ಕ್ಯಾಲಿಫೋರ್ನಿಯಾ ಬಾರ್​ನಲ್ಲಿ ಗುಂಡಿನ​ ದಾಳಿ: ಪೊಲೀಸ್ ಸೇರಿ 13 ಮಂದಿ ಸಾವು

ಈ ಘಟನೆ ವೇಳೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಸಂಗೀತ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು. ಹೀಗಾಗಿ ನೂರಾರು ಮಂದಿ ಒಳಗೆ ಸಿಲುಕಿರುವ ಸಾಧ್ಯತೆಯಿದೆ.

zahir | news18
Updated:November 8, 2018, 8:33 PM IST
ಕ್ಯಾಲಿಫೋರ್ನಿಯಾ ಬಾರ್​ನಲ್ಲಿ ಗುಂಡಿನ​ ದಾಳಿ: ಪೊಲೀಸ್ ಸೇರಿ 13 ಮಂದಿ ಸಾವು
(KABC via AP)
zahir | news18
Updated: November 8, 2018, 8:33 PM IST
-ನ್ಯೂಸ್ 18 ಕನ್ನಡ

ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾ ಬಾರ್​ವೊಂದರಲ್ಲಿ ಗುಂಡಿನ ದಾಳಿ ನಡೆದಿದ್ದು, ಒರ್ವ ಪೊಲೀಸ್ ಅಧಿಕಾರಿ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ನಗರದ ಬಾರ್ಡರ್‌ ಲೈನ್‌ ಬಾರ್‌ ಅ್ಯಂಡ್ ಗ್ರಿಲ್‌ ಎಂಬ ನೈಟ್​ಕ್ಲಬ್​ನಲ್ಲಿ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ.

ಬಾರ್‌ನಲ್ಲಿ ಪಾರ್ಟಿ ನಡೆಯುತ್ತಿದ್ದ ಸಂದರ್ಭದಲ್ಲಿ ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ್ದಾರೆ. ಪರಿಣಾಮ ಓರ್ವ ಪೊಲೀಸ್‌ ಅಧಿಕಾರಿ ಸೇರಿ 13 ಮಂದಿ ಹತರಾಗಿದ್ದಾರೆ ಎಂದು ಲಾಸ್​ಎಂಜಲೀಸ್ ಟೈಮ್ಸ್​ ವರದಿ ಮಾಡಿದೆ.

ಈ ಘಟನೆ ವೇಳೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಸಂಗೀತ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು. ಹೀಗಾಗಿ ನೂರಾರು ಮಂದಿ ಒಳಗೆ ಸಿಲುಕಿರುವ ಸಾಧ್ಯತೆಯಿದೆ ಎಂದು ಸ್ಥಳೀಯ ತನಿಖಾ ಸಂಸ್ಥೆ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.


Loading...ಶಸ್ತ್ರಧಾರಿಯು 30 ಕ್ಕಿಂತ ಹೆಚ್ಚು  ಸುತ್ತು ಗುಂಡು ಹಾರಿಸಿದ್ದು, ಇದರಿಂದ ಮೃತಪಟ್ಟಿರುವವರ ಸಂಖ್ಯೆ ಕೂಡ ಏರಿಕೆಯಾಗುವ ಸಾಧ್ಯತೆಯಿದೆ. ಕ್ಯಾಲಿಫೋರ್ನಿಯಾದ ಥೌಸಂಡ್​ ಓಕ್ಸ್​ ಪಟ್ಟಣದಲ್ಲಿ ತಡರಾತ್ರಿ ನಡೆದ ಘಟನೆಯಿಂದ ಅಮೆರಿಕನ್ನರು ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: ನಾಯಿ ಪೂಜೆ ಮಾಡಿ ದೀಪಾವಳಿ ಆಚರಿಸುತ್ತಾರೆ ಈ ದೇಶದ ಮಂದಿ..!

ದಾಳಿ ನಡೆಯುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ ಎನ್ನಲಾಗಿದೆ. ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ದಾಳಿ ನಡೆಸಿದ ಆರೋಪಿ ಕೂಡ ಬಲಿಯಾಗಿದ್ದಾನೆ.

First published:November 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ