ಪಶ್ಚಿಮ ಬಂಗಾಳದಲ್ಲೂ ಆಪರೇಷನ್​ ಕಮಲ?; ಬಿಜೆಪಿ ಸೇರುತ್ತಾರಾ ಕಾಂಗ್ರೆಸ್, ಟಿಎಂಸಿಯ 107 ಶಾಸಕರು?

ಲೋಕಸಭಾ ಚುನಾವಣೆ ಬೆನ್ನಲ್ಲೇ ಟಿಎಂಸಿಯ 15 ಕೌಂನ್ಸಿಲರ್​ಗಳು ಬಿಜೆಪಿ ಸೇರಿದ್ದರು. ಈಗ ಬೃಹತ್​ ಸಂಖ್ಯೆಯಲ್ಲಿ ಶಾಸಕರು ಬಿಜೆಪಿ ಸೇರುವ ವಿಚಾರ ನಿಜವಾದರೆ ಟಿಎಂಸಿ ಹಾಗೂ ಕಾಂಗ್ರೆಸ್​ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಂತಾಗುತ್ತದೆ.

news18
Updated:July 14, 2019, 7:55 AM IST
ಪಶ್ಚಿಮ ಬಂಗಾಳದಲ್ಲೂ ಆಪರೇಷನ್​ ಕಮಲ?; ಬಿಜೆಪಿ ಸೇರುತ್ತಾರಾ ಕಾಂಗ್ರೆಸ್, ಟಿಎಂಸಿಯ 107 ಶಾಸಕರು?
ಮಮತಾ ಬ್ಯಾನರ್ಜಿ
news18
Updated: July 14, 2019, 7:55 AM IST
ಕೋಲ್ಕತ್ತಾ (ಜು.14): ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್​, ಕಾಂಗ್ರೆಸ್​ ಹಾಗೂ ಕಮ್ಯುನಿಸ್ಟ್​​ ಪಾರ್ಟಿ ಆಫ್​ ಇಂಡಿಯಾದ ಒಟ್ಟೂ 107 ಶಾಸಕರು ಶೀಘ್ರವೇ ಕಮಲ ಪಡೆ ಸೇರಲಿದ್ದಾರೆ ಎಂದು ಬಿಜೆಪಿ ನಾಯಕ ಮುಕುಲ್​ ರಾಯ್​ ಹೇಳಿದ್ದಾರೆ. ಈ ವಿಚಾರ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಎಎನ್​ಐ ಜೊತೆ ಮಾತನಾಡಿದ ಮುಕುಲ್​ ರಾಯ್​, “ಟಿಎಂಸಿ, ಕಾಂಗ್ರೆಸ್​ ಹಾಗೂ ಸಿಪಿಎಂನ 107 ಶಾಸಕರು ಸಂಪರ್ಕದಲ್ಲಿದ್ದಾರೆ. ಅವರು ಶೀಘ್ರವೇ ಬಿಜೆಪಿ ಸೇರಲಿದ್ದಾರೆ,” ಎಂದಿದ್ದಾರೆ. ಆದರೆ, ಯಾವ ಯಾವ ಶಾಸಕರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನುವ ಬಗ್ಗೆ ಅವರು ಮಾಹಿತಿ ನೀಡಿಲ್ಲ.

ಲೋಕಸಭಾ ಚುನಾವಣೆ ಫಲಿತಾಂಶ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಮುಳುವಾಗಿ ಪರಿಣಮಿಸಿತ್ತು. 42 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 18 ಹಾಗೂ ಟಿಎಂಸಿ 22 ಸ್ಥಾನಗಳನ್ನು ಗಳಿಸಿತ್ತು. ಪಶ್ಚಿಮ ಬಂಗಾಳದಲ್ಲಿ ನಾವು ಹೆಚ್ಚು ಸ್ಥಾನಗಳನ್ನು ಗಳಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಭವಿಷ್ಯ ನುಡಿದಿದ್ದರು. ಅದೇ ರೀತಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗಳಿಸಿತ್ತು. ಈ ಮೂಲಕ ಪಶ್ಚಿಮ ಬಂಗಾಳದಲ್ಲೂ ತನ್ನ ಸ್ಥಾನ ಬಲಪಡಿಸಿಕೊಂಡಿತ್ತು.

ಲೋಕಸಭಾ ಚುನಾವಣೆ ಬೆನ್ನಲ್ಲೇ ಟಿಎಂಸಿಯ 15 ಕೌಂನ್ಸಿಲರ್​ಗಳು ಬಿಜೆಪಿ ಸೇರಿದ್ದರು. ಈಗ 107 ಶಾಸಕರು ಬಿಜೆಪಿ ಸೇರುವ ವಿಚಾರ ನಿಜವಾದರೆ ಟಿಎಂಸಿ ಹಾಗೂ ಕಾಂಗ್ರೆಸ್​ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಂತಾಗುತ್ತದೆ.

First published:July 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...