ಜಾತಿ ಗಣತಿಗೆ ಬಿಜೆಪಿ ಮೀನಾ- ಮೇಷ; ಸರ್ವಪಕ್ಷ ನಿಯೋಗದೊಂದಿಗೆ ಮೋದಿ ಭೇಟಿ ಆಗಲು ಹೊರಟ ನಿತೀಶ್​ ಕುಮಾರ್​

ಪ್ರಸ್ತುತ ಸಂಸತ್ ಅಧಿವೇಶನದಲ್ಲಿ ಯು-ಟರ್ನ್‌ ಹೊಡೆದ ಬಿಜೆಪಿ ಸರ್ಕಾರವು ಭವಿಷ್ಯದಲ್ಲಿ ಜಾತಿ ಗಣತಿಯನ್ನು ನಡೆಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಲಿಖಿತ ಉತ್ತರದಲ್ಲಿ ಸ್ಪಷ್ಟಪಡಿಸಿತ್ತು.

ನಿತೀಶ್​ ಕುಮಾರ್​

ನಿತೀಶ್​ ಕುಮಾರ್​

 • Share this:
  ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರದ 11  ಸರ್ವಪಕ್ಷ ಸದಸ್ಯರ ನಿಯೋಗವು ಆಗಸ್ಟ್ 23 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಓಬಿಸಿಗಳ ಜಾತಿ ಗಣತಿ ನಡೆಸ ಬೇಕಾಗಿ ಕೇಂದ್ರವನ್ನು ಆದೇಶಿಸುವಂತೆ ಕೇಳಲಾಗುತ್ತದೆ ಎಂದು ಹೇಳಲಾಗಿದೆ. ಅವರ ಸಾಂಪ್ರದಾಯಿಕ ಎದುರಾಳಿ ತೇಜಸ್ವಿ ಯಾದವ್ ಮತ್ತು ರಾಜ್ಯ ಬಿಜೆಪಿ ಪ್ರತಿನಿಧಿಯನ್ನು ಒಳಗೊಂಡ ನಿಯೋಗ ಇದಾಗಿದೆ.

  ಇದು ಕೇವಲ ಆರು ತಿಂಗಳು ಬಾಕಿ ಇರುವ ಉತ್ತರ ಪ್ರದೇಶ ಚುನಾವಣೆಗೆ ಮುನ್ನ ನರೇಂದ್ರ ಮೋದಿ ಸರ್ಕಾರಕ್ಕೆ ಈ ವಿಚಾರವು ತಲೆ ನೋವಾಗಿ ಪರಿಣಮಿಸಿದೆ. ಪಕ್ಷವು 2017 ರಲ್ಲಿ 14 ವರ್ಷಗಳ ದೀರ್ಘ ವಿರಾಮದ ನಂತರ ಅತಿದೊಡ್ಡ ರಾಜ್ಯದಲ್ಲಿ ಅಧಿಕಾರಕ್ಕೆ ಹಿಡಿದಿದೆ, ಈ ಅಧಿಕಾರ ಮರಳಿ ಬರುವುದರ ಹಿಂದೆ ಉತ್ತರ ಪ್ರದೇಶದಲ್ಲಿ ಓಬಿಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕೈ ಹಿಡಿದಿದ್ದೆ ಕಾರಣ ಎಂದು ಹೇಳಲಾಗುತ್ತಿದೆ. 2022 ರ ಚುನಾವಣೆಯಲ್ಲಿ ರಾಮ ಮಂದಿರವು ಒಂದು ಪ್ರಮುಖ ಅಂಶ ಎಂದು ಹೇಳಲಾಗುತ್ತಿದೆ ಜೊತೆಗೆ ಒಬಿಸಿ ಓಟ್ ಬ್ಯಾಂಕ್​ ಸೆಳೆಯಲು ಈ ತಂತ್ರ ಹೂಡಲಾಗಿದೆ ಎಂದು ನಿರೀಕ್ಷಿಸಲಾಗಿದೆ.

  ಇದನ್ನು ಗ್ರಹಿಸಿದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಸಂಸತ್ತಿನಲ್ಲಿ ಜಾತಿ ಗಣತಿಯ ವಿಷಯದ ಬಗ್ಗೆ ವ್ಯಂಗ್ಯವಾಗಿ ಮಾತನಾಡುವ ಮೂಲಕ ಮತ್ತು ಅವರ ಪಕ್ಷ ಯುಪಿಯಲ್ಲಿ ಇದನ್ನು ಚುನಾವಣಾ ವಿಷಯವನ್ನಾಗಿ ಬಳಸಿಕೊಳ್ಳುವ ಮೂಲಕ "ಹಮ್ ಟು ಕಿಸ್ ಗಿಂತಿ ಮೈನ್ ಅಟೆ ಹಿ ನಹಿ ಹೈ" (ನಾವು ಒಬಿಸಿಗಳು ನೀವುಗಳು ಮಾಡುವ ಯಾವುದೇ ಲೆಕ್ಕದಲ್ಲಿ ಸಿಗುವುದಿಲ್ಲ ಬಿನ್ನಿ) " ಹಾಗೆ ಮಾಡುವ ಮೂಲಕ, ಯಾದವ ಜಾತಿಗೆ ಸೇರದ ಇತರೇ ಒಬಿಸಿ ಮತದಾರರನ್ನು ಎಸ್ಪಿ ಕಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಮತ್ತು ಮುಂದಿನ ವರ್ಷ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಯುಪಿಯಲ್ಲಿ ಜಾತಿ ಗಣತಿಗೆ ಆದೇಶಿಸುವುದಾಗಿ ಅವರು ಭರವಸೆ ನೀಡಿದ್ದಾರೆ.


  ಆದುದರಿಂದ ವಿವಿಧ ರಾಜಕೀಯ ಪಕ್ಷಗಳ ನಡುವೆ ಈ ವಿಷಯ ಸಾಕಷ್ಟು ವಿರೋಧವಾಸಗಳಿಗೆ ಎಡೆ ಮಾಡಿಕೊಡುತ್ತದೆ ಎಂದು ಹೇಳಲಾಗಿದೆ , ಮೋದಿ ಸರ್ಕಾರವು ಯುಪಿ ಚುನಾವಣೆಯ ಹಿನ್ನಲೆಯಲ್ಲಿ "ಭವಿಷ್ಯದಲ್ಲಿ" ಜಾತಿ ಗಣತಿಯನ್ನು ನಡೆಸುವುದಾಗಿ "ಘೋಷಿಸಬಹುದು", ಇದನ್ನು ಹಣಿಯಲು ವಿರೋಧಿಗಳು ಗುರಾಣಿಗಳನ್ನು ಸಜ್ಜಾಗಿ ಇಟ್ಟುಕೊಳ್ಳುತ್ತಿದ್ದಾರೆ ಎನ್ನಬಹುದು.
  ಈ ಬಗ್ಗೆ ಕೇಳಿದಾಗ, ಬಿಜೆಪಿಯ ಹಿರಿಯ ನಾಯಕರೊಬ್ಬರು ನ್ಯೂಸ್ 18 ಗೆ ಹೀಗೆ ಹೇಳಿದರು,  ಒಂದು ರೀತಿಯಲ್ಲಿ ಅಥವಾ ಇನ್ನೊಂದು ರೀತಿಯಲ್ಲಿ ಎಂಬುದಾಗಿ ಯಾವುದೇ ನಿರ್ಧಾರವಿಲ್ಲ ಮತ್ತು ಅದೇ "ಉನ್ನತ ಮಟ್ಟದ ರಾಜಕೀಯ ನಿರ್ಧಾರ ಮಾಡಲಾಗುವುದು" ಎಂದು  ಹೇಳಿದರು. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 2021 ರ ಸಾಮಾನ್ಯ ಜನಗಣತಿ ಕೂಡ ಈಗಾಗಲೇ ಒಂದು ವರ್ಷ ವಿಳಂಬವಾಗಿದೆ ಮತ್ತು ಮುಂದಿನ ವರ್ಷ ಇದನ್ನು ಆರಂಭಿಸಲಾಗುವುದು. ಸಾಮಾನ್ಯ ಜನಗಣತಿಯೊಂದಿಗೆ ಜಾತಿ ಗಣತಿಯನ್ನು ನಡೆಸಬೇಕೆಂದು ಹೆಚ್ಚಿನ ವಿರೋಧ ಪಕ್ಷಗಳು ಬಯಸುತ್ತಿವೆ ಆದರೆ, 2022 ರಲ್ಲಿ ಸಾಮಾನ್ಯ ಜನಗಣತಿ ಮುಗಿದ ನಂತರ ಜಾತಿ ಗಣತಿಯನ್ನು ನಡೆಸಲು ಕೇಂದ್ರವು ಬದ್ಧವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.


  "ಇಡೀ ರಾಜಕೀಯದ ಎಲ್ಲಾ ಬಣ್ಣದ ಪಕ್ಷಗಳು ಜಾತಿ ಗಣತಿ ಮಾಡಬೇಕು ಎಂದು ಒಂದಾಗಿರುವಂತೆ ತೋರುತ್ತದೆ" ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಈ ಬೆಳವಣಿಗೆಯನ್ನು ಒಪ್ಪಿಕೊಂಡಿದ್ದಾರೆ. ಜಾತಿ ಗಣತಿಗೆ ಆದೇಶ ನೀಡುವಂತೆ ಮೋದಿ ಸರ್ಕಾರದ ಮೇಲೆ ಬಿಜೆಪಿ ಮಿತ್ರ ನಿತೀಶ್ ಕುಮಾರ್ ಅವರ ಒತ್ತಡ ಹೇರುತ್ತಿರುವುದು ನೋಡಿದರೆ, ಯುಪಿಎ ಮಿತ್ರರಾಗಿದ್ದ ಲಾಲೂ ಪ್ರಸಾದ್ ಮತ್ತು ಮುಲಾಯಂ ಸಿಂಗ್ ಯಾದವ್ 2010 ರಲ್ಲಿ ಮನಮೋಹನ್ ಸಿಂಗ್ ಸರ್ಕಾರದ ಮೇಲೆ ಇದೇ ರೀತಿಯ ಒತ್ತಡ ಹೇರಿದ್ದನ್ನು ನೆನಪಿಸಿಕೊಳ್ಳಬಹುದು. ಕೇಂದ್ರವು ಈ ವಿಚಾರವಾಗಿ ಆದೇಶ ನೀಡದಿದ್ದರೆ, ನಿತೀಶ್​ ಕುಮಾರ್ ಸ್ವತಃ ಮುಂದುವರಿಯಬಹುದು ಮತ್ತು ರಾಜ್ಯದಲ್ಲಿಯೇ ಒಬಿಸಿ ಎಣಿಕೆಯನ್ನು ಮಾಡುವಂತೆ ಆದೇಶಿಸಬಹುದು ಎಂದು ನಂಬಲಾಗಿದೆ.


  ಬಿಜೆಪಿ ನಾಯಕ, ಎಚ್‌ಎಎಮ್‌ನ ಜಿತಿನ್ ರಾಮ್ ಮಾಂಜಿ ಮತ್ತು ವಿಐಪಿ ಪಕ್ಷದ ಮುಖೇಶ್ ಸಹಾನಿ ಸೇರಿದಂತೆ ಬಿಹಾರದ ಎಲ್ಲಾ ಎನ್‌ಡಿಎ ಮಿತ್ರ ಪಕ್ಷಗಳು ಪ್ರಧಾನಿಯನ್ನು ಭೇಟಿ ಮಾಡಲು ನಿತೀಶ್​ ಕುಮಾರ್ ನಿಯೋಗದಲ್ಲಿ ಭಾಗಿಯಾಗಿವೆ.


  ಬಿಹಾರದ ಎಲ್ಲ 10 ರಾಜಕೀಯ ಪಕ್ಷಗಳನ್ನು ಈ ನಿಯೋಗದಲ್ಲಿ ಪ್ರತಿನಿಧಿಸಲಾಗಿದೆ. ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ 50% ಮೀಸಲಾತಿ ಮಿತಿಯನ್ನು ಉಲ್ಲಂಘಿಸುವ ವಿಚಾರದಲ್ಲಿ ಜಾತಿ ಗಣತಿಗೆ ಆದೇಶಿಸುವುದು ಮತ್ತು ಗಣತಿಯ ವಿವರಗಳನ್ನು ಸಾರ್ವಜನಿಕಗೊಳಿಸುವುದು ಇನ್ನೊಂದು ವಿಷಯವಾಗಿದೆ ಮತ್ತು ಇದಕ್ಕೆ ಸಾಂವಿಧಾನಿಕ ತಿದ್ದುಪಡಿಯ ಅಗತ್ಯವಿರುತ್ತದೆ. ಕಾಂಗ್ರೆಸ್ 2011 ರಲ್ಲಿ ಜಾತಿ ಗಣತಿಗೆ ಆದೇಶ ನೀಡಿತು ಆದರೆ ಅದನ್ನು ಎಂದಿಗೂ ಬಹಿರಂಗಪಡಿಸಲಿಲ್ಲ, ”ಎಂದು ಹಿರಿಯ ಬಿಜೆಪಿ ಮುಖಂಡರು ವಾದಿಸಿದರು.


   2018 ರಲ್ಲಿ, ಸದನಲ್ಲಿ ನಡೆದ ಚರ್ಚೆಯ ವೇಳೆ, ಆಗಿನ ಗೃಹ ಸಚಿವರು ಮತ್ತು ಈಗಿನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 2021 ರಲ್ಲಿ ಒಬಿಸಿ ಕೋಟಾ ಹೆಚ್ಚಳಕ್ಕೆ ಜನಗಣತಿಯನ್ನು ನಡೆಸಲಾಗುವುದು ಎಂದು ಭರವಸೆ ನೀಡಿದ್ದರು. ನಂತರ ಆಗಸ್ಟ್, 2018 ರಲ್ಲಿ, ಗೃಹ ಸಚಿವಾಲಯವು ಈ ಕುರಿತು ಮಾರ್ಗಸೂಚಿಯನ್ನು ನಿರ್ಧರಿಸಲಾಗುವುದು ಮತ್ತು ಸರ್ಕಾರವು ಜನಗಣತಿಯಲ್ಲಿ ಒಬಿಸಿ ಡೇಟಾ ಸಂಗ್ರಹಣೆಗೆ ಅವಕಾಶ ನೀಡುತ್ತದೆ ಎಂದು ಹೇಳಿಕೆಯನ್ನು ನೀಡಿತ್ತು. ಆದಾಗ್ಯೂ, ಪ್ರಸ್ತುತ ಸಂಸತ್ ಅಧಿವೇಶನದಲ್ಲಿ ಯು-ಟರ್ನ್‌ ಹೊಡೆದ ಬಿಜೆಪಿ ಸರ್ಕಾರವು ಭವಿಷ್ಯದಲ್ಲಿ ಜಾತಿ ಗಣತಿಯನ್ನು ನಡೆಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಲಿಖಿತ ಉತ್ತರದಲ್ಲಿ ಸ್ಪಷ್ಟಪಡಿಸಿತ್ತು.


  ಇದನ್ನೂ ಓದಿ: Pakistan tik-tok: ಚಪ್ಪಲಿ ತೋರಿಸಿದರು ಮಹಿಳೆಯನ್ನು ಹಿಂಬಾಲಿಸಿ ಮುತ್ತು ಕೊಡಲು ಬಂದ ವ್ಯಕ್ತಿ; ಪಾಕಿಸ್ತಾನದ ವಿಡಿಯೋ ವೈರಲ್

  2011 ರ ಎಸ್ಇಸಿಸಿ ಸಾಮಾನ್ಯ ಜನಗಣತಿ ಮಾತ್ರ ನಡೆಸಲಾಯಿತು ಆದರೆ ಮೊದಲಿನ ಸಾಮಾಜಿಕ-ಆರ್ಥಿಕ ಡೇಟಾವನ್ನು ಮಾತ್ರ ನಂತರ 2015 ರಲ್ಲಿ ಬಿಡುಗಡೆ ಮಾಡಲಾಯಿತು ಆದರೆ ಜಾತಿ ಗಣತಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಿಲ್ಲ. ಯುಪಿಎ ಮತ್ತು ಎನ್‌ಡಿಎ ಎರಡೂ ವಿವಿಧ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳನ್ನು ಗುರುತಿಸಲು ಎಸ್‌ಇಸಿಸಿ ಡೇಟಾವನ್ನು ಬಳಸಿದವು ಆದರೆ ಜಾತಿ ಡೇಟಾವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವುದನ್ನು ತಡೆದಿವೆ. ತಮಿಳುನಾಡು ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳು ಕೇಂದ್ರದಿಂದ ಪ್ರಾಯೋಗಿಕ ಡೇಟಾವನ್ನು ಕೇಳಿದವು ಆದರೆ ನೀಡಲಿಲ್ಲ. ಬಿಜು ಜನತಾದಳ ಸಂಸದರ ನಿಯೋಗವು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಜಾತಿ ಗಣತಿಗೆ ಒತ್ತಾಯಿಸಿತ್ತು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: