Viral Story: ಬದುಕಿರುವಾಗಲೇ ಸತ್ತಿದ್ದಾರೆ ಎಂದು ಸರ್ಕಾರಿ ದಾಖಲೆಯಲ್ಲಿ ಉಲ್ಲೇಖ! ಪಿಂಚಣಿಗಾಗಿ ಹೋರಾಡುತ್ತಿರುವ 102 ವರ್ಷದ ಅಜ್ಜ

102 ವರ್ಷದ ಅಜ್ಜ ಸತ್ತಿದಾನೆಂದು ಸರ್ಕಾರಿ ದಾಖಲೆಯಲ್ಲಿ ಉಲ್ಲೇಖವಾಗಿದೆ. ರೋಹ್ಟಕ್​​ ಜಿಲ್ಲೆಯ ಗಾಂಧ್ರ ಗ್ರಾಮದ ದುಲಿ ಚಂದ್​ ಅವರಿಗೆ 102 ವರ್ಷ. ಸರ್ಕಾರಿ ದಾಖಲೆಯಲ್ಲಿ ಅಂದರೆ ಪಿಂಚಣಿ ಬರುವ ದಾಖಲೆಯಲ್ಲಿ ಅವರನ್ನು ಸತ್ತಿದ್ದಾರೆ ಎಂದು ನಮೂದಿಸಲಾಗಿದೆ.

ದುಲಿ ಚಂದ್

ದುಲಿ ಚಂದ್

 • Share this:
  ಸತ್ತವರು ಬದುಕಿ ಬರಲು ಸಾಧ್ಯವೇ?. ಒಂದು ವೇಳೆ ಬದುಕಿ ಬಂದರೆ ಪವಾಡವೆಂದೇ ಹೇಳಬಹುದು. ಆದರೆ ಬದುಕಿದವರನ್ನು ಸಾಯಿಸಿದರೆ ಹೇಗೆ?. ಇಲ್ಲಿ ಆದದ್ದು ಅದೇ. ಜೀವಂತ ಇರುವ ಅಜ್ಜನನ್ನು (Grand Father) ಸರ್ಕಾರಿ ದಾಖಲೆಯಲ್ಲಿ ಸತ್ತಿದ್ದಾರೆ (Death) ಎಂದು ಉಲ್ಲೇಖಿಸಿದ್ದಾರೆ. ಅಷ್ಟು ಮಾತ್ರವಲ್ಲ, ಇದರಿಂದಾಗಿ ಅವರ ಪಿಂಚಣಿಯೂ ಸ್ಥಗಿತವಾಗಿದೆ. ಇದಕ್ಕಾಗಿ ಹೋರಾಡುತ್ತಿದ್ದಾರೆ. ನಾನೆಲ್ಲಿ ಸತ್ತಿದ್ದೇನೆ, ಜೀವಂತವಾಗಿದ್ದೇನಲ್ಲ ಎನ್ನುವ ಮೂಲಕ ನನ್ನ ಪಿಂಚಣಿ ಮರಳಿಸಿಕೊಡಿ ಎಂದು ಅಜ್ಜ ಸರ್ಕಾರಕ್ಕೂ (Government) ಮನವಿ ಮಾಡಿದ್ದಾರೆ. ಅಂದಹಾಗೆಯೇ ಈ ಅಜ್ಜನ ವಯಸ್ಸು (Age) ಕೇಳಿದ್ರೆ ಅಚ್ಚರಿಯಾಗಬಹುದು.

  102 ವರ್ಷದ ಅಜ್ಜ ಸತ್ತಿದಾನೆಂದು ಸರ್ಕಾರಿ ದಾಖಲೆಯಲ್ಲಿ ಉಲ್ಲೇಖವಾಗಿದೆ. ರೋಹ್ಟಕ್​​ ಜಿಲ್ಲೆಯ ಗಾಂಧ್ರ ಗ್ರಾಮದ ದುಲಿ ಚಂದ್​ ಅವರಿಗೆ 102 ವರ್ಷ. ಸರ್ಕಾರಿ ದಾಖಲೆಯಲ್ಲಿ ಅಂದರೆ ಪಿಂಚಣಿ ಬರುವ ದಾಖಲೆಯಲ್ಲಿ ಅವರನ್ನು ಸತ್ತಿದ್ದಾರೆ ಎಂದು ನಮೂದಿಸಲಾಗಿದೆ.

  ಬುಧವಾರದಂದು ರೋಹ್ಟಕ್​ನ ಮಾಧ್ಯಮ ಪ್ರತಿನಿಧಿಗಳ ಮುಂದೆ ದುಲಿ ಚಂದ್ ಕಾಣಿಸಿಕೊಂಡಿದ್ದಾರೆ. ನಾನು ಜೀವಂತವಾಗಿ ಇದ್ದೇನೆ ಎಂದು ಹೇಳಿದ್ದಾರೆ. ನನ್ನ ಪಿಂಚಣಿಯನ್ನು ಮರಳಿ ಪಡೆಯಲು ನಾನು ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

  ದುಲಿ ಚಂದ್ ಈ ಬಗ್ಗೆ ಮಾತನಾಡಿ, ನಾನು ನನ್ನ ವೃದ್ಧಾಪ್ಯದ ಪಿಂಚಣಿಯನ್ನು ಮಾರ್ಚ್​ನಲ್ಲಿ ಪಡೆದುಕೊಂಡೆ. ಆ ಬಳಿಕ ಸರ್ಕಾರಿ ದಾಖಲೆಯಲ್ಲಿ ನಾನು ಸತ್ತಿದ್ದೇನೆ ಎಂದು ತೋರಿಸಿದ್ದಕ್ಕಾಗಿ ಪಿಂಚಣಿ ನಿಲ್ಲಿಸಿದ್ದಾರೆ. ಅಂದಿನಿಂದ, ನಾನು ಜೀವಂತ ಇದ್ದೇನೆ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಎಲ್ಲವೂ ವ್ಯರ್ಥವಾಯಿತು. ಎಂದು ಹೇಳಿದ್ದಾರೆ.

  ಇದನ್ನೂ ಓದಿ: Video: ನ್ಯೂಸ್​​ ಓದುವಾಗ ಪಾರ್ಶ್ವವಾಯುವಿಗೆ ಒಳಗಾದ ಆ್ಯಂಕರ್​​! ವಿಡಿಯೋ ಇಲ್ಲಿದೆ ನೋಡಿ

  ದುಲಿ ಚಂದ್​ ಪಿಂಚಣಿಗಾಗಿ ಸಾಕಷ್ಟು ಹೋರಾಟ ನಡೆದಿದ್ದಾರೆ. ಅವರ ಮೊಮ್ಮಗನ ಸಹಾಯ ಪಡೆದುಕೊಂಡು ಹರಿಯಾಣದ ಮುಖ್ಯಮಂತ್ರಿಗಳ ಕುಂದುಕೊರತೆಗಳ ಪರಿಹಾರ ಮತ್ತು ನಿಗಾ ವ್ಯವಸ್ಥೆಗೆ ಒಂದು ತಿಂಗಳ ಹಿಂದೆ ದೂರು ಕೂಡ ನೀಡಲಾಗಿತ್ತು. ಆದರೆ ಯಾವುದೇ ಪ್ರಯೋಜವಾಗಲಿಲ್ಲ.

  ಕೊನೆಗೆ ದುಲಿ ಚಂದ್ ಮಾಧ್ಯಮದ ಮುಂದೆ ಬಂದಿದ್ದಾರೆ. ತನ್ನ ಆಧಾರ್​ ಕಾರ್ಡ್, ಪ್ಯಾನ್ ಕಾರ್ಡ್, ರೇಶನ್​ ಕಾರ್ಟ್​ ಮತ್ತು ಬ್ಯಾಂಕ್ ವಿವರ ಸೇರಿದಂತೆ ವೋಟರ್​ ಐಡಿ ಎಲ್ಲವನ್ನೂ ಮಾಧ್ಯಮದ ಮುಂದೆ ತೋರಿಸಿದ್ದಾರೆ.

  ಇದನ್ನೂ ಓದಿ: Viral Video: 10 ವರ್ಷದ ಬಾಲಕನ ಮುಖಕ್ಕೆ ನಾಯಿ ಕಚ್ಚಿದ್ದಕ್ಕೆ 150 ಹೊಲಿಗೆ ಹಾಕುವಂತಾಯ್ತು!

  102 ವರ್ಷದಲ್ಲಿ ಅಜ್ಜ ದುಲಿ ಚಂದ್​ ಪಿಂಚಣಿಗಾಗಿ ಹೋರಾಡುತ್ತಿದ್ದಾರೆ. ಇವರೊಂದಿಗೆ ಹರ್ಯಾಣ ಘಟಕದ ಮಾಜಿ ಅಧ್ಯಕ್ಷ ಎಎಪಿ ನವೀನ್ ಜೈಹಿಂದ್ ನಿಂತಿದ್ದು, ಅವರ ವೃದ್ಧಾಪ್ಯ ಪಿಂಚಣಿಯನ್ನು ಶೀಘ್ರವಾಗಿ ಮರುಸ್ಥಾಪಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

  ಈ ಬಗ್ಗೆ ಮಾತನಾಡಿದ ಅವರು“ಇಂತಹ ಹಿರಿಯ ನಿವಾಸಿಗಳಿಗೆ ಪಿಂಚಣಿ ನಿಲ್ಲಿಸುವ ಮೂಲಕ ಕಿರುಕುಳ ನೀಡುತ್ತಿರುವುದು ದುರದೃಷ್ಟಕರವಾಗಿದೆ. ಸಿಎಂ ಬಳಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ,'' ಎಂದು ಹೇಳಿದ್ದಾರೆ.

  ಸರ್ಕಾರಿ ದಾಖಲೆಯಲ್ಲಿ ತಪ್ಪಾಗಿ ಉಲ್ಲೇಖವಾಗಿರುವ ಅನೇಕ ಘಟನೆಗಳನ್ನ ಬಗ್ಗೆ ಕೇಳಿರಬಹುದು ನೋಡಿರಬಹದು. ಆದರೆ 102 ವರ್ಷ ಪ್ರಾಯದ ಅಜ್ಜನೂ ಕೂಡ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತನ್ನ ಪಿಂಚಣಿಗಾಗಿ ಹೋರಾಡುತ್ತಿದ್ದಾರೆ. ಡಾಟಾ ನಮೂದಿಸುವ ನೌಕಕರು ಮಾಡುವ ತಪ್ಪಿನಿಂದಾಗಿ ಇಂತಹ ಸಮಸ್ಯೆಗಳು ಎದುರಾಗುತ್ತವೆ. ಮಾತ್ರವಲ್ಲದೆ, ಒಂದು ಬಾರಿ ಈ ರೀತಿಯ ತಪ್ಪು ಕಾಣಿಸಿಕೊಂಡರೆ ಅದಕ್ಕಾಗಿ ಮತ್ತೆ ಕಚೇರಿ ಅಲೆಬೇಕಾಗುತ್ತದೆ. ದುಲಿ ಚಂದ್​ ಜೀವನದಲ್ಲೂ ಇದೇ ಆಗಿದೆ. ತನ್ನ ವೃದ್ಯಾಪ್ಯದಲ್ಲಿ ಪಿಂಚಣಿಗಾಗಿ ಅಲೆಯುತ್ತಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟು ಫಲಿಸದ ಕಾರಣ ನಾನು ಸತ್ತಿಲ್ಲ ಬದುಕಿದ್ದೇನೆ ಎಂದು ಹೇಳಲು ಮಾದ್ಯಮ ಮುಂದೆ ಬಂದಿದ್ದಾರೆ.
  Published by:Harshith AS
  First published: