ಭಾರತೀಯ ಮೂಲದ 11 ವರ್ಷದ ಬಾಲಕಿಗೆ ವಿಶ್ವದಲ್ಲೇ ಪ್ರತಿಭಾಂತ ವಿದ್ಯಾರ್ಥಿ ಎಂಬ ಬಿರುದು

ಎಸಿಟಿ ಪ್ರಮಾಣಿತ ಪರೀಕ್ಷೆಗಳಲ್ಲಿ ಅಸಾಧಾರಣ ಸಾಧನೆಗಾಗಿ ಅಮೆರಿಕದ ಉನ್ನತ ವಿಶ್ವವಿದ್ಯಾನಿಲಯವು ವಿಶ್ವದ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯೆಂದು ಬಿರುದು ನೀಡಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಭಾರತೀಯ ಮೂಲದ ಅಮೆರಿಕನ್ ಬಾಲಕಿ 11 ವರ್ಷದ ನತಾಶಾ ಪೆರಿ ವಿಶ್ವದ ಪ್ರತಿಭಾವಂತ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಪಾತ್ರಳಾಗಿದ್ದಾಳೆ. ಎಸಿಟಿ ಪ್ರಮಾಣಿತ ಪರೀಕ್ಷೆಗಳಲ್ಲಿ ಅಸಾಧಾರಣ ಸಾಧನೆಗಾಗಿ ಅಮೆರಿಕದ ಉನ್ನತ ವಿಶ್ವವಿದ್ಯಾನಿಲಯವು ವಿಶ್ವದ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯೆಂದು ಬಿರುದು ನೀಡಿದೆ. ಸ್ಕೋಲಾಸ್ಟಿಕ್ ಅಸೆಸ್ಮೆಂಟ್ ಟೆಸ್ಟ್ (SAT) ಮತ್ತು ಅಮೆರಿಕನ್ ಕಾಲೇಜ್ ಟೆಸ್ಟಿಂಗ್ (ACT) ಇವೆರಡೂ ಪ್ರಮಾಣೀಕೃತ ಪರೀಕ್ಷೆಗಳಾಗಿವೆ. ಇದನ್ನು , ಅನೇಕ ಕಾಲೇಜುಗಳು ವಿದ್ಯಾರ್ಥಿಗಳ ಕಾಲೇಜು ದಾಖಲಾತಿ ನಿರ್ಧರಿಸಲು  ಸಹ ಬಳಸುತ್ತವೆ. ಕೆಲವು ಸಂದರ್ಭಗಳಲ್ಲಿ ಕಂಪನಿಗಳು ಅಂಕಗಳ ಆಧಾರದ ಮೇಲೆ  ಮೆರಿಟ್ ಆಧಾರಿತ ವಿದ್ಯಾರ್ಥಿ ವೇತನವನ್ನು ನೀಡುತ್ತವೆ. ಎಲ್ಲಾ ಕಾಲೇಜುಗಳು ವಿದ್ಯಾರ್ಥಿಗಳು ಎಸ್ಎಟಿ ಅಥವಾ ಎಸಿಟಿ ತೆಗೆದುಕೊಳ್ಳಬೇಕು ಮತ್ತು ತಮ್ಮ ಅಂಕಗಳನ್ನು ತಮ್ಮ ನಿರೀಕ್ಷಿತ ವಿಶ್ವವಿದ್ಯಾಲಯಗಳಿಗೆ ಸಲ್ಲಿಸುವುದು ಕಡ್ಡಾಯ.

  ಪೆರಿ, ನ್ಯೂಜೆರ್ಸಿಯ ಥೆಲ್ಮಾ ಎಲ್ ಸ್ಯಾಂಡ್ಮಿಯರ್ ಎಲಿಮೆಂಟರಿ ಶಾಲೆಯ ವಿದ್ಯಾರ್ಥಿನಿ.  ಎಸ್ಎಟಿ, ಎಸಿಟಿ ಅಥವಾ ಜಾನ್ಸ್ ಹಾಪ್ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್ (ಸಿಟಿವೈ) ಟ್ಯಾಲೆಂಟ್ ಸರ್ಚ್ನ ಭಾಗವಾಗಿ ತೆಗೆದುಕೊಂಡ  ಪರೀಕ್ಷೆಯಲ್ಲಿ ಅವರ ಅಸಾಧಾರಣ ಪ್ರದರ್ಶನಕ್ಕಾಗಿ  ಅವರನ್ನು ಗೌರವಿಸಲಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ಸೆಂಟರ್ ಹೇಳಿಕೆಯಲ್ಲಿ ತಿಳಿಸಿದೆ.

  2020-21 ಟ್ಯಾಲೆಂಟ್ ಸರ್ಚ್ ವರ್ಷದಲ್ಲಿ CTY ಗೆ ಸೇರಿದ 84 ದೇಶಗಳ ಸುಮಾರು 19,000 ವಿದ್ಯಾರ್ಥಿಗಳಲ್ಲಿ  ಈಕೆ ಕೂಡ ಒಬ್ಬಳು. ಜಾನ್ಸ್ ಹಾಪ್ಕಿನ್ಸ್ ಟ್ಯಾಲೆಂಟ್ ಸರ್ಚ್ ಪರೀಕ್ಷೆಯನ್ನು ಪೆರಿ 2021ರಲ್ಲಿ ತೆಗೆದುಕೊಂಡಿದ್ದು, ಅವರು ಗ್ರೇಡ್ 5 ರಲ್ಲಿದ್ದಾಗ ಮೌಖಿಕ ಮತ್ತು ಪರಿಮಾಣಾತ್ಮಕ ವಿಭಾಗಗಳಲ್ಲಿ ಅವರ ಫಲಿತಾಂಶ ಅದ್ಭುತವಾಗಿತ್ತು. ಅಲ್ಲದೇ ಪರಿ ಜಾನ್ಸ್ ಹಾಪ್ಕಿನ್ಸ್ CTY "ಹೈ ಆನರ್ಸ್ ಅವಾರ್ಡ್ಸ್" ಗೆ  ಆಯ್ಕೆಯಾಗಿದ್ದರು. ಇದು ನನ್ನನ್ನು ಹೆಚ್ಚು  ಸಾಧನೆ ಮಾಡಲು ಪ್ರೇರೇಪಿಸುತ್ತದೆ ಎಂದು ಪೆರಿ ಹೇಳಿದ್ದಾರೆ.  ಡೂಡ್ಲಿಂಗ್ ಮತ್ತು ಜೆ ಆರ್ ಆರ್ ಟೋಲ್ಕಿನ್ ಅವರ ಕಾದಂಬರಿಗಳನ್ನು ಓದುವುದು ನನಗೆ ಸಹಾಯ ಮಾಡಿದೆ ಎನ್ನುತ್ತಾರೆ ಪೆರಿ.

  CTY ಟ್ಯಾಲೆಂಟ್ ಸರ್ಚ್ ಭಾಗವಹಿಸಿದವರಲ್ಲಿ  ಶೇಕಡಾ 20 ಕ್ಕಿಂತ ಕಡಿಮೆ CTY ಉನ್ನತ ಗೌರವ ಪ್ರಶಸ್ತಿಗೆ ಅರ್ಹತೆ ಪಡೆದಿದ್ದಾರೆ.  ಇನ್ನು ಇದರಲ್ಲಿ ವಿಜೇತರಾದವರು CTY ನ ಆನ್ಲೈನ್ ಮತ್ತು ಬೇಸಿಗೆ ಕಾರ್ಯಕ್ರಮಗಳಿಗೆ ಸಹ ಅರ್ಹತೆ ಪಡೆದಿದ್ದಾರೆ. ಇದರ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳು ಪ್ರಪಂಚದಾದ್ಯಂತದ ಇತರ ವಿದ್ಯಾರ್ಥಿಗಳೊಂದಿಗೆ ಬೆರೆತು ಕಲಿಕಾರ್ಥಿಗಳ ಸಮುದಾಯವನ್ನು ರಚಿಸಬಹುದು ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

  ಇದನ್ನೂ ಓದಿ: ಕೊರೊನಾ ಸಮಯವಾದ 2021ರಲ್ಲಿ ಪಾಸ್ ಆದವರಿಗೆ ಕೆಲಸ ಇಲ್ಲ: ವೈರಲ್ ಆದ ಬ್ಯಾಂಕ್ ಹುದ್ದೆಯ ಜಾಹೀರಾತು!

  ಈ ವಿದ್ಯಾರ್ಥಿಗಳನ್ನು ಸಂತೋಷವನ್ನ ಆಚರಿಸಲು ನಾವು ರೋಮಾಂಚನಗೊಂಡಿದ್ದೇವೆ. ಕೊರೊನಾ ಸ್ಥಿತಿಯ ನಡುವೆ ಒಂದು ವರ್ಷದಲ್ಲಿ, ಅವರ ಕಲಿಕೆಯ  ಮಟ್ಟ ಹೆಚ್ಚಿತ್ತು, ಮತ್ತು ಪ್ರೌಢಶಾಲೆ, ಕಾಲೇಜು ಮತ್ತು ಅದರಾಚೆಗೂ  ಹಿರಿಯರಾಗಿ ಮತ್ತು ಮಾರ್ಗದರ್ಶಕರಾಗಿ ಅವರ ಬೆಳವಣಿಗೆಯಲ್ಲಿ ಸಹಾಯ ಮಾಡಲು  ನಾವು ಉತ್ಸುಕರಾಗಿದ್ದೇವೆ ಎಂದು CTY ನ ಕಾರ್ಯನಿರ್ವಾಹಕ ನಿರ್ದೇಶಕಿ ವರ್ಜೀನಿಯಾ ರೋಚ್ ತಿಳಿಸಿದ್ದಾರೆ

  CTY ಆನ್ಲೈನ್ ಪ್ರೋಗ್ರಾಂ ಕೋರ್ಸ್​​​​​ಗಳಲ್ಲಿ ಪ್ರತಿ ವರ್ಷ 15,500 ಕ್ಕೂ ಹೆಚ್ಚು  ಜನರು ಸೇರಿಕೊಳ್ಳುತ್ತಾರೆ.  ಇದರ ಜೊತೆಗೆ, ಹೆಚ್ಚು ಜ್ಞಾನವುಳ್ಳ ಅಥವಾ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ CTY ನ ವೈಯಕ್ತಿಕ ಬೇಸಿಗೆ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲಾಗುತ್ತದೆ. ಆ ಕಾರ್ಯಕ್ರಮಗಳನ್ನು  ಯುನೈಟೆಡ್ ಸ್ಟೇಟ್ಸ್ ಮತ್ತು ಹಾಂಗ್ ಕಾಂಗ್ನ ಸುಮಾರು 20 ಸ್ಥಳಗಳಲ್ಲಿ ನಡೆಸಲಾಗುತ್ತದೆ. ಅದರಲ್ಲಿ ಒಳ್ಳೆಯ ತರಗತಿಗಳನ್ನು  ನೀಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ.
  Published by:Kavya V
  First published: