ಆತ 10 ವರ್ಷದ ಬಾಲಕ (10 Years Old Boy). ಪ್ರಾರ್ಥನಾ ಮಂದಿರದ (Prayer Hall) ಬಳಿ ಭಿಕ್ಷೆ (Begging) ಬೇಡುವುದು, ಅಲ್ಲಿಯೇ ಇರುವ ಸ್ಥಳವೊಂದರ ಬಳಿ ಮಲಗುವುದು. ಕಳೆದ ಒಂದು ವರ್ಷದಿಂದ ಬಾಲಕನ ನಿತ್ಯದ ಕೆಲಸ ಇದೇ ಆಗಿತ್ತು. ಆತನಿಗೆ ಸಹಾಯ ಮಾಡಲು ತನ್ನವರು ಅಂತ ಯಾರು ಇರಲಿಲ್ಲ. ಹೀಗಾಗಿ ಅನಾಥನಾಗಿದ್ದ ಬಾಲಕ, ಹೊಟ್ಟೆ ತುಂಬಿಸಿಕೊಳ್ಳಲು ಪ್ರಾರ್ಥನಾ ಮಂದಿರದ ಬಳಿ ತೆರಳಿ ಹರಿದ ಬಟ್ಟೆಗಳೊಂದಿಗೆ ಮಂದಿರಕ್ಕೆ ಭೇಟಿ ನೀಡಿ ಭಕ್ತರಿಂದ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ. ಆತನನ್ನು ಅಲ್ಲಿನ ಜನರು ಶಹಜೇಬ್ ಆಲಂ (Shahjeb Alam) ಎಂದು ಕರೆಯುತ್ತಿದ್ದರು. ಆದrಈಗ ದಿನ ಬೆಳಗಾಗುತ್ತಿದ್ದಂತೆ ಆತನ ಜೀವನವೇ ಬದಲಾಗಿದೆ. ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಗೆ ಆತ ಒಡೆಯನಾಗಿದ್ದಾನೆ. ಅರೇ, ಭಿಕ್ಷೆ ಬೇಡುತ್ತಿದ್ದ ಬಾಲಕ ದಿನಬೆಳಗಾಗೋದ್ರಲ್ಲಿ ಕೋಟ್ಯಾಧಿಪತಿ (Crorepati) ಆಗಿದ್ದೇಕೆ ಅಂತ ಯೋಚನೆ ಮಾಡ್ತಿದ್ದೀರಾ? ಇಲ್ಲಿದೆ ವಿವರ
ಉತ್ತರ ಪ್ರದೇಶದ ಸಹರಾನ್‌ಪುರ ನಿವಾಸಿಯಾಗಿದ್ದ ಬಾಲಕ
ಶಹಜೇಬ್ ಆಲಂ, ತಂದೆ-ತಾಯಿ ಏಕೈಕ ಮಗನಾಗಿದ್ದ. ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಪಾಂಡೌಲಿ ಗ್ರಾಮದಲ್ಲಿ ಆತನ ಪೋಷಕರೊಂದಿಗೆ ವಾಸಿಸುತ್ತಿದ್ದ. ಆದರೆ 2019ರಲ್ಲಿ ಆತನ ತಂದೆ ಮೊಹಮ್ಮದ್ ನವೀದ್, ದೀರ್ಘ ಕಾಲದ ಅನಾರೋಗ್ಯದಿಂದ ಸಾವನ್ನಪ್ಪಿದ್ದರು.
ಬಾಲಕನ ಇಮ್ರಾನಾ ಬೇಗಂ, ಗಂಡ ಸಾವನ್ನಪ್ಪುವ ಕೆಲ ತಿಂಗಳ ಮುನ್ನ ಅನಾರೋಗ್ಯದಿಂದ ಬಳಲುತ್ತಿದ್ದ ಗಂಡನನ್ನು ಬಿಟ್ಟು, ಯಮುನಾ ನಗರದಲ್ಲಿರುವ ತನ್ನ ಪೋಷಕರ ಮನೆಗೆ ಮಗನೊಂದಿಗೆ ಬಂದು ವಾಸಿಸುತ್ತಿದ್ದಳು. ಕೆಲ ಸಮಯದ ಬಳಿ ಅಲ್ಲಿಂದ ಮಗನ ಜೊತೆ ಉತ್ತರಾಖಂಡದ ಪಿರಾನ್ ಕಲಿಯಾರ್ಗೆ (Piran Kaliyar) ಸ್ಥಳಾಂತರ ಆಗಿ, ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸಲು ಆರಂಭಿಸಿದ್ದಳು.
ಇದನ್ನೂ ಓದಿ: House Divided: ಅಡುಗೆ ಕೋಣೆ ತೆಲಂಗಾಣದಲ್ಲಿ, ಬೆಡ್ರೂಂ ಮಹಾರಾಷ್ಟ್ರದಲ್ಲಿ: ಮನೆಯೊಂದು ಎರಡು ರಾಜ್ಯಗಳು!
ಕೊರೊನಾಗೆ ತಾಯಿಯೂ ಬಲಿ, ಬಾಲಕ ಅನಾಥ
ಆದರೆ, ವಿಧಿ ಬಾಲಕನ ಬಾಳಿನಲ್ಲಿ ಮತ್ತೊಮ್ಮೆ ಕ್ರೂರವಾಗಿ ನಡೆದುಕೊಂಡಿತ್ತು. 2021ರಲ್ಲಿ ಬಾಲಕನ ತಾಯಿ ಇಮ್ರಾನಾ, ಕೊರೋನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದರು. ಪರಿಣಾಮ ಬಾಲಕನನ್ನು ನೋಡಿಕೊಳ್ಳಲು ಯಾರು ಇರಲಿಲ್ಲ. ಸ್ಥಳೀಯರೊಬ್ಬರು ಅನಾಥನಾಗಿದ್ದ ಶಹಜೇಬ್ಗೆ, ಪಿರಾನ್ ಕಲಿಯಾದಲ್ಲಿ ಆಶ್ರಯ ಪಡೆದುಕೊಳ್ಳಲು ಸಲಹೆ ನೀಡಿದ್ದರು. ಅಂದಹಾಗೇ, ಪಿರಾನ್ ಕಲಿಯಾರ್, ಸೂಫಿ ಪಂಥದ ಪ್ರಸಿದ್ಧ ಪ್ರಾರ್ಥನಾ ಮಂದಿರವಾಗಿದೆ. ಇಲ್ಲಿಯೇ ಬಾಲಕ ಭಿಕ್ಷೆ ಬೇಡುತ್ತಾ ಜೀವನ ಮಾಡುತ್ತಿರುತ್ತಾನೆ.
ಬಾಲಕ ಹೆಸರಿಗೆ 2 ಕೋಟಿ ರೂಪಾಯಿ ಆಸ್ತಿ ಬರೆದಿದ್ದ ತಾತ
ಇಂತಹ ಸ್ಥಿತಿಯಲ್ಲಿದ್ದ ಬಾಲಕನ ಜೀವನ ಬದಲಾಗಿದ್ದು ಇಲ್ಲಿಯೇ ನೋಡಿ. ಶಹಜೇಬ್ ಆಲಂ, ಅವರ ತಾತ ಅಂದರೆ, ಮೊಹಮ್ಮದ್ ನವೀದ್ ಅವರ ತಂದೆ ಮೊಹಮ್ಮದ್ ಯಾಕುಬ್ ತಮ್ಮ, ಉಯಿಲಿನಲ್ಲಿ ತಮ್ಮ ಹೆಸರಿನ ಆಸ್ತಿಯಲ್ಲಿ ಬಾಲಕನ ತಂದೆಗೆ ಹೋಗಬೇಕಿದ್ದ ಸುಮಾರು 2 ಕೋಟಿ ರೂಪಾಯಿ ಆಸ್ತಿಯನ್ನು ಮೊಮ್ಮಗನ ಹೆಸರಿನಲ್ಲಿ ಬರೆದಿದ್ದರು. ಇದರಂತೆ ಅವರ ಮರಣದ ನಂತರ ಆ 2 ಕೋಟಿ ರೂಪಾಯಿ ಮೊಮ್ಮಗನಾದ ಶಹಜೇಬ್ಗೆ ಸೇರಬೇಕಿತ್ತು.
2021ರಲ್ಲಿ ಮೊಹಮ್ಮದ್ ಯಾಕುಬ್ ಅವರು ನಿಧನರಾಗಿದ್ದರು. ಆ ವೇಳೆಗೆ ಅವರು ಬರೆದಿಟ್ಟಿದ್ದ ಉಯಿಲಿನ ಅನ್ವಯ, ಎರಡು ಅಂತಸ್ತಿನ ಮಹಡಿ ಮನೆ ಹಾಗೂ 5 ಬಿಘಾ ಭೂಮಿ ಅಧಿಕೃತವಾಗಿ ಬಾಲಕನಿಗೆ ಬಂದಿತ್ತು.
ಇದನ್ನೂ ಓದಿ: Badlaav Humse Hai: ದೇಶಕ್ಕಾಗಿ ಬದಲಾವಣೆ ತಂದ ಸಾಧಕರಿಗಿಂದು ನೆಟ್ವರ್ಕ್ 18 ಕಡೆಯಿಂದ ಸನ್ಮಾನ!
ಬಾಲಕ ಪತ್ತೆಗಾಗಿ ಸಂಬಂಧಿಗಳ ಹುಡುಕಾಟ
ಆಸ್ತಿ ಬಾಲಕ ಶಹಜೇಬ್ ಹೆಸರಿಗೆ ಬಂದರೂ, ಆತ ಎಲ್ಲಿದ್ದಾನೆ ಎಂಬ ಮಾಹಿತಿ ಯಾರಿಗೂ ಇರಲಿಲ್ಲ. ಸಂಬಂಧಿಕರು ಬಾಲಕನ ಪತ್ತೆಗಾಗಿ ಎಲ್ಲ ಕಡೆ ಹುಡುಕಾಟ ನಡೆಸಿದ್ದರು. ಈ ವೇಳೆ ಶಹಜೇಬ್, ಪಿರಾನ್ ಕಲಿಯಾರ್ನಲ್ಲಿ ಭಿಕ್ಷೆ ಬೇಡುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ್ದ ಸಂಬಂಧಿಗಳು ಆತನನ್ನು ಕರೆದುಕಂಡು ಉತ್ತರ ಪ್ರದೇಶದ ಸಹರಾನ್ಪುರ್ಗೆ ವಾಪಸ್ ಆಗಿದ್ದಾರೆ.
ಶಹಜೇಬ್ ಆಲಂ ಪತ್ತೆಯಾಗುತ್ತಿದ್ದಂತೆ ಹಬ್ಬದ ವಾತಾರವಣ
ನಾಪತ್ತೆಯಾಗಿದ್ದ ಬಾಲಕ ಸಿಕ್ಕಾಗ, ಕುಟುಂಬದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಆತನ ಹುಡುಕಾಟದ ವೇಳೆ ನಂಬಿಕೆಯನ್ನೇ ಕಳೆದುಕೊಂಡಿದ್ದೆವು ಎಂದು ಶಹಜೇಬ್ ಸಂಬಂಧಿ ಶಾ ಆಲಂ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆತನ ಫೋಟೋ ಹಾಕಿದ್ದ ವೇಳೆಯೂ ಆತನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಸದ್ಯ ಆತ ನಮ್ಮ ಕುಟುಂಬದೊಂದಿಗೆ ಹೊಂದಾಣಿಕೆಯಾಗುತ್ತಿದ್ದಾನೆ. ಆತ ಅಲ್ಲಿನ ಸ್ಥಿತಿಯಿಂದ ಹೊರ ಬರಲು ಇನ್ನಷ್ಟು ಸಮಯ ಬೇಕಾಗುತ್ತದೆ. ಇಷ್ಟು ಸಣ್ಣ ವಯಸ್ಸಿನಲ್ಲೇ ಆತ ಸಾಕಷ್ಟು ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದಾನೆ ಎಂದು ಶಹಜೇಬ್ ಸಂಬಂಧಿ ನವಾಜ್ ಆಲಂ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ