ತರಬೇತಿ ವೇಳೆ ಬಾಲಕಿಯ ಭುಜಕ್ಕೆ ಚುಚ್ಚಿದ ಬಾಣ; ಏರ್​ಲಿಫ್ಟ್​ ಮೂಲಕ ದೆಹಲಿಗೆ ಸ್ಥಳಾಂತರ; ಏಮ್ಸ್​ ಆಸ್ಪತ್ರೆಗೆ ದಾಖಲು

ಬಾಲಕಿಯ ಸಂಪೂರ್ಣ ಚಿಕಿತ್ಸಾ ವೆಚ್ಚ ಸೇರಿದಂತೆ ಏರ್​ ಲಿಫ್ಟ್​​ ವೆಚ್ಚವನ್ನು ಎಸ್​ಎಐ ಭರಿಸಲಿದೆ. ಗೊಯೇನ್​ಗೆ ಅತ್ಯುತ್ತಮ ಚಿಕಿತ್ಸೆ ಸಿಗುವ ಭರವಸೆ ಇದ್ದು, ಆಕೆ ಚೇತರಿಸಿಕೊಳ್ಳಲಿದ್ದಾಳೆ ಎಂದು ಅಥಾರಿಟಿಯ ಹಿರಿಯ ಅಧಿಕಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

news18-kannada
Updated:January 10, 2020, 3:22 PM IST
ತರಬೇತಿ ವೇಳೆ ಬಾಲಕಿಯ ಭುಜಕ್ಕೆ ಚುಚ್ಚಿದ ಬಾಣ; ಏರ್​ಲಿಫ್ಟ್​ ಮೂಲಕ ದೆಹಲಿಗೆ ಸ್ಥಳಾಂತರ; ಏಮ್ಸ್​ ಆಸ್ಪತ್ರೆಗೆ ದಾಖಲು
ಗಾಯಾಳು ಬಾಲಕಿ
  • Share this:
ನವದೆಹಲಿ(ಜ.10): ಅಸ್ಸಾಂನ ದಿಬ್ರುಗರ್ ಜಿಲ್ಲೆಯ ಚಬುಹಾದಲ್ಲಿ ಬಿಲ್ವಿದ್ಯೆ ತರಬೇತಿ ಪಡೆಯುತ್ತಿದ್ದ 12 ವರ್ಷದ ಬಾಲಕಿಗೆ ಆಕಸ್ಮಿಕವಾಗಿ ಬಾಣವೊಂದು ಚುಚ್ಚಿದ್ದು, ಕೂಡಲೇ ಏರ್​ಲಿಫ್ಟ್​ ಮೂಲಕ ಆಕೆಯನ್ನು ದೆಹಲಿಗೆ ಕರೆದೊಯ್ದು ಏಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಬಾಲಕಿ​ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಗಾಯಗೊಂಡ ಬಾಲಕಿಯನ್ನು ಶಿವಾಂಗಿನಿ ಗೊಹೇನ್(12)​ ಎಂದು ಗುರುತಿಸಲಾಗಿದೆ. ಈಕೆ ಪ್ರತಿನಿತ್ಯ ಬಿಲ್ವಿದ್ಯೆ ತರಬೇತಿ ಪಡೆಯುತ್ತಿದ್ದಳು. ಅಂತೆಯೇ ನಿನ್ನೆ ಸಹ ತರಬೇತಿ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದಳು. ಈ ವೇಳೆ ಆಕಸ್ಮಿಕವಾಗಿ ಬಾಣವೊಂದು ಆಕೆಯ ಭುಜಕ್ಕೆ ಚುಚ್ಚಿದೆ.

ಪೊಲೀಸರನ್ನು ತಪ್ಪಿತಸ್ಥರ ಜಾಗದಲ್ಲಿ ನಿಲ್ಲಿಸುವುದು ತಪ್ಪು: ಎಚ್​​.ಡಿ ಕುಮಾರಸ್ವಾಮಿ ವಿರುದ್ಧ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಿಡಿ

ಬಾಣ ಚುಚ್ಚಿದ ರಭಸಕ್ಕೆ ಶಿವಾಂಗಿನಿಗೆ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಬಾಲಕಿಯನ್ನು ಏರ್​ಲಿಫ್ಟ್​ ಮೂಲಕ ದೆಹಲಿಗೆ ಸ್ಥಳಾಂತರ ಮಾಡಿ, ಏಮ್ಸ್​​ ಟ್ರಾಮಾ ಸೆಂಟರ್​​ಗೆ ದಾಖಲು ಮಾಡಲಾಗಿದೆ.

ಕ್ರೀಡಾಪಟು(ಬಿಲ್ಲುಗಾರ್ತಿ) ಗೊಯೇನ್ ಸ್ಪೋರ್ಟ್​​ ಅಥಾರಿಟಿ ಆಫ್​ ಇಂಡಿಯಾ(ಎಸ್​​ಎಐ)ದಲ್ಲಿ ತರಬೇತುದಾರಳಾಗಿದ್ದಳು. ಬಾಲಕಿಯ ಸಂಪೂರ್ಣ ಚಿಕಿತ್ಸಾ ವೆಚ್ಚ ಸೇರಿದಂತೆ ಏರ್​ ಲಿಫ್ಟ್​​ ವೆಚ್ಚವನ್ನು ಎಸ್​ಎಐ ಭರಿಸಲಿದೆ. ಗೊಯೇನ್​ಗೆ ಅತ್ಯುತ್ತಮ ಚಿಕಿತ್ಸೆ ಸಿಗುವ ಭರವಸೆ ಇದ್ದು, ಆಕೆ ಚೇತರಿಸಿಕೊಳ್ಳಲಿದ್ದಾಳೆ ಎಂದು ಅಥಾರಿಟಿಯ ಹಿರಿಯ ಅಧಿಕಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುಜರಾತ್​ನಲ್ಲೊಂದು ನಿರ್ಭಯಾ ಪ್ರಕರಣ; ಯುವತಿ ಮೇಲೆ ಅತ್ಯಾಚಾರವೆಸಗಿ ಮರಕ್ಕೆ ನೇತು ಹಾಕಿದ ದುಷ್ಟರು

ಬಿಲ್ಲಿನ ಒಂದು ಭಾಗ ಬಾಲಕಿಯ ಭುಜದ ಮೂಳೆಗೆ ಚುಚ್ಚಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಶೀಘ್ರದಲ್ಲೇ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಗೋಯೇನ್​ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎಂದು ಏಮ್ಸ್​ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ. 
First published: January 10, 2020, 3:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading