• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • America: ಖುಷ್ ಖುಷಿಯಾಗಿ ಇರೋದಕ್ಕೆ ಏನು ಮಾಡಬೇಕು? 100 ವರ್ಷ ವಯಸ್ಸಿನ ಅಜ್ಜಿಯರು ನೀಡಿದ್ರು ಟಿಪ್ಸ್!

America: ಖುಷ್ ಖುಷಿಯಾಗಿ ಇರೋದಕ್ಕೆ ಏನು ಮಾಡಬೇಕು? 100 ವರ್ಷ ವಯಸ್ಸಿನ ಅಜ್ಜಿಯರು ನೀಡಿದ್ರು ಟಿಪ್ಸ್!

ಶೆರ್ಲಿ ಹೊಡೆಸ್, ರುತ್ ಸ್ವೀಡ್ಲರ್

ಶೆರ್ಲಿ ಹೊಡೆಸ್, ರುತ್ ಸ್ವೀಡ್ಲರ್

ಅಮೆರಿಕಾದ ಕೆರೊಲಿನಾದಲ್ಲಿ ವಾಸಿಸುತ್ತಿರುವ 106 ವರ್ಷದ ಶೆರ್ಲಿ ಹೊಡೆಸ್, 103 ವರ್ಷದ ರುತ್ ಸ್ವೀಡ್ಲರ್ ಇಬ್ಬರೂ ಅಕ್ಕ-ತಂಗಿಯರು. ಶೆರ್ಲಿ ಹೊಡೆಸ್ ಈ ವಯಸ್ಸಿಲ್ಲೂ ಇನ್ನೂ ಹರೆಯದ ಮನಸ್ಸು ಮತ್ತು ಚೈತನ್ಯ ಹೊಂದಿದ್ದು, "ನನಗೆ ವಯಸ್ಸಾಗಿದೆ ಎಂದು ಅನಿಸೋದೆ ಇಲ್ಲ" ಅಂತಾರೆ. ಆಕೆಯ ಸಹೋದರಿ ರುತ್ ಸ್ವೀಡ್ಲರ್ ಯಾರು ನಂಬಲಾರದಷ್ಟು ನೆನಪಿನ ಶಕ್ತಿ ಹೊಂದಿದ್ದು, ಜಗತ್ತಿನಲ್ಲಿ ಆಗುವ ಪ್ರತಿ ಆಗು-ಹೋಗುಗಳ ಬಗ್ಗೆ ಮಾತನಾಡುತ್ತಾರೆ.

ಮುಂದೆ ಓದಿ ...
  • Share this:

ನಾವು-ನೀವೂ ಬದುಕುತ್ತಿರುವ ಪ್ರಸ್ತುತ ಕಾಲಮಾನದಲ್ಲಿ ದೀರ್ಘಾಯುಷ್ಯಿಗಳನ್ನು ನೋಡುವುದೇ ಒಂದು ಖುಷಿಯ ಸಂಗತಿ ಎನ್ನಬಹುದು. ನಮ್ಮ ಈಗಿನ ಲೈಫ್‌ ಸ್ಟೈಲ್‌ (Life Style), ಒತ್ತಡದ ಬದುಕು, ಓಡುವ ಜೀವನ, ಅನಾರೋಗ್ಯಕರ ಅಭ್ಯಾಸ (Unhealthy Habit), ಹೊಸ ಹೊಸ ಕಾಯಿಲೆಗಳು ಇವೆಲ್ಲಾ ನಮ್ಮ ಕಾಲಮಾನದವರನ್ನು ಅಲ್ಪಾಯುಷ್ಯಿಗಳನ್ನಾಗಿ ಮಾಡುತ್ತಿದೆ. ಈಗೆಲ್ಲಾ ಅರವತ್ತರ ಹರೆಯದವರನ್ನು ನೋಡಿದರೂ ಯುವ ಪೀಳಿಗೆಗೆ ನಾವೆಲ್ಲಾ ಇಷ್ಟು ವರ್ಷ ಬದುಕಿದರೆ ಸಾಕಪ್ಪಾ ಎನ್ನವಂತಾಗಿದೆ. ವಿಶ್ವದಲ್ಲಿ ಅಮೂಲ್ಯ ನಿಧಿಗಳಂತೆ ನೂರರ ಗಡಿ ದಾಟಿದ ಹಲವು ದೀರ್ಘಾಯುಷ್ಯಿಗಳು ಇದ್ದಾರೆ. ಆದರೆ ಯುಎಸ್‌ನ (America) ಈ ಕುಟುಂಬದಲ್ಲಿ ಅಪರೂಪ ಎನ್ನುವಂತೆ ಇಬ್ಬರು ಸಹೋದರಿಯರು ಶತಾಯುಷಿಗಳು. ಇವರು ಇನ್ನೂ ಸಹ ಚೈತನ್ಯ, ಲವಲವಿಕೆ ಅಷ್ಟೇ ಯಾಕೆ ಹೆಚ್ಚಿನ ನೆನಪಿನ ಶಕ್ತಿ (Memory Power) ಸಹ ಹೊಂದಿದ್ದಾರೆ. ಹಾಗಾದರೆ ಅಪರೂಪದಲ್ಲೇ ಅಪರೂಪವಾದ ಇಬ್ಬರೂ ಶತಾಯುಷಿ ಸಹೋದರಿಯರು ಯಾರು? ಮಾನಸಿಕವಾಗಿ ಚುರುಕಾಗಿರಲು ಅವರು ನೀಡಿರುವ ಸಲಹೆಗಳೇನು ಅಂತ ನೋಡೋಣ.


ಶತಾಯುಷಿ ಸಹೋದರಿಯರು


ಅಮೆರಿಕಾದ ಕೆರೊಲಿನಾದಲ್ಲಿ ವಾಸಿಸುತ್ತಿರುವ 106 ವರ್ಷದ ಶೆರ್ಲಿ ಹೊಡೆಸ್, 103 ವರ್ಷದ ರುತ್ ಸ್ವೀಡ್ಲರ್ ಇಬ್ಬರೂ ಅಕ್ಕ-ತಂಗಿಯರು. ಶೆರ್ಲಿ ಹೊಡೆಸ್ ಈ ವಯಸ್ಸಿಲ್ಲೂ ಇನ್ನೂ ಹರೆಯದ ಮನಸ್ಸು ಮತ್ತು ಚೈತನ್ಯ ಹೊಂದಿದ್ದು, "ನನಗೆ ವಯಸ್ಸಾಗಿದೆ ಎಂದು ಅನಿಸೋದೆ ಇಲ್ಲ" ಅಂತಾರೆ. ಆಕೆಯ ಸಹೋದರಿ ರುತ್ ಸ್ವೀಡ್ಲರ್ ಯಾರು ನಂಬಲಾರದಷ್ಟು ನೆನಪಿನ ಶಕ್ತಿ ಹೊಂದಿದ್ದು, ಜಗತ್ತಿನಲ್ಲಿ ಆಗುವ ಪ್ರತಿ ಆಗು-ಹೋಗುಗಳ ಬಗ್ಗೆ ಮಾತನಾಡುತ್ತಾರೆ.


ಶೆರ್ಲಿ ಹೊಡೆಸ್


ನನ್ನ ವೈದ್ಯರು ನನ್ನ ಜೊತೆ ಮಾತನಾಡಲು ಬಯಸುತ್ತಾರೆ. ನನ್ನನ್ನು ಹೊಗುಳುತ್ತಾರೆ. ನನಗೆ ವಯಸ್ಸಾಗಿದೆ ಎಂದು ಭಾವಿಸುವುದಿಲ್ಲ ಮತ್ತು ಚುರುಕಾಗಿರಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಈ ಪ್ರಬುದ್ಧ ವಯಸ್ಸಿನಲ್ಲಿಯೂ ಮಾನಸಿಕವಾಗಿ ಸಕ್ರಿಯರಾಗಿರುವ ಹಿಂದಿನ ಗುಟ್ಟನ್ನು ಇಬ್ಬರೂ ಸಹೋದರಿಯರು ಹಂಚಿಕೊಂಡಿದ್ದಾರೆ ನೋಡಿ.


1) ಸಕ್ರಿಯವಾಗಿರುವುದು


ಸ್ವೀಡ್ಲರ್ ರಂಗಭೂಮಿ ಕಲಾವಿದೆಯಾಗಿದ್ದರು. ಅವರು ಇನ್ನೂ ಸಹ ಕೆಲಸ ಮಾಡಲು ಬಯಸುವುದಾಗಿ ಹೇಳುತ್ತಾರೆ. ಅತ್ತ ಶೆರ್ಲಿ ಹೊಡೆಸ್ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಂತರ ತಮ್ಮ 70 ನೇ ವಯಸ್ಸಿನಲ್ಲಿ ನಿವೃತ್ತರಾದರು. ಈ ವಯಸ್ಸಿನಲ್ಲೂ ಹೀಗೆ ಆಕ್ಟೀವ್‌ ಆಗಿರುವುದರ ಹಿಂದಿನ ಗುಟ್ಟನ್ನು ಬಿಚ್ಚಿಟ್ಟ ಇಬ್ಬರು ಸಹೋದರಿಯರು ನಾವು ಕೆಲಸ ಮಾಡಲು ಬಯಸುತ್ತೇವೆ ಅದು ನಮ್ಮನ್ನು ಸಹಜವಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಕ್ರಿಯರನ್ನಾಗಿ ಮಾಡುತ್ತದೆ.


ಯಾವುದೇ ಕಾರಣಕ್ಕೂ ನಾವು ಜಡವಾಗಿ ಕುಳಿತುಕೊಳ್ಳುವುದಿಲ್ಲ. ಪುಸ್ತಕ ಓದುತ್ತೇವೆ, ವಾಕಿಂಗ್‌ ಮಾಡುತ್ತೇವೆ, ಎಲ್ಲರ ಜೊತೆ ಮಾತನಾಡುತ್ತೇವೆ, ನಮ್ಮ ಕೈಲಾದ ಕೆಲಸದಲ್ಲಿ ನಾವು ತೊಡಗಿಕೊಳ್ಳುತ್ತೇವೆ ಎಂದಿದ್ದಾರೆ. "ನೀವು ಏನು ಮಾಡುತ್ತೀರಿ ಎಂಬುದರಲ್ಲಿ ಮುಳುಗಿರುವುದು ಬಹಳ ಮುಖ್ಯ. ನಿಮ್ಮ ಪ್ರತಿಭೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದು ನಿಮ್ಮ ಜೀವನವನ್ನು ತುಂಬಾ ಆಹ್ಲಾದಕರಗೊಳಿಸುತ್ತದೆ" ಎಂದು ಸಹೋದರಿಯರು ಹೇಳುತ್ತಾರೆ.


ಶೆರ್ಲಿ ಹೊಡೆಸ್, ರುತ್ ಸ್ವೀಡ್ಲರ್


2.) ಪ್ರೀತಿ, ಸಂಬಂಧಗಳಿಗೆ ಮಹತ್ವ ನೀಡುವುದು


ಸಂಸಾರದ ಮಹತ್ವ ಮತ್ತು ಒಳ್ಳೆಯ ದಾಂಪತ್ಯದ ವಿಷಯದಲ್ಲಿ ಸಹೋದರಿಯರಿಬ್ಬರೂ ಒಂದೇ ಅಭಿಪ್ರಾಯ ಹೊಂದಿದ್ದಾರೆ. ಜೀವನದಲ್ಲಿ ಪ್ರೀತಿಸುವುದು ಮತ್ತು ಪ್ರೀತಿ ಪಡೆಯುವುದಷ್ಟೇ ಪ್ರಮುಖವಾಗಿದೆ ಎಂದು ಜೀವನದಲ್ಲಿ ಪ್ರೀತಿ, ಸಂಬಂಧಗಳ ಬಗ್ಗೆ ಸ್ವೀಡ್ಲರ್ ಹೇಳುತ್ತಾರೆ.


ನನ್ನ ಪತಿ ನಾನು ತುಂಬಾ ಅನ್ಯೋನ್ಯವಾಗಿದ್ದೆವು. ಅವರ ನೆನಪು ನನ್ನಲ್ಲಿ ಇಂದಿಗೂ ಮಾಸಿಲ್ಲ. ಜೀವನದಲ್ಲಿ ಪ್ರೀತಿ, ಕುಟುಂಬ, ಸ್ನೇಹಿತರು, ಸಂಬಂಧಿಕರು ತುಂಬಾ ಮುಖ್ಯ, ಈ ಸಂಬಂಧಗಳಿಗೆ ಬೆಲೆ ಕೊಡಬೇಕು, ಉಳಿಸಿಕೊಳ್ಳಬೇಕು ಎನ್ನುತ್ತಾರೆ ಇಬ್ಬರೂ ಶತಾಯುಷಿಗಳು.


3) ನಮ್ಮಲ್ಲಿರುವುದರಲ್ಲೇ ಖುಷಿ ಪಡುವುದು


ಹಲವರಿಗೆ ನಮ್ಮಲ್ಲಿ ಇಲ್ಲದೇ ಇರುವುದರ ಬಗ್ಗೆಯೇ ಯಾವಾಗಲೂ ಚಿಂತೆ. ಇಲ್ಲದ್ದನ್ನು ಚಿಂತಿಸಿ ಇರುವುದನ್ನು ಮರೆತು ದುಃಖ ಅನುಭವಿಸುತ್ತಾರೆ. ನನಗೆ ಈಗ ಮೊದಲಿನಂತೆ ಇರಲೂ ಆಗದಿದ್ದರೂ ನಾನು ಓದುತ್ತೇನೆ, ಸ್ವಲ್ಪ ನಡೆಯುತ್ತೇನೆ ಮತ್ತು ನನಗೆ ಇದ್ಯಾವುದು ಆಗುವುದಿಲ್ಲ ಎಂದು ನಾನು ಕೊರಗುವುದಿಲ್ಲ, ನನ್ನಲ್ಲಿ ಏನಾಗುತ್ತದೆಯೋ, ಏನಿದೆಯೋ ಅದರಲ್ಲಿ ಖುಷಿ ಕಾಣುತ್ತೇನೆ ಎನ್ನುತ್ತಾರೆ ಹೊಡೆಸ್ ಮತ್ತು ಸ್ವೀಡ್ಲರ್.
ಇದನ್ನೂ ಓದಿ: ಸುಖ ಜೀವನ ನಿಮ್ಮದಾಗಬೇಕು ಅಂದ್ರೆ 102 ವರ್ಷದ ಈ ಅಜ್ಜಿ ಹೇಳುವ ಸೂತ್ರಗಳನ್ನು ಫಾಲೋ ಮಾಡಿ!


ಜೀವನದಲ್ಲಿ ಎಲ್ಲವನ್ನೂ ಎಲ್ಲರೂ ಹೊಂದಲು ಸಾಧ್ಯವಿಲ್ಲ. ನಮ್ಮ ಬಳಿ ಏನಿರುತ್ತದೆಯೋ ಅದರಲ್ಲಿ ಖುಷಿ ಕಾಣಬೇಕು. ಇದೇ ಜೀವನದ ಖುಷಿಯ ಗುಟ್ಟು ಎನ್ನುತ್ತಾರೆ ಹೊಡೆಸ್. ಇಂತಹ ಅದ್ಭುತ ಜೀವನಕ್ಕಾಗಿ ನಾವಿಬ್ಬರೂ ಕೃತಜ್ಞನಾಗಿರುತ್ತೇವೆ. ನಾವು ಬದುಕಿರುವವರೆಗೂ ಹೀಗೆ ಇರಲು ಬಯಸುತ್ತೇವೆ ಎನ್ನುತ್ತಾರೆ ದೀರ್ಘಾಯುಷ್ಯಿ ಸಹೋದರಿಯರು.

top videos
    First published: