Aadhar: ಎಚ್ಚರಿಕೆ! 12 ಅಂಕಿಯ ಸಂಖ್ಯೆಗಳು, ಆಧಾರ್ ಸಂಖ್ಯೆಗಳಲ್ಲ!

ಯಾರು ಬೇಕಾದರೂ ಈ ಆಧಾರ್ ಕಾರ್ಡ್ ಪ್ರಮಾಣೀಕರಣದ ಹಂತಗಳನ್ನು ಮಾಡಬಹುದು. ಆಧಾರ್ ಕಾರ್ಡ್ ಸಂಖ್ಯೆಗಳ ಪ್ರಮಾಣೀಕರಣಕ್ಕೆ ಒತ್ತು ನೀಡಿ, ಆಧಾರ್ ಕಾರ್ಡ್ ವಂಚಕರಿಂದ ದೂರವಿರಿ.

ಆಧಾರ್​

ಆಧಾರ್​

 • Share this:

  ಯುಐಡಿಎಐ ನೇರ ಲಿಂಕ್‍ಗೆ ಲಾಗ್ ಇನ್ ಮಾಡುವ ಮೂಲಕ ಎರಡು ಸರಳ ಹಂತಗಳಲ್ಲಿ ಆನ್‍ಲೈನ್‍ನಲ್ಲಿ ಆಧಾರ್ ಕಾರ್ಡ್ ಪ್ರಮಾಣೀಕರಣ ಮಾಡುವ ವಿವರಗಳನ್ನು ಇಲ್ಲಿ ತಿಳಿಸಲಾಗಿದೆ.


  ಗುರುತಿನ ಚೀಟಿಗೆ ಸಂಬಂಧಿಸಿದ ವಂಚನೆಗಳನ್ನು ಮಾಡುವವರು ನಮ್ಮ ಮಧ್ಯೆ ಇದ್ದೇ ಇರುತ್ತಾರೆ. ಬ್ಯಾಂಕ್ ಖಾತೆಯ ಪ್ರಮಾಣೀಕರಣ ಕೋಡ್ ಪಡೆದು ವಂಚಿಸಿದ ಪ್ರಕರಣಗಳಂತು ಆಗಾಗ ನಮ್ಮಗಳ ಸುತ್ತ ನಡೆಯುತ್ತಲೇ ಇರುತ್ತವೆ. ಆಧಾರ್ ಕಾರ್ಡ್ ಸಂಖ್ಯೆಗಳ ಕುರಿತ ವಂಚನೆಗಳು ಕೂಡ ಅದಕ್ಕೆ ಹೊರತಾಗಿಲ್ಲ. ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ), 12 ಅಂಕಿಯ ಸಂಖ್ಯೆಗಳು, ಆಧಾರ್ ಸಂಖ್ಯೆಗಳಲ್ಲ ಎಂದು ಎಚ್ಚರಿಕೆ ನೀಡಿದೆ.


  ಆಧಾರ್ ಕಾರ್ಡ್ ವಂಚನೆಗಳ ಕುರಿತು ಶಾಸನಬದ್ಧ ಪ್ರಾಧಿಕಾರ ಎಚ್ಚರಿಕೆ ನೀಡಿದ್ದು, ಅಧಾರ್ ಕಾರ್ಡ್ ಹೊಂದಿರುವ ಯಾವುದೇ ವ್ಯಕ್ತಿಯಿಂದ ಅದನ್ನು ಪುರಾವೆಯಾಗಿ ಸ್ವೀಕರಿಸುವ ಮೊದಲು, ಆಧಾರ್ ಕಾರ್ಡ್ ಪ್ರಮಾಣೀಕರಣವನ್ನು ಕೇಳುವುದು ಅತ್ಯಗತ್ಯ ಎಂದು ಅದು ಶಿಫಾರಸ್ಸು ಮಾಡಿದೆ.


  ಆಧಾರ್ ಕಾರ್ಡ್ ಪ್ರಮಾಣೀಕರಣ ಅಷ್ಟೊಂದು ಕಷ್ಟವಲ್ಲ: ಹೀಗೆ ಮಾಡಿ


  ಬಹಳ ಸುಲಭ. ನೇರ ಯುಐಡಿಎಐ ಲಿಂಕ್ - resident.uidai.gov.in/verifyಬಳಸಿ, ಲಾಗ್ ಇನ್ ಮಾಡುವ ಮೂಲಕ ಎರಡು ಸರಳ ಹಂತಗಳಲ್ಲಿ ಆನ್‍ಲೈನ್‍ನಲ್ಲಿ ಆಧಾರ್ ಕಾರ್ಡ್ ಪ್ರಮಾಣೀಕರಣ ಸಾಧ್ಯ ಎಂದು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ಹೇಳಿದೆ.
  ಯಾರೇ ಆದರೂ, ಆಧಾರ್ ಕಾರ್ಡನ್ನು ಒಬ್ಬರ ಗುರುತಿನ ಪುರಾವೆಯಾಗಿ ಸ್ವೀಕರಿಸುವ ಮೊದಲು ಅದರ ಪ್ರಮಾಣೀಕರಣಕ್ಕೆ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ಒತ್ತು ನೀಡಿದ್ದು, “ಎಲ್ಲಾ 12 ಅಂಕಿಯ ಸಂಖ್ಯೆಗಳು ಆಧಾರ್ ಅಲ್ಲ. ಆಧಾರ್ ಕಾರ್ಡನ್ನು ಗುರುತಿನ ಪುರಾವೆಯಾಗಿ ಸ್ವೀಕರಿಸುವ ಮೊದಲು ಪ್ರಮಾಣೀಕರಿಸಿ ನೋಡುವಂತೆ ಶಿಫಾರಸು ಮಾಡಲಾಗುವುದು” ಎಂದು ಅದು ಟ್ವೀಟ್ ಮಾಡಿದೆ.


  ತನ್ನ ಟ್ವೀಟ್‍ನಲ್ಲಿ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು, resident.uidai.gov.in/verify- ನೇರ ಲಿಂಕ್‍ಗೆ ಲಾಗ್ ಇನ್ ಮಾಡುವ ಮೂಲಕ ಎರಡು ಸರಳ ಹಂತಗಳಲ್ಲಿ ಆನ್‍ಲೈನ್‍ನಲ್ಲಿ ಆಧಾರ್ ಕಾರ್ಡ್ ಪ್ರಮಾಣೀಕರಣ ಮಾಡುವ ವಿವರಗಳನ್ನು ತಿಳಿಸಿದೆ.


  ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ನೀಡಿರುವ ಮಾಹಿತಿಯ ಪ್ರಕಾರ, ಆಧಾರ್ ನಂಬರ್ ಪ್ರಮಾಣೀಕರಣ ಮಾಡಲು ಮೊದಲು resident.uidai.gov.in/verify ನೇರ ಲಿಂಕ್ ಬಳಸಿ, ಲಾಗಿನ್ ಮಾಡಬೇಕು. ಲಾಗಿನ್ ಮಾಡಿದ ಬಳಿಕ 12 ಅಂಕಿಗಳ ಸಂಖ್ಯೆಯನ್ನು ನಮೂದಿಸಬೇಕು. ಅದಾದ ಬಳಿಕ ಸೆಕ್ಯುರಿಟಿ ಕೋಡ್ ಅಥವಾ ಕ್ಯಾಪ್ಚ ಬಳಸಿ, ‘ಪ್ರೊಸೀಡ್ ಟು ವೆರಿಫೈ’ ಆಯ್ಕೆಯನ್ನು ಒತ್ತಬೇಕು.
  ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ತಿಳಿಸಿರುವ ಆಧಾರ್ ಕಾರ್ಡ್

  ಪ್ರಮಾಣೀಕರಣದ ಹಂತಗಳು ಈ ಕೆಳಗಿನಂತಿವೆ:

  1.  resident.uidai.gov.in/verify ನೇರ ಲಿಂಕ್‍ಗೆ ಲಾಗ್ ಇನ್ ಆಗಬೇಕು;

  2. 1 2- ಅಂಕಿಗಳ ಸಂಖ್ಯೆಯನ್ನು ನಮೂದಿಸಬೇಕು;

  3.  ಸೆಕ್ಯುರಿಟಿ ಕೋಡ್ ಅಥವಾ ಕ್ಯಾಪ್ಚ ನಮೂದಿಸಿ;

  4.  ‘ಪ್ರೊಸೀಡ್ ಟು ವೆರಿಫೈ’ ಆಯ್ಕೆಯನ್ನು ಒತ್ತಬೇಕು ಮತ್ತು

  5.  12 ಅಂಕಿಗಳ ಸಂಖ್ಯೆಯ ಪ್ರಮಾಣೀಕರಣ ನಿಮ್ಮ ಕಂಪ್ಯೂಟರ್ ಪರದೆ ಅಥವಾ ಮೊಬೈಲ್ ಪರದೆಯ ಮೇಲೆ ಕಂಡುಬರುವುದು.


  ಇದನ್ನೂ ಓದಿ: HDK: ರೆಬೆಲ್ ಸ್ಟಾರ್ ಎದುರು ಕೈಕಟ್ಟಿ ನಿಂತ ಕುಮಾರಣ್ಣ, ಹುಲಿ ಮುಂದೆ ಇಲಿ ಎಂದ ಫ್ಯಾನ್ಸ್, ನಾ ಎಲ್ಲಾ ಕಡೆ ಹೀಗೇ ಎಂದ ಎಚ್ಡಿಕೆ !


  ಯಾರು ಬೇಕಾದರೂ ಈ ಆಧಾರ್ ಕಾರ್ಡ್ ಪ್ರಮಾಣೀಕರಣದ ಹಂತಗಳನ್ನು ಮಾಡಬಹುದು. ಆಧಾರ್ ಕಾರ್ಡ್ ಸಂಖ್ಯೆಗಳ ಪ್ರಮಾಣೀಕರಣಕ್ಕೆ ಒತ್ತು ನೀಡಿ, ಆಧಾರ್ ಕಾರ್ಡ್ ವಂಚಕರಿಂದ ದೂರವಿರಿ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ - 19 ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  First published: