ಎಲೆಕ್ಟ್ರಿಕ್ ವಾಹನಗಳು ದೇಶದಲ್ಲಿ ಭಾರೀ ಬದಲಾವಣೆ ಜೊತೆಗೆ ಉದ್ಯೋಗ ಸೃಷ್ಟಿಗೂ ನೆರವಾಗಲಿವೆ; ಸಚಿವ ನಿತಿನ್ ಗಡ್ಕರಿ  

ಈಗ ರಸ್ತೆಯ ಮೂಲಕ ಹೋಗುವ ವೆಚ್ಚ ಪ್ರತಿ ಕಿ.ಮೀ.ಗೆ 10 ರೂ., ರೈಲ್ವೆ ಪ್ರತಿ ಕಿ.ಮೀ.ಗೆ 6 ರೂ., ಜಲಮಾರ್ಗಗಳು ಪ್ರತಿ ಕಿ.ಮೀ.ಗೆ 1 ರೂ. ಇದೆ. ರಸ್ತೆಯ ಪ್ರಯಾಣ ವೆಚ್ಚ ತುಂಬಾ ಹೆಚ್ಚಾಗಿದೆ. ಆದರೆ ನಾವು ಭವಿಷ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬದಲಿಗೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸಿದರೆ ಪ್ರತಿ ಕಿ.ಮೀ. ವೆಚ್ಚವು 5 ರೂ.ಗೆ ಇಳಿಯಲಿದೆ ಎಂದು ಹೇಳಿದರು.

HR Ramesh | news18-kannada
Updated:December 10, 2019, 8:23 PM IST
ಎಲೆಕ್ಟ್ರಿಕ್ ವಾಹನಗಳು ದೇಶದಲ್ಲಿ ಭಾರೀ ಬದಲಾವಣೆ ಜೊತೆಗೆ ಉದ್ಯೋಗ ಸೃಷ್ಟಿಗೂ ನೆರವಾಗಲಿವೆ; ಸಚಿವ ನಿತಿನ್ ಗಡ್ಕರಿ  
ನ್ಯೂಸ್ 18 ಆಟೋ ಟೆಕ್ ಕಾರ್ಯಕ್ರಮದಲ್ಲಿ ವಿಡಿಯೋ ಮೂಲಕ ಮಾತನಾಡಿದ ಸಚಿವ ನಿತಿನ್ ಗಡ್ಕರಿ.
  • Share this:
ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವುದರಿಂದ ಸರ್ಕಾರದ ಆಮದು ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದು ದೇಶದಲ್ಲಿ ಕೋಟಿ ಉದ್ಯೋಗಗಳ ಸೃಷ್ಟಿಗೆ ಸಹಾಯಕವಾಗಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದರು.

ನ್ಯೂಸ್ 18 ಟೆಕ್ ಮತ್ತು ಆಟೋ ಅವಾರ್ಡ್​ ಕಾರ್ಯಕ್ರಮದಲ್ಲಿ ವಿಡಿಯೋ ಸಂದೇಶ ನೀಡಿದ ಸಚಿವ ನಿತಿನ್ ಗಡ್ಕರಿ, ನಮಗೆ ದೊಡ್ಡ ಸವಾಲು ಅಂದರೆ ಅದು ಆಮದು. ಕಚ್ಚಾ ತೈಲ ಆಮದಿನ ವೆಚ್ಚವೇ 7 ಲಕ್ಷ ಕೋಟಿ. ಪೆಟ್ರೋಲ್ ಮತ್ತು ಡೀಸೆಲ್ ಬದಲಿಗೆ ವಿದ್ಯುಚ್ಛಕ್ತಿ ವಾಹನಕ್ಕೆ ಬದಲಾದರೆ ಎರಡು ಲಕ್ಷ ಕೋಟಿ ಆಮದು ವೆಚ್ಚ ಉಳಿಯಲಿದೆ. ಈ ಹಣವನ್ನು ಉದ್ಯೋಗ ಸೃಷ್ಟಿಗೆ ಬಳಸಿಕೊಳ್ಳಬಹುದು ಎಂದು ಹೇಳಿದರು.

ಆಟೋ ಉದ್ಯಮವು ಭಾರತವನ್ನು ವಿದ್ಯುತ್ ಚಲನಶೀಲತೆಯ ಉತ್ಪಾದನಾ ಕೇಂದ್ರವನ್ನಾಗಿ ಮಾಡಲಿದೆ ಮತ್ತು ಭಾರತದಲ್ಲಿ ಎಲೆಕ್ಟ್ರಿಕಲ್ ವಾಹನಗಳ ಉತ್ಪಾದನೆಗೆ ಎಲ್ಲಾ ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ ಎಂಬ ನೂರಕ್ಕೆ ನೂರರಷ್ಟು ವಿಶ್ವಾಸ ನನಗಿದೆ ಎಂದು ನಿತಿನ್ ಗಡ್ಕರಿ ಹೇಳಿದರು.


ನಮಗೆ ಯಂತ್ರ ನಿರ್ವಹಣಾ ಸಾಮರ್ಥ್ಯ ಸಿಕ್ಕಿದೆ. ಮಾನವ ಸಂಪನ್ಮೂಲ ಮತ್ತು ಕಚ್ಚಾ ವಸ್ತುಗಳ ಲಭ್ಯತೆಯೂ ನಮ್ಮಲ್ಲಿ ಯಥೇಚ್ಚವಾಗಿದೆ. ನಾವು ಪಡೆದುಕೊಂಡಿದ್ದೇವೆ. ಮರುಬಳಕೆ ವಸ್ತುಗಳನ್ನು ಬಳಸಿಕೊಂಡು ವಾಹನ ತಯಾರಿಸುವುದರಿಂದ ಉತ್ಪಾದನಾ  ವೆಚ್ಚವೂ ಕೂಡ ಕಡಿಮೆಯಾಗಲಿದೆ ಎಂದು ಗಡ್ಕರಿ ತಿಳಿಸಿದರು.

ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ವಿದ್ಯುತ್​ಅನ್ನು ಇಂಧನವಾಗಿ ಬಳಸಲು ಬಯಸುತ್ತೇವೆ. ಇದು ಭಾರೀ ಬದಲಾವಣೆಗೂ ಕಾರಣವಾಗಲಿದೆ. ಈಗ ರಸ್ತೆಯ ಮೂಲಕ ಹೋಗುವ ವೆಚ್ಚ ಪ್ರತಿ ಕಿ.ಮೀ.ಗೆ 10 ರೂ., ರೈಲ್ವೆ ಪ್ರತಿ ಕಿ.ಮೀ.ಗೆ 6 ರೂ., ಜಲಮಾರ್ಗಗಳು ಪ್ರತಿ ಕಿ.ಮೀ.ಗೆ 1 ರೂ. ಇದೆ. ರಸ್ತೆಯ ಪ್ರಯಾಣ ವೆಚ್ಚ ತುಂಬಾ ಹೆಚ್ಚಾಗಿದೆ. ಆದರೆ ನಾವು ಭವಿಷ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬದಲಿಗೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸಿದರೆ ಪ್ರತಿ ಕಿ.ಮೀ. ವೆಚ್ಚವು 5 ರೂ.ಗೆ ಇಳಿಯಲಿದೆ ಎಂದು ಹೇಳಿದರು.
 
First published:December 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ