King Charles III: ಕಿಂಗ್ ಚಾರ್ಲ್ಸ್​ ರಾಜ ಆಗಿದ್ದಕ್ಕೆ 100 ಜನರ ಕೆಲಸವೇ ಹೋಗಬಹುದು!

ಚಾರ್ಲ್ಸ್ ಅವರು ಅಧಿಕಾರಕ್ಕೆ ಬಂದು ಅವರ ಈ ಹಿಂದಿನ ಅಧಿಕೃತ ನಿವಾಸವಾದ ಕ್ಲಾರೆನ್ಸ್ ಹೌಸ್‌ನಲ್ಲಿ ಸಾಕಷ್ಟು ಸಿಬ್ಬಂದಿಗಳು ಉದ್ಯೋಗ ಕಳೆದುಕೊಳ್ಳುವ ಭಯದಲ್ಲಿದ್ದು ಈ ಕುರಿತು ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸುದ್ದಿಪತ್ರಿಕೆಯೊಂದು ವರದಿ ಮಾಡಿದೆ.

ಕಿಂಗ್ ಚಾರ್ಲ್ಸ್ III

ಕಿಂಗ್ ಚಾರ್ಲ್ಸ್ III

 • Share this:

  ಕಿಂಗ್ ಚಾರ್ಲ್ಸ್ III (King Charles III) ಅವರ ಹಿಂದಿನ ನಿವಾಸದಲ್ಲಿದ್ದ ಸುಮಾರು 100 ಸಿಬ್ಬಂದಿಗಳು ತಮ್ಮ ಕೆಲಸವನ್ನು (work) ಕಳೆದುಕೊಳ್ಳಬಹುದು ಎಂಬ ಸುದ್ದಿ ಇದೀಗ ಬ್ರಿಟಿಷ್ ರಾಜಪ್ರಭುತ್ವದ ಹೃದಯ ಹೀನ ಕ್ರಮವನ್ನು ಕುರಿತು ಟೀಕೆಗೆ ಒಳಗಾಗಿದ್ದು, ಚಾರ್ಲ್ಸ್ ಅವರು ಗದ್ದುಗೆಯನ್ನು ಏರಿದ ಕೆಲವೇ ದಿನಗಳಲ್ಲಿ ಈ ಸುದ್ದಿ ವ್ಯಾಪಕವಾಗಿ ಹರಿದಾಡಿದೆ. ಚಾರ್ಲ್ಸ್ ಅವರ ಈ ಹಿಂದಿನ ಅಧಿಕೃತ ನಿವಾಸವಾದ ಕ್ಲಾರೆನ್ಸ್ ಹೌಸ್‌ನಲ್ಲಿ (Clarence House) ಸಾಕಷ್ಟು ಸಿಬ್ಬಂದಿಗಳು ಉದ್ಯೋಗ ಕಳೆದುಕೊಳ್ಳುವ ಭಯದಲ್ಲಿದ್ದು ಈ ಕುರಿತು ಸಿಬ್ಬಂದಿಗಳಿಗೆ (Staffs) ಸೂಚನೆ ನೀಡಲಾಗಿದೆ ಎಂದು ಸುದ್ದಿಪತ್ರಿಕೆಯೊಂದು ವರದಿ ಮಾಡಿದೆ.


  ರಾಣಿ ಎಲಿಜಬೆತ್ II ಅವರ ಮರಣದ ನಂತರ ಚಾರ್ಲ್ಸ್ ಅವರು ಪತ್ನಿ ಕ್ಯಾಮಿಲ್ಲಾ ಅವರೊಂದಿಗೆ ಬಂಕಿಂಗ್‌ಹ್ಯಾಮ್ ಅರಮನೆಗೆ ಸ್ಥಳಾಂತರಗೊಂಡಿದ್ದು ಈ ಸಮಯದಲ್ಲಿಯೇ ಸಿಬ್ಬಂದಿಗಳನ್ನು ಕೆಲಸದಿಂದ ವಜಾಮಾಡುವ ಕುರಿತು ಅವರಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ವರದಿ ತಿಳಿಸಿದೆ.


  ಹೃದಯ ಹೀನ ಕ್ರಮ
  ಶೋಕಾಚರಣೆಯ ಈ ಅವಧಿಯಲ್ಲಿ ಉದ್ಯೋಗ ನಷ್ಟವಾಗುವ ಕುರಿತು ಸಿಬ್ಬಂದಿಗೆ ತಿಳಿಸುವ ರಾಜಮನೆತನದ ನಿರ್ಧಾರವನ್ನು ಸಾರ್ವಜನಿಕ ಹಾಗೂ ವಾಣಿಜ್ಯ ಸೇವಾ ಒಕ್ಕೂಟವು ರಾಜಪ್ರಭುತ್ವದ ಹೃದಯ ಹೀನ ಕ್ರಮ ಎಂದು ಜರೆದಿದೆ. ರಾಜಮನೆತನದಲ್ಲಿ ಕೆಲವೊಂದು ಪಾತ್ರಗಳು ಬದಲಾದಂತೆ ಅರಮನೆಗಳಲ್ಲಿ ಕೂಡ ಕೆಲವೊಂದು ಬದಲಾವಣೆಗಳನ್ನು ನಿರೀಕ್ಷಿಸುವುದು ಸಹಜ ಆದರೆ ಇದನ್ನು ಘೋಷಿಸುವ ರೀತಿ ಮತ್ತು ಸಮಯ ಅಷ್ಟೊಂದು ಸಮಂಜಸವಾದುದಲ್ಲ ಎಂದು ಒಕ್ಕೂಟದ ಕಾರ್ಯದರ್ಶಿ ಮಾರ್ಕ್ ಸೆರ್ವೊಟ್ಕಾ ತಿಳಿಸಿದ್ದಾರೆ. ರಾಣಿಯ ಅಧಿಕೃತ ಅಂತ್ಯಸಂಸ್ಕಾರವು ಸೋಮವಾರ ನಡೆಯಲಿದ್ದು ಅಲ್ಲಿಯವರೆಗೆ ಬ್ರಿಟನ್ ಶೋಕಾಚರಣೆಯಲ್ಲಿದೆ.


  ಇದನ್ನೂ ಓದಿ: King Charles III: ರಾಣಿ ಎಲಿಜಬೆತ್ ಸಾವಿನ ಬೆನ್ನಲ್ಲೇ ಸದ್ದು ಮಾಡುತ್ತಿದೆ ರಾಜ ಚಾರ್ಲ್ಸ್ ಬಗೆಗಿನ ಈ ಭವಿಷ್ಯವಾಣಿ!

  ಸಿಟ್ಟಿಗೆದ್ದಿರುವ ಸಿಬ್ಬಂದಿ ವರ್ಗ
  ಕ್ಲಾರೆನ್ಸ್ ಹೌಸ್ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದು, ಚಾರ್ಲ್ಸ್ ಹಾಗೂ ಅವರ ಪತ್ನಿ ಕ್ಯಾಮಿಲ್ಲಾ ಅವರ ರಾಜ ಗೃಹದ ಕಾರ್ಯಾಚರಣೆಗಳು ನಿಲುಗಡೆಗೊಂಡಿದ್ದು ಕಾನೂನಿನ ಪ್ರಕಾರ ಸಮಾಲೋಚನೆ ಪ್ರಕ್ರಿಯೆಗಳು ಆರಂಭವಾಗಿವೆ ಎಂದು ತಿಳಿಸಿದೆ. ಗೃಹದಲ್ಲಿರುವ ಸಿಬ್ಬಂದಿಗಳು ಸುದೀರ್ಘ ಹಾಗೂ ನಿಷ್ಟಾವಂತ ಸೇವೆಯನ್ನು ಒದಗಿಸಿದ್ದಾರೆ. ಕೆಲವೊಂದು ಬದಲಾವಣೆಗಳು, ಪುನರಾವರ್ತನೆಗಳು ಅನಿವಾರ್ಯವಾಗಿದ್ದರೂ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯ ಸಿಬ್ಬಂದಿಗೆ ಪರ್ಯಾಯ ಉದ್ಯೋಗಗಳನ್ನು ದೊರಕಿಸಿಕೊಡುವಲ್ಲಿ ನಾವು ಶೀಘ್ರವೇ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


  ಚಾರ್ಲ್ಸ್ ಅವರ ನಿವಾಸದ ಪರಿಚಾರಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದು ಎಲ್ಲಾ ಸಿಬ್ಬಂದಿಗಳು ಕೋಪಗೊಂಡಿದ್ದಾರೆ ಹಾಗೂ ಈ ಸುದ್ದಿಯಿಂದ ಬೆಚ್ಚಿಬಿದ್ದಿದ್ದಾರೆ ಎಂದು ತಿಳಿಸಿದ್ದಾರೆ. ಚಾರ್ಲ್ಸ್ ಅವರು ಕೋಪಗೊಂಡ ಎರಡು ವಿಡಿಯೋಗಳು ವೈರಲ್ ಆಗಿದ್ದು 73 ರ ಹರೆಯದ ರಾಜನಿಗೆ ನಕಾರಾತ್ಮಕ ಟೀಕೆಗಳನ್ನು ವ್ಯಕ್ತಗೊಂಡಿವೆ.


  ಚಾರ್ಲ್ಸ್ ಅವರಿಗೆ ಸಿಟ್ಟು ಜಾಸ್ತಿ
  ಉತ್ತರ ಐರ್ಲೆಂಡ್‌ನಲ್ಲಿ ಚಾರ್ಲ್ಸ್ ಅವರು ಸಂದರ್ಶಕರ ಪುಸ್ತಕಕ್ಕೆ ಸಹಿ ಹಾಕುವಾಗ ಪೆನ್ ಸೋರುತ್ತಿದ್ದುದರಿಂದ ಚಾರ್ಲ್ಸ್ ಕುಪಿತಗೊಳ್ಳುತ್ತಾರೆ ಹಾಗೂ ಈ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಪೆನ್ನಿನಿಂದ ಶಾಯಿ ಸೋರಿಕೆಯಾಗುತ್ತಿರುವುದನ್ನು ನೋಡಿ ಚಾರ್ಲ್ಸ್ ಅವರು ಗೊಣಗಿರುವುದನ್ನು ವಿಡಿಯೋಗಳು ಸೆರೆಹಿಡಿದಿವೆ.


  ಈ ಘಟನೆ ಸಂಭವಿಸಿದ ನಂತರ ಚಾರ್ಲ್ಸ್ ಅವರು ಅಧಿಕಾರವನ್ನು ಕೈಗೆತ್ತಿಕೊಳ್ಳುವ ಸಮಯದಲ್ಲಿ ಡಾಕ್ಯುಮೆಂಟ್ ಒಂದಕ್ಕೆ ಸಹಿ ಹಾಕುವಾಗ ಪೆನ್ ಹೋಲ್ಡರ್ ಕುರಿತಾಗಿ ತಮ್ಮ ಸಿಬ್ಬಂದಿಗೆ ಕಿರಿಕಿರಿಯಿಂದ ಸನ್ನೆ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.


  ಇದನ್ನೂ ಓದಿ:  King Charles: ಕಿಂಗ್ ಚಾರ್ಲ್ಸ್ ಮತ್ತೆ ಗರಂ, ಕ್ಯಾಮೆರಾದಲ್ಲಿ ದೃಶ್ಯ ಸೆರೆ! ಕಾರಣ ಏನು?

  ಮಾಧ್ಯಮಗಳು ಚಾರ್ಲ್ಸ್ ಅವರನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದು ಅವರ ಪ್ರತಿಯೊಂದು ಚಲನವಲನಗಳನ್ನು ಜನತೆಗೆ ಬಿತ್ತರಿಸುತ್ತಿದೆ. ಮಾತೃವಿಯೋಗದ ನಂತರ ಚಾರ್ಲ್ಸ್ ಅವರು ಬಿಡುವಿಲ್ಲದ ದಿನಚರಿಯನ್ನು ಹೊಂದಿದ್ದಾರೆ. ಬಕಿಂಗ್‌ಹ್ಯಾಮ್ ಅರಮನೆಯಿಂದ ವೆಸ್ಟ್‌ಮಿನಿಸ್ಟರ್ ಹಾಲ್‌ಗೆ ರಾಣಿಯ ಶವಪೆಟ್ಟಿಗೆಯ ಮೆರವಣಿಗೆಯ ಸಮಯದಲ್ಲಿ ಉತ್ತರ ಐರ್ಲೆಂಡ್‌ಗೆ ಪ್ರಯಾಣಿಸಿದ್ದ ಅವರು ಮರಳಿ ಲಂಡನ್‌ಗೆ ಮರಳಿದರು.

  Published by:Ashwini Prabhu
  First published: