Secret Love Affair: ಡಾರ್ಲಿಂಗ್...ಮಧ್ಯರಾತ್ರಿ ಯಾರಿಗೂ ತಿಳಿಯದಂತೆ ಬಂದು ನನ್ನ ಭೇಟಿಯಾಗು, ಕಾಯುತ್ತಿರುತ್ತೇನೆ!

Love Letter of a Secret Affair: ಮಮ್ಮಿ, ಈ ಟೈಲ್ಸ್​ನ್ನೇ ತೆಗೆದು ನೋಡೋಣ..ಯಾರಿಗೆ ಗೊತ್ತು ಏನಾದ್ರೂ ನಿಧಿ ರೀತಿಯದ್ದು ಸಿಗಬಹುದು ಎಂದು ಜೋಕ್ ಮಾಡುತ್ತಾ ಆ ಟೈಲ್ಸ್ ತೆಗೆದನಂತೆ ಮಗ..ಆಗ ಸಿಕ್ಕಿದ್ದೇ ಈ ಪತ್ರ!

100 ವರ್ಷದ ಪ್ರೇಮ ಪತ್ರ

100 ವರ್ಷದ ಪ್ರೇಮ ಪತ್ರ

 • Share this:
  Extra Marital Affair: ಪ್ರೇಮ ಪ್ರಕರಣಗಳು ಹೊಸತೇನಲ್ಲ….ರಾಮಾಯಣ ಮಹಾಭಾರತದ ಕಾಲದಿಂದ ಪ್ರೇಮ ಪ್ರಕರಣಗಳ (Love Story) ಕುರಿತು ಕೇಳುತ್ತಲೇ-ಓದುತ್ತಲೇ ಇದ್ದೇವೆ. ಪ್ರೇಮಿಗಳು ಒಬ್ಬರಿಗೊಬ್ಬರು ಪ್ರೇಮ ಪತ್ರಗಳನ್ನು ಬರೆದುಕೊಳ್ಳುವುದು, ಪ್ರೇಮ ನಿವೇದನೆ (Expression) ಮಾಡುವುದು ಇದ್ಯಾವುದೂ ಹೊಸತಲ್ಲ. ಆದ್ರೆ ಇಲ್ಲೊಂದು ಲವ್ ಲೆಟರ್ ಸಿಕ್ಕಿದೆ. ಇದು ಅಂತಿಂಥಾ ಲವ್ ಲೆಟರ್ ಅಲ್ಲ, ಬರೋಬ್ಬರಿ 100 ವರ್ಷಗಳ ಹಿಂದಿನ ಪ್ರೇಮ ಪ್ರಕರಣವೊಂದನ್ನು(Affair) ..ಒಂದು ರೀತಿಯಲ್ಲಿ ನೋಡಿದರೆ ಅನೈತಿಕ ಸಂಬಂಧವೊಂದರ (Illicit relationship) ವಿವರ ನೀಡುವ ಸಖತ್ ಪ್ರೇಮಪತ್ರ ಇದು. ಈ ಪತ್ರ ನೋಡಿದ್ದೇ ತಡ ಇಂಟರ್ನೆಟ್ ತುಂಬಾ ಭಾರೀ ಚರ್ಚೆಯಾಗ್ತಿದೆ. ಯಾವುದು ಈ ಪ್ರೇಮ ಪ್ರಕರಣ? ಆ ಪ್ರೇಮಪತ್ರದಲ್ಲಿ ಅಂಥದ್ದೇನಿದೆ? ಫುಲ್ ಡೀಟೆಲ್ಸ್ ಇಲ್ಲಿದೆ.

  ಈ ಪತ್ರದಲ್ಲಿ ದಿನಾಂಕ ಬರೆದಿಲ್ಲ. ಆದರೆ ಉಳಿದ ವಿವರಗಳಿವೆ. ಮದುವೆಯಾದ ಮಹಿಳೆಯೊಬ್ಬಳಿಗೆ ಆಕೆಯ ಪ್ರೇಮಿ ಬರೆದ ಪತ್ರವಿದು. ಮನೆಯವರಿಗೆ ತಿಳಿಯದಂತೆ ಬಂದು ನನ್ನನ್ನು ಭೇಟಿಯಾಗು ಎಂದು ಆತ ವಿನೀತನಾಗಿ ಬೇಡಿಕೊಂಡಿದ್ದಾನೆ. ರೊನಾಲ್ಡ್ ಎನ್ನುವ ಪಾಗಲ್ ಪ್ರೇಮಿಯೊಬ್ಬ ಬರೆದ ಪತ್ರವಿದು.

  ಮನೆಯೊಳಗೆ ಪ್ರೀತಿಯ ಕುರುಹು

  UKಯ ಮನೆಯೊಂದರಲ್ಲಿ ತಾಯಿ-ಮಗ ವಾಸಿಸುತ್ತಿದ್ದಾರೆ. ಒಂದು ದಿನ ಏನೋ ಮಾಡಲು ಹೋಗಿ ಮಗನ ರೂಮಿನಲ್ಲಿದ್ದ 54 ಇಂಚಿನ ಟಿವಿ ಬಿದ್ದು ಪುಡಿಪುಡಿಯಾಯಿತು. ಅದು ಬಿದ್ದ ರಭಸಕ್ಕೆ ನೆಲದ ಮೇಲಿನ ಟೈಲ್ಸ್​ಗಳೆಲ್ಲಾ ಪುಡಿಪುಡಿಯಾಗಿಬಿಟ್ಟವಂತೆ. ಇನ್ನೇನು ಮಾಡೋಕ್ಕಾಗುತ್ತೆ ಅಂತ ಅಮ್ಮ ಮಗ ಸೇರಿ ಅದನ್ನು ಕ್ಲೀನ್ ಮಾಡೋಕೆ ಹೊರಟಿದ್ದಾರೆ. ಪುಡಿಯಾದ ಟಿವಿಯ ಚೂರುಗಳನ್ನೆಲ್ಲಾ ತೆಗೆದ ನಂತರ, ಒಡೆದ ಟೈಲ್ಸ್ ಕೆಳಗೂ ಕೆಲವೊಂದಷ್ಟು ಗಾಜಿನ ಚೂರುಗಳಿದ್ದವಂತೆ.

  ಟೈಲ್ಸ್ ಕೆಳಗೆ ಅವಿತಿತ್ತು ಪ್ರೇಮ ಇತಿಹಾಸ !

  ಮಮ್ಮಿ, ಈ ಟೈಲ್ಸ್​ನ್ನೇ ತೆಗೆದು ನೋಡೋಣ..ಯಾರಿಗೆ ಗೊತ್ತು ಏನಾದ್ರೂ ನಿಧಿ ರೀತಿಯದ್ದು ಸಿಗಬಹುದು ಎಂದು ಜೋಕ್ ಮಾಡುತ್ತಾ ಆ ಟೈಲ್ಸ್ ತೆಗೆದನಂತೆ ಮಗ..ಆಗ ಸಿಕ್ಕಿದ್ದೇ ಈ ಪತ್ರ! ಪತ್ರದ ಕೆಲವು ಭಾಗಗಳಷ್ಟೇ ಇವರಿಗೆ ಓದಲು ಸಾಧ್ಯವಾಗಿದೆ. ಉಳಿದ ಅಕ್ಷರಗಳನ್ನು ಓದಲು ಸಾಧ್ಯವಾಗಿಲ್ಲ. ಹಾಗಾಗಿ ಅದರ ಚಿತ್ರ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅದನ್ನು ನೋಡಿದ ಅನೇಕರು ಪತ್ರದಲ್ಲಿ ಬರೆದ ಅಕ್ಷರಗಳನ್ನು ಓದಲು ಸಹಾಯ ಮಾಡಿದ್ದಾರೆ. ಎಲ್ಲಾ ಸೇರಿ ಓದಿದ ನಂತರ ಗೊತ್ತಾದದ್ದೇ ಗುಪ್ತ ಪ್ರೇಮಪ್ರಕರಣ.

  100 ವರ್ಷ ಹಳೆಯ ಪ್ರೇಮಪತ್ರ


  ಮನೆಯೊಡತಿ ಡಾನ್ ಮತ್ತು ಆಕೆಯ ಪುತ್ರ ಈ ಪತ್ರ ಸಿಕ್ಕ ಕೂಡಲೇ ಒಂದು ಸಲ ಶಾಕ್​ ಆದ್ರಂತೆ. ಇವರ ಪ್ರಕಾರ ಈ ಮನೆ ಕಟ್ಟಿದ್ದು 1917ರಲ್ಲಿ. ಪತ್ರದಲ್ಲಿ ಪ್ರೇಮಿ ರೊನಾಲ್ಡ್ ಹೀಗೆ ಬರೆದಿದ್ದಾನೆ:

  “ನನ್ನ ಪ್ರೀತಿಯ ಡಾರ್ಲಿಂಗ್, ನನ್ನೊಲವೇ.. ನೀನು ಪ್ರತಿದಿನ ಬೆಳಗ್ಗೆ ನನ್ನನ್ನು ಬಂದು ಭೇಟಿಯಾಗಲು ಸಾಧ್ಯವೇ?

  ಆದರೆ ದಯವಿಟ್ಟು ಇದನ್ನು ಯಾರಿಗೂ ಹೇಳಬೇಡ. ಈ ವಿಚಾರ ಕೇವಲ ನನ್ನ ಮತ್ತು ನಿನ್ನ ಕಿವಿಗಳಿಗೆ ಮಾತ್ರವೇ ಬೀಳುವಂಥದ್ದು. ಯಾರಿಗಾದರೂ ನೀನು ನನ್ನನ್ನು ಭೇಟಿಯಾಗುತ್ತಿದ್ದೀಯಾ ಮತ್ತು ನೀನು ವಿವಾಹಿತ ಮಹಿಳೆ ಎಂದು ತಿಳಿದರೆ ಬಹಳ ಸಮಸ್ಯೆಯಾಗುತ್ತದೆ, ಹಾಗಾಗಿ ದಯವಿಟ್ಟು ಇದನ್ನು ನೆನಪಿನಲ್ಲಿ ಇಟ್ಟುಕೋ.

  ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ.. ದಯವಿಟ್ಟು ಯಾರಿಗೂ ಹೇಳದೆ ಪ್ರತಿದಿನ ನನ್ನನ್ನು ಮಧ್ಯರಾತ್ರಿಯ ವೇಳೆಗೆ ಫಲ್​ವುಡ್ ಟ್ರಾಮ್ ಕಾರ್ನರ್ ಬಳಿ ಬಂದು ಭೇಟಿಯಾಗು.

  ನಿನ್ನನ್ನು ಭೇಟಿಯಾಗುವ ನಿರೀಕ್ಷೆಯಿದೆ ಪ್ರಿಯೆ…ನಿನ್ನ ಹುಡುಗ, ರೊನಾಲ್ಡ್”

  ಇದನ್ನೂ ಓದಿ: Love Affair: ಪ್ರೀತಿಸಿದ್ದಕ್ಕಾಗಿ ಮಗಳನ್ನು 25 ವರ್ಷ ಕೋಣೆಯಲ್ಲಿ ಕೂಡಿ ಹಾಕಿದ ತಾಯಿ, ಪ್ರೀತ್ಸೋದ್ ತಪ್ಪಾ?

  ಯುಕೆಯಲ್ಲಿ ಟ್ರಾಮ್​ಗಳ ಓಡಾಟ ನಿಂತು 80 ವರ್ಷಗಳೇ ಕಳೆದಿವೆ. ಹಾಗಾಗಿ ಈ ಪತ್ರ ಕನಿಷ್ಟ 100 ವರ್ಷಗಳಷ್ಟಾದರೂ ಹಳೆಯದು ಎಂದು ಅಂದಾಜಿಸಲಾಗಿದೆ. ಎಂಥಾ ಅದ್ಭುತ ಇತಿಹಾಸದ ತುಣುಕೊಂದನ್ನು ನಿಮ್ಮ ಮನೆ ಬಚ್ಚಿಟ್ಟುಕೊಂಡಿತ್ತು ಎಂದು ಅನೇಕರು ಡಾನ್ ಮತ್ತು ಆಕೆಯ ಮಗನನ್ನು ಅಭಿನಂದಿಸಿದ್ದಾರೆ. ಪತ್ರವನ್ನು ಫ್ರೇಮ್ ಹಾಕಿಟ್ಟುಕೊಳ್ಳಲು ಇವರು ನಿರ್ಧರಿಸಿದ್ದಾರೆ.
  Published by:Soumya KN
  First published: