Guinness World Record: ಈ ಅಜ್ಜನ ವಯಸ್ಸು 112, ಇಷ್ಟು ವರ್ಷ ಆರೋಗ್ಯವಾಗಿರೋದು ಹೇಗೆ ಅನ್ನೋ ಗುಟ್ಟು ಹೇಳಿದ್ದಾರೆ ನೋಡಿ..!

1933ರಲ್ಲಿ ಆಂಟೋನಿನಾ ಬ್ಯಾರಿಯೊ ಗುಟೈರೆಜ್Antonina Barrio Gutiérrez) ಜೊತೆ ವಿವಾಹವಾಗಿದ್ದರು. ದಾಂಪತ್ಯದಲ್ಲಿ ಯಾವುದೇ  ಬಿರುಕು ಮೂಡದಂತೆ ಶಾಂತ ರೀತಿಯಲ್ಲಿ ಗಾರ್ಸಿಯಾ ಜೀವನ ನಡೆಸಿದರು.

ಸ್ಯಾಟರ್ನಿನೋ ಡೆ ಲಾ ಫ್ಯೂಂಟೆ ಗಾರ್ಸಿಯಾ

ಸ್ಯಾಟರ್ನಿನೋ ಡೆ ಲಾ ಫ್ಯೂಂಟೆ ಗಾರ್ಸಿಯಾ

  • Share this:
    ಹಣ ಸಂಪಾದಿಸದಿದ್ದರೂ, ಆರೋಗ್ಯ(Health) ಸಂಪಾದಿಸು ಎಂದು ಹಿರಿಯರು ಹೇಳಿದ್ದನ್ನು ಕೇಳಿದ್ದೇವೆ. ಯಾಕಂದ್ರೆ ಈ ಜಮಾನದಲ್ಲಿ ಆರೋಗ್ಯವೇ ಭಾಗ್ಯ. ಯಾವುದೇ ರೋಗ ರುಜಿನ ಇಲ್ಲದೆ ಬದುಕುವವನೇ ಶ್ರೇಷ್ಠ. ಈಗಿನ fast-food ತಿಂದರೆ ಆಯಸ್ಸು ಕೂಡ ಕಡಿಮೆ ಆಗುತ್ತಲೇ ಇರುತ್ತದೆ. ಒಳ್ಳೆಯ ಆಹಾರ ತಿಂದು, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಮ್ಮ ಹಿರಿಯರು ನೂರು ವರ್ಷಗಳ ಕಾಲ ಆಯಸ್ಸನ್ನ ಹೊಂದಿದ್ದರು, ಆದರೆ ಈಗ 50 ವರ್ಷವಾಗುತ್ತಿದ್ದಂತೆ ಇರುವ ಎಲ್ಲ ರೋಗಗಳು ಮಾನವನ ದೇಹ ಸೇರಿಕೊಳ್ಳುತ್ತಿದೆ. ನೂರು ವರ್ಷ ಬದುಕಿರುವವರನ್ನು ಕಂಡರೆ ಅವರೇ ಈಗ ದೇವರ ಸಮಾನ. ಸ್ಪೇನ್‌ (Spain)ನ 112 ವರ್ಷ 211 ದಿನಗಳ ವಯಸ್ಸಿನ ಸ್ಯಾಟರ್ನಿನೋ ಡೆ ಲಾ ಫ್ಯೂಂಟೆ ಗಾರ್ಸಿಯಾ (Saturnino de la Fuente García)ಇದೀಗ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯೆಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ (Guinness World Records) ನಲ್ಲಿ ದಾಖಲಾಗಿದೆ.

    "ಶಾಂತವಾಗಿ ಇರಿ ಆಯಸ್ಸು ಹೆಚ್ಚಿಸಿಕೊಳ್ಳಿ"

    ಸ್ಯಾಟರ್ನಿನೋ ಡೆ ಲಾ ಫ್ಯೂಂಟೆ ಗಾರ್ಸಿಯಾ 1909, ಫೆಬ್ರವರಿ 11ರಂದು ಸ್ಪೇನ್ ನಲ್ಲಿ ಜನಿಸಿದರು. ಆದರೆ ಪ್ರತಿ ವರ್ಷ ಫೆಬ್ರವರಿ 8ರಂದು ಗಾರ್ಸಿಯಾ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಾರೆ. ಇಷ್ಟು ವರ್ಷ ಆರೋಗ್ಯವಾಗಿರುವ ಹಿಂದಿನ ಗುಟ್ಟೇನು ಎಂದು ಗಾರ್ಸಿಯಾ ಅವರನ್ನು ಕೇಳಿದರೆ, ಶಾಂತವಾಗಿ ಜೀವನದಲ್ಲಿ ಇದ್ದರೆ ಮನುಷ್ಯನಿಗೆ ಯಾವುದೇ ತೊಂದರೆ ಬರುವುದಿಲ್ಲ. ಎಂತಹ ಒತ್ತಡವಿದ್ದರೂ ಶಾಂತಿಯಿಂದ ಬದುಕಿದರೆ, ಏನನ್ನು ಬೇಕಾದರೂ ಸಾಧಿಸಬಹುದು ಎಂದು ಹೇಳಿದ್ದಾರೆ. ಗಾರ್ಸಿಯಾ 4.2 ಫೀಟ್ ಎತ್ತರವಿದ್ದಾರೆ. ಹೀಗಾಗಿಯೇ 1936ರಲ್ಲಿ ನಡೆದ ಸ್ಪೇನ್ ವಾರ್ ನಲ್ಲಿ ಎತ್ತರದ ಕಾರಣದಿಂದ ಇವರು ತಪ್ಪಿಸಿಕೊಂಡಿದ್ದರು. ಶೂ ತಯಾರಕರಾಗಿ ಗಾರ್ಸಿಯಾ ಕೆಲಸ ಮಾಡಿಕೊಂಡಿದ್ದರು.

    14 ಮೊಮ್ಮಕ್ಕಳು, 22 ಮರಿಮೊಮ್ಮಕ್ಕಳು!

    1933ರಲ್ಲಿ ಆಂಟೋನಿನಾ ಬ್ಯಾರಿಯೊ ಗುಟೈರೆಜ್Antonina Barrio Gutiérrez) ಜೊತೆ ವಿವಾಹವಾಗಿದ್ದರು. ದಾಂಪತ್ಯದಲ್ಲಿ ಯಾವುದೇ  ಬಿರುಕು ಮೂಡದಂತೆ ಶಾಂತ ರೀತಿಯಲ್ಲಿ ಗಾರ್ಸಿಯಾ ಜೀವನ ನಡೆಸಿದರು. ಗಾರ್ಸಿಯಾಗೆ ಒಟ್ಟು ಏಳು ಜನ ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡುಮಗ ಇದ್ದ. ಆದರೆ ಅನಾರೋಗ್ಯ ಕಾರಣದಿಂದ ಮಗ ಮೃತಪಟ್ಟಿದ್ದ. ಸದ್ಯಕ್ಕೆ ಈಗ ಏಳು ಜನ ಹೆಣ್ಣು ಮಕ್ಕಳಲ್ಲಿ, ಒಬ್ಬಳು ಮಗಳು ಗಾರ್ಸಿಯಾ ಅವರನ್ನ ಆರೈಕೆ ಮಾಡುತ್ತಿದ್ದಾರೆ. ಗಾರ್ಸಿಯಾಗೆ 14 ಜನ ಮೊಮ್ಮಕ್ಕಳು, 22 ಜನ ಮರಿಮೊಮ್ಮಕ್ಕಳು. ಕಳೆದ 8 ತಿಂಗಳಿಂದ ಗಾರ್ಸಿಯಾ ತುಂಬಾ ಕಷ್ಟ ಪಡುತ್ತಿದ್ದರು. ಕೋವಿಡ್ 19 ಕಾರಣದಿಂದಾಗಿ ತನ್ನ ಕುಟುಂಬವನ್ನು ಭೇಟಿಯಾಗದೆ ಬೇಸರಗೊಂಡಿದ್ದರು.

    ಇದನ್ನೂ ಓದಿ:Health Tips: 100 ವರ್ಷ ಆರೋಗ್ಯವಾಗಿ ಬದುಕಬೇಕು ಅಂದ್ರೆ ಪ್ರತಿದಿನ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ..!

    ಆದರೆ ಗಾರ್ಸಿಯಾರವರ್ 112ನೇ ಜನ್ಮದಿನವನ್ನು ಕುಟುಂಬಸ್ಥರ ಎಲ್ಲ ಸೇರಿ ಅದ್ದೂರಿಯಿಂದ ಆಚರಿಸಿದರು. ಕುಟುಂಬಸ್ಥರನ್ನು ನೋಡದೇ ಕಂಗಾಲಾಗಿದ್ದ ಗಾರ್ಸಿಯಾ, ಕೊನೆಗೂ ತಮ್ಮವರನ್ನ ಕಂಡು ಸಂತಸ ವ್ಯಕ್ತಪಡಿಸಿದರು.
    ಪುರುಷರಲ್ಲಿ ವಿಶ್ವದ ಹಿರಿಯ ವ್ಯಕ್ತಿ ಎಂದು ಗಾರ್ಸಿಯಾ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಇನ್ನು ಮಹಿಳೆಯರಲ್ಲಿ ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂದು
    ಕೇನ್ ತನಕಾ(Kane Tanaka) ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬುಕ್ ನಲ್ಲಿ ದಾಖಲಾಗಿದೆ. ಕೇನ್ ತನಕಾ  ಅವರಿಗೆ ಈಗ 118 ವರ್ಷ, ಈ ವಯಸ್ಸಿನಲ್ಲೂ ಯುವಪೀಳಿಗೆ ನಾಚುವಂತೆ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.

    • ವರದಿ - ವಾಸುದೇವ್. ಎಂ

    Published by:Latha CG
    First published: