ಬರೋಬ್ಬರಿ 100 ವರ್ಷಗಳ(Century) ಹಿಂದೆ ವಾರಣಾಸಿಯಿಂದ(Varanasi) ಕದ್ದು ಕೆನಡಾಗೆ(Kenada) ಕೊಂಡೊಯ್ಯಲಾಗಿದ್ದ ಅನ್ನಪೂರ್ಣ(Annapoorna) ದೇವಿಯ(Goddess) ವಿಗ್ರಹವನ್ನು(Idol) ಉತ್ತರ ಪ್ರದೇಶ ಸರ್ಕಾರ(Uttar Pradesh Government) ವಾಪಸ್ ಪಡೆದುಕೊಂಡಿತ್ತು. ಅಲ್ಲದೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅವರು ವಾರಣಾಶಿಯ ಕಾಶಿ ವಿಶ್ವನಾಥನ ದೇಗುಲದಲ್ಲಿ ಸಕಲ ಸಂಪ್ರದಾಯದಂತೆ ಪ್ರತಿಮೆಯನ್ನು ಪ್ರತಿಷ್ಠಾಪನೆ ಕೂಡ ನೆರವೇರಿಸಿದರು.. ಈಗ ಮತ್ತೆ ಉತ್ತರಪ್ರದೇಶದಿಂದ ಕಳುವಾಗಿ ಇಂಗ್ಲೆಂಡ್ ಸೇರಿದ್ದ ಯೋಗಿನಿವಿಗ್ರಹ ಸಂಕ್ರಾಂತಿ ಹಬ್ಬದಂದು ಮರಳಿ ಭಾರತ ಸೇರಿದೆ.
ಇಂಗ್ಲೆಂಡ್ ನ ಖಾಸಗಿ ನಿವಾಸದಲ್ಲಿ ಸಿಕ್ಕಿದ್ದ ವಿಗ್ರಹ
ಉತ್ತರಪ್ರದೇಶದ ಬಂದಾ ಜಿಲ್ಲೆಯ ಲೋಖಾರಿ ದೇವಸ್ಥಾನದಲ್ಲಿದ್ದ ಮರಳುಗಲ್ಲಿನಲ್ಲಿ ಸುಂದರವಾಗಿ ಕೆತ್ತಲಾದ ಶಿಲ್ಪ ಇತ್ತೀಚಿಗೆ ಇಂಗ್ಲೆಂಡ್ನ ಖಾಸಗಿ ನಿವಾಸವೊಂದರ ಉದ್ಯಾನವನದಲ್ಲಿ ಸಿಕ್ಕಿತ್ತು. ಉತ್ತರ ಪ್ರದೇಶದ ಹಳ್ಳಿಯೊಂದರಿಂದ 10ನೇ ಶತಮಾನದ ವಿಗ್ರಹವನ್ನು 40 ವರ್ಷಗಳ ಹಿಂದೆ ಭಾರತದಿಂದ ಇಂಗ್ಲೆಂಡ್ಗೆ ಕದ್ದೊಯ್ಯಲಾಗಿತ್ತು. ಈ ವಿಗ್ರಹ ಇಂಗ್ಲೆಂಡ್ನ ಖಾಸಗಿ ನಿವಾಸವೊಂದರ ಉದ್ಯಾನವನದಲ್ಲಿ ಸಿಕ್ಕಿದ ಬಳಿಕ ಇಂಗ್ಲೆಂಡ್ ನ ಭಾರತೀಯ ರಾಯಭಾರ ಕಚೇರಿ ಭಾರತಕ್ಕೆ ಯೋಗಿನಿ ವಿಗ್ರಹ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿತ್ತು..
ಮೇಕೆ ಮುಖವಿರುವ ಯೋಗಿನಿ ವಿಗ್ರಹವನ್ನ ಭಾರತಕ್ಕೆ ತರಲು ಲಂಡನ್ನಲ್ಲಿರುವ ಭಾರತದ ಹೈಕಮಿಷನ್ ಕಚೇರಿ ನಾನಾ ರೀತಿಯ ಪ್ರಯತ್ನಗಳನ್ನು ಮಾಡುವಾಗ ಭಾರತಕ್ಕೆ ಯುಕೆಯ ಕ್ರಿಸ್ ಮರಿನೆಲ್ಲೋ ಆಫ್ ಆರ್ಟ್ ರಿಕವರಿ ಇಂಟರ್ನ್ಯಾಷನಲ್ ಎಂಬ ಸಂಸ್ಥೆಯು ಭಾರತಕ್ಕೆ ಹಸ್ತಾಂತರಿಸಲು ಎಲ್ಲ ರೀತಿಯ ಸಹಾಯ ಮಾಡಿತ್ತು.ಅದ್ರಂತೆ ಇಂಗ್ಲೆಂಡ್ನ ಭಾರತೀಯ ಹೈಕಮಿಷನರ್ ಗಾಯತ್ರಿ ಇಸ್ಸಾರ್ ಕುಮಾರ್ಗೆ ಯೋಗಿನಿ ವಿಗ್ರಹವನ್ನು ಹಸ್ತಾಂತರ ಮಾಡಲಾಗಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ವಿಗ್ರಹ ರವಾನೆ
ವಿಗ್ರಹ ಸ್ವೀಕಾರ ಮಾಡಿದ ಗಾಯತ್ರಿ ಇಸ್ಸಾರ್ ಕುಮಾರ್ ಮಾತನಾಡಿ, ಮಕರ ಸಂಕ್ರಾಂತಿಯಂದೇ ಈ ಯೋಗಿನಿಯ ವಿಗ್ರಹವನ್ನು ಸ್ವೀಕಾರಮಾಡುತ್ತಿರುವುದು ತುಂಬ ಸಂತೋಷ ತಂದ ವಿಚಾರ ಎಂದು ಹೇಳಿದ್ದಾರೆ. ಈ ವಿಗ್ರಹ ಇರುವುದು 2021ರ ನವೆಂಬರ್ನಲ್ಲಿಯೇ ಭಾರತೀಯ ಹೈಕಮಿಷನ್ಗೆ ತಿಳಿಯಿತು. ಆಗಿನಿಂದಲೇ ಹಸ್ತಾಂತರ ಪ್ರಕ್ರಿಯೆಯಗಳು ಶುರುವಾಗಿದ್ದವು. ಇದೀಗ ನಾವು ಪುರಾತತ್ವ ಇಲಾಖೆಗೆ ವಿಗ್ರಹ ಕಳಿಸುವುದಷ್ಟೇ ಬಾಕಿ ಇದೆ. ಈ ವಿಗ್ರಹವನ್ನು ನವದೆಹಲಿಯಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ರವಾನಿಸಲಾಗುತ್ತದೆ.
ಯೋಗಿನಿ ತಂತ್ರ ಪೂಜಾ ಆರಾಧನೆಗೆ ಸಂಬಂಧಿಸಿದ ಶಕ್ತಿಶಾಲಿ ಸ್ತ್ರೀ ದೇವತೆಗಳ ಪಂಗಡವಾಗಿದೆ. 64 ಯೋಗಿನಿಯರ ಈ ದೇವತೆಗಳನ್ನು ಗುಂಪಾಗಿ ಆರಾಧಿಸಲಾಗುತ್ತದೆ ಮತ್ತು ಅನಂತ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ.
1980ರ ದಶಕದಲ್ಲಿ ಬಂದಾ ಜಿಲ್ಲೆಯ ಲೋಖಾರಿ ಗ್ರಾಮದ ದೇವಸ್ಥಾನದಿಂದ ಈ ಅಪರೂಪದ ವಿಗ್ರಹ ಕಾಣೆಯಾಗಿತ್ತು. 2021 ಅಕ್ಟೋಬರ್ನಲ್ಲಿ ವಿಗ್ರಹ ಪತ್ತೆಯಾದ ಕುರಿತು ಮಾಹಿತಿ ಲಭಿಸಿತ್ತು.
ವಿಶ್ವದಾದ್ಯಂತ ಕದ್ದ, ಲೂಟಿ ಅಥವಾ ಕಾಣೆಯಾದ ಕಲಾಕೃತಿಗಳನ್ನು ಮರಳಿ ಆಯಾ ದೇಶಕ್ಕೆ ಅಥವಾ ವ್ಯಕ್ತಿಗೆ ಒಪ್ಪಿಸುವ ಕಾರ್ಯ ನಡೆಸುವ ಆರ್ಟ್ ರಿಕವರಿ ಇಂಟರ್ ನ್ಯಾಷನಲ್ ಸಂಸ್ಥೆಯ ಸಂಸ್ಥಾಪಕ ಹಾಗೂ ವಕೀಲರೂ ಆಗಿರುವ ಕ್ರಿಸ್ಟೋಫರ್ ಮರಿನೆಲ್ಲೋ ಅವರಿಗೆ 2021ರ ಅಕ್ಟೋಬರ್ ನಲ್ಲಿ ವಿಧವೆಯೊಬ್ಬರು ಕರೆಮಾಡಿದ್ದರು. ಯೋಗಿನಿಯ ವಿಗ್ರಹವನ್ನೂ ಒಳಗೊಂಡಂತೆ ತಮ್ಮ ಮನೆಯಲ್ಲಿರುವ ಇತರ ವಸ್ತುಗಳನ್ನು ಮಾರಾಟ ಮಾಡಲು ಸಹಾಯ ಕೇಳಿದ್ದರು. ಆಗ ಈ ಅಪರೂಪದ ಪ್ರತಿಮೆಯು ಮರಿನೆಲ್ಲೋ ಅವರ ಗಮನಸೆಳೆದಿದೆ. ಹೀಗಾಗಿ ಅವರು ಭಾರತೀಯ ರಾಯಭಾರಿ ಕಛೇರಿಗೆ ಇದರ ಬಗ್ಗೆ ಮಾಹಿತಿ ನೀಡಿದ್ದರು. ಕೂಲಂಕುಶ ಪರಿಶೀಲನೆಯ ಬಳಿಕ ಯೋಗಿನಿ ವಿಗ್ರಹ ಭಾರತಕ್ಕೆ ಸಂಬಂಧಿಸಿದ್ದು ಎಂದು ತಿಳಿದು ಬಂದ ಬಳಿಕ ಮಕರ ಸಂಕ್ರಾಂತಿಯ ಶುಭದಿನದಂದು ಭಾರತಕ್ಕೆ ವಿಗ್ರಹವನ್ನು ಹಸ್ತಾಂತರ ಮಾಡಲಾಗಿದೆ.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ