Taiwan Building: 13 ಅಂತಸ್ತಿನ ಕಟ್ಟಡದಲ್ಲಿ ಅಗ್ನಿಯ ರೌದ್ರ ನರ್ತನ; 46 ಸಾವು, 79 ಮಂದಿಗೆ ಗಾಯ

ಇಡೀ 13 ಅಂತಸ್ತಿನ ಕಟ್ಟಡ ಸುಟ್ಟು ಕರಕಲಾಗಿದ್ದು, ಬೆಂಕಿ ಹೇಗೆ ತಗುಲಿತು ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ ಎಂದು ಅಗ್ನಿಶಾಮಕದಳ ಅಧಿಕಾರಿ ಹೇಳಿದ್ದಾರೆ

ಬೆಂಕಿ ಅವಘಡ

ಬೆಂಕಿ ಅವಘಡ

  • Share this:
    ತೈಪೈ: ತೈವಾನ್‍ನ ಕವಾಶೂಂಗ್ ನಗರದಲ್ಲಿ (Southern Taiwanese city of Kaohsiung) ಅಗ್ನಿಯ ರೌದ್ರ ನರ್ತನಕ್ಕೆ 46 ಜನರು ಆಹುತಿಯಾಗಿದ್ದಾರೆ. ಅಗ್ನಿ ದುರಂತದಲ್ಲಿ 79 ಜನರು ಗಾಯಗೊಂಡಿದ್ದು, ಇದರಲ್ಲಿ 14 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಗುರುವಾರ ಬೆಳಗಿನ ಜಾವ ಸುಮಾರು ಮೂರು ಗಂಟೆಗೆ ಸ್ಫೋಟದ ಸದ್ದು ಕೇಳಿಸಿದೆ ಎಂದು ನಿವಾಸಿಗಳು ಹೇಳಿಕೆ ನೀಡಿದ್ದಾರೆ. ಇಡೀ 13 ಅಂತಸ್ತಿನ ಕಟ್ಟಡ ಸುಟ್ಟು ಕರಕಲಾಗಿದ್ದು, ಬೆಂಕಿ ಹೇಗೆ ತಗುಲಿತು ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ ಎಂದು ಅಗ್ನಿಶಾಮಕದಳ ಅಧಿಕಾರಿ ಹೇಳಿದ್ದಾರೆ. ಸ್ಪೋಟದ ಸದ್ದು ಕೇಳುತ್ತಿದ್ದಂತೆ ಕಟ್ಟಡದಿಂದ ಹೊರ ಬಂದು ಜನ ಬದುಕುಳಿದಿದ್ದಾರೆ.

    ಎಚ್ಚರಿಕೆ ನೀಡಿದ್ದ ಅಧಿಕಾರಿಗಳು:
    ಅಗ್ನಿ ಅವಘಡಕ್ಕೂ ಮುನ್ನವೇ ಅಧಿಕಾರಿಗಳು ಕಟ್ಟಡ ಸುರಕ್ಷತೆ ಪರೀಕ್ಷೆ ನಡೆಸಿ ಎಚ್ಚರಿಕೆ ನೀಡಿದ್ದರು. ಏಳು ಮತ್ತು ಹನ್ನೊಂದಲೇ ಮಹಡಿಯ ಮಧ್ಯದಲ್ಲಿರುವ ಜನರು ಅವಘಡ ಸಂಭವಿಸಿಸದ್ರೆ ಅಪಾಯದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ. ಹಾಗಾಗಿ ಜನರನ್ನು ಕಟ್ಟಡದಿಂದ ಸ್ಥಳಾಂತರಿಸುವಂತೆ ಅಧಿಕಾರಿಗಳ ತಂಡ ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆ ಬೆನ್ನಲ್ಲೇ ದುರಂತ ಸಂಭವಿಸಿ, 46 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಕಟ್ಟಡದ ಅಗ್ನಿ ದುರಂತದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸ್ಥಳೀಯ ನಿವಾಸಿಗಳು ಮೊಬೈಲ್ ನಲ್ಲಿ ಬೆಂಕಿ ನಂದಿಸುವ, ಹೊಹೆ ಆವರಿಸಿರುವ, ಅಗ್ನಿ ದುರಂತದ ಬಳಿಕ ಕಟ್ಟಡ ಸ್ಥಿತಿಯ ವಿಡಿಯೋಗಳು ವೈರಲ್ ಆಗುತ್ತಿವೆ.

    ಕಟ್ಟಡದ ಮೊದಲ ಹಂತದಲ್ಲಿ ಸಿನಿಮಾ ಹಾಲ್, ರೆಸ್ಟೋರೆಂಟ್:
    ಈ ಕಟ್ಟಡ ಸುಮಾರು 40 ವರ್ಷಗಳಷ್ಟು ಹಳೆಯದು. ಕಟ್ಟಡದ ಮೊದಲ ಹಂತದಲ್ಲಿ ಸಿನಿಮಾ ಹಾಲ್ ಮತ್ತು ರೆಸ್ಟೋರೆಂಟ್ ಗಳಿದ್ದವು. ಆದ್ರೆ ಕಳೆದ ಕೆಲ ದಿನಗಳಿಂದ ಇವುಗಳನ್ನು ಮುಚ್ಚಲಾಗಿತ್ತು. ಅಗ್ನಿ ಅವಘಡದ ಬಳಿಕ ಮನೆಯಲ್ಲಿ ಹಾಗೂ ಕಟ್ಟಡದ ಆಸುಪಾಸಿನಲ್ಲಿ ಒಣ ಕಸ ಒಂದೆಡೆ ಸಂಗ್ರಹವಾಗದಂತೆ ನೋಡಿಕೊಳ್ಳಿ. ಜೊತೆಗೆ ಕಟ್ಟಡದಲ್ಲಿಯ ಮೆಟ್ಟಿಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಅಗ್ನಿಶಾಮಕದ ದಳದ ಸಿಬ್ಬಂದಿ ಸಲಹೆ ನೀಡಿದ್ದಾರೆ.

    ಇದನ್ನು ಓದಿ: ಚೀನಾ-ತೈವಾನ್ ನಡುವಿನ ಕಿತ್ತಾಟಕ್ಕೆ ಕಾರಣವೇನು..? ಭಾರತಕ್ಕೆ ಪರಿಣಾಮಗಳೇನು..? ಇಲ್ಲಿದೆ ವಿವರ..

    ಕಟ್ಟಡದಲ್ಲಿ ಮೊದಲ ಐದು ಅಂತಸ್ತುಗಳನ್ನು ವಾಣಿಜ್ಯ ಚಟುವಟಿಕೆಗಳಿಗೆ ಮೀಸಲಾಗಿರಿಸಿತ್ತು. ಆದ್ರೆ ಕಳೆದ ಕೆಲ ದಿನಗಳಿಂದ ಖಾಲಿ ಮಾಡಲಾಗಿತ್ತು. ಏಳು ಮತ್ತು ಹನ್ನೊಂದರ ನಡುವಿನ ಮಹಡಿಗಳಲ್ಲಿ ಜನರು ವಾಸವಾಗಿದ್ದರು. ಬೆಳಗಿನ ಜಾವ ಸ್ಫೋಟಗೊಂಡ ಹಿನ್ನೆಲೆ ಬಹುತೇಕರು ಕಿಟಕಿಗಳನ್ನು ಮುಚ್ಚಿದ್ದರಿಂದ ಹೊಗೆ ಕಟ್ಟಡದೊಳಗೆ ಆವರಿಸಿದ ಪರಿಣಾಮ ಹೆಚ್ಚು ಸಾವು ಸಂಭವಿಸಿರುವ ಬಗ್ಗೆ ಅಗ್ನಿಶಾಮಕದಳ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ

    ಇದನ್ನು ಓದಿ: ಪ್ರೀತಿ ನಿರಾಕರಣೆ ಕಾಲುವೆಗೆ ಹಾರಿದ ಅಪ್ರಾಪ್ತೆ; ಪ್ರಿಯಕರನ ಬಂಧನ

    ಕವಾಶೂಂಗ್ ನಗರ ಎಲ್ಲಿದೆ?
    ಕವಾಶೂಂಗ್ ನಗರ ದಕ್ಷಿಣ ತೈವಾನ್ ನಲ್ಲಿದೆ. ಕಡಲ ಕಿನಾರೆ ಹೊಂದಿರುವ ನಗರ ಕವಾಶೂಂಗ್ 2,952 ಚದರ ಕಿಲೋ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ನಗರದ ಜನಸಂಖ್ಯೆ ಸುಮಾರು 27 ಲಕ್ಷಕ್ಕೂ ಅಧಿಕವಾಗಿದೆ. ತೈವಾನ್ ದೇಶದ ಜನಸಂಖ್ಯೆಯಲ್ಲಿ ಮೂರನೇ ಅತಿ ದೊಡ್ಡ ನಗರವಾಗಿದೆ. ದಕ್ಷಿಣ ತೈವಾನಿನ ಅತಿದೊಡ್ಡ ನಗರ.

    ಮಧ್ಯಪ್ರದೇಶದಲ್ಲಿ ಅಗ್ನಿ ದುರಂತ:
    ಮಧ್ಯಪ್ರದೇಶದ ರತ್ಲಾಮ್ ನಲ್ಲಿ ಗುರುವಾರ ಪೈಪ್ ಗೋದಾಮಿನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಅಗ್ನಿ ಅವಘಡ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಏಳೆಂದು ಅಗ್ನಿಶಾಮಕ ವಾಹನಗಳು ಎರಡು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. ಪ್ಲಾಸ್ಟಿಕ್ ಪೈಪ್ ಗೋದಾಮು ಮೋಹನ ನಗರ ವ್ಯಾಪ್ತಿಯ ಪೆಟ್ರೋಲ್ ಪಂಪ್ ಬಳಿಯಲ್ಲಿರೋದು ಆತಂಕಕ್ಕೆ ಕಾರಣವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಗೋದಾಮಿನ ವ್ಯಾಪ್ತಿಯಲ್ಲಿನ ಜನರನ್ನು ಸ್ಥಳಾಂತರಿಸಲಾಗಿದೆ. ತಜ್ಞರು ಜನರ ವಾಸಸ್ಥಾನಕ್ಕೆ ಗ್ರೀನ್ ಸಿಗ್ನಲ್ ನೀಡಿದ ಬಳಿಕವೇ ಪ್ರವೇಶ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಅಗ್ನಿ ದುರಂತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

    ಮಹ್ಮದ್​ ರಫೀಕ್​ ಕೆ
    Published by:Seema R
    First published: