ಆಕಸ್ಮಿಕವಾಗಿ ಗಡಿ ದಾಟಿ ಬಂದ ಪಾಕ್ ಬಾಲಕನಿಗೆ ಸ್ವೀಟ್, ಬಟ್ಟೆ ಕೊಟ್ಟು ಕಳುಹಿಸಿದ ಭಾರತೀಯ ಸೇನೆ


Updated:June 29, 2018, 10:27 AM IST
ಆಕಸ್ಮಿಕವಾಗಿ ಗಡಿ ದಾಟಿ ಬಂದ ಪಾಕ್ ಬಾಲಕನಿಗೆ ಸ್ವೀಟ್, ಬಟ್ಟೆ ಕೊಟ್ಟು ಕಳುಹಿಸಿದ ಭಾರತೀಯ ಸೇನೆ

Updated: June 29, 2018, 10:27 AM IST
ನ್ಯೂಸ್ 18 ಕನ್ನಡ

ನವದೆಹಲಿ(ಜೂ.29): ಪಾಕಿಸ್ತಾನದ ಗಡಿಯೊಳಗಿರುವ ಕಾಶ್ಮೀರದ 11 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತದ ಗಡಿಯೊಳಗೆ ಪ್ರವೇಶಿಸಿದ್ದಾನೆ. ಆದರೆ ಆಕಸ್ಮಿಕವಾಗಿ ಬಂದ ಬಾಲಕನಿಗೆ ಭಾರತೀಯ ರಕ್ಷಣಾ ಪಡೆಯು ಬುಧವಾರದಂದು ಸಿಹಿ ತಿಂಡಿಗಳನ್ನು ನೀಡಿ ಪಾಕಿಸ್ತಾನದ ಅಧಿಕಾರಿಗಳಿಗೊಪ್ಪಿಸಿದ್ದಾರೆ.

ಬಾಲಕ ನಾಲ್ಕು ದಿನಗಳ ಹಿಂದೆ ಜಮ್ಮು ಕಾಶ್ಮೀರದ ಪುಂಚ್ ಜಿಲ್ಲೆಯಲ್ಲಿರುವ ಭಾರತದ ಭಾಗಕ್ಕೆ ಪ್ರವೇಶಿಸಿದ್ದ. ಮೊಹಮ್ಮದ್ ಅಬ್ದುಲ್ಲಾ ಹೆಸರಿನ ಈ ಬಾಲಕನನ್ನು ಜೂನ್ 24 ರಂದು ಇಲ್ಲಿನ ದೇಗ್​ವಾರ್​ ಇಲಾಖೆಯಲ್ಲಿ ಸೇನೆಯು ವಶಪಡಿಸಿಕೊಂಡಿತ್ತು. ಇದಾದ ಕೂಡಲೇ ಆತನನ್ನು ಜಮ್ಮು ಕಾಶ್ಮೀರಕ್ಕೆ ಒಪ್ಪಿಸಲಾಗಿತ್ತು.

ಈ ಕುರಿತಾಗಿ ಮಾತನಾಡಿದ ರಕ್ಷಣಾ ಅಧಿಕಾರಿಯೊಬ್ಬರು ಉಭಯ ದೇಶಗಳ ನಡುವೆ ವಿಶ್ವಾಸವನ್ನು ಬಲಪಡಿಸುವ ನಿಟ್ಟಿನಲ್ಲಿ ಮಾನವೀಯತೆಯ ದೃಷ್ಟಿಯಲ್ಲಿ ಬಾಲಕನನ್ನು ಬಿಡುಗಡೆಗೊಳಿಸಿದ್ದೇವೆ. ಭಾರತೀಯ ಸೇನೆಯು ನಿರ್ದೋಷಿಗಳನ್ನು ಪತ್ತೆಹಚ್ಚಿದಾಗ ಸಂವೇದನಾಶೀಲತೆಯನ್ನು ಕಾಪಾಡಲು ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತದೆ' ಎಂದಿದ್ದಾಋಎ. ಇನ್ನು ಈ ಬಾಲಕನನ್ನು ಒಪ್ಪಿಸುವ ಮೊದಲು ಆತನಿಗೆ ಹೊಸ ಬಟ್ಟೆ ಬರೆಗಳನ್ನು ತೊಡಿಸುವುದರೊಂದಿಗೆ ಸಿಹಿ ತಿಂಡಿಗಳನ್ನೂ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗಷ್ಟೇ ಭಾರತ- ಪಾಕ್​ ಗಡಿಯಲ್ಲಿ ಯುದ್ಧ ವಿರಾಮ ಉಲ್ಲಂಘಿಸಿದ್ದರಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಯುದ್ಧ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ನಡೆಸಿದ ಫೈರಿಂಗ್​ನಿಂದ ರಕ್ಷಣಾ ಪಡೆಯ ಯೋಧರು ಹುತಾತ್ಮರಾಗುವುದರೊಂದಿಗೆ ಜನ ಸಾಮಾನ್ಯರಿಗೂ ಬಹಳಷ್ಟು ತೊಂದರೆಗಳಾಗಿವೆ.
First published:June 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...