆಕೆ ತನ್ನ ಮಗನಿಗೆ ಕರೆ ಮಾಡಿ ಕಡಿತಗೊಂಡಿರುವ ಹಣದ ಬಗ್ಗೆ ವಿಚಾರಿಸಿದ್ದಾಳೆ. ಆನ್ಲೈನ್ ಗೇಮ್ ಆಡುವಾಗ ನೀನು ಹಣ ವೇಸ್ಟ್ ಮಾಡಿದ್ದೀಯಾ ಎಂದು ಬೈಯ್ದಿದ್ದಾಳೆ. ಇದರಿಂದ ಬೇಸರಗೊಂಡ ಆತ ರೂಮ್ಗೆ ಹೋಗಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜೊತೆಗೆ ಸಾವಿಗೀಡಾದ ಯುವಕ ಡೆತ್ನೋಟ್ನ್ನು ಬರೆದಿಟ್ಟಿರುವುದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ. ಸುಮಾರು 40 ಸಾವಿರ ಹಣವನ್ನು ತನ್ನ ತಾಯಿಯ ಬ್ಯಾಂಕ್ ಖಾತೆಯಿಂದ ವಿತ್ಡ್ರಾ ಮಾಡಿಕೊಂಡು, ಫ್ರೀ ಫೈಯರ್ ಎಂಬ ಆನ್ಲೈನ್ ಗೇಮ್ ಆಡಿ, ಅಷ್ಟೂ ಹಣವನ್ನು ಕಳೆದುಕೊಂಡಿರುವುದಾಗಿ ಹುಡುಗ ಡೆತ್ನೋಟ್ ಬರೆದಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ