ಈ ಹುಡುಗನಿಗೆ ಆಹಾರ ಅಂದ್ರೆ ಭಯ, 10 ವರ್ಷ ಬರೀ ಬ್ರೆಡ್-ಮೊಸರು ತಿಂದು ಬದುಕಿದ್ದಾನೆ: ಇದೊಂದು ವಿಚಿತ್ರ ಖಾಯಿಲೆ

ಈ ಬಾಲಕ ಕಳೆದ 10 ವರ್ಷದಿಂದ ಪ್ರತಿದಿನ ಬಿಳಿ ಬ್ರೆಡ್ ಮತ್ತು ಯೋಗರ್ಟ್ ಹೊರತಾಗಿ ಬೇರೆ ಯಾವ ಆಹಾರವನ್ನು ಸೇವಿಸುತ್ತಿಲ್ಲ. ಈತನಿಗೊಂದು ವಿಚಿತ್ರ ಖಾಯಿಲೆ ಇದ್ದು ಬೇರೆ ಆಹಾರ ನೀಡಿದರೆ ಹೆದರಿಕೊಳ್ತಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ನಾವು ಒಂದು ಹೊತ್ತು ತಿಂದ ಆಹಾರವನ್ನು ಮತ್ತೊಂದು ಹೊತ್ತು ಅದೇ ಆಹಾರ ತಿನ್ನಲು ಸರ್ವೇಸಾಮಾನ್ಯವಾಗಿ ಮೂಗು ಮರಿಯುತ್ತೇವೆ. ಆದರೆ ಇಲ್ಲೊಬ್ಬ ಹುಡುಗ 10 ವರ್ಷದಿಂದ ಒಂದೇ ರೀತಿಯ ಆಹಾರವನ್ನೇ ತಿನ್ನುತ್ತಿದ್ದಾನೆ. ಹೌದು ಈ ಯುವಕನ ಹೆಸರು ಅಶ್ಟನ್ ಫಿಶರ್. ಈತನ ವಯಸ್ಸು 12. ಈ ಬಾಲಕ ಕಳೆದ 10 ವರ್ಷದಿಂದ ಪ್ರತಿದಿನ ಬಿಳಿ ಬ್ರೆಡ್ ಮತ್ತು ಯೋಗರ್ಟ್ ಹೊರತಾಗಿ ಬೇರೆ ಯಾವ ಆಹಾರವನ್ನು ಸೇವಿಸುತ್ತಿಲ್ಲ. ಅಶ್ಟನ್ ಒಂದು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಈತನಿಗೆ ಯಾವುದಾದರೂ ಆಹಾರ ತಿಂದರೆ ಅದು ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಭಯ ಕಾಡುತ್ತಿದೆ. ಹಾಗಾಗಿ ಈ ಕಾಯಿಲೆಯಿಂದ ಈತ ಸಾಮಾನ್ಯ ಆಹಾರ ಮತ್ತು ಪಾನೀಯಗಳಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾನೆ.


ಅಷ್ಟನ್‍ನನ್ನು ಪರೀಕ್ಷೆಗೆ ಒಳಪಡಿಸಿದಾಗ ಆತನಿಗೆ ಆಹಾರ ಫೋಬಿಯಾ ಇರುವುದು ಪತ್ತೆಯಾಯಿತು. ವರದಿಗಳ ಪ್ರಕಾರ, ಅವನ ಪೋಷಕರು ಅವನ ಆಹಾರವನ್ನು ಬದಲಾಯಿಸಲು ಅಥವಾ ಅವನ ಊಟದಲ್ಲಿ ಕೆಲವು ಹೊಸ ಆಹಾರವನ್ನು ಪರಿಚಯಿಸಲು ಪ್ರಯತ್ನಿಸಿದಾಗಲೆಲ್ಲಾ ಆತ ಹೆಚ್ಚು ಹೆದರಿಕೊಳ್ಳುತ್ತಿದ್ದ ಎಂದು ತಿಳಿಸಿದ್ದಾರೆ.


ಆದರೆ ಈಗ ಆತನಲ್ಲಿ ಆಹಾರ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೌದು 12 ವರ್ಷದ ಮಗು ಅಂತಿಮವಾಗಿ ಹಲವು ವರ್ಷಗಳ ಆಹಾರದಲ್ಲಿದ್ದ ಆತಂಕದಿಂದ ದೂರವಾಗಿದ್ದು, ನಂತರ ಕೆಲವು ಹೊಸ ಆಹಾರಗಳನ್ನು ಪ್ರಯತ್ನಿಸಲು ಆರಂಭಿಸಿದ್ದಾನೆ. ಅಷ್ಟನ್ ಈಗ ರೋಸ್ಟ್ ಡಿನ್ನರ್, ಕ್ರಿಸ್ಪ್ಸ್ ಮತ್ತು ಹ್ಯಾಮ್ ಸ್ಯಾಂಡ್‍ವಿಚ್‍ಗಳನ್ನು ಸೇವಿಸಲು ಪ್ರಾರಂಭಿಸಿದ್ದಾನೆ.ಜುಲೈನಲ್ಲಿ, ಮನಶ್ಶಾಸ್ತ್ರಜ್ಞರಿಗೆ ಆಷ್ಟನ್‍ನ ರೋಗ ಸ್ಥಿತಿಯನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಇದನ್ನು ನಿರ್ಬಂಧಿತ ಆಹಾರ ಸೇವನೆಯ ಅಸ್ವಸ್ಥತೆ (ಎಆರ್‍ಎಫ್‍ಐಡಿ) ಎಂದು ಕರೆಯಲಾಗುತ್ತದೆ. ವ್ಯಕ್ತಿಯು ಕೆಲವು ಆಹಾರಗಳನ್ನು ಸೇವಿಸದೇ ನಿರ್ಲಕ್ಷಿಸುವ ಸ್ಥಿತಿ ಎಂದಾಗಿದೆ.


ಇದನ್ನೂ ಓದಿ: Afghanistan ನಲ್ಲಿ ಷರಿಯಾ ಕಾನೂನು: ಹೆಣ್ಮಕ್ಕಳು ಶಾಲೆಗೆ ಹೋಗುವಂತಿಲ್ಲ, ಸಾಯುತ್ತಿದ್ರೂ ಪುರುಷ ವೈದ್ಯರ ಬಳಿ ಹೋಗುವಂತಿಲ್ಲ..ಹೇಗಿರಲಿದೆ ಅವರ ಬದುಕು?

ಆಷ್ಟನ್‍ನ ತಾಯಿ ತನ್ನ ಮಗನ ಫೋಬಿಯಾ ಮಗುವಾಗಿದ್ದಾಗ ಆತನಿಗೆ ರಿಫ್ಲಕ್ಸ್‌ನ ಪರಿಣಾಮವಾಗಿರಬಹುದು ಎಂದು ಭಾವಿಸಿದ್ದರು. ತಜ್ಞರ ಪ್ರಕಾರ, ಇದು ಎಆರ್‍ಎಫ್‍ಐಡಿ ಪೀಡಿತರ ಸಾಮಾನ್ಯ ಲಕ್ಷಣ ಎಂದು ತಿಳಿದು ಸಮಾಧಾನಪಟ್ಟುಕೊಂಡರು.ಆಷ್ಟನ್ ಯೋಗರ್ಟ್ ಮತ್ತು ಬಿಳಿ ಬ್ರೆಡ್ ಅನ್ನು ಇಷ್ಟಪಟ್ಟು ತಿನ್ನುತ್ತಿರುವುದಕ್ಕೆ ನಾನು ಅದೃಷ್ಟಶಾಲಿ. ಈ ಎರಡು ಪದಾರ್ಥಗಳು ಅವನಿಗೆ ಬದುಕಲು ಸಹಾಯ ಮಾಡಿತು ಎಂದು ತಾಯಿ ಹೇಳುತ್ತಾಳೆ.


ಅವನಿಗಾಗಿ ನಾವು ಯಾವಾಗಲೂ ಮಂಚ್ ಬಂಚ್ ಸ್ಟ್ರಾಬೆರಿ ಮತ್ತು ಬಾಳೆಹಣ್ಣಿನ ಯೋಗರ್ಟ್ ಮತ್ತು ವಾರ್‍ಬರ್ಟನ್ಸ್ ವೈಟ್ ಬ್ರೆಡ್ ಖರೀದಿಸಿ ತರುತ್ತಿದ್ದೇವೆ. ಈ ಆಹಾರಗಳ ಸೇವನೆ ಆತ ಮಾಡದೇ ಇರುತ್ತಿದ್ದರೆ ಇಂದು ನಮ್ಮ ಮಗ ನಮ್ಮೊಂದಿಗೆ ಇರುತ್ತಿರಲಿಲ್ಲ, ಅವನನ್ನು ನಾವು ನೋಡಲು ಸಾಧ್ಯವಾಗುತ್ತಿರಲಿಲ್ಲ. ಅವನನ್ನು ಎಂದೋ ನಾವು ಕಳೆದುಕೊಳ್ಳಬೇಕಾಗಿತ್ತು ಎಂಬುದು ಆಷ್ಟನ್ ತಾಯಿಯ ದುಃಖದ ಮಾತಾಗಿದೆ.


ಇದನ್ನೂ ಓದಿ: Sumalatha Ambareesh: ಸುಮಲತಾ ಅಂಬರೀಶ್ ಲೆಟರ್​ಹೆಡ್ ದುರ್ಬಳಕೆ ಆರೋಪ ಮಾಡಿದ ರವೀಂದ್ರ ಶ್ರೀಕಂಠಯ್ಯ, ಬೂದಿ ಮುಚ್ಚಿದ್ದ ಕೆಂಡ ಇಂದು ಸಿಡಿದಿತ್ತಾ?

ಅವನಿಗೆ ಬೇಕಾದ ಸರಿಯಾದ ಪೋಷಕಾಂಶಗಳು ಸಿಗದ ಕಾರಣ ನಾವು ಅವನ ಬಗ್ಗೆ ತುಂಬಾ ಚಿಂತಿತರಾಗಿದ್ದೆವು. ಆದರೆ ಆತನಿಗೆ ಭಯಾನಕ ಪ್ಯಾನಿಕ್ ಅಟ್ಯಾಕ್ ಆಗಿದ್ದರಿಂದ ದೈಹಿಕವಾಗಿ ಬೇರೆ ಏನನ್ನೂ ತಿನ್ನಲು ಸಾಧ್ಯವಾಗಲಿಲ್ಲ" ಎಂದು ಅವರು ತಿಳಿಸಿದ್ದಾರೆ. ARFID ಕುರಿತು ಎಷ್ಟು ಮಾತನಾಡಿದರೂ ಸಾಕಾಗುವುದಿಲ್ಲ ಎಂಬುದು ಆಷ್ಟನ್‌ನ ತಾಯಿಯ ಹೇಳಿಕೆಯಾಗಿದೆ. ಇದೊಂದು ಮಾನಸಿಕ ಅಸ್ವಸ್ಥತೆಯಾಗಿದ್ದು ವೈದ್ಯಕೀಯ ಲೋಕದಲ್ಲಿ ತುಂಬಾ ವಿರಳ ಕಾಯಿಲೆಯಾಗಿದೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: