Budget 2019 | ರೈತರಿಗೆ ಬಂಪರ್​ ಕೊಡುಗೆ; 12 ಸಾವಿರ ಕೋಟಿ ಅನ್ನದಾತರ ಖಾತೆಗೆ ಪ್ರತಿವರ್ಷ 6 ಸಾವಿರ ಹಣ ವರ್ಗಾವಣೆ

ಪ್ರಧಾನ ಮಂತ್ರಿ ಕಿಸಾನ್​ ಸಮ್ಮಾನ್​ ಯೋಜನೆ ಅಡಿ, ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರು ಇದರ ಫಲಾನುಭವಿಗಳಾಗಲಿದ್ದಾರೆ. ಎರಡು ಸಾವಿರದಂತೆ ವರ್ಷದಲ್ಲಿ ಮೂರು ಬಾರಿ ರೈತರ ಖಾತೆಗೆ 6 ಸಾವಿರ ರೂ. ವರ್ಗಾವಣೆಯಾಗಲಿದೆ. ಈ ಯೋಜನೆ 2018 ಡಿಸೆಂಬರ್​ನಿಂದಲೇ ಅನ್ವಯವಾಗಲಿದೆ ಎಂದು ಮಾಹಿತಿ ನೀಡಿದರು.

Seema.R | news18
Updated:February 1, 2019, 12:10 PM IST
Budget 2019 | ರೈತರಿಗೆ ಬಂಪರ್​ ಕೊಡುಗೆ; 12 ಸಾವಿರ ಕೋಟಿ ಅನ್ನದಾತರ ಖಾತೆಗೆ ಪ್ರತಿವರ್ಷ 6 ಸಾವಿರ ಹಣ ವರ್ಗಾವಣೆ
ಪ್ರಾತಿನಿಧಿಕ ಚಿತ್ರ
Seema.R | news18
Updated: February 1, 2019, 12:10 PM IST
ನವದೆಹಲಿ: ಮೋದಿ ಸರ್ಕಾರದ ಕೊನೆಯ ಬಜೆಟ್​ನಲ್ಲಿ ರೈತರಿಗೆ ಬಂಪರ್​ ಕೊಡುಗೆ ನೀಡಲಾಗಿದೆ. ಸಣ್ಣ ರೈತರಿಗೆ ಆದಾಯ ಬೆಂಬಲ ನೀಡಲು ರೈತರ ಖಾತೆಗೆ 6 ಸಾವಿರ ರೂಪಾಯಿಯನ್ನು ನೇರ ವರ್ಗಾವಣೆ ಮಾಡಲಾಗುವುದು. ಈ ಮೂಲಕ ರೈತರ ಅಭಿವೃದ್ಧಿಗೆ ನಾವು ಬದ್ಧ ಎಂದು ಸಚಿವ ಪಿಯೂಷ್​ ಗೊಯೆಲ್​ ಹೇಳಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್​ ಸಮ್ಮಾನ್​ ಯೋಜನೆ ಅಡಿ, ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರು ಇದರ ಫಲಾನುಭವಿಗಳಾಗಲಿದ್ದಾರೆ. ಎರಡು ಸಾವಿರದಂತೆ ವರ್ಷದಲ್ಲಿ ಮೂರು ಬಾರಿ ರೈತರ ಖಾತೆಗೆ 6 ಸಾವಿರ ರೂ. ವರ್ಗಾವಣೆಯಾಗಲಿದೆ. ಈ ಯೋಜನೆ 2018 ಡಿಸೆಂಬರ್​ನಿಂದಲೇ ಅನ್ವಯವಾಗಲಿದೆ ಎಂದು ಮಾಹಿತಿ ನೀಡಿದರು.

ಈ ಯೋಜನೆಯಿಂದ 12 ಕೋಟಿ ರೈತರು ಪ್ರಯೋಜನ ಪಡೆಯಲಿದ್ದು, ಯೋಜನೆಗಾಗಿ 75 ಸಾವಿರ ಕೋಟಿ ರೂ ಹಣವನ್ನು ಮೀಸಲಿಡಲಾಗಿದೆ. ಈ ಯೋಜನೆಗೆ ಶೇ 100ರಷ್ಟು ಹಣವನ್ನು ಕೇಂದ್ರ ಸರ್ಕಾರದಿಂದ ನೀಡಲಾಗುವುದು.

ಕಾಮಧೇನು ಆಯೋಗ ರಚನೆ

ಗೋವುಗಳ ರಕ್ಷಣೆಗಾಗಿ ಹಾಗೂ ಅದರ ಉತ್ಪಾದನೆ ಹೆಚ್ಚಳಕ್ಕಾಗಿ ರಾಷ್ಟ್ರೀಯ ಕಾಮಧೇನು ಆಯೋಗವನ್ನು ರಚನೆ ಮಾಡಲಾಗುವುದು. ಈ ಮೂಲಕ ಹೈನೋತ್ಪನ್ನ ಹೆಚ್ಚಳಕ್ಕೆ ಒತ್ತು ನೀಡಲಾಗುವುದು. ಈ ಮೂಲಕ ಪಶುಪಾಲಕರ ಅಭಿವೃದ್ಧಿ ಮಾಡಲಾಗುವುದು.  ಪಶುಗಾರಿಕೆ ಉತ್ಪಾದನೆಗಾಗಿ  ಕಿಸಾನ್​ ಕ್ರೆಡಿಟ್​ ಕಾರ್ಡ್​ ಯೋಜನೆ ಅಡಿ ಅವರಿಗೆ ಶೇ.2 ರಷ್ಟು ಬಡ್ಡಿ ವಿನಾಯಿತಿ ನೀಡಲಾಗುವುದು. ಇದರ ಜೊತೆಗೆ ಸರಿಯಾದ ಸಮಯಕ್ಕೆ ಲೋನ್​ ಕಟ್ಟಿದಲ್ಲಿ ಅವರಿಗೆ ಶೇ. 3 ರಷ್ಟು ಸಬ್ಸಿಡಿ ನೀಡಲಾಗುವುದು ಎಂದರು.

ರೈತರ ಖಾತೆಗೆ ನೇರ ಹಣ ವರ್ಗಾವಣೆ ಮಾಡುವುದು ಉತ್ತಮ ಯೋಜನೆ ಆದರೆ ಇದರಿಂದ ಸರ್ಕಾರಕ್ಕೆ ಹೆಚ್ಚಿನ ಒತ್ತಡ ಬೀಳಲಿದೆ ಎಂದರು.
First published:February 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626