HOME » NEWS » National-international » 1000 YEAR OLD CHICKEN EGG IN CESSPIT BY ARCHAEOLOGISTS IN ISRAEL AND IT WAS NOT BROKEN STG SKTV

Viral News: ಒಂದು ಸಾವಿರ ವರ್ಷ ಹಳೆಯ ಕೋಳಿಮೊಟ್ಟೆ ಸಿಕ್ಕಿದೆ, ಸ್ವಲ್ಪವೂ ಒಡೆದಿಲ್ಲ ! ಒಳಗೇನಿತ್ತು ಗೊತ್ತಾ?

Viral News: ಇಸ್ರೇಲ್‌ನ ಪುರಾತತ್ವ ಶಾಸ್ತ್ರಜ್ಞರು ಇತ್ತೀಚೆಗೆ ಯಾವ್ನೆ ನಗರದಲ್ಲಿ ನಡೆಸಿದ ಉತ್ಖನನ ಕಾರ್ಯಾಚರಣೆಯಲ್ಲಿ 1000 ವರ್ಷಗಳಷ್ಟು ಹಳೆಯ ಕೋಳಿ ಮೊಟ್ಟೆಯನ್ನು ಪತ್ತೆಹಚ್ಚಿದ್ದಾರೆ. ಬೈಜಾಂಟೈನ್ ಯುಗದ ಕೈಗಾರಿಕಾ ಸಂಕೀರ್ಣದಿಂದ ಈ ಮೊಟ್ಟೆಯನ್ನು ಪತ್ತೆಹಚ್ಚಲಾಗಿದೆ.

news18-kannada
Updated:June 11, 2021, 11:48 AM IST
Viral News: ಒಂದು ಸಾವಿರ ವರ್ಷ ಹಳೆಯ ಕೋಳಿಮೊಟ್ಟೆ ಸಿಕ್ಕಿದೆ, ಸ್ವಲ್ಪವೂ ಒಡೆದಿಲ್ಲ ! ಒಳಗೇನಿತ್ತು ಗೊತ್ತಾ?
ಸಾವಿರ ವರ್ಷ ಹಳೆಯ ಕೋಳಿಮೊಟ್ಟೆ
  • Share this:

ಕೋಳಿಮೊಟ್ಟೆಯನ್ನು ನಿಮ್ಮ ಮನೆಗೆ ತಂದರೆ ಹೆಚ್ಚು ಕಾಲ ಇಟ್ಟುಕೊಳ್ಳುವುದಿಲ್ಲ. ಸರಿಯಾಗಿ ಸಂಗ್ರಹಣೆ ಮಾಡದಿದ್ದರೆ ಮೊಟ್ಟೆ ಒಡೆದುಹೋಗುತ್ತದೆ ಎಂಬ ಭಯ ಇರುತ್ತದೆ. ಕೆಲ ಅಂಗಡಿ, ಸೂಪರ್‌ ಮಾರ್ಕೆಟ್‌ಗಳಲ್ಲೇ ಮೊಟ್ಟೆಗಳನ್ನು ಸರಿಯಾಗಿ ಇಡದಿದ್ದರೆ ಒಡೆದುಹೋಗಬಹುದು. ಆದರೆ, ಇಸ್ರೇಲ್‌ನಲ್ಲೊಂದು ವಿಚಿತ್ರ ಮೊಟ್ಟೆ ಪತ್ತೆಯಾಗಿದೆ. ಅದು ಸಾವಿರ ವರ್ಷ ಹಳೆಯದಂತೆ. ನಾನ್‌ ನಂಬಲ್ಲ ಅಂತೀರಾ..? ಆದ್ರೆ, ನಿಜಕ್ಕೂ ನೀವು ಇದನ್ನು ನಂಬ್ಲೇಬೇಕು. ಯಾಕಂದ್ರೆ, ಇಸ್ರೇಲ್‌ನ ಪುರಾತತ್ವ ಶಾಸ್ತ್ರಜ್ಞರು ಇತ್ತೀಚೆಗೆ ಯಾವ್ನೆ ನಗರದಲ್ಲಿ ನಡೆಸಿದ ಉತ್ಖನನ ಕಾರ್ಯಾಚರಣೆಯಲ್ಲಿ 1000 ವರ್ಷಗಳಷ್ಟು ಹಳೆಯ ಕೋಳಿ ಮೊಟ್ಟೆಯನ್ನು ಪತ್ತೆಹಚ್ಚಿದ್ದಾರೆ. ಬೈಜಾಂಟೈನ್ ಯುಗದ ಕೈಗಾರಿಕಾ ಸಂಕೀರ್ಣದಿಂದ ಈ ಮೊಟ್ಟೆಯನ್ನು ಪತ್ತೆಹಚ್ಚಲಾಗಿದೆ ಎಂದು ಡೈಲಿ ಮೇಲ್‌ ವರದಿ ಮಾಡಿದೆ.


ಈ ಮೊಟ್ಟೆಯ ಆವಿಷ್ಕಾರದ ಬಗ್ಗೆ ಅತ್ಯಂತ ಆಕರ್ಷಕವಾದ ಅಂಶವೆಂದರೆ ಅದು ಪ್ರಾಚೀನ ಸೆಸ್‌ಪಿಟ್‌ನಲ್ಲಿ ಮಾನವ ಮಲದಿಂದ ಸುತ್ತುವರಿಯಲ್ಪಟ್ಟಿದೆ. ಸಾವಿರ ವರ್ಷಗಳಷ್ಟು ಹಳೆಯ ಮೊಟ್ಟೆಯ ಆವಿಷ್ಕಾರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡ ಇಸ್ರೇಲ್ ಆ್ಯಂಟಿಕ್ವಿಟೀಸ್ ಅಥಾರಿಟಿ (ಐಎಎ), ಅದರ ಜತೆಗೆ ಕಾಪ್ಟಿಕ್ ಗೊಂಬೆಗಳು ಎಂದು ಕರೆಯಲಾಗುವ ಇಸ್ಲಾಮಿಕ್ ಕಾಲದ ಮೂಳೆ ಗೊಂಬೆಗಳ ಸಂಗ್ರಹವನ್ನು ಸಹ ಸೆಸ್‌ಪಿಟ್‌ನಲ್ಲಿ ಕಂಡುಬಂದಿದೆ ಎಂದೂ ತಿಳಿಸಿದ್ದಾರೆ.



ಇದನ್ನೂ ಓದಿ: Money Tips: ನಿಮ್ಮ ಬಳಿ ಹಳೇ 2 ರೂಪಾಯಿ ನಾಣ್ಯ ಇದ್ಯಾ? 5 ಲಕ್ಷ ರೂಪಾಯಿ ಸಿಗುತ್ತೆ ನೋಡಿ !

“ಇಂದಿಗೂ ಸಹ, ಸೂಪರ್‌ಮಾರ್ಕೆಟ್‌ ಪೆಟ್ಟಿಗೆಗಳಲ್ಲಿ ಮೊಟ್ಟೆಗಳು ವಿರಳವಾಗಿ ಬದುಕುತ್ತವೆ. ಆದರೆ, ಇದು 1,000 ವರ್ಷಗಳಷ್ಟು ಹಳೆಯದಾಗಿದೆ ಎಂದು ಭಾವಿಸುವುದು ಆಶ್ಚರ್ಯಕರವಾಗಿದೆ!" ಎಂದು ಇಸ್ರೇಲ್ ಆ್ಯಂಟಿಕ್ವಿಟೀಸ್ ಅಥಾರಿಟಿಯ ಪುರಾತತ್ವಶಾಸ್ತ್ರಜ್ಞೆ ಅಲ್ಲಾ ನಾಗೋರ್‌ಸ್ಕಿ ಪ್ರತಿಕ್ರಿಯೆ ನೀಡಿದ್ದಾರೆ.


ಇನ್ನು, ಈ ಸಾವಿರ ವರ್ಷಗಳಷ್ಟು ಹಳೆಯ ಮೊಟ್ಟೆಯು ಸುಮಾರು 6 ಸೆಂಟಿಮೀಟರ್ ಎತ್ತರವಾಗಿದೆ ಮತ್ತು ಅದರ ಶೆಲ್‌ನಲ್ಲಿ ಕೆಲವೇ ಬಿರುಕುಗಳನ್ನು ಹೊಂದಿದೆ. ಸೆಸ್‌ಪಿಟ್‌ನಿಂದ ಮೊಟ್ಟೆಯನ್ನು ಹೊರತೆಗೆದಾಗ ಎಗ್‌ಶೆಲ್‌ಗಳ ಯಾವುದೇ ತುಣುಕುಗಳು ಕಾಣೆಯಾಗಿಲ್ಲ. ಆದರೂ, ಹೆಚ್ಚು ಸಮಯವಾದ್ದರಿಂದ ಹೆಚ್ಚಿನ ವಿಶ್ಲೇಷಣೆಗಾಗಿ ಮೊಟ್ಟೆಯನ್ನು ಐಎಎ ಪ್ರಯೋಗಾಲಯಕ್ಕೆ ತೆಗೆದುಕೊಂಡುಹೋಗುವಾಗ ಅದು ತುಂಬಾ ದುರ್ಬಲವಾಗಿತ್ತು ಮತ್ತು ಮೊಟ್ಟೆ ಒಡೆದು ತೆರೆದುಕೊಂಡಿತ್ತು ಎಂದು ತಿಳಿದುಬಂದಿದೆ.


ಇದನ್ನೂ ಓದಿ: Wedding Cancel: ಡ್ಯಾನ್ಸ್ ಮಾಡುವಂತೆ ಬಲವಂತ ಮಾಡಿದ್ದಕ್ಕೆ, ಮದುವೆ ಬೇಡ, ಹೋಗು ಎಂದ ಮದುಮಗಳು, ಮದುವೆ ಕ್ಯಾನ್ಸಲ್ !

ಅಲ್ಲದೆ, ಮೊಟ್ಟೆ ಒಳಗಿನಿಂದ ಖಾಲಿಯಾಗಿತ್ತು ಮತ್ತು ಅದನ್ನು ಪೂರ್ತಿ ತೆರೆದಾಗ ಮೊಟ್ಟೆಯ ಹಳದಿ ಲೋಳೆ ಕಂಡುಬರಲಿಲ್ಲ ಎಂದು ಮೊಟ್ಟೆಯ ಬಗ್ಗೆ ಮಾತನಾಡಿದ ಪ್ರಾಚೀನ ಜಗತ್ತಿನ ಕೋಳಿ ಮಾಂಸದ ಪ್ರಮುಖ ತಜ್ಞ ಐಎಎಯ ಲೀ ಪ್ಯಾರಿ ಗಾಲ್ ಹೇಳಿದ್ದಾರೆ. ಇನ್ನು, ಈ ಪ್ರಾಚೀನ ವಸ್ತುವಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅಧ್ಯಯನವನ್ನು ನಡೆಸಲು ಸಂಶೋಧಕರು ಈಗ ಮೊಟ್ಟೆಯಿಂದ ಡಿಎನ್‌ಎಯನ್ನು ಹೊರತೆಗೆಯಲು ಆಶಿಸಿದ್ದಾರೆ.

Youtube Video

ಆದರೆ, ಈ ಮೊಟ್ಟೆ ಸೆಸ್‌ಪಿಟ್‌ನಲ್ಲಿ ಹೇಗೆ ಪತ್ತೆಯಾಯಿತು ಎಂಬುದು ಪುರಾತತ್ವಶಾಸ್ತ್ರಜ್ಞರಿಗೆ ಇನ್ನೂ ನಿಗೂಢವಾಗಿದೆ. ಈ ಪ್ರಶ್ನೆಗೆ ನಮಗೆ ಉತ್ತರ ಎಂದಿಗೂ ಸಿಗುವುದಿಲ್ಲವೇನೋ ಎಂದು ಅವರೇ ಒಪ್ಪಿಕೊಳ್ಳುತ್ತಾರೆ. ಉತ್ಖನನದ ಸಮಯದಲ್ಲಿ ಮೊಟ್ಟೆಯ ಜೊತೆಗೆ ಪತ್ತೆಯಾದ ಮೂರು ಮೂಳೆ ಗೊಂಬೆಗಳು ಸಹ ಸಾವಿರ ವರ್ಷಗಳಷ್ಟು ಹಳೆಯದಾಗಿದೆ ಎಂದು ನಿರೀಕ್ಷಿಸಲಾಗಿದೆ. ಈ ಕಾಪ್ಟಿಕ್ ಗೊಂಬೆಗಳು ಮೊದಲು ಈಜಿಪ್ಟ್ ಮತ್ತು ಪ್ಯಾಲೆಸ್ಟೈನ್ ಭಾಗದಲ್ಲಿ ಕಾಣಿಸಿಕೊಂಡಿವೆ. ಹೊಸ ವಸತಿ ಯೋಜನೆಗಾಗಿ ಇಸ್ರೇಲ್‌ನ ಯಾವ್ನೆ ಪ್ರದೇಶದಲ್ಲಿ ಹಲವಾರು ತಿಂಗಳುಗಳಿಂದ ಉತ್ಖನನ ನಡೆಯುತ್ತಿದೆ. ಅಷ್ಟೊಂದು ಜೋಪಾನವಾಗಿದ್ದ ಮೊಟ್ಟೆಯನ್ನು ಹೊರ ತೆಗೆದ ನಂತರ ಒಡೆದುಹೋಗಿದ್ದು ಅಚ್ಚರಿ ಮೂಡಿಸಿದೆ.


Published by: Soumya KN
First published: June 11, 2021, 11:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories