13 Year Old Girl; ಅಪ್ಪನ ನಿಗೂಢ ಸತ್ಯ ಬಿಚ್ಚಿಟ್ಟ ಬಾಲಕಿ; ಮುಂದೆ ನಡೆದಿದ್ದು ಅಚ್ಚರಿ ಮೇಲೆ ಅಚ್ಚರಿ

ಬಾಲಕಿಯ ಘಾಟಪಿರಿಯಾ ಗ್ರಾಮಕ್ಕೆ ತೆರಳಿದ್ದಾರೆ. ದೂರು ನೀಡಿದ ಬಾಲಕಿ ತಂದೆ ಕನ್ನಯ್ಯ ಬಾರಿಸಿಯಾ ಎಂಬಾತನನ್ನು ಮೊದಲು ವಶಕ್ಕೆ ಪಡೆದುಕೊಂಡಿದ್ದಾರೆ. ಆರಂಭದಲ್ಲಿ ಕನ್ನಯ್ಯ ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡಿಲ್ಲ.

ಪೊಲೀಸರ ಪರಿಶೀಲನೆ

ಪೊಲೀಸರ ಪರಿಶೀಲನೆ

  • Share this:
ಭೋಪಾಲ್: 13 ವರ್ಷದ ಬಾಲಕಿಯೊಬ್ಬಳ (13 Year Old Girl) ತಂದೆಯ (Father) ನಿಗೂಢ ಸತ್ಯವನ್ನು ಬಿಚ್ಚಿಟ್ಟಿದ್ದು, ಇಡೀ ಊರಿಗೆ ಊರೇ ಅಚ್ಚರಿಗೊಂಡಿದೆ. ಪೊಲೀಸ್ ಠಾಣೆಗೆ ತೆರಳಿದ್ದ ಬಾಲಕಿ ತಂದೆ ಮುಚ್ಚಿಟ್ಟ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ. ಬಾಲಕಿ ಮಾತು ಕೇಳಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ತಂದೆಯ ಅಸಲಿ ಮುಖ ಬಟಾಬಯಲಾಗಿದೆ. ಈ ಘಟನೆ ನಡೆದಿದ್ದು ಮಧ್ಯ ಪ್ರದೇಶದ (Madhya Pradesh) ಛಿಂದ್ವಾಡದ ಸಿಂಗೊಡಿ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ. ಸದ್ಯ ಬಾಲಕಿಯ ತಂದೆ ಕಂಬಿಗಳ ಹಿಂದೆ ಕಳುಹಿಸಲಾಗಿದ್ದು, ಪೋರಿಯ ಧೈರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಬಾಲಕಿ ದೂರಿನ ಮೇರೆಗೆ ಗ್ರಾಮಕ್ಕೆ ಬಂದ ಪೊಲೀಸರು

ಬಾಲಕಿ ಬಂದು ತಂದೆಯ  ವಿರುದ್ಧ ನೋಡುತ್ತಿದ್ದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ ಡಿಪಿಐ ಸಂತೋಷ್ ಡೆಹಾರಿಯಾ ಮತ್ತು ಟಿಐ ಪೊಲೀಸ್ ತಂಡವನ್ನು ಆಕೆಯ ಸ್ವಗ್ರಾಮಕ್ಕೆ ಕಳುಹಿಸಿದ್ದಾರೆ. ಬಾಲಕಿಯ ಘಾಟಪಿರಿಯಾ ಗ್ರಾಮಕ್ಕೆ ತೆರಳಿದ್ದಾರೆ. ದೂರು ನೀಡಿದ ಬಾಲಕಿ ತಂದೆ ಕನ್ನಯ್ಯ ಬಾರಿಸಿಯಾ ಎಂಬಾತನನ್ನು ಮೊದಲು ವಶಕ್ಕೆ ಪಡೆದುಕೊಂಡಿದ್ದಾರೆ. ಆರಂಭದಲ್ಲಿ ಕನ್ನಯ್ಯ ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡಿಲ್ಲ.

ಇದನ್ನೂ ಓದಿ:  ನಾನು ಸತ್ತ ಮೇಲೆ ಬ್ಯಾನರ್ ಹಾಕಿ, Sorry.. I AM GOING TO RIP:  ಪಿಯು ವಿದ್ಯಾರ್ಥಿ ಆತ್ಮಹತ್ಯೆ

ತಂದೆಯ ಮುಂದೆಯೇ ಸತ್ಯ ಬಿಚ್ಚಿಟ್ಟ ಬಾಲಕಿ

ಆರೋಪಿ ಕನ್ನಯ್ಯ ತಪ್ಪು ಒಪ್ಪಿಕೊಳ್ಳದಿದ್ದಾಗ ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಆದ್ರೂ ಸತ್ಯ ಒಪ್ಪಿಕೊಳ್ಳಲು ಹಿಂದೇಟು ಹಾಕಿದಾಗ ಬಾಲಕಿಯನ್ನು ಕರೆಸಿ ತಂದೆ ಮಂದೆಯೇ ಪೊಲೀಸ್ ಠಾಣೆಯಲ್ಲಿ ತಿಳಿಸಿದ ವಿಷಯ ಹೇಳುವಂತೆ ಹೇಳಿದ್ದಾರೆ. ಬಾಲಕಿಯ ತಂದೆಯೇ ಮುಂದೆಯೇ ಅಂದು ನಡೆದ ಘಟನೆಯನ್ನು ವಿವರಿಸಿದ್ದಾಳೆ.

ಬಾಲಕಿ ಹೇಳಿದ ಸತ್ಯವಾದ್ರೂ ಏನು?

ಸೋಮವಾರ ಮನೆಗೆ ಅಜೇಶ್ ಎಂಬಾತನನ್ನು ಕರೆದುಕೊಂಡು ಬಂದಿದ್ದನು. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಅದಾಗಲೇ ಜೊತೆಯಲ್ಲಿಯೇ  ಇಬ್ಬರು ಮದ್ಯ ಸೇವನೆ ಮಾಡಿದ್ದರು.ಜಗಳ ವಿಕೋಪಕ್ಕೆ ತಿರುಗಿದಾಗ ಮದ್ಯದ ನಶೆಯಲ್ಲಿದ್ದ  ಕನ್ನಯ್ಯ ಭರ್ಜಿಯಿಂದ ಇರಿದು ಅಜೇಶ್ ನನ್ನು ಕೊಲೆ ಮಾಡಿದ್ದನು. ಕೊಲೆ ನಂತರ ಶವವನ್ನು ಉಪಾಯವಾಗಿ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದನು. ಈ ಎಲ್ಲ ಘಟನೆಯನ್ನು ಬಾಲಕಿ ಪೊಲೀಸರ ಮುಂದೆ ವಿವರಿಸಿದ್ದಳು.

ಅಜೇಶ್ ಮತ್ತು ಕನ್ನಯ್ಯಗೂ ಪರಿಚಯವೇ ಇರಲಿಲ್ಲ

ಮೃತ ಅಜೇಶ್ ಛುಯಿ ಗ್ರಾಮದ ನಿವಾಸಿ. ಆರೋಪಿಗೂ ಮತ್ತು ಅಜೇಶ್ ಗೆ ಈ ಮೊದಲು ಪರಿಚಯವೇ ಇರಲಿಲ್ಲ. ಸೋಮವಾರ ಸಂಜೆ ಕೆಲಸ ಮುಗಿಸಿ ಕನ್ನಯ್ಯ ಮನೆಗೆ ತೆರಳುತ್ತಿರುವಾಗ ಅಜೇಶ್ ಬೈಕ್ ನಲ್ಲಿ ಬಂದಾಗ ಲಿಫ್ಟ್ ಕೇಳಿದ್ದಾನೆ, ಅಜೇಶ್ ಬೈಕ್ ಮೇಲೆಯೇ ಕನ್ನಯ್ಯ ಮನೆ ತಲುಪಿದ್ದಾನೆ. ಈ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದಿದೆ. ನಂತರ ಮನೆಯ ಮೇಲೆ ಕರೆದುಕೊಂಡು ಹೋಗಿ ಜೊತೆಯಲ್ಲಿಯೇ ಮದ್ಯ ಸೇವನೆ ಮಾಡಿದ್ದಾನೆ.

ಇದನ್ನೂ ಓದಿ: ಸುಟ್ರೆ ಬೂದಿ ಆಗ್ತೀನಿ, ಹೂತ್ರೆ ಕೊಳೆತು ಹೋಗ್ತೀನಿ, ಅಂಗಾಂಗ ದಾನ ನೀಡಿ: ವಿಡಿಯೋ ಮಾಡಿ Engineering Student ಆತ್ಮಹತ್ಯೆ

ಅಜೇಶ್ ಹಸಿವು ಆಗ್ತಿದೆ ಅಂದಾಗಲೂ ಮನೆಯಿಂದ ಆಹಾರ ತಂದುಕೊಟ್ಟಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಯಾವುದೋ ವಿಚಾರಕ್ಕೆ ಜಗಳ ನಡೆದಿದೆ. ಕೋಪಗೊಂಡ ಕನ್ನಯ್ಯ  ಭರ್ಜಿಯಿಂದ ಇರಿದು ಕೊಂದಿದ್ದಾನೆ. ಅಜೇಶ್ ನನ್ನು ಕೊಲೆ ಮಾಡಿರೋದನ್ನು ಬಾಲಕಿ ನೋಡಿದ್ದಳು. ನಂತರ ಉಪಾಯವಾಗಿ ಶವವನ್ನು ರಾತ್ರಿಯೇ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಹೂತು ಹಾಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ತಪ್ಪೊಪ್ಪಿಕೊಂಡ ಕನ್ನಯ್ಯ

ಮಗಳೇ ಘಟನೆಯನ್ನು ವಿವರಿಸಿದ ಬಳಿಕ ಕನ್ನಯ್ಯ ತಪ್ಪೊಪ್ಪಿಕೊಂಡಿದ್ದಾನೆ. ಶವವನ್ನು ಹೊರ ತೆಗೆದು ಮರಣೋತ್ತರ ಶವ ಪರೀಕಗಷೆ ನಡೆಸಲಾಗಿದೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
Published by:Mahmadrafik K
First published: