ಭೋಪಾಲ್​ನಲ್ಲಿ ಗಣಪತಿ ವಸರ್ಜನೆ ವೇಳೆ ದೋಣಿ ಮಗುಚಿ 11 ಸಾವು, 4 ಜನ ನಾಪತ್ತೆ

ನಿನ್ನೆ ಸಂಜೆ ವೇಳೆ ಗಣಪತಿ ವಿಸರ್ಜನೆಗೆಂದು ಸುಮಾರು 18 ಜನ ದೋಣಿಯಲ್ಲಿ ತೆರಳಿದ್ದಾರೆ. ಈ ಸಂದರ್ಭದಲ್ಲಿ ನಡೆದ ಅವಘಡದಲ್ಲಿ ಭಾರ ತಾಳಲಾರದೆ ದೋಣಿ ನೀರಿನಲ್ಲಿ ಮಗುಚಿದೆ. ಪರಿಣಾಮ ನೀರಿನಲ್ಲಿ ಕೊಚ್ಚಿಹೋಗಿ 11 ಜನ ಮೃತಪಟ್ಟಿದ್ದರೆ, 4 ಜನ ನಾಪತ್ತೆಯಾಗಿದ್ದಾರೆ.

MAshok Kumar | news18-kannada
Updated:September 13, 2019, 9:20 AM IST
ಭೋಪಾಲ್​ನಲ್ಲಿ ಗಣಪತಿ ವಸರ್ಜನೆ ವೇಳೆ ದೋಣಿ ಮಗುಚಿ 11 ಸಾವು, 4 ಜನ ನಾಪತ್ತೆ
ಮೃತ ದೇಹಗಳಿಗಾಗಿ ಹುಡುಕಾಟ ನಡೆಸುತ್ತಿರುವ ಎನ್​ಡಿಆರ್​ಎಫ್​ ತಂಡ.
  • Share this:
ಭೋಪಾಲ್ (ಮಧ್ಯಪ್ರದೇಶ); ಗಣೇಶ ಮೂರ್ತಿ ವಿಸರ್ಜನೆ ವೇಳೆ ದೋಣಿ ಮಗುಚಿ 11 ಜನ ಮೃತಪಟ್ಟು 4 ಜನ ಕಣ್ಮರೆಯಾಗಿರುವ ಘಟನೆ ಗುರುವಾರ ಸಂಜೆ ಭೋಪಾಲ್​ನ ಕಟ್ಲಾಪುರ್ ನಲ್ಲಿ ನಡೆದಿದೆ.

ನಿನ್ನೆ ಸಂಜೆ ವೇಳೆ ಗಣಪತಿ ವಿಸರ್ಜನೆಗೆಂದು ಸುಮಾರು 18 ಜನ ದೋಣಿಯಲ್ಲಿ ತೆರಳಿದ್ದಾರೆ. ಈ ಸಂದರ್ಭದಲ್ಲಿ ನಡೆದ ಅವಘಡದಲ್ಲಿ ಭಾರ ತಾಳಲಾರದೆ ದೋಣಿ ನೀರಿನಲ್ಲಿ ಮಗುಚಿದೆ. ಪರಿಣಾಮ ನೀರಿನಲ್ಲಿ ಕೊಚ್ಚಿಹೋಗಿ 11 ಜನ ಮೃತಪಟ್ಟಿದ್ದರೆ, 4 ಜನ ನಾಪತ್ತೆಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದಾರೆ.

ನಿನ್ನೆ ಸಂಜೆಯಿಂದಲೇ ಎನ್​ಡಿಆರ್​ಎಫ್ ತಂಡ ಮೃತ ದೇಹಗಳಿಗಾಗಿ ಹುಡುಕಾಟ ಆರಂಭಿಸಿದ್ದು, ಶುಕ್ರವಾರ ಮುಂಜಾನೆಯ ಹೊತ್ತಿಗೆ ಎಲ್ಲಾ ಮೃತದೇಹಗಳನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೆ, ನಾಪತ್ತೆಯಾಗಿರುವ 4 ಜನರಿಗಾಗಿ ಇನ್ನೂ ಹುಡುಕಾಟ ನಡೆಯುತ್ತಿದೆ.

ಇದೊಂದು ದುರದೃಷ್ಟಕರ ಘಟನೆ ಎಂದು ವಿಷಾಧ ವ್ಯಕ್ತಪಡಿಸಿರುವ ಮಧ್ಯಪ್ರದೇಶದ ಕಾನೂನು ಸಚಿವ ಪಿ.ಸಿ. ಶರ್ಮ ಮೃತ ವ್ಯಕ್ತಿಗಳ ಕುಟುಂಬಗಳಿಗೆ 4 ಲಕ್ಷ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ಈ ಅಪಘಾತದ ಹಿಂದಿನ ನೈಜ ಕಾರಣವನ್ನು ಶೀಘ್ರದಲ್ಲಿ ಕಂಡುಹಿಡಿಯಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಸಾರ್ವಜನಿಕರ ಗಮನಕ್ಕೆ!; ಮಿತಿಮೀರಿದ ಸೈಬರ್ ಕ್ರೈಂ ಹಾವಳಿ, 8 ತಿಂಗಳಲ್ಲಿ 7,700 ಪ್ರಕರಣ; ಅಪರಿಚಿತ ಕರೆಗಳ ಬಗ್ಗೆ ಇರಲಿ ಎಚ್ಚರ

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading