ದೇಶಾದ್ಯಂತ ಹಂದಿಜ್ವರ ಹಾವಳಿ: ತಮಿಳುನಾಡಿನಲ್ಲಿ ಈ ಮಾರಿಗೆ 13 ಮಂದಿ ಬಲಿ..!

ದೇಶಾದ್ಯಂತ ಹಂದಿಜ್ವರದ ಹಾವಳಿ ನಿರಾತಂಕವಾಗಿ ಮುಂದುವರಿದಿದೆ. ಈ ಹಿಂದೆ ಹಂದಿಜ್ವರದ ಮಾರಿಗೆ ಕುಣಿತಕ್ಕೆ 89 ಮಂದಿ ಮೃತಪಟ್ಟಿದ್ದರು. ಇದೀಗ ಮತ್ತೆ ಮಾರಿಗೆ ಹಾವಳಿಗೆ ಸಾಕಷ್ಟು ಜನ ಬಲಿಯಾಗುವ ಸಾಧ್ಯತೆಯಿದೆ.  

Ganesh Nachikethu
Updated:November 14, 2018, 9:54 PM IST
ದೇಶಾದ್ಯಂತ ಹಂದಿಜ್ವರ ಹಾವಳಿ: ತಮಿಳುನಾಡಿನಲ್ಲಿ ಈ ಮಾರಿಗೆ 13 ಮಂದಿ ಬಲಿ..!
H1N1
  • Share this:
ಚೆನ್ನೈ(ನ.14): ತಮಿಳುನಾಡಿನಲ್ಲಿ ಹಂದಿಜ್ವರದ ಹಾವಳಿಗೆ ಮತ್ತೋರ್ವ ಬಾಲಕ ಬಲಿಯಾಗಿದ್ದಾನೆ. ಇಂದು ಕೊನೆಯುಸಿರು ಎಳೆದ ಬಾಲಕ ಸೇರಿದಂತೆ ಇಲ್ಲಿಯತನಕ ಒಟ್ಟು 13 ಮಂದಿ ಸಾವನ್ನಪ್ಪಿದ್ಧಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಹಂದಿಜ್ವರ ತೀವ್ರವಾಗಿದ್ದು, ಮತ್ತಷ್ಟು ಜನ ಬಲಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಎ. ಆದಿಶಂಕರ ಎಂಬ ಬಾಲಕ ಸುಮಾರು ದಿನಗಳಿಂದ ಹಂದಿಜ್ವರದಿಂದಾಗಿ ಬಳಲುತ್ತಿದ್ದ. ಚಿಕಿತ್ಸೆಗಾಗಿ ಬಾಲಕನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇನ್ನೊಂದೆಡೆ ಮಗು ಸೇರಿದಂತೆ ಮತ್ತೆ ಏಳು ಮಂದಿ ಹಂದಿಜ್ವರದ ಕಾರಣಕ್ಕೆ ಇದೇ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿ 'ಎಚ್​1ಎನ್​1' ಮಹಾಮಾರಿಗೆ 17 ಬಲಿ; ಸಿಲಿಕಾನ್​ ಸಿಟಿಯಲ್ಲಿ 190 ಪ್ರಕರಣ ಪತ್ತೆ

ಕಳೆದ ಎರಡು ದಿನಗಳ ಹಿಂದೆ ಹಂದಿಜ್ವರದಿಂದ ಬಳಲುತ್ತಿದ್ದ ಮೂವರು ರೋಗಿಗಳು ಕೊಯಂಬತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇಲ್ಲಿಯವೆರಗೂ ಈ ಜ್ವರಕ್ಕೆ 13 ಮಂದಿ ಸಾವನ್ನಪ್ಪಿದ್ದು, ಮತ್ತಷ್ಟು ಜನ ಬಲಿಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಸರ್ಕಾರವೂ ಕೂಡ ಭಾರೀ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ ಎನ್ನುತ್ತಿವೆ ಮೂಲಗಳು.

ಇದೇ ಮಾದರಿಯಲ್ಲಿ ದೇಶಾದ್ಯಂತ ಹಂದಿಜ್ವರದ ಹಾವಳಿ ನಿರಾತಂಕವಾಗಿ ಮುಂದುವರಿದಿದೆ. ಈ ಹಿಂದೆ ಹಂದಿಜ್ವರದ ಮಾರಿಗೆ ಕುಣಿತಕ್ಕೆ 89 ಮಂದಿ ಮೃತಪಟ್ಟಿದ್ದರು. ಮಹಾರಾಷ್ಟ್ರದಲ್ಲಿ 47 ಮಂದಿ ಸಾವನ್ನಪ್ಪಿದ್ದು. ಇದರಲ್ಲಿ ಪುಣೆಯೊಂದರಲ್ಲೇ 25, ಮುಂಬೈನಲ್ಲಿ 10, ನಾಶಿಕ್ ನಲ್ಲಿ 7, ಔರಂಗಾಬಾದ್ 2 ಮತ್ತು ದುಲೆ ಮತ್ತು ಲಾತೂರ್ ನಲ್ಲಿ ಒಬ್ಬರು ಈ ಸೋಂಕಿಗೆ ಬಲಿಯಾಗಿದ್ದಾರೆ.

ಇದನ್ನೂ ಓದಿ: ಎಚ್ಚರ...! ರಾಜ್ಯಕ್ಕೆ ಕಾಲಿಟ್ಟಿದೆ ಮಾರಕ ರೋಗ ಎಚ್​1ಎನ್​1: ಈವರೆಗೆ 6 ಮಂದಿ ಬಲಿ

ನಂತರದ ಸ್ಥಾನ ಕರ್ನಾಟಕಕ್ಕೆ ಸೇರಿದ್ದು. ಈವರೆಗೂ ಈ ಮಾರಿಗೆ 20 ಮಂದಿ ಜೀವತೆತ್ತಿದ್ದಾರೆ. ಗುಜರಾತ್ ನಲ್ಲಿ 7, ತಮಿಳುನಾಡು, ಚಂಢೀಗಡ್ ಮತ್ತು ದೆಹಲಿಯಲ್ಲಿ ತಲಾ ಮೂವರು ಸಾವನ್ನಪ್ಪಿದ್ದಾರೆ. ಉತ್ತರಖಂಡದಲ್ಲಿ ಇಬ್ಬರು ಮತ್ತು ಕೇರಳ, ಗೋವಾ, ರಾಜಸ್ಥಾನ ಮತ್ತು ಹರಿಯಾಣಾದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎನ್ನುತ್ತಾರೆ ಆರೋಗ್ಯ ಅಧಿಕಾರಿಗಳು.-----------------
ಏಣಿ ಗ್ಯಾಂಗ್​: ಕಲಬುರ್ಗಿಯಲ್ಲಿ ಖತರ್ನಾಕ್ ಕಳ್ಳಿಯರು
First published: November 14, 2018, 9:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading