• Home
  • »
  • News
  • »
  • national-international
  • »
  • Accident: ಭೀಕರ ಅಪಘಾತ; ಧಗಧಗನೇ ಹೊತ್ತಿ ಉರಿದ ಬಸ್, 11 ಮಂದಿಯ ಸಾವು

Accident: ಭೀಕರ ಅಪಘಾತ; ಧಗಧಗನೇ ಹೊತ್ತಿ ಉರಿದ ಬಸ್, 11 ಮಂದಿಯ ಸಾವು

ಅಪಘಾತ

ಅಪಘಾತ

Bus Catches Fire in Nashik: ಎಲ್ಲಾ ಗಾಯಾಳುಗಳಿಗೆ ನಾಸಿಕ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಗಾಯಗೊಂಡವರ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ನಾಸಿಕ್ ಜಿಲ್ಲಾ ಉಸ್ತುವಾರಿ ಸಚಿವ ದಾದಾ ಭೂಸೆ ತಿಳಿಸಿದ್ದಾರೆ.

  • Share this:

ಮಹಾರಾಷ್ಟ್ರದ ನಾಸಿಕ್‌ನಲ್ಲಿ (Maharashtra Nashik) ಶನಿವಾರ (Saturday) ಬೆಳಗ್ಗೆ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 11 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ನಂದೂರ್ ನಾಕಾದಲ್ಲಿ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಟ್ರಕ್​ಗೆ ಬಸ್ ಡಿಕ್ಕಿ ಹೊಡೆದು ಕೆಲವೇ ನಿಮಿಷಗಳಲ್ಲಿ ಬೆಂಕಿ ಹೊತ್ತಿಕೊಂಡ ಕಾರಣ, ಈ ದುರ್ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು (Police Officers) ಖಚಿತಪಡಿಸಿದ್ದಾರೆ. ಈ ಬೆಂಕಿ ಅವಘಡದಲ್ಲಿ ಹಲವರು ಜನ ಗಾಯಗೊಂಡಿದ್ದಾರೆ. ANI ಪ್ರಕಾರ, ಸಾವನ್ನಪ್ಪಿದರವನ್ನು ಹಾಗೂ ಗಾಯಳುಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಗಾಯಾಳುಗಳ ಚಿಕಿತ್ಸೆ ನೀಡಲಾಗುತ್ತಿದೆ.  ಡೆಪ್ಯುಟಿ ಕಲೆಕ್ಟರ್ ಭಗವತ್ ಡೊಯಿಫೋಡ್ ಅಪಘಾತದ ಬಗ್ಗೆ ಮತ್ತು ಮೃತಪಟ್ಟವರ ಸಂಖ್ಯೆಯನ್ನು ದೃಢಪಡಿಸಿದ್ದು, ಜಿಲ್ಲಾಧಿಕಾರಿ ಗಂಗಾಧರನ್ ಟಿ ಕೂಡ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ.


30 ಜನರಿದ್ದ ಸ್ಲೀಪರ್ ಕೋಚ್​ ಬಸ್​


ಆದರೆ, ವೈದ್ಯರು ಸೃಷ್ಟಿಕರಣ ನೀಡಿದ ನಾವು ಇನ್ನೂ ನಿಖರವಾದ ಸಾವಿನ ಸಂಖ್ಯೆಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ, ”ಎಂದು ನಾಸಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.  ಪಿಟಿಐ ಪ್ರಕಾರ, ಖಾಸಗಿ ಸ್ಲೀಪರ್ ಕೋಚ್ ಬಸ್ ಆಗಿದ್ದು, ಮಾಹಿತಿ ಪ್ರಕಾರ ಸುಮಾರು 30 ಪ್ರಯಾಣಿಕರು ಈ ಬಸ್​ನಲ್ಲಿ ಪ್ರಯಾಣಿಸುತ್ತಿದ್ದರು. ಮೃತಪಟ್ಟವರು ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರು ಬಸ್ ಪ್ರಯಾಣಿಕರೇ ಆಗಿದ್ದು, ಟ್ರಕ್ ಧುಲೆಯಿಂದ ಮುಂಬೈಗೆ ಹೊರಟಿತ್ತು ಎನ್ನಲಾಗುತ್ತಿದೆ.


ಅಪಘಾತದಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಘಟನೆಯ ಬಗ್ಗೆ ವಿಷಾಧ ವ್ಯಕ್ತಪಡಿಸಿದ್ದು, “ನಾಸಿಕ್‌ನಲ್ಲಿ ಖಾಸಗಿ ಬಸ್ ಮತ್ತು ಟ್ಯಾಂಕರ್ ಅಪಘಾತದ ಘಟನೆ ತುಂಬಾ ಬೇಸರವಾಗಿದೆ. ಈ ಘಟನೆಯಲ್ಲಿ ಮೃತಪಟ್ಟವರ ನೋವಿನಲ್ಲಿ ನಾವು ಭಾಗಿಯಾಗುತ್ತೇವೆ. ಜಿಲ್ಲಾಧಿಕಾರಿ, ಮುನ್ಸಿಪಲ್ ಕಮಿಷನರ್, ಪೊಲೀಸ್ ಕಮಿಷನರ್ ಮತ್ತು ಸ್ಥಳೀಯ ಅಧಿಕಾರಿಗಳು ಸ್ವತಃ ಸ್ಥಳದಲ್ಲಿದ್ದು, ಪರಿಹಾರ ಕಾರ್ಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ, ”ಎಂದು ಅವರು ಟ್ವೀಟ್ ಮಾಡಿದ್ದಾರೆ.


ನಾಸಿಕ್ - ಔರಂಗಾಬಾದ್ ರಸ್ತೆಯ ಹೋಟೆಲ್ ಮಿರ್ಚಿ ಬಳಿ ಬೆಳಗ್ಗೆ 5.20 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಪುಸಾದ್‌ನಿಂದ ಮುಂಬೈಗೆ ತೆರಳುತ್ತಿದ್ದ ಖಾಸಗಿ ಬಸ್ ಧುಲೆಯಿಂದ ಪುಣೆಗೆ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.


ಇದನ್ನೂ ಓದಿ: ಚಾಮುಂಡೇಶ್ವರಿಗೆ ನಮೋ ಎಂದ ಪ್ರಧಾನಿ, ಮೈಸೂರು ದಸರಾ ಬಗ್ಗೆ ಮೋದಿ ಮೆಚ್ಚುಗೆ


ನಾಸಿಕ್ ಅಗ್ನಿಶಾಮಕ ದಳಕ್ಕೆ ಬೆಳಗ್ಗೆ 5.30 ಕ್ಕೆ ಕರೆ ಮಾಡಿ ಮಾಹಿತಿ ನೀಡಲಾಗಿದ್ದು, ನಂತರ ಮೂರು ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.  ಆದರೆ ಈ ಮೊದಲೇ, ಅಪಘಾತದ ಬಳಿಕ ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.


ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಹತ್ತಿಕೊಂಡ ಬೆಂಕಿ


ಬೆಳಗಿನ ಜಾವ 3.30ರ ಸುಮಾರಿಗೆ ಯವತ್ಮಾಲ್‌ನಿಂದ ಹೊರಟಿದ್ದ ಬಸ್ಸು 5.15ರ ಸುಮಾರಿಗೆ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಸುಟ್ಟ ಗಾಯಗಳಿಂದ 11 ಮಂದಿ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ನಾಸಿಕ್ ಸಿವಿಲ್ ಆಸ್ಪತ್ರೆ ಮತ್ತು ನಗರದ ಇತರ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಮೃತರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಎಲ್ಲಾ ಗಾಯಾಳುಗಳಿಗೆ ನಾಸಿಕ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಗಾಯಗೊಂಡವರ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ನಾಸಿಕ್ ಜಿಲ್ಲಾ ಉಸ್ತುವಾರಿ ಸಚಿವ ದಾದಾ ಭೂಸೆ ತಿಳಿಸಿದ್ದಾರೆ. ಈ ದುರದೃಷ್ಟಕರ ಘಟನೆಯಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಸಿಎಂ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.


ಇದನ್ನೂ ಓದಿ: ಚೀನಾಕ್ಕೆ ಸೆಡ್ಡು ಹೊಡಿಯಲು ಹೊಸ ಬಗೆಯ ಶಸ್ತ್ರಾಸ್ತ್ರದೊಂದಿಗೆ ಭಾರತ ರೆಡಿ!


ಕಳೆದ ಒಂದು ವಾರದಿಂದ ಈ ಬಸ್​ ಅಪಘಾತಗಳ ಸರಣಿ ನಡೆದಿದೆ. ಬುಧವಾರ ಬೆಳಗ್ಗೆಯಷ್ಟೇ, ಪಾಲಕ್ಕಾಡ್‌ನ ವಡಕ್ಕೆಂಚೇರಿಯಲ್ಲಿ ಟೂರಿಸ್ಟ್ ಬಸ್ ಕೆಎಸ್‌ಆರ್‌ಟಿಸಿ ಬಸ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣಿಕರು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿ, 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

Published by:Sandhya M
First published: