• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Free Fire Game: 12 ವರ್ಷದ ಮಗನಿಗೆ ಫ್ರೀ ಫೈರ್​ ಆಡುವ ಹುಚ್ಚು, ತಾಯಿ ಬ್ಯಾಂಕ್​​ ಖಾತೆಯಿಂದ 3 ಲಕ್ಷ ಉಡೀಸ್​!

Free Fire Game: 12 ವರ್ಷದ ಮಗನಿಗೆ ಫ್ರೀ ಫೈರ್​ ಆಡುವ ಹುಚ್ಚು, ತಾಯಿ ಬ್ಯಾಂಕ್​​ ಖಾತೆಯಿಂದ 3 ಲಕ್ಷ ಉಡೀಸ್​!

Free Fire Game

Free Fire Game

Online Game: ಫ್ರೀ ಫೈರ್​ ಗೇಮ್​ ಆಟವಾಡುವ ಅಭ್ಯಾಸವಿದ್ದ ಬಾಲಕ  ಆಟದ ಮಟ್ಟವನ್ನು ಹೆಚ್ಚಿಸಲು ಮತ್ತು ಶಸ್ತ್ರಾಸ್ತ್ರಾ ಖರೀದಿಸಲು ಈ ರೀತಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

 • Share this:

  ಆನ್​ಲೈನ್​ ಗೇಮ್​ಗಳು ಬಂದಾಗಿನಿಂದ ಯುವಕರ, ಪುಟಾಣಿ ಮಕ್ಕಳ ಚಿತ್ತ ಇದರತ್ತ ತೆರಳಿದೆ. ಗಂಟೆಗಟ್ಟಲೇ ಆನ್​ಲೈನ್​ ಗೇಮ್​ಗಳನ್ನು ಆಟವಾಡಿಕೊಂಡು ಸಮಯ ಕಳೆಯುತ್ತಿದ್ದಾರೆ. ಇನ್ನು ಕೆಲವರು ಗೇಮ್​ ಹುಚ್ಚಾಟಕ್ಕೆ ಬಲಿಯಾಗಿ ಹಣ ಕಳೆದುಕೊಂಡವರು ಇದ್ದಾರೆ. ಅದರಂತೆ ಇದೀಗ 12 ವರ್ಷ ವಯಸ್ಸಿನ ಬಾಲಕನೋರ್ವ ಫ್ರೀ ಫೈರ್​ ಆಟದ ಹುಚ್ಚಿನಿಂದಾಗಿ ತಾಯಿ ಖಾತೆಯಿಂದ 3 ಲಕ್ಷ ರೂ ಖರ್ಚು ಮಾಡಿದ್ದಾನೆ!.


  ಛತ್ತೀಸ್​ಗಢದ ಕಾಂಕರ್​ ಜಿಲ್ಲೆಯ ಪಂಖಜೂರ್​​ನಲ್ಲಿ ಈ ಘಟನೆ ನಡೆದಿದೆ. ಸತತ ಮೂರು ತಿಂಗಳಿಂದ ಶುಭ್ರ ಪಾಲ್​ ಎಂಬ ಮಹಿಳೆಯ ಖಾತೆಯಿಂದ 3 ಲಕ್ಷ ರೂ 22 ಸಾವಿರ ರೂ ನಾಪತ್ತೆಯಾಗಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಮಹಿಳೆ ಪೊಲೀಸರ ಮೊರೆ ಹೋಗಿದ್ದಾರೆ. ಆನ್​ಲೈನ್​ ವಂಚನೆಯಿಂದಾಗಿ ಹೀಗಾಗಿರಬೇಕು ಅಂದುಕೊಂಡಿದ್ದರಂತೆ.


  ಪೊಲೀಸರು ಈ ಬಗ್ಗೆ ತನಿಖೆ ಪ್ರಾರಂಭಿಸಿದಾಗ ಶುಭ್ರ ಪಾಲ್​ ಅವರ 12 ವರ್ಷ ವಯಸ್ಸಿನ ಪುಟ್ಟ ಬಾಲಕ ಎಂದು ತಿಳಿದು ಬಂದಿದೆ. ಫ್ರೀ ಫೈರ್​ ಗೇಮ್​ ಆಟವಾಡುವ ಅಭ್ಯಾಸವಿದ್ದ ಬಾಲಕ  ಆಟದ ಮಟ್ಟವನ್ನು ಹೆಚ್ಚಿಸಲು ಮತ್ತು ಶಸ್ತ್ರಾಸ್ತ್ರಾ ಖರೀದಿಸಲು ಈ ರೀತಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.


  ಮಾಹಿತಿ ಪ್ರಕಾರ ಬಾಲಕನು ಮಾರ್ಚ್​ 8 ರಿಂದ ಜೂನ್​ 10ರ ನಡುವೆ ಬಾಲಕ ಹಣವನ್ನು ಬಳಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. 278 ಬಾರಿ ವಹಿವಾಟು ನಡೆಸಿದ್ದಾನೆ ಎಂದು ಗೊತ್ತಾಗಿದೆ. ಈ ವೇಳೆ 3 ಲಕ್ಷ 22 ಸಾವಿರ ಖರ್ಚಾಗಿದೆ.  ಇನ್ನು ಶುಭ್ರ ಪಾಲ್​ ಪಿವಿ 12 ಮಿಡಲ್ ಸ್ಕೂಲ್​ ಶಿಕ್ಷಕಿಯಾಗಿದ್ದಾರೆ.

  Published by:Harshith AS
  First published: