• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Mann Ki Baat: ನ್ಯೂಜಿಲ್ಯಾಂಡ್‌ನಲ್ಲಿ ಮನ್ ಕಿ ಬಾತ್ ಆಲಿಸಿದ ಅಜ್ಜಿ! ಶತಾಯುಷಿಯಿಂದ ಮೋದಿಗೆ ಆಶೀರ್ವಾದ

Mann Ki Baat: ನ್ಯೂಜಿಲ್ಯಾಂಡ್‌ನಲ್ಲಿ ಮನ್ ಕಿ ಬಾತ್ ಆಲಿಸಿದ ಅಜ್ಜಿ! ಶತಾಯುಷಿಯಿಂದ ಮೋದಿಗೆ ಆಶೀರ್ವಾದ

ಪಿಎಂ ಮೋದಿಗೆ ಶತಾಯುಷಿ ಅಜ್ಜಿ ಆಶೀರ್ವಾದ

ಪಿಎಂ ಮೋದಿಗೆ ಶತಾಯುಷಿ ಅಜ್ಜಿ ಆಶೀರ್ವಾದ

ನ್ಯೂಜಿಲೆಂಡ್​ನಲ್ಲಿ ಮೋದಿಯವರ ಮನ್​ ಕಿ ಬಾತ್​ ಕಾರ್ಯಕ್ರಮವನ್ನು ಆಲಿಸಿ, ಸಂಭ್ರಮಾಚರಣೆ ಮಾಡಿರುವ ಬಗ್ಗೆ ವರದಿಯಾಗಿದೆ. ಈ ವೇಳೆ ಶತಾಯುಷಿ ಮಹಿಳೆ ರಾಮ್​ಬೆನ್ ಮೋದಿ ಮಾತನ್ನು ಕೇಳಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

  • Share this:

ಆಕ್ಲೆಂಡ್: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ಮಾಸಿಕ ಕಾರ್ಯಕ್ರಮ ಮನ್​ ಕಿ ಬಾತ್ (Mann Ki Baat)​ 100ನೇ ಸಂಚಿಕೆ ಇಂದು ವಿಶ್ವದಾದ್ಯಂತ ಪ್ರಸಾರವಾಗಿದ್ದು, ಕೋಟ್ಯಾಂತರ ಮಂದಿ ಆಲಿಸಿದ್ದಾರೆ. ದೇಶದ ಹಲವಾರು ಭಾಗಗಳಲ್ಲಿ ಜನರು ಪ್ರಧಾನ ಮಂತ್ರಿಯವರ ಮಾತನ್ನು ಉತ್ಸಾಹದಿಂದ ಕೇಳಿದ್ದಾರೆ. ನ್ಯೂಜಿಲ್ಯಾಂಡ್​ನ (New Zealand) ಆಕ್ಲೆಂಡ್​ನಲ್ಲೂ ಈ ವಿಶೇಷ ಕಾರ್ಯಕ್ರಮ ಪ್ರಸಾರವಾಗಿದ್ದು, ಭಾರತೀಯ ಮೂಲದ ಶತಾಯುಷಿ ಮಹಿಳೆ ರಾಮ್​ಬೆನ್ (Ramben)​​ ಎನ್ನುವವರು ಮೋದಿ ಅವರ ಕಾರ್ಯಕ್ರಮ ಆಲಿಸಿದ ನಂತರ ಪಿಎಂ ಫೋಟೋ ಮುಟ್ಟಿ ಆಶೀರ್ವದಿಸಿದ್ದಾರೆ.


ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಮೋದಿ ಅವರು ಭಾನುವಾರ 100ನೇ ಸಂಚಿಕೆಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶ ವಿದೇಶಗಳಲ್ಲಿನ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದರು. ನ್ಯೂಜಿಲೆಂಡ್​ನಲ್ಲಿ ಭಾರತೀಯರು ಕಾರ್ಯಕ್ರಮವನ್ನು ಆಲಿಸಿ, ಸಂಭ್ರಮಾಚರಣೆ ಮಾಡಿರುವ ಬಗ್ಗೆ ವರದಿಯಾಗಿದೆ. ಈ ವೇಳೆ 100 ವರ್ಷಗಳಿಗೂ ಹೆಚ್ಚು ವಯಸ್ಸಾಗಿರುವ ರಾಮ್​ಬೆನ್ ಮೋದಿ ಮಾತನ್ನು ಕೇಳಿದ್ದು ಎಲ್ಲರ ಗಮನ ಸೆಳೆಯಿತು.


ಆಶೀರ್ವಾದದ ವಿಡಿಯೋ ವೈರಲ್


100 ವರ್ಷದ ರಾಂಬೆನ್ ಎಂಬ ಮಹಿಳೆ ಆಶೀರ್ವಾದದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆಕೆ ಪ್ರಧಾನಿ ಮೋದಿಯನ್ನು ಆಶೀರ್ವದಿಸುತ್ತಿದ್ದಾರೆ. 'ಸಂತೋಷವಾಗಿರಿ' ಎಂದು ಪ್ರಧಾನಿ ಮೋದಿ ಫೋಟೋ ಮುಟ್ಟಿ ಆಶೀರ್ವಾದ ಮಾಡಿದರು." ತನು ಮನ ಧನಗಳಿಂದ ನಿಮಗೆ ಖುಷಿ ಸಿಗಲಿ. ಒಳ್ಳೆಯ ಆಯುಷ್ಯ, ಆರೋಗ್ಯ, ಸಂಪತ್ತು ನಿಮಗೆ ಒಲಿಯಲಿ ಎಂದು ಮನಸ್ಸಿನಿಂದ ಆಶೀರ್ವದಿಸುತ್ತಿದ್ದೇನೆ ಎಂದು ರಾಮ್​ಬೆನ್ ಹೇಳಿದ್ದಾರೆ.


ಇದನ್ನೂ ಓದಿ: Mattur Nandakumara: ಕನ್ನಡಿಗನಿಗೆ ಒಲಿದ ಲಂಡನ್ ಗೌರವ, ಇದು ಭಾರತೀಯ ಕಲೆಗೆ ಸಂದ ಮನ್ನಣೆ


ಮನ್ ಕಿ ಬಾತ್ ಆಲಿಸಿದ ನ್ಯೂಜಿಲೆಂಡ್ ಉಪಪ್ರಧಾನಿ


ವಿಶೇಷವೆಂದರೆ ಆಕ್ಲೆಂಡ್​ನಲ್ಲಿ ಆಯೋಜಿಸಲಾಗಿದ್ದ 100ನೇ ಮನ್ ಕಿ ಬಾತ್ ಕಾರ್ಯಕ್ರಮ ವಿಶೇಷ ಪ್ರಸಾರದ ಸ್ಥಳದಲ್ಲಿ ನ್ಯೂಜಿಲೆಂಡ್​ನ ಉಪಪ್ರಧಾನಿ ವಿನ್ಸ್​ಟನ್ ಪೀಟರ್ಸ್ ಕೂಡ ಹಾಜರಾಗಿ ಆಲಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತುಂಬಾ ಖುಷಿಯಾತ್ತದೆ. ಪಿಎಂ ಮೋದಿ ಅವರನ್ನು ಹಲವಾರು ಸಂದರ್ಭದಲ್ಲಿ ಭೇಟಿ ಮಾಡುವ ಭಾಗ್ಯ ನನಗೆ ಸಿಕ್ಕಿದೆ. ಮನ್ ಕಿ ಬಾತ್ ಕಾರ್ಯಕ್ರಮ ಅವರ ಮನದಾಳದಿಂದ ಬರುವ ಸಂವಾದವಾಗಿದೆ. 100ನೇ ಸಂಚಿಕೆ ಬಗ್ಗೆ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಕಿವೀಸ್ ನಾಡಿನ ಉಪಪ್ರಧಾನಿಗಳು ಹೇಳಿದರು.


ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ 'ಮನ್ ಕಿ ಬಾತ್' ನೇರ ಪ್ರಸಾರ


ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲೂ ಈ ವಿಶೇಷ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗಿದೆ. 22 ಭಾರತೀಯ ಭಾಷೆಗಳು ಮತ್ತು 29 ಉಪಭಾಷೆಗಳಲ್ಲಿ ಈ ಮನ್ ಕಿ ಬಾತ್ ಪ್ರಸಾರವಾಗಿದೆ. ಫ್ರೆಂಚ್, ಚೈನೀಸ್, ಇಂಡೋನೇಷಿಯನ್, ಟಿಬೆಟಿಯನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಶ್ತು, ಫಾರ್ಸಿ, ದರಿ ಮತ್ತು ಸ್ವಾಹಿಲಿ ಸೇರಿದಂತೆ 11 ವಿದೇಶಿ ಭಾಷೆಗಳಲ್ಲಿ ಪ್ರಸಾರ ಮಾಡಲಾಗಿದೆ. ಮನ್ ಕಿ ಬಾತ್ ಅನ್ನು ಆಲ್ ಇಂಡಿಯಾ ರೇಡಿಯೊದ 500 ಕ್ಕೂ ಹೆಚ್ಚು ಪ್ರಸಾರ ಕೇಂದ್ರಗಳು ಪ್ರಸಾರ ಮಾಡಿವೆ.


ಮನ್‌ ಕಿ ಬಾತ್‌ನಲ್ಲಿ ಮೋದಿ ಹೇಳಿದ್ದೇನು?


ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಮನ್‌ ಕಿ ಬಾತ್ ಅನ್ನೋದು ನನಗೆ ಕೇವಲ ಒಂದು ಕಾರ್ಯಕ್ರಮವಲ್ಲ. ಇದೊಂದು ವೃತ ಪೂಜೆ ಇದ್ದ ಹಾಗೆ. ನನಗೆ ಮನ್‌ ಕಿ ಬಾತ್ ಈಶ್ವರಿ ರೂಪವಾದ ಜನರ ಪೂಜೆಯಾಗಿದೆ. ಇಂದು ನಾವು ಮನ್‌ ಕಿ ಬಾತ್‌ನ 100ನೇ ಸಂಚಿಕೆಗೆ ತಲುಪಿದ್ದೇವೆ. ಮನ್‌ ಕಿ ಬಾತ್‌ನಲ್ಲಿ ಮಾತನಾಡುವಾಗ ನಾನು ಸಾಕಷ್ಟು ಬಾರಿ ಭಾವುಕನಾಗಿದ್ದೇನೆ ಎಂದು ಹೇಳಿದರು.




ಬೇಟಿ ಬಚಾವೋ ಬೇಟಿ ಪಡಾವೋ​​ ಜಾಗೃತಿ


ಮುಂದುವರೆದು ಮಾತನಾಡಿರುವ ಪ್ರಧಾನಿ ಮೋದಿ, ಮನ್​ ಕೀ ಬಾತ್​ ಕಾರ್ಯಕ್ರಮದ ಮೂಲಕ ದೇಶದ ಯುವಕರಿಗೆ ಆತ್ಮನಿರ್ಭರ್​ ಯೋಜನೆ ಕುರಿತು ಮಾಹಿತಿ ನೀಡಲಾಯಿತು. ಶಿಕ್ಷಣ, ವೈದ್ಯಕೀಯ ಸೌಲಭ್ಯ, ಜಲ ಸಂರಕ್ಷಣೆ, ಸರ್ಕಾರಿ ಯೋಜನೆಗಳ ಬಗ್ಗೆ ತಿಳಿಯಿತು. ವಿಶೇಷವಾಗಿ ‘ಬೇಟಿ ಬಚಾವೋ ಬೇಟಿ ಪಡಾವೋ​​’ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲಾಯಿತು. ಇದರಿಂದ ನಾರಿಶಕ್ತಿಯ ಅನಾವರಣ ಆಯಿತು. ಇದೇ ವೇಳೆ ಹರ್ಯಾಣದ ಸುನಿಲ್​ ಅವರ ‘ಸೆಲ್ಫಿ ವಿತ್​​​ ಬೇಟಿ’ ಅಭಿಯಾನವನ್ನೂ ನೆನೆಯಬೇಕು. ಇವರ ಈ ಅಭಿಯಾನಕ್ಕೆ ದೇಶದಲ್ಲಿ ಸಾಕಷ್ಟು ಪ್ರಶಂಸೆ ಪಡೆಯಿತು. ಮನ್​ ಕೀ ಬಾತ್​ ಮೂಲಕ ಸ್ವಸಹಾಯ ಮಹಿಳಾ ಸಂಘಗಳು, ಯುವ ಉದ್ಯಮಿಗಳ ಜತೆ ಸಂವಾದ ನಡೆಸಲಾಗಿದೆ ಎಂದು ಮೋದಿ ಹೇಳಿದರು.


ಇದನ್ನೂ ಓದಿ: Mann Ki Baat: ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್‌’ನ 100ನೇ ಸಂಚಿಕೆಯ ಹೈಲೈಟ್ಸ್ ಇಲ್ಲಿದೆ


ವೋಕಲ್ ಫಾರ್ ಲೋಕಲ್ ಮಂತ್ರ


ವೋಕಲ್ ಫಾರ್ ಲೋಕಲ್ ಮಂತ್ರ ಮತ್ತಷ್ಟು ಗಟ್ಟಿಯಾಗಿದೆ ಎಂದ ಮೋದಿ, ಮನ್‌ ಕಿ ಬಾತ್‌ನಲ್ಲಿ ಸ್ಥಳೀಯ ಉದ್ಯಮಿಗಳಿಗೆ ಉತ್ತೇಜನವನ್ನು ನೀಡಲಾಗಿದೆ. ಗೊಂಬೆಗಳ ತಯಾರಿಕೆ ಮತ್ತು ಆತ್ಮ ನಿರ್ಭರ ಭಾರತಕ್ಕೆ ಸಾಕಷ್ಟು ಪ್ರಚಾರ ದೊರೆಯಿತು. ಮನ್​ ಕೀ ಬಾತ್​ ಮೂಲಕ ಸ್ವಚ್ಛ ಭಾರತಕ್ಕೆ ಮೈಲಿಗಲ್ಲು ದೊರೆಯಿತು. ಪ್ರವಾಸೋದ್ಯಮ ಸಾಕಷ್ಟು ಅಭಿವೃದ್ದಿಯಾಯಿತು. ಹರಿಯಾಣದಲ್ಲಿ ಲಿಂಗಾನುಪಾತ ಪ್ರಮಾಣ ಸುಧಾರಣೆಯಾಗಿದೆ. ಹೀಗಾಗಿ ಈ ಕಾರ್ಯಕ್ರಮದ ಮೂಲಕ ಬೇರೆಯವರಿಂದ ಕಲಿಯಲು ಅನುಕೂಲವಾಗಿದೆ. ಇದು ಸಮಾಜಕ್ಕೆ ಪ್ರೇರಣೆಯಾಗಿದೆ ಎಂದರು.

top videos
    First published: