ಒಂದು ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಐಕಿಯಾ ಮಳಿಗೆ!


Updated:August 9, 2018, 2:22 PM IST
ಒಂದು ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಐಕಿಯಾ ಮಳಿಗೆ!

Updated: August 9, 2018, 2:22 PM IST
ನ್ಯೂಸ್​ 18 ಕನ್ನಡ

ಹೈದರಾಬಾದ್​: ವಿಶ್ವದ ಪ್ರಸಿದ್ದ ಉಪಕರಣ ಮಾರಾಟ ಸಂಸ್ಥೆ ಐಕಿಯಾ ಇದೀಗ ಹೈದರಾಬಾದ್​ನಲ್ಲಿ ಸುಮಾರು ಒಂದು ಸಾವಿರ ಕೋಟಿ ವೆಚ್ಚದಲ್ಲಿ ಹೈ ಟೆಕ್​ ಸಿಟಿ ಎಂಬ ತನ್ನ ಮಳಿಗೆಯನ್ನು ಗುರುವಾರದಂದು ಹೈದರಾಬಾದ್ ನಗರದ ಹೊರವಲಯದಲ್ಲಿ ತೆರೆದಿದೆ.

ಒಂದು ಸಾವಿರ ಮಂದಿ ಏಕಕಾಲದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಹೊಂದಿರುವ ರೆಸ್ಟೋರೆಂಟ್​ ಸುಮಾರು 13 ಎಕರೆಗಳಷ್ಟು ವ್ಯಾಪ್ತಿಯನ್ನು ಹೊಂದಿದೆ. ಅಮೆಜಾನ್​ಗೆ ಸೆಡ್ಡು ಹೊಡೆಯಲೆಂದೇ ಈ ಸಂಸ್ಥೆ ಸುಮಾರು 7,500 ವಿವಿದ ಬಗೆಯ ಮನೆ ಉಪಕರಣಗಳನ್ನು, ರೂ.200ರೊಳಗೆ ಖರೀದಿಸ ಬಹುದಾದ 1000ಕ್ಕೂ ಅಧಿಕ ವಸ್ತುಗಳನ್ನು ಇಲ್ಲಿ ಮಾರಾಟಕ್ಕೆ ಇಟ್ಟಿವೆ.

ಇದರ ಮತ್ತೊಂದಿ ವಿಶೇಷವೆಂದರೆ ಒಟ್ಟಾರೆ 950ಕ್ಕೂ ಅಧಿಕ ಮಂದಿ ನೌಕರರನ್ನು ಹೊಂದಿದ್ದು ಇದರಲ್ಲಿ ಶೇ.50ರಷ್ಟು ಮಹಿಳೆಯರನ್ನೇ ನೇಮಿಸಿಕೊಳ್ಳಲಾಗಿದೆ. ವಾರ್ಷಿಕವಾಗಿ ಏಳು ದಶ ಲಕ್ಷಕ್ಕೂ ಅಧಿಕ ಮಂದಿ ಇಲ್ಲಿ ವ್ಯಾಪಾರ ವಹಿವಾಟು ನಡೆಸಬಹುದು ಎಂದು ಲೆಕ್ಕಹಾಕಲಾಗಿದೆ.

ಇನ್ನು ಮುಂದಿನ ವರ್ಷಗಳಲ್ಲಿ ಕನಿಷ್ಟ 40 ನಗರದಲ್ಲಿ ತನ್ನ ಶಾಖೆಗಳನ್ನು ತೆರೆಯಲು ಐಕಿಯಾ ತೀರ್ಮಾನಿಸಿದೆ, 2019 ಅಂತ್ಯದೊಳಗೆ ಬೆಂಗಳೂರು, ಮುಂಬೈ, ಗುರುಗ್ರಾಮದಂತಹ ನಗರದಲ್ಲಿ ತನ್ನ ಶಾಖೆಯನ್ನು ತೆರೆಯುವ ಉದ್ದೇಶ ಹೊಂದಿದೆ ಎಂದು ಐಕಿಯಾ ಸಮೂಹ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆಸ್ಪರ್​ ಬ್ರೋಡಿನ್​ ತಿಳಿಸಿದ್ದಾರೆ.

ಈಗಾಗಲೇ ಹೈದರಾಬಾದ್​ನಲ್ಲಿ ತಲೆ ಎತ್ತಿರುವ ಐಕಿಯಾ ಮುಂದಿನ ದಿನಗಳಲ್ಲಿ ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕ, ದೆಹಲಿಯಲ್ಲಿ ಸ್ಥಳಗಳನ್ನು ಗುರುತಿಸಿದ್ದು ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

2025ರ ವೇಳೆ ಕನಿಷ್ಟ 25 ಶಾಖೆಯನ್ನು ತೆರೆಯುವ ಚಿಂತನೆ ನಡೆಸಿದೆ, ಮುಂದಿನ ಮೂರು ವರ್ಷದಲ್ಲಿ ಕನಿಷ್ಟ 200 ದಶಲಕ್ಷ ಗ್ರಾಹಕರನ್ನು ತಲುಪುವ ಯೋಜನೆ ಸಂಸ್ಥೆ ರೂಪಿಸಿದೆ. ಈಗಾಗಲೇ 49 ದೇಶಗಳಲ್ಲಿ 403 ಶಾಖೆಯನ್ನು ತೆರೆದಿರುವ ಐಕಿಯಾ 38.8 ಬಿಲಿಯನ್​ ಯೂರೋಗಳಷ್ಟು ವಾರ್ಷಿಕ ವಹಿವಾಟು ನಡೆಸುತ್ತಿದೆ.
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ