ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿ ನಾಲಿಗೆ ಕತ್ತರಿಸಿ ಕೊಂದರು; ಉತ್ತರ ಪ್ರದೇಶದಲ್ಲೋಂದು ಭೀಕರ ಘಟನೆ

ಉತ್ತರ ಪ್ರದೇಶದಲ್ಲಿ ಕಳೆದ ವಾರ 6 ವರ್ಷದ ಬಾಲಕಿತನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿತ್ತು. ಈ ಘಟನೆ ಇನ್ನು ಹಸಿ ಇರುವಾಗಲೇ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿರುವುದು ಉತ್ತರ ಪ್ರದೇಶದ ಜನತೆಯಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಸಾಂಧರ್ಭಿಕ ಚಿತ್ರ

ಸಾಂಧರ್ಭಿಕ ಚಿತ್ರ

 • Share this:
  ಲಖನೌ (ಆಗಸ್ಟ್​ 16): 13 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ನಂತರ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಲಖೀಮ್​ಪುರ್​ಖೇರಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದೆ.

  ಲಖೀಮ್​ಪುರ್​ಖೇರಿ ಜಿಲ್ಲೆಯ ಗ್ರಾಮವೊಂದರ ಕಬ್ಬಿನ ಗದ್ದೆಯಲ್ಲಿ ಬಾಲಕಿಯ ಶವ ಪತ್ತೆ ಆಗಿದೆ. ಸಂತ್ರಸ್ತೆಯನ್ನು ಅತ್ಯಾಚಾರ ಮಾಡಿ ಆಕೆಯ ಕಣ್ಣನ್ನು ಕೀಳಲಾಗಿದೆ. ನಾಲಿಗೆ ಕತ್ತರಿಸಲಾಗಿದೆ. ಕೊನೆಗೆ ಆಕೆಯನ್ನು ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ. ಬಾಲಕಿಯ ಶವವನ್ನು ನೋಡಿದ ತಂದೆ ಶಾಕ್​ಗೆ ಒಳಗಾಗಿದ್ದಾರೆ.

  ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಇಬ್ಬರ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  ಬಾಲಕಿ ಶುಕ್ರವಾರ ಮಧ್ಯಾಹ್ನ ಕಾಣೆಯಾಗಿದ್ದಳು. ಎಲ್ಲಾದರೂ ಹೋಗಿರಬಹುದು, ಆಕೆ ವಾಪಾಸು ಬರಬಹುದು ಎಂದು ಪಾಲಕರು ಭಾವಿಸಿದ್ದರು. ಆದರೆ, ಆಕೆ ಸಂಜೆಯಾದರೂ ಬರದಿದ್ದನ್ನು ಕಂಡ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.  ಶನಿವಾರ ಆಕೆಯ ಶವ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ.

  ಉತ್ತರ ಪ್ರದೇಶದಲ್ಲಿ ಕಳೆದ ವಾರ 6 ವರ್ಷದ ಬಾಲಕಿತನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿತ್ತು. ಈ ಘಟನೆ ಇನ್ನು ಹಸಿ ಇರುವಾಗಲೇ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿರುವುದು ಉತ್ತರ ಪ್ರದೇಶದ ಜನತೆಯಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.
  Published by:Rajesh Duggumane
  First published: