ಮುಂಬೈ ( ನ.26) : ಹತ್ತು ವರ್ಷಗಳ ಹಿಂದೆ ಇದೇ ದಿನ ಮಂಬೈ ಸ್ತಬ್ಧವಾಗಿತ್ತು. ಲಷ್ಕರ್ ಎ ಯ್ಬಾ ಉಗ್ರ ಸಂಟನೆಯ ಹತ್ತು ಉಗ್ರರು ವಾಣಿಜ್ಯ ನಗರಿಯ ಆರು ಪ್ರದೇಶದಲ್ಲಿ ದಾಳಿ ನಡೆಸಿದ್ದರು. ಈ ದಾಳಿ 26/11 ಎಂದು ಹೆಸರಾಗಿದೆ. ಉಗ್ರರ ಈ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದರು. 300 ಮಂದಿ ಗಾಯಗೊಂಡಿದ್ದರು. ನಾಲ್ಕು ದಿನಗಳ ವರೆಗೆ ಉಗ್ರರ ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ದಾಳಿ ನಡೆದಿತ್ತು.
`ದಾಳಿಯಲ್ಲಿ ತೊಂದರೆಗೊಳಗಾದವರಿಗೆ ನ್ಯಾಯ ಒದಗಿಸಬೇಕು ಮತ್ತು ಈ ದಾಳಿಯ ಪ್ರಮುಖ ಸೂತ್ರದಾರ ಮತ್ತು ಜಮಾತ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ದಾಳಿಯಿಂದ ಪಾರಾದ ಮಹಮ್ಮದ್ ತೌಫಿಕ್ ಶೇಖ್ ಅವರು ಪ್ರಧಾನಿ ಮೋದಿ ಅವರನ್ನು ಆಗ್ರಹಿಸಿದ್ದಾರೆ.
ಇದನ್ನು ಓದಿ : 26/11 ಉಗ್ರ ದಾಳಿಯಲ್ಲಿ ಪಾರಾದ ಇಸ್ರೇಲ್ ಬಾಲಕನಿಗೆ ಕತ್ತಲೆಂದರೆ ಈಗಲೂ ಭಯ
ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ಯಾವುದೇ ಆತಂಕವಿಲ್ಲದೆ ಸಂಚರಿಸುತ್ತಿದ್ದಾನೆ. ಆತನ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಘಟನೆಯ ಬಳಿಕ ನನಗೆ ಕೆಲಸ ನೀಡುವುದಾಗಿ ಹೇಳಿದರು. ಆದರೆ, ಇದುವರೆ ಏನು ಆಗಿಲ್ಲ. ಇವತ್ತು ಅನೇಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಆದರೆ, ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮಹಮ್ಮದ್ ಶೇಖ್ ಅವರು `ಎಎನ್‍ಐ'ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ನಾರಿಮನ್ ಹೌಸ್ ಕಾಂಪ್ಲೆಕ್ಸ್‍ನಲ್ಲಿ ನಡೆದ ದಾಳಿಯಲ್ಲಿ ರಬ್ಬಿ, ಆತನ ಪತ್ನಿ ಮತ್ತು ಇತರ ಆರು ಮಂದಿ ಇಸ್ರೇಲ್ ನಾಗರಿಕರು ಮೃತಪಟ್ಟಿದ್ದರು. ರಬ್ಬಿ ದಂಪತಿಯ ಎರಡು ವರ್ಷದ ಮಗು ಮಾತ್ರ ಬದುಕಿತ್ತು. ಉಗ್ರರ ಕ್ರೂರ ದಾಳಿಯಲ್ಲಿ ಹೆತ್ತವರನ್ನು ಕಳೆದುಕೊಂಡು ಈತ ಅನಾಥನಾಗಿದ್ದಾನೆ.
ಪ್ರಧಾನಿ ನರೇಂದ್ರ ಮೋದಿ ಅವರು 2017ರಲ್ಲಿ ಇಸ್ರೇಲ್‍ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೋಶೆ ಅವರನ್ನು ಭೇಟಿ ಮಾಡಿದ್ದರು. ಬಳಿಕ ಜನವರಿ 2018ರ ಜನವರಿಯಲ್ಲಿ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಅವರು ಭಾರತಕ್ಕೆ ಭೇಟಿ ನೀಡಿದಾಗ 26/11ರ ದಾಳಿಯಲ್ಲಿ ಬದುಕುಳಿದಿದ್ದವರನ್ನು ಭೇಟಿ ಮಾಡಿದ್ದರು.
Tributes to those who lost their lives in the gruesome 26/11 terror attacks in Mumbai.
Our solidarity with the bereaved families.
A grateful nation bows to our brave police and security forces who valiantly fought the terrorists during the Mumbai attacks.
— Narendra Modi (@narendramodi) November 26, 2018
26/11 मुंबई पर आतंकवादी हमले में शहीद हुए वो जवानों को श्रद्धांजलि और उनके बलीदान को सलाम. जय हींद 🙏#MumbaiTerrorAttack pic.twitter.com/JiBDBtoDxb
— Bhootnath💀 (@Bhootnath18) November 26, 2018
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ