ತಂದೆ - ತಾಯಿಯ ಸಾವಿನ ನಂತರ ಪುಟ್ಟ ಸಹೋದರರ ಪಾಲಕಳಾದ 13 ವರ್ಷದ ಅಸ್ಸಾಂ ಬಾಲಕಿ..!

ಎಲ್ಲಾ ಅಡೆತಡೆಗಳನ್ನು ಧಿಕ್ಕರಿಸಿ ಮತ್ತು ತಮ್ಮ ಕಣ್ಣಿನಲ್ಲಿ ಉತ್ತಮ ಭವಿಷ್ಯದ ಭರವಸೆಯೊಂದಿಗೆ ಅವರು ದಿನೇ ದಿನೇ ಪಾಳುಬಿದ್ದ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ

13 ವರ್ಷದ ಬಾಲಕಿ

13 ವರ್ಷದ ಬಾಲಕಿ

  • Share this:

ಅಸ್ಸಾಂನ ಜೋರ್ಹತ್ ಜಿಲ್ಲೆಯ ದೋಹುತಿಯಾ ಗ್ರಾಮದಲ್ಲಿ 13 ವರ್ಷದ ಬಾಲಕಿಯ ದುರಂತ ಕತೆಯನ್ನು ನ್ಯೂಸ್ 18 ಅಸ್ಸಾಂ ವರದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆಕೆಯ ಕತೆಯು ಈಗ ಪ್ರತಿಯೊಬ್ಬರ ಹೃದಯವನ್ನೂ ಕರಗಿಸುತ್ತಿದೆ ಮತ್ತು 'ಶಿಕ್ಷಣದ ಹಕ್ಕು' ಇನ್ನೂ ಅನೇಕ ಮಕ್ಕಳಿಗೆ ದೂರದ ಕನಸಾಗಿರುವ ಸಮಾಜದ ಬಗ್ಗೆ ಯೋಚಿಸುವಂತೆ ಒತ್ತಾಯಿಸುತ್ತಿದೆ. ಆಕೆಯ ಹೆತ್ತವರ ಅಕಾಲಿಕ ಮರಣದ ನಂತರ, 13 ವರ್ಷದ ಬಾಲಕಿ ತನ್ನ ಇಬ್ಬರು ಕಿರಿಯ ಸಹೋದರರ ಪಾಲನೆಯ ಜವಾಬ್ದಾರಿ ಹೊತ್ತುಕೊಂಡಿದ್ದಾಳೆ. ತನ್ನ ಚಿಕ್ಕ ವಯಸ್ಸಿನಲ್ಲಿಯೇ ತನ್ನ ತಂದೆ ಕಳೆದುಕೊಂಡ ಪುಟ್ಟ ಪಾಪುಲಿ ನಂತರ ತನ್ನ ಅನಾರೋಗ್ಯದ ತಾಯಿ ಮತ್ತು ಇಬ್ಬರು ಪುಟ್ಟ ಸಹೋದರರನ್ನು ನೋಡಿಕೊಳ್ಳಲು ತನ್ನ ಶಾಲೆಯನ್ನು ಬಿಡಬೇಕಾಯಿತು. ತನ್ನ ಮನೆಯ ಏಕೈಕ ದುಡಿಯುವ ಕೈ ಇವಳಾಗಿದ್ದು, ಮನೆಯವರ ಹಸಿವು ತಣಿಸಲು ಭತ್ತದ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಳು. ಈ ಕತೆ ನಿಮ್ಮ ಕಣ್ಣಂಚಲ್ಲೂ ನೀರು ತರಿಸಿದರೆ ಆಶ್ಚರ್ಯ ಪಡಬೇಡಿ.


ಮೂರು ವರ್ಷಗಳ ಹಿಂದೆ ಪಾಪುಲಿಯ ತಂದೆ ಇದ್ದಕ್ಕಿದ್ದಂತೆ ನಿಧನರಾದಾಗ ಮತ್ತು ತಾಯಿ ಕ್ಯಾನ್ಸರ್‌ಗೆ ತುತ್ತಾದಾಗ ಮಕ್ಕಳ ಪ್ರಪಂಚವು ಕುಸಿಯಲು ಪ್ರಾರಂಭಿಸಿತು. ಅನೇಕ ವರ್ಷಗಳಿಂದ, ಅವರ ಜೀವನವು ಹೇಗೋ ಚಲಿಸುತ್ತಿತ್ತು. ಆದರೆ, ಸುಮಾರು 15 ದಿನಗಳ ಹಿಂದೆ ಆಕೆಯ ತಾಯಿಯೂ ಕ್ಯಾನ್ಸರ್‌ ವಿರುದ್ಧದ ಹೋರಾಟದಲ್ಲಿ ಸೋತು ಪ್ರಾಣವನ್ನೇ ಕಳೆದುಕೊಂಡರು. ಮತ್ತು ಇದ್ದಕ್ಕಿದ್ದಂತೆ 13 ವರ್ಷದ ಹೆಣ್ಣು ಮಗು ತನ್ನ ಸಹೋದರರ ಏಕೈಕ ಪಾಲಕಳಾದಳು.


"ನಾನು ಕೆಲವೊಮ್ಮೆ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತೇನೆ, ದಿನಕ್ಕೆ 250 ರೂ. ದುಡಿಯುತ್ತೇನೆ. ಈ ಹಣದಿಂದ ನಾನು ನನ್ನ ಪುಟ್ಟ ಸಹೋದರರನ್ನು ನೋಡಿಕೊಳ್ಳಬಲ್ಲೆ. ನನ್ನ ತಾಯಿ ತೀರಿಕೊಂಡ ನಂತರ ಕೆಲವೊಮ್ಮೆ ನನ್ನ ಸಹೋದರರು ರಾತ್ರಿಯ ವೇಳೆ ಹೆದರುತ್ತಾರೆ. ಆದರೆ ನಾನು ಹಾಗಲ್ಲ. ನಾನು ಉಚಿತವಾಗಿ ಹಣ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ನಾನು ಹಣಕ್ಕಾಗಿ ಕೆಲಸ ಮಾಡಲು ಬಯಸುತ್ತೇನೆ'' ಎಂದು ಪುಟ್ಟ ಪಾಪುಲಿ ಹೇಳಿದ್ದಾಳೆ.

ಸಹಾನುಭೂತಿಯುಳ್ಳ ಪುಟ್ಟ ಹುಡುಗಿ ತನ್ನ ಕುಟುಂಬದ ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾಳೆ. ಈ ಮಕ್ಕಳ ಅವಸ್ಥೆಯನ್ನು ನೋಡಿ ಕೆಲವರು ದತ್ತು ತೆಗೆದುಕೊಳ್ಳಲು ಸೂಚಿಸಿದರು. ಆದರೆ, ಬೇರೆಯಾಗಲು ಒಡಹುಟ್ಟಿದವರಿಗೆ ಇಷ್ಟವಿರಲಿಲ್ಲ.

"ನಾವು ಸಹಾಯ ಮಾಡಲು ಪ್ರಯತ್ನಿಸಿದ್ದೇವೆ. ಆದರೆ ಅವರಿಗೆ ಸರ್ಕಾರದಿಂದ ಸರಿಯಾದ ಬೆಂಬಲ ಬೇಕು. ಮಕ್ಕಳು ಬೇರೆಯಾಗಲು ಬಯಸುತ್ತಿಲ್ಲ. ದತ್ತು ಪಡೆಯುವ ಹೆಸರಲ್ಲಿ ತಮ್ಮನ್ನು ಬೇರ್ಪಡಿಸದಂತೆ ಮಕ್ಕಳು ಪದೇ ಪದೇ ವಿನಂತಿಸಿದ್ದಾರೆ'' ಎಂದು ನೆರೆ ಹೊರೆಯವರು ಹೇಳಿದರು.


ಎಲ್ಲಾ ಅಡೆತಡೆಗಳನ್ನು ಧಿಕ್ಕರಿಸಿ ಮತ್ತು ತಮ್ಮ ಕಣ್ಣಿನಲ್ಲಿ ಉತ್ತಮ ಭವಿಷ್ಯದ ಭರವಸೆಯೊಂದಿಗೆ ಅವರು ದಿನೇ ದಿನೇ ಪಾಳುಬಿದ್ದ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇನ್ನು, ಅವರ ಕೆಲ ಸಂಬಂಧಿಕರು ಮತ್ತು ನೆರೆಹೊರೆಯವರು ಅವರನ್ನು ಬೆಂಬಲಿಸುತ್ತಿದ್ದರೂ, ಅದು ಸಾಕಾಗಲ್ಲ. ನ್ಯೂಸ್ 18 ವರದಿ ಪ್ರಸಾರದ ನಂತರ, ಈ ಮಕ್ಕಳ ಕತೆ ಎಲ್ಲರ ಗಮನ ಸೆಳೆಯಿತು ಮತ್ತು ಅನೇಕ ಜನರು ಸಹಾಯಕ್ಕಾಗಿ ಅಸ್ಸಾಂ ಸರ್ಕಾರಕ್ಕೆ ಮನವಿ ಮಾಡಲು ಪ್ರಾರಂಭಿಸಿದರು.

"ನಾನು 7 ನೇ ತರಗತಿಯಲ್ಲಿ ಓದುತ್ತಿದ್ದೆ ಮತ್ತು ನನ್ನ ಅನಾರೋಗ್ಯದ ತಾಯಿಯನ್ನು ನೋಡಿಕೊಳ್ಳಲು ಶಾಲೆಯನ್ನು ಬಿಡಬೇಕಾಯಿತು. ನಾನು ಅಡುಗೆ ಮಾಡಿ ನನ್ನ ಸಹೋದರರನ್ನು ನೋಡಿಕೊಳ್ಳುತ್ತೇನೆ. ನನ್ನ ಒಬ್ಬ ಸಹೋದರ 5ನೇ ತರಗತಿಯಲ್ಲಿ ಓದುತ್ತಿದ್ದಾನೆ ಮತ್ತು ಇನ್ನೊಬ್ಬನಿಗೆ 4 ವರ್ಷ. ನಾವೆಲ್ಲರೂ ಅಧ್ಯಯನ ಮತ್ತು ಸರಿಯಾದ ಆಹಾರ ಹೊಂದಬೇಕೆಂದು ನಾನು ಬಯಸುತ್ತೇನೆ" ಎಂದು ಪಾಪುಲಿ ದು:ಖದಿಂದ ಹೇಳಿದಳು.

ಇನ್ನು, ನ್ಯೂಸ್ 18 ವರದಿ ಪ್ರಸಾರಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಸಮಾಜ ಕಲ್ಯಾಣ ಸಚಿವ ಅಜಂತ ನಿಯೋಗ್ ತಕ್ಷಣವೇ ಈ ಮಕ್ಕಳಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು. ಅಸ್ಸಾಂ ಸರ್ಕಾರವು ಈ ಮಕ್ಕಳ ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ ಮತ್ತು ಅವರು ಶೀಘ್ರದಲ್ಲೇ ಶಾಲೆಗೆ ಹೋಗಬಹುದು, ಯಾವುದೇ ಆತಂಕವಿಲ್ಲದೆ ಅಧ್ಯಯನವನ್ನು ಮುಂದುವರಿಸಬಹುದು ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ, ಸಚಿವರು ಘೋಷಿಸಿದರು.


ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಣಬ್ ಕುಮಾರ್ ಬೋರಹ್ ನೇತೃತ್ವದ ಜೋರ್ಹತ್ ಜಿಲ್ಲಾ ಮಂಡಳಿಯ ತಂಡವು ಈಗಾಗಲೇ ಅವರ ಮನೆಗೆ ಧಾವಿಸಿದ್ದು, ಮತ್ತು ಮಕ್ಕಳಿಗೆ 25,000 ರೂ. ನೆರವನ್ನು NFBS ಯೋಜನೆಯಡಿ ನೀಡುವ ಭರವಸೆ ನೀಡಿದ್ದಾರೆ. ಹಾಗೂ, ಮಕ್ಕಳ ಯೋಗಕ್ಷೇಮಕ್ಕೆ ಎಲ್ಲಾ ಬೆಂಬಲವನ್ನು ಖಾತರಿಪಡಿಸುವ ಅಧಿಕಾರಿ ಮಕ್ಕಳಿಗೆ ಭವಿಷ್ಯದ ಖಾತೆಯನ್ನು ಪಡೆಯುವ ಬ್ಯಾಂಕ್ ಖಾತೆ ತೆರೆಯಲು ಸೂಚಿಸಿದ್ದಾರೆ. ಅಲ್ಲದೆ, ಅವರ ಮನೆಯಲ್ಲಿ ಕುಡಿಯುವ ನೀರಿನ ಸೌಲಭ್ಯವನ್ನು ಸ್ಥಾಪಿಸುವಂತೆ ಅವರು ಸ್ಥಳೀಯ ಪಂಚಾಯತ್ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.


ಸುರಂಗದ ತುದಿಯಲ್ಲಿ ಯಾವಾಗಲೂ ಬೆಳಕು ಇರುತ್ತದೆ ಎಂಬ ಮಾತಿನಂತೆ ನ್ಯೂಸ್ 18 ವರದಿ ಪ್ರಸಾರ ಮಾಡಿದ 24 ಗಂಟೆಗಳ ಒಳಗೆ ಈ ಮಕ್ಕಳನ್ನು ಬಚಾವ್‌ ಮಾಡುವ ಭರವಸೆಯನ್ನು ಸರ್ಕಾರ ನೀಡಿದೆ, ಮತ್ತು ಈಗ, ಮೂಲಭೂತ ಮಾರ್ಗಗಳಿಗಾಗಿ ಅವರು ಹೆಣಗಾಡಬೇಕಾದ ಅಗತ್ಯವಿಲ್ಲದ ಉತ್ತಮ ಭವಿಷ್ಯವು ಅವರಿಗೆ ಕಾಯುತ್ತಿದೆ ಎಂದು ಹೇಳಬಹುದು.
Published by:Sharath Sharma Kalagaru
First published: