Viral News : 104ರಲ್ಲೂ ಅದೇನು ಉತ್ಸಾಹ: ಕೇರಳದ ಸಾಕ್ಷರತಾ ಪರೀಕ್ಷೆ ಪಾಸಾದ ಶತಾಯಿಷಿ ಕೊಟ್ಟಿಯಮ್ಮ!

Viral News : ಕಳೆದ ವಾರ ಕೇರಳ ಸರ್ಕಾರ ನಡೆಸಿದ ಪ್ರಾಥಮಿಕ ಸಾಕ್ಷರತೆ ಪರೀಕ್ಷೆ(Primary Literacy Test)ಯಲ್ಲಿ 104 ವರ್ಷದ ವೃದ್ಧೆಯೊಬ್ಬರು ಉತ್ತೀರ್ಣರಾಗಿದ್ದಾರೆ. 104 ವರ್ಷದ ಕುಟ್ಟಿಯಮ್ಮ(Kuttiyamma) ಈ ಸಾಧನೆ ಮಾಡಿದ್ದಾರೆ.

104 ವಯಸ್ಸಿನ ಕುಟ್ಟಿಯಮ್ಮ

104 ವಯಸ್ಸಿನ ಕುಟ್ಟಿಯಮ್ಮ

  • Share this:
ಏನಾದರೂ ಸಾಧಿಸಬೇಕೆಂಬ ಹಠವೊಂದು ಇದ್ದರೆ ನಮನ್ನ ತಡೆಯುವ ಶಕ್ತಿ ಯಾವುದಕ್ಕೂ ಇರುವುದಿಲ್ಲ. ವಯಸ್ಸಿ(Age)ನ ಮೀತಿ ಇರುವುದಿಲ್ಲ. ಇದಕ್ಕೆ ತಕ್ಕ ಉದಾಹರಣೆ ಇಲ್ಲಿದೆ.  ಕಳೆದ ವಾರ ಕೇರಳ ಸರ್ಕಾರ ನಡೆಸಿದ ಪ್ರಾಥಮಿಕ ಸಾಕ್ಷರತೆ ಪರೀಕ್ಷೆ(Primary Literacy Test)ಯಲ್ಲಿ 104 ವರ್ಷದ ವೃದ್ಧೆಯೊಬ್ಬರು ಉತ್ತೀರ್ಣರಾಗಿದ್ದಾರೆ.  104 ವರ್ಷದ ಕುಟ್ಟಿಯಮ್ಮ(Kuttiyamma) ಈ ಸಾಧನೆ ಮಾಡಿದ್ದಾರೆ. ಅವರಿಗೆ ಅಭಿನಂದನೆ ಮತ್ತು ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ. ಕೇರಳ ರಾಜ್ಯ ಸಾಕ್ಷರತಾ ಮಿಷನ್‌ನ (Kerala State Literacy Mission) ವಿದ್ಯಾರ್ಥಿಗಳ ಪ್ರಾಥಮಿಕ ಜ್ಞಾನವನ್ನು ಪರೀಕ್ಷಿಸುವ ಯೋಜನೆಯಾದ ‘ಮಿಗವುಲ್ಸವಂ’(Mikavulsavam) ಅಂಗವಾಗಿ ನಡೆಸಿದ ಪರೀಕ್ಷೆಯಲ್ಲಿ ಕೋಟ್ಟಯಂ ಜಿಲ್ಲೆಯ ಆಯರ್ಕುನ್ನಂ(Ayurkunnam) ಪಂಚಾಯತ್‌ನ ಕುಟ್ಟಿಯಮ್ಮ 100 ಅಂಕದಲ್ಲಿ 89 ಅಂಕಗಳನ್ನು ಗಳಿಸಿದ್ದಾರೆ. ಕುಟ್ಟಿಯಮ್ಮನಂತೆಯೇ ಪರೀಕ್ಷೆಯಲ್ಲಿ ತೇರ್ಗಡೆಯಾದವರು ನಾಲ್ಕನೇ ತರಗತಿಯ ಸಮಾನ ಸಾಕ್ಷರತಾ ಪರೀಕ್ಷೆಗೆ ಕುಳಿತುಕೊಳ್ಳಲು ಅರ್ಹರಾಗಿರುತ್ತಾರೆ.

‘ವಯಸ್ಸು ಕೇವಲ ಒಂದು ಸಂಖ್ಯೆ’

ರಾಜ್ಯ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಈ ಶತಾಯುಷಿಯ ದೃಢತೆ ಮತ್ತು ಸಂಕಲ್ಪಕ್ಕಾಗಿ ಅಭಿನಂದಿಸಿದ್ದಾರೆ. ಅಕ್ಷರ, ಪದ ಮತ್ತು ಜ್ಞಾನದ ಜಗತ್ತಿಗೆ ಪ್ರವೇಶಿಸಲು ವ್ಯಕ್ತಿಯ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದನ್ನು ಕುಟ್ಟಿಯಮ್ಮ ತೋರಿಸಿಕೊಟ್ಟರು. ಗುರಿಗಳನ್ನು ಸಾಧಿಸುವ ಮನಸ್ಸು ಇದ್ದರೆ, ವಯಸ್ಸು ಕೇವಲ ಒಂದು ಸಂಖ್ಯೆ ಎಂದು  ಸಚಿವರು ಹೇಳಿದ್ದಾರೆ. ನವೆಂಬರ್ 10 ರಂದು ಫಲಿತಾಂಶ ಪ್ರಕಟವಾದ ನಂತರ ಆಯರ್ಕುನ್ನಂ ಪಂಚಾಯತ್ ಕೌನ್ಸಿಲ್ ಸದಸ್ಯರು ಕುಟ್ಟಿಯಮ್ಮ ಅವರ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಸನ್ಮಾನಿಸಿದರು. ಆಕೆಯ ಸಾಧನೆಗೆ ಅಭಿನಂದಿಸಲು ಸಿಪಿಐ(ಎಂ) ಮತ್ತು ಬಿಜೆಪಿಯ ಜಿಲ್ಲಾ ಮುಖಂಡರು ಕೂಡ ಅವರ ಮನೆಗೆ ಭೇಟಿ ನೀಡಿದ್ದಾರೆ.ಇದನ್ನು ಓದಿ: ಮಗಳಿಗೆ ಮತ್ತು ಬೆಕ್ಕಿಗೆ ಒಂದೇ ಬಟ್ಟಲಲ್ಲಿ ಊಟ! ಇದೆಂಥಾ ಸಾಕುಪ್ರಾಣಿ ಪ್ರೀತಿ!

ಪರೀಕ್ಷೆಗೆ ಎರಡು ತಿಂಗಳ ಮೊದಲೇ ಪಾಠ!

ಪರೀಕ್ಷೆಗೆ ಎರಡು ತಿಂಗಳ ಮೊದಲು ಕುಟ್ಟಿಯಮ್ಮ ಮತ್ತು ಇತರ ಆರು ವಿದ್ಯಾರ್ಥಿಗಳಿಗೆ ಪಾಠ ಮಾಡಿರುವುದಾಗಿ ರೆಹನಾ ಹೇಳಿದ್ದಾರೆ. ಕುಟ್ಟಿಯಮ್ಮ ತುಂಬಾ ಕ್ರಿಯಾಶೀಲಳಾಗಿದ್ದು, ಯಾರ ಸಹಾಯವೂ ಇಲ್ಲದೇ ತನ್ನಷ್ಟಕ್ಕೆ ತಾನೇ ಮನೆ ಸುತ್ತಾಡಬಲ್ಲವರಾಗಿದ್ದರು. “ಆದಾಗ್ಯೂ, ಅವರಿಗೆ ಕಿವಿ ಸ್ವಲ್ಪ ಕಡಿಮೆ ಕೇಳಿಸುತ್ತಿದ್ದು ಮತ್ತು ರಾತ್ರಿಯಲ್ಲಿ ಅವರ ದೃಷ್ಟಿ ದುರ್ಬಲವಾಗಿರುತ್ತದೆ” ಎಂದು ಕುಟ್ಟಿಯಮ್ಮಗೆ ತರಬೇತಿ ನೀಡಿದ ಸಾಕ್ಷರತಾ ಪ್ರೇರಕ ರೆಹನಾ ಅವರು ಹೇಳಿದರು.


ಗಣಿತ ಅಂದರೆ ಕೊಟ್ಟಿಯಮ್ಮಗೆ ಬಲುಪ್ರೀತಿ!

ಗಣಿತ ಅವರ ನೆಚ್ಚಿನ ವಿಷಯ. ಯುವತಿಯಾಗಿದ್ದಾಗ ಅವರು ತರಕಾರಿಗಳನ್ನು ಮಾರಾಟ ಮಾಡುವ ಅಂಗಡಿಯನ್ನು ನಿರ್ವಹಿಸುತ್ತಿದ್ದರು, ಆದ್ದರಿಂದ ಅವರು ಸಂಖ್ಯೆಗಳು ಮತ್ತು ಲೆಕ್ಕಾಚಾರದಲ್ಲಿ ಸಾಕಷ್ಟು ಪರಿಣಿತರಾಗಿದ್ದರು. ಗಣಿತದಲ್ಲಿ ಪೂರ್ಣ ಅಂಕ ಪಡೆದಿದ್ದಳು. ಯುವತಿಯಾಗಿದ್ದಾಗ ತರಕಾರಿ ಅಂಗಡಿಯಲ್ಲಿ ಅವರು ಸಖತ್ ಚೂಟಿಯಾಗಿ ಕೆಲಸ ಮಾಡುತ್ತಿದ್ದರು. ಈ ರೀತಿ ಪಾಸಾಗಿ ಹೆಚ್ಚಿನ ಅಂಕ ಗಳಿಸುತ್ತೇನೆ ಅಂತ ಕುಟ್ಟಿಯಮ್ಮಅಂದುಕೊಂಡಿರಲಿಲ್ಲವಂತೆ.

ಇದನ್ನು ಓದಿ : ವಧು-ವರನ ಗ್ರ್ಯಾಂಡ್ ಎಂಟ್ರಿ ತಂದ ಆಪತ್ತು

ಕಟ್ಟುನಿಟ್ಟಾದ ಆಹಾರ ಪದ್ಧತಿ

ಕೊಟ್ಟಿಯಮ್ಮ ಅವರು ಕಟ್ಟುನಿಟ್ಟಾದ ಆಹಾರ ಪದ್ಧತಿಯನ್ನು ಹೊಂದಿದ್ದಾರೆ. ಅವರು ಉಪಹಾರ ಮತ್ತು ರಾತ್ರಿಯ ಊಟವನ್ನು ಮಾತ್ರ ತಿನ್ನುತ್ತಾರೆ. ಅದೂ ಕೂಡ ಕಡಿಮೆ ಪ್ರಮಾಣದಲ್ಲಿ. ಹೀಗಾಗಿ ಈ ವಯಸ್ಸಿನಲ್ಲೂ ತುಂಬಾ ಲವಲವಿಕೆಯಿಂದ ಇರುತ್ತಾರೆ. ಬೆಳಗ್ಗೆ ಸಮಯದಲ್ಲಿ ಎಂದಿಗೂ ಈ ಕೊಟ್ಟಿಯಮ್ಮ ನಿದ್ದೆ ಮಾಡುವುದಿಲ್ಲವಂತೆ. ಏನಾದರೂ ಒಂದು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇನ್ನೊಂದು ವಿಶೇಷ ಅಂದರೆ 104 ವರ್ಷದ ಕೊಟ್ಟಿಯಮ್ಮಗೆ ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳು ಇಲ್ಲವಂತೆ . ಸದಾ ನಗು ಮುಖದಿಂದ ಎಲ್ಲರೊಟ್ಟಿಗೂ ಕೊಟ್ಟಿಯಮ್ಮ ಸಂತೋಷವಾಗಿರುತ್ತಾರಂತೆ. ಈ ವಯಸ್ಸಿನಲ್ಲೂ ಈ ಸಾಧನೆ ಮಾಡಿ, ಅದೆಷ್ಟೋ ಯುವಕ-ಯುವತಿಯರಿಗೆ ಕೊಟ್ಟಿಯಮ್ಮ ಸ್ಫೂರ್ತಿಯಾಗಿದ್ದಾರೆ.

Published by:Vasudeva M
First published: