ಮೊಟ್ಟಮೊದಲ ಬಾರಿಗೆ ಎನ್‌ಡಿಎ ಪರೀಕ್ಷೆ ಬರೆದು ಉತ್ತೀರ್ಣರಾದ 1,002 ಮಹಿಳೆಯರು

NDA Exams: ಸೆಪ್ಟೆಂಬರ್‌ನಲ್ಲಿ, ಸುಪ್ರೀಂ ಕೋರ್ಟ್ ಮಹಿಳೆಯರನ್ನು ಈ ವರ್ಷದಿಂದಲೇ ಎನ್‌ಡಿಎಗೆ ಸೇರಿಸಿಕೊಳ್ಳಲಾಗುವುದು ಮತ್ತು ಕೇಂದ್ರ ಬಯಸಿದಂತೆ ಮುಂದಿನ ವರ್ಷದಿಂದ ಅಲ್ಲ ಎಂದು ತೀರ್ಪು ನೀಡಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತೀಯ ಸೈನ್ಯಕ್ಕೆ (Indian Army) ಅಧಿಕಾರಿಯಾಗಿ ಸೇರಿ ದೇಶ ಸೇವೆ ಮಾಡಬೇಕೆಂದು ಎಷ್ಟೋ ಯುವಕ ಯುವತಿಯರು ರಾಷ್ಟ್ರೀಯ ರಕ್ಷಣಾ ಅಕಾಡೆಮಿ (National Defense Academy) (ಎನ್‌ಡಿಎ) ಪರೀಕ್ಷೆ ಬರೆದು ಪಾಸಾಗಲು ಕಷ್ಟ ಪಡುತ್ತಿರುತ್ತಾರೆ. ಇದು ತುಂಬಾ ಜನರಿಗೆ ನನಸಾಗುವ ಕನಸಲ್ಲ, ಆದರೆ ಈ ಬಾರಿ ಪಾಸಾದ 8,000 ಯಶಸ್ವಿ ಅಭ್ಯರ್ಥಿಗಳಲ್ಲಿ (Successful candidates) 1,002 ಮಹಿಳೆಯರು ಪರೀಕ್ಷೆಯಲ್ಲಿ ಪಾಸಾದದ್ದು ನಿಜಕ್ಕೂ ಸಂತೋಷದ ವಿಷಯವಾಗಿದೆ. ನವೆಂಬರ್ 14ರಂದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)(Central Lok Sewa Commission) ನಡೆಸಿದ ಪರೀಕ್ಷೆಗೆ ಮಹಿಳಾ ಅಭ್ಯರ್ಥಿಗಳು ಹಾಜರಾಗಿರುವುದು ಇದೇ ಮೊದಲು ಮತ್ತು ಇದರ ಫಲಿತಾಂಶಗಳನ್ನು (Results were announced) ಬುಧವಾರದಂದು ಘೋಷಿಸಲಾಗಿದೆ.

20 ಮಹಿಳಾ ಕೆಡೆಟ್‌
ಈ 1,002 ಮಹಿಳಾ ಅಭ್ಯರ್ಥಿಗಳು ಈಗ ಸೇವಾ ಆಯ್ಕೆ ಮಂಡಳಿ ಮತ್ತು ಅವರ ವೈದ್ಯಕೀಯ ಪರೀಕ್ಷೆಗಳಿಗೆ ಹಾಜರಾಗಲಿದ್ದಾರೆ. ನಂತರ ಅವರಲ್ಲಿ 19 ಮಂದಿ ಮುಂದಿನ ವರ್ಷದ ಎನ್‌ಡಿಎ (NDA) ಕೋರ್ಸ್‌ಗೆ ಶಾರ್ಟ್ ಲಿಸ್ಟ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಸೇನೆ, ನೌಕಾಪಡೆ ಮತ್ತು ಭಾರತೀಯ ವಾಯುಪಡೆಗೆ ಅಧಿಕಾರಿಗಳಾಗಲು ಮೊದಲ ಬಾರಿಗೆ ಸುಮಾರು 20 ಮಹಿಳಾ ಕೆಡೆಟ್‌ಗಳನ್ನೂ ಎನ್‌ಡಿಎಗೆ ಸೇರಿಸಲಾಗುವುದು ಎಂದು ನ್ಯೂಸ್18 ವರದಿ ಮಾಡಿತ್ತು.

ಇದನ್ನೂ ಓದಿ: NDA: ಸೇನೆಗೆ ಸೇರುವ ಕನಸು ಕಂಡಿದ್ದರಂತೆ ರಾಬರ್ಟ್​ ನಟಿ Asha Bhat..!

ರಾಜ್ಯಸಭೆಯಲ್ಲಿ ಮಾಹಿತಿ
ಎನ್‌ಡಿಎ ಮುಂದಿನ ವರ್ಷ ಒಟ್ಟು ಈ ಪಾಸಾದಂತಹ ಅಭ್ಯರ್ಥಿಗಳಲ್ಲಿ 400 ಕೆಡೆಟ್‌ಗಳನ್ನು ಸೇರಿಸಿಕೊಳ್ಳಲಿದೆ, ಅವರಲ್ಲಿ 10 ಮಹಿಳೆಯರು ಸೇರಿದಂತೆ 208 ಅಭ್ಯರ್ಥಿಗಳನ್ನು ಭೂ ಸೇನೆ ತೆಗೆದುಕೊಳ್ಳಲಿದೆ. ನೌಕಾಪಡೆಯು ಮೂವರು ಮಹಿಳೆಯರು ಸೇರಿದಂತೆ 42 ಅಭ್ಯರ್ಥಿಗಳನ್ನು ತೆಗೆದುಕೊಳ್ಳಲಿದೆ ಮತ್ತು ಭಾರತೀಯ ವಾಯು ಸೇನೆಯು 6 ಜನ ಮಹಿಳೆಯರನ್ನು ಒಳಗೊಂಡ 120 ಅಭ್ಯರ್ಥಿಗಳನ್ನು ತೆಗೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್, ಪರೀಕ್ಷೆಗೆ ಅರ್ಜಿ ಸಲ್ಲಿಸಿದವರ ಒಟ್ಟು ಸಂಖ್ಯೆ 5,75,856 ಆಗಿದ್ದು, ಅವರಲ್ಲಿ 1,77,654 ಮಹಿಳೆಯರು ಸೇರಿದ್ದಾರೆ ಎಂದು ತಿಳಿಸಿದ್ದರು.

ಕ್ಯಾಂಪಸ್‌ಗೆ ಸ್ವಾಗತಿಸಲು ಸಜ್ಜು
ಎನ್‌ಡಿಎ ತನ್ನ ಮೂಲಸೌಕರ್ಯಗಳನ್ನು ಬಲಪಡಿಸುತ್ತಿದ್ದು ಮಹಿಳಾ ಬೋಧಕರು, ಸ್ತ್ರೀರೋಗ ತಜ್ಞರು ಸೇರಿದಂತೆ ವೈದ್ಯರು ಮತ್ತು ಇತರ ಅಗತ್ಯ ಬೆಂಬಲ ಸಿಬ್ಬಂದಿಯ ನೇಮಕಾತಿಯನ್ನು ಪ್ರಾರಂಭಿಸುತ್ತಿದೆ ಮತ್ತು ಮುಂದಿನ ವರ್ಷ ಮಹಿಳಾ ಕೆಡೆಟ್‌ಗಳನ್ನೂ ಮೊದಲ ಬಾರಿಗೆ ತನ್ನ ಕ್ಯಾಂಪಸ್‌ಗೆ ಸ್ವಾಗತಿಸಲು ಸಜ್ಜಾಗುತ್ತಿದೆ ಎಂದು ಹೇಳಬಹುದು.

ಮಹಾರಾಷ್ಟ್ರದ ಪುಣೆಯ ಖಡಕ್ವಾಸ್ಲಾದಲ್ಲಿರುವ ಎನ್‌ಡಿಎಯನ್ನು 1955ರಲ್ಲಿ ಔಪಚಾರಿಕವಾಗಿ ಉದ್ಘಾಟಿಸಲಾಗಿತ್ತು. ಇದು ಪ್ರಸ್ತುತ ಒಟ್ಟು 18 ಸ್ಕ್ವಾಡ್ರನ್‌ಗಳ ಬಲ ಹೊಂದಿದೆ, ಅವುಗಳಲ್ಲಿ ಪ್ರತಿಯೊಂದೂ ಸುಮಾರು 120 ಕೆಡೆಟ್‌ಗಳನ್ನು ಒಳಗೊಂಡಿದೆ. ಸಂಸ್ಥೆಯು ಪ್ರಸ್ತುತ ಸುಮಾರು 2,020 ಕೆಡೆಟ್‌ಗಳನ್ನು ತನ್ನ 6 ಅವಧಿಗಳಲ್ಲಿ ಹೊಂದಿದೆ ಎಂದು ಹೇಳಲಾಗುತ್ತಿದೆ.

ನೌಕಾಪಡೆ ಹಾಗೂ ವಾಯು ಸೇನೆಗೆ
ಸೆಪ್ಟೆಂಬರ್‌ನಲ್ಲಿ, ಸುಪ್ರೀಂ ಕೋರ್ಟ್ ಮಹಿಳೆಯರನ್ನು ಈ ವರ್ಷದಿಂದಲೇ ಎನ್‌ಡಿಎಗೆ ಸೇರಿಸಿಕೊಳ್ಳಲಾಗುವುದು ಮತ್ತು ಕೇಂದ್ರ ಬಯಸಿದಂತೆ ಮುಂದಿನ ವರ್ಷದಿಂದ ಅಲ್ಲ ಎಂದು ತೀರ್ಪು ನೀಡಿತ್ತು. ಇಲ್ಲಿಯವರೆಗೆ, ತಮ್ಮ ಪದವಿ ಮುಗಿಸಿದ ಮಹಿಳಾ ಅಭ್ಯರ್ಥಿಗಳು ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿ (ಒಟಿಎ) ಮತ್ತು ಭಾರತೀಯ ನೌಕಾ ಅಕಾಡೆಮಿ ಮತ್ತು ವಾಯುಪಡೆ ಅಕಾಡೆಮಿಯಿಂದ ನೌಕಾಪಡೆ ಹಾಗೂ ಭಾರತೀಯ ವಾಯು ಸೇನೆಗೆ ಸೇರಿಕೊಳ್ಳುತ್ತಿದ್ದರು.

ಇದನ್ನೂ ಓದಿ: NDA ಪರೀಕ್ಷೆ ಬರೆಯಲು ಮಹಿಳೆಯರಿಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್​

ಸಾಮಾನ್ಯವಾಗಿ ಈ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ತಮ್ಮ 12ನೇ ತರಗತಿ ಬೋರ್ಡ್ ಪರೀಕ್ಷೆಗಳ ನಂತರ ತಮ್ಮ ಪೂರ್ವ-ನಿಯೋಜಿತ ತರಬೇತಿಗಾಗಿ ಎನ್‌ಡಿಎಗೆ ಸೇರುತ್ತಾರೆ. ಸರ್ಕಾರಿ ಮೂಲಗಳ ಪ್ರಕಾರ, ಪ್ರತಿ ವರ್ಷ ಯುಪಿಎಸ್‌ಸಿ ನಡೆಸುವಂತಹ ನಾಲ್ಕು ಎನ್‌ಡಿಎ ಪ್ರವೇಶ ಮತ್ತು ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆಗಳಿಗೆ 6 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ.
Published by:vanithasanjevani vanithasanjevani
First published: