Buddha Idol: ಇಟಲಿಯಲ್ಲಿ ಪತ್ತೆಯಾಯ್ತು ಕಳುವಾಗಿದ್ದ 1,200 ವರ್ಷಗಳ ಹಳೆಯ ಬುದ್ದನ ವಿಗ್ರಹ

Buddha Idol: ಭಾರತದಿಂದ ಕಳುವಾದ 20 ವರ್ಷಗಳ ನಂತರ ಈ ವಿಗ್ರಹವನ್ನು ಮರಳಿ ಪಡೆಯಲಾಗಿದ್ದು, ಈ ಕಲ್ಲಿನ ವಿಗ್ರಹವು 8ರಿಂದ 12ನೇ ಶತಮಾನಕ್ಕಿಂತ ಹೆಚ್ಚು ಹಳೆಯದು ಎಂದು ಅಂದಾಜು ಮಾಡಲಾಗಿದೆ.

ಬುದ್ದನ ವಿಗ್ರಹ

ಬುದ್ದನ ವಿಗ್ರಹ

  • Share this:
ಭಾರತದಿಂದ (India) ಕಳುವಾಗಿದ್ದ ಸುಮಾರು 1,200 ವರ್ಷಗಳ ಪುರಾತನ (Ancient)  ಬುದ್ಧನ ವಿಗ್ರಹವನ್ನು 20 ವರ್ಷಗಳ ಬಳಿಕ ಇಟಲಿಯಲ್ಲಿ (Italy)  ಪತ್ತೆ ಮಾಡಲಾಗಿದೆ ಎಂದು ಭಾರತೀಯ ದೂತವಾಸ ಕೇಂದ್ರ ಮಾಹಿತಿ ನೀಡಿದೆ. ಈ ಕುರಿತು ಮಿಲನ್‌ನಲ್ಲಿರುವ ಭಾರತೀಯ ದೂತವಾಸ ಕೇಂದ್ರ ಟ್ವೀಟ್ ಮಾಡಿದ್ದು, ಭಾರತದ ಅತ್ಯಂತ ಹಳೆಯ ಮತ್ತು ವಿಶೇಷವಾದ 'ಅವಲೋಕಿತೇಶ್ವರ ಪದ್ಮಪಾಣಿ' ವಿಗ್ರಹವನ್ನು ಮರಳಿ ಪಡೆಯಲಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದೆ.

ಭಾರತದಿಂದ ಕಳುವಾದ 20 ವರ್ಷಗಳ ನಂತರ ಈ ವಿಗ್ರಹವನ್ನು ಮರಳಿ ಪಡೆಯಲಾಗಿದ್ದು, ಈ ಕಲ್ಲಿನ ವಿಗ್ರಹವು 8ರಿಂದ 12ನೇ ಶತಮಾನಕ್ಕಿಂತ ಹೆಚ್ಚು ಹಳೆಯದು ಎಂದು ಅಂದಾಜು ಮಾಡಲಾಗಿದೆ.

ಕುಂದಲಪುರ ದೇವಾಲಯದಲ್ಲಿ ಸುಮಾರು 1,200 ವರ್ಷಗಳ ಕಾಲ ವಿಗ್ರಹ  ಇತ್ತು, ಆದರೆ 2000ನೇ ಇಸವಿಯಲ್ಲಿ ಭಾರತದಿಂದ ಅಕ್ರಮವಾಗಿ ಕದ್ದು ಕಳ್ಳಸಾಗಾಟ ಮಾಡಲಾಗಿತ್ತು, ಆದರೆ ಇದೀಗ, ಇಂಡಿಯಾ ಪ್ರೈಡ್ ಪ್ರಾಜೆಕ್ಟ್, ಸಿಂಗಾಪುರ ಹಾಗೂ ಲಂಡನ್‌ನ ಆರ್ಟ್ ರಿಕವರಿ ಇಂಟರ್‌ನ್ಯಾಷನಲ್ ವಿಗ್ರಹವನ್ನು ಪತ್ತೆ ಹಚ್ಚಿವೆ.

ಇನ್ನು ಕಳೆದ ತಿಂಗಳಲ್ಲಿ ಬರೋಬ್ಬರಿ 100 ವರ್ಷಗಳ ಹಿಂದೆ ವಾರಣಾಸಿಯಿಂದ ಕದ್ದು ಕೆನಡಾಗೆ ಕೊಂಡೊಯ್ಯಲಾಗಿದ್ದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಉತ್ತರ ಪ್ರದೇಶ ಸರ್ಕಾರ ವಾಪಸ್ ಪಡೆದುಕೊಂಡಿತ್ತು.

ಇಂಗ್ಲೆಂಡ್ ಖಾಸಗಿ ನಿವಾಸದಲ್ಲಿ ಸಿಕ್ಕಿದ್ದ ವಿಗ್ರಹ

ಉತ್ತರಪ್ರದೇಶದ ಬಂದಾ ಜಿಲ್ಲೆಯ ಲೋಖಾರಿ ದೇವಸ್ಥಾನದಲ್ಲಿದ್ದ ಮರಳುಗಲ್ಲಿನಲ್ಲಿ ಸುಂದರವಾಗಿ ಕೆತ್ತಲಾದ ಶಿಲ್ಪ ಇತ್ತೀಚಿಗೆ ಇಂಗ್ಲೆಂಡ್​​ನ ಖಾಸಗಿ ನಿವಾಸವೊಂದರ ಉದ್ಯಾನವನದಲ್ಲಿ ಸಿಕ್ಕಿತ್ತು. ಉತ್ತರ ಪ್ರದೇಶದ ಹಳ್ಳಿಯೊಂದರಿಂದ 10ನೇ ಶತಮಾನದ ವಿಗ್ರಹವನ್ನು 40 ವರ್ಷಗಳ ಹಿಂದೆ ಭಾರತದಿಂದ ಇಂಗ್ಲೆಂಡ್‍ಗೆ ಕದ್ದೊಯ್ಯಲಾಗಿತ್ತು. ಈ ವಿಗ್ರಹ ಇಂಗ್ಲೆಂಡ್​​ನ ಖಾಸಗಿ ನಿವಾಸವೊಂದರ ಉದ್ಯಾನವನದಲ್ಲಿ ಸಿಕ್ಕಿದ ಬಳಿಕ ಇಂಗ್ಲೆಂಡ್ ನ ಭಾರತೀಯ ರಾಯಭಾರ ಕಚೇರಿ ಭಾರತಕ್ಕೆ ಯೋಗಿನಿ ವಿಗ್ರಹ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿತ್ತು.

ಇದನ್ನೂ ಓದಿ: ಏರ್ ಇಂಡಿಯಾ ಆಯ್ತು ಇದೀಗ Ashoka Hotel ಸೇಲ್? ಐಕಾನಿಕ್ ಹೋಟೆಲ್ ಮಾರಲು ಕೇಂದ್ರ ಸರ್ಕಾರ ಚಿಂತನೆ!

ಮೇಕೆ ಮುಖವಿರುವ ಯೋಗಿನಿ ವಿಗ್ರಹವನ್ನ ಭಾರತಕ್ಕೆ ತರಲು ಲಂಡನ್​​ನಲ್ಲಿರುವ ಭಾರತದ ಹೈಕಮಿಷನ್​ ಕಚೇರಿ ನಾನಾ ರೀತಿಯ ಪ್ರಯತ್ನಗಳನ್ನು ಮಾಡುವಾಗ ಭಾರತಕ್ಕೆ ಯುಕೆಯ ಕ್ರಿಸ್​ ಮರಿನೆಲ್ಲೋ ಆಫ್ ಆರ್ಟ್​ ರಿಕವರಿ ಇಂಟರ್​ನ್ಯಾಷನಲ್​ ಎಂಬ ಸಂಸ್ಥೆಯು ಭಾರತಕ್ಕೆ ಹಸ್ತಾಂತರಿಸಲು ಎಲ್ಲ ರೀತಿಯ ಸಹಾಯ ಮಾಡಿತ್ತು.ಅದ್ರಂತೆ ಇಂಗ್ಲೆಂಡ್​​ನ ಭಾರತೀಯ ಹೈಕಮಿಷನರ್​ ಗಾಯತ್ರಿ ಇಸ್ಸಾರ್ ಕುಮಾರ್​ಗೆ ಯೋಗಿನಿ ವಿಗ್ರಹವನ್ನು ಹಸ್ತಾಂತರ ಮಾಡಲಾಗಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ವಿಗ್ರಹ ರವಾನೆ

.ಈ ವಿಗ್ರಹ ಇರುವುದು 2021ರ ನವೆಂಬರ್​​ನಲ್ಲಿಯೇ ಭಾರತೀಯ ಹೈಕಮಿಷನ್​​ಗೆ ತಿಳಿಯಿತು. ಆಗಿನಿಂದಲೇ ಹಸ್ತಾಂತರ ಪ್ರಕ್ರಿಯೆಯಗಳು ಶುರುವಾಗಿದ್ದವು. ಇದೀಗ ನಾವು ಪುರಾತತ್ವ ಇಲಾಖೆಗೆ ವಿಗ್ರಹ ಕಳಿಸುವುದಷ್ಟೇ ಬಾಕಿ ಇದೆ. ಈ ವಿಗ್ರಹವನ್ನು ನವದೆಹಲಿಯಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ರವಾನಿಸಲಾಗಿದೆ.

ಯೋಗಿನಿ ತಂತ್ರ ಪೂಜಾ ಆರಾಧನೆಗೆ ಸಂಬಂಧಿಸಿದ ಶಕ್ತಿಶಾಲಿ ಸ್ತ್ರೀ ದೇವತೆಗಳ ಪಂಗಡವಾಗಿದೆ. 64 ಯೋಗಿನಿಯರ ಈ ದೇವತೆಗಳನ್ನು ಗುಂಪಾಗಿ ಆರಾಧಿಸಲಾಗುತ್ತದೆ ಮತ್ತು ಅನಂತ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ.
1980ರ ದಶಕದಲ್ಲಿ ಬಂದಾ ಜಿಲ್ಲೆಯ ಲೋಖಾರಿ ಗ್ರಾಮದ ದೇವಸ್ಥಾನದಿಂದ ಈ ಅಪರೂಪದ ವಿಗ್ರಹ ಕಾಣೆಯಾಗಿತ್ತು. 2021 ಅಕ್ಟೋಬರ್‌ನಲ್ಲಿ ವಿಗ್ರಹ ಪತ್ತೆಯಾದ ಕುರಿತು ಮಾಹಿತಿ ಲಭಿಸಿತ್ತು.

ವಿಗ್ರಹ ಪತ್ತೆಯಾಗಿದ್ದು ಹೇಗೆ..?

ವಿಶ್ವದಾದ್ಯಂತ ಕದ್ದ, ಲೂಟಿ ಅಥವಾ ಕಾಣೆಯಾದ ಕಲಾಕೃತಿಗಳನ್ನು ಮರಳಿ ಆಯಾ ದೇಶಕ್ಕೆ ಅಥವಾ ವ್ಯಕ್ತಿಗೆ ಒಪ್ಪಿಸುವ ಕಾರ್ಯ ನಡೆಸುವ ಆರ್ಟ್ ರಿಕವರಿ ಇಂಟರ್ ನ್ಯಾಷನಲ್ ಸಂಸ್ಥೆಯ ಸಂಸ್ಥಾಪಕ ಹಾಗೂ ವಕೀಲರೂ ಆಗಿರುವ ಕ್ರಿಸ್ಟೋಫರ್ ಮರಿನೆಲ್ಲೋ ಅವರಿಗೆ 2021ರ ಅಕ್ಟೋಬರ್ ನಲ್ಲಿ ವಿಧವೆಯೊಬ್ಬರು ಕರೆಮಾಡಿದ್ದರು.

ಇದನ್ನೂ ಓದಿ: ತಾಯಿ, ಮಗ ಸೇರಿ ಗಂಡನನ್ನೇ ಕೆಳಕ್ಕೆ ತಳ್ಳಿದ್ರು! ಕಾರಣ ಕೇಳಿದ್ರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ

ಯೋಗಿನಿಯ ವಿಗ್ರಹವನ್ನೂ ಒಳಗೊಂಡಂತೆ ತಮ್ಮ ಮನೆಯಲ್ಲಿರುವ ಇತರ ವಸ್ತುಗಳನ್ನು ಮಾರಾಟ ಮಾಡಲು ಸಹಾಯ ಕೇಳಿದ್ದರು. ಆಗ ಈ ಅಪರೂಪದ ಪ್ರತಿಮೆಯು ಮರಿನೆಲ್ಲೋ ಅವರ ಗಮನಸೆಳೆದಿದೆ. ಹೀಗಾಗಿ ಅವರು ಭಾರತೀಯ ರಾಯಭಾರಿ ಕಛೇರಿಗೆ ಇದರ ಬಗ್ಗೆ ಮಾಹಿತಿ ನೀಡಿದ್ದರು. ಕೂಲಂಕುಶ ಪರಿಶೀಲನೆಯ ಬಳಿಕ ಯೋಗಿನಿ ವಿಗ್ರಹ ಭಾರತಕ್ಕೆ ಸಂಬಂಧಿಸಿದ್ದು ಎಂದು ತಿಳಿದು ಬಂದ ಬಳಿಕ ಮಕರ ಸಂಕ್ರಾಂತಿಯ ಶುಭದಿನದಂದು ಭಾರತಕ್ಕೆ ವಿಗ್ರಹವನ್ನು ಹಸ್ತಾಂತರ ಮಾಡಲಾಗಿದೆ.
Published by:Sandhya M
First published: