ಒಂದು ವರ್ಷದಿಂದ 12 ವರ್ಷದ ಬಾಲಕಿ ಮೇಲೆ ಮೂವರಿಂದ ನಿರಂತರ ಅತ್ಯಾಚಾರ; ಕೃತ್ಯಕ್ಕೆ ತಾಯಿಯಿಂದಲೇ ಸಹಕಾರ

ಶಾಂತಿ ಧಂದುಕಿಯಾ (46), ಬಾಬುಬಾಯಿ ಸಾರ್ತನ್ಪಾರಾ (43) ಹಾಗೂ ಚಂದ್ರೇಶ್ ಸರ್ತನ್ಪಾರಾ (32) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

news18-kannada
Updated:December 8, 2019, 8:34 PM IST
ಒಂದು ವರ್ಷದಿಂದ 12 ವರ್ಷದ ಬಾಲಕಿ ಮೇಲೆ ಮೂವರಿಂದ ನಿರಂತರ ಅತ್ಯಾಚಾರ; ಕೃತ್ಯಕ್ಕೆ ತಾಯಿಯಿಂದಲೇ ಸಹಕಾರ
ಅತ್ಯಾಚಾರದ ವಿರುದ್ಧ ಯುವತಿಯರ ಪ್ರತಿಭಟನೆ.
  • Share this:
ಭಾವನಗರ್ (ಗುಜರಾತ್): ಒಂದು ವರ್ಷದಿಂದ ಅಪ್ತಾಪ್ರ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಭಾವನಗರ್ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಈ ಅಪರಾಧ ಕೃತ್ಯಕ್ಕೆ ಸಂತ್ರಸ್ತೆಯ ತಾಯಿಯೇ ಸಹಕರಿಸಿದ್ದು ಎನ್ನಲಾಗಿದ್ದು, ಇದೀಗ ಆಕೆ ನಾಪತ್ತೆಯಾಗಿದ್ದಾರೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.

ಭಾವನಗರ್ ಜಿಲ್ಲೆಯ ಪಾಲಿತಾನಾ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಶನಿವಾರ ಎಫ್​ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 12 ವರ್ಷದ ಮಗಳ ಮೇಲೆ ಮೂವರು ಒಂದು ವರ್ಷದಿಂದ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಈ ಕೃತ್ಯಕ್ಕೆ ತನ್ನ ಹೆಂಡತಿ ಸಹಕರಿಸಿದ್ದಾಳೆ ಎಂದು ಬಾಲಕಿ ತಂದೆ ದೂರು ದಾಖಲಿಸಿದ್ದಾರೆ.

ಶಾಂತಿ ಧಂದುಕಿಯಾ (46), ಬಾಬುಬಾಯಿ ಸಾರ್ತನ್ಪಾರಾ (43) ಹಾಗೂ ಚಂದ್ರೇಶ್ ಸರ್ತನ್ಪಾರಾ (32) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಇದನ್ನು ಓದಿ: ಅತ್ಯಾಚಾರ ನಡೆದ ಬಳಿಕ ಬಂದು ದೂರು ನೀಡು; ಪ್ರಕರಣ ದಾಖಲಿಸಲು ಬಂದ ಮಹಿಳೆಯೊಂದಿಗೆ ಪೊಲೀಸರ ವರ್ತನೆ

First published:December 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading