ಸಿರಿಯಾ ಮೇಲೆ 100 ಕ್ಷಿಪಣಿ ದಾಳಿ ನಡೆಸಿರುವ ಅಮೆರಿಕ, ಫ್ರಾನ್ಸ್​, ಬ್ರಿಟನ್​

news18
Updated:April 14, 2018, 5:51 PM IST
ಸಿರಿಯಾ ಮೇಲೆ 100 ಕ್ಷಿಪಣಿ ದಾಳಿ ನಡೆಸಿರುವ ಅಮೆರಿಕ, ಫ್ರಾನ್ಸ್​, ಬ್ರಿಟನ್​
news18
Updated: April 14, 2018, 5:51 PM IST
ನ್ಯೂಸ್ 18 ಕನ್ನಡ

ಲೆಬನಾನ್ (ಏ.14) : ಬ್ರಿಟನ್​ , ಫ್ರಾನ್ಸ್​ ಜೊತೆಗೂಡಿ ಸಿರಿಯಾ ಮೇಲೆ ದಾಳಿ ನಡೆಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸಿರಿಯಾ ಮೇಲೆ ಈಗಾಗಲೇ 100 ಕ್ಷಿಪಣಿ ದಾಳಿ ನಡೆಸಿದ್ದಾರೆ.

ಸಿರಿಯಾ ಅಧ್ಯಕ್ಷ ಬಶರ್ ಅಲ್​ ಅಸದ್​ ರಾಸಾಯನಿಕ ದಾಳಿಗೆ ಪ್ರತಿದಾಳಿ ನಡೆಸಿರುವ  ಟ್ರಂಪ್​ ಸಿರಿಯಾ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ.

ಅಮೆರಿಕ ಜಂಟಿ ದಾಳಿಗೆ ಈಗಾಗಲೇ  ಮೂವರು ಸಾವನ್ನಪ್ಪಿದ್ದಾರೆ ಎಂದು ಸಿರಿಯಾ ಸುದ್ದಿ ಸಂಸ್ಥೆ ವರದಿ ಮಾಡಿದೆ.  ಘಟನೆಯಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ಅನೇಕರು ಗಾಯಗೊಂಡಿದ್ದಾರೆ.  ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೇರಿಕ ಇದು ರಾಸಾಯನಿಕ ಕೇಂದ್ರಗಳ ಮೇಲೆ ನಡೆಸಿರುವ ದಾಳಿ ಎಂದು ಸಮರ್ಥನೆ ನೀಡಿದೆ.

ಸಿರಿಯಾ ಸೇನೆ ಮತ್ತು ನಾಗರೀಕರನ್ನು ಗುರಿಯಾಗಿಸಿಕೊಂಡು ನೂರಕ್ಕೂ ಹೆಚ್ಚು ಕ್ಷಿಪಣಿಗಳನ್ನು ಅಮೆರಿಕ ಜಂಟಿ ರಾಷ್ಟ್ರಗಳು ದಾಳಿ ನಡೆಸಿದೆ ಎಂದು ಸಿರಿಯಾ ಸೇನೆ ಕೂಡ ತಿಳಿಸಿದೆ.

ಎಫ್​ಪಿ ಪ್ರತಿನಿಧಿಗಳು ಹೇಳುವ ಪ್ರಕಾರ ಮುಂಜಾನೆ 4 ಗಂಟೆ ಸುಮಾರಿಗೆ ಈ ದಾಳಿ ನಡೆದಿದ್ದು  ಸಿರಿಯಾ ರಾಜಧಾನಿ ಡಮಸ್ಕಸ್​ ಉತ್ತರ ಮತ್ತು ಪೂರ್ವ ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿದೆ.

ಏಳು ವರ್ಷದಿಂದ ಸಿರಿಯಾದಲ್ಲಿ ನಾಗರಿಕ ಯುದ್ಧ ನಡೆಯುತ್ತಿದ್ದು ಈ ಯುದ್ಧ ಹತ್ತಿಕ್ಕಲು ನಾವು ಈ ದಾಳಿಗೆ ಮುಂದಾಗಿದೆ ಎಂದಿದ್ದಾರೆ.
Loading...

 
First published:April 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...