ಜಮ್ಮುವಿನಲ್ಲಿ ಕಂದಕಕ್ಕೆ ಬಿದ್ದ ಮಿನಿ ಬಸ್​; 13 ಜನ ಸಾವು, ಹಲವರಿಗೆ ಗಂಭೀರ ಗಾಯ

news18
Updated:September 14, 2018, 2:11 PM IST
ಜಮ್ಮುವಿನಲ್ಲಿ ಕಂದಕಕ್ಕೆ ಬಿದ್ದ ಮಿನಿ ಬಸ್​; 13 ಜನ ಸಾವು, ಹಲವರಿಗೆ ಗಂಭೀರ ಗಾಯ
ಸಾಂದರ್ಭಿಕ ಚಿತ್ರ
news18
Updated: September 14, 2018, 2:11 PM IST
-ನ್ಯೂಸ್​ 18 ಕನ್ನಡ

ಕಿಶ್ತ್ವಾರ್,(ಸೆ.14): ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್​ ಜಿಲ್ಲೆಯಲ್ಲಿ ಮಿನಿ ಬಸ್ಸೊಂದು ಕಂದಕಕ್ಕೆ ಬಿದ್ದು 13 ಜನ ಸಾವನ್ನಪ್ಪಿದ್ದು, 13 ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶುಕ್ರವಾರ ಮುಂಜಾನೆ ಥಾಕ್ರಿ ಬಳಿಯ ದಂಡರನ್​ ಬಳಿ ಈ ಘಟನೆ ಸಂಭವಿಸಿದೆ. ಕೆಶ್ವಾನ್​ನಿಂದ ಕಿಶ್ತ್ವಾರ್​ಗೆ ತೆರಳುತ್ತಿದ್ದ ವೇಳೆ ಬಸ್​ ಚಾಲಕನ ನಿಯಂತ್ರಣ ಕಳೆದುಕೊಂಡು ಸುಮಾರು 300 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ.

ಘಟನೆಯಲ್ಲಿ 13 ಜನ ಪ್ರಯಾಣಿಕರು ಮೃತಪಟ್ಟಿದ್ದು, 13 ಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಹಿರಿಯ ಪೊಲೀಸ್​ ಅಧೀಕ್ಷಕ ಕಿಶ್ತ್ವಾರ್​ ರಾಜೇಂದ್ರ ಗುಪ್ತಾ ಪಿಟಿಐಗೆ ತಿಳಿಸಿದ್ದಾರೆ.

ಈ ಮಿನಿ ಬಸ್​ನಲ್ಲಿ 30 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಘಟನೆ ಸಂಭವಿಸಿದ ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ 8 ಜನ ಪ್ರಯಾಣಿಕರನ್ನು ಏರ್​​ಲಿಫ್ಟ್​ ಮೂಲಕ ಜಮ್ಮುವಿಗೆ ಸಾಗಿಸಲು ಜಿಲ್ಲಾಡಳಿತವು ಪ್ರಯತ್ನಿಸುತ್ತಿದೆ ಎಂದು ಕಿಶ್ತ್ವಾರ್​ನ ಡೆಪ್ಯೂಟಿ ಕಮೀಷನರ್​ ಅಂಗ್ರೇಜ್​ ಸಿಂಗ್​ ರಾಣಾ ಹೇಳಿದ್ದಾರೆ.

ಘಟನೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಧನವನ್ನು ಘೋಷಿಸಲಾಗಿದ್ದು, ಗಾಯಗೊಂಡಿರುವರಿಗೆ ತಲಾ 5 ಸಾವಿರ ರೂ.ಗಳನ್ನು ನೀಡಲಾಗುತ್ತದೆ ಎಂದು ರಾಣಾ ಹೇಳಿದ್ದಾರೆ.  ಕಳೆದ ಒಂದು ತಿಂಗಳಲ್ಲಿ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದ ಮೂರನೇ ಅವಘಡ ಇದಾಗಿದೆ.
First published:September 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ