ದಿನದಿಂದ ದಿನಕ್ಕೆ ದೇಶದಲ್ಲಿ ಕೊರೋನಾ ಸಂಖ್ಯೆ ಹೆಚ್ಚುತ್ತಿದೆ. ಜನರಲ್ಲಿನ ಜಾಗೃತಿ ಕೊರತೆ ಜೊತೆ ನಿರ್ಲಕ್ಷ್ಯ ಇದಕ್ಕೆ ಕಾರಣವೂ ಹೌದು. ಇದೇ ಕಾರಣಕ್ಕೆ ಇಲ್ಲೊಬ್ಬ ಪೋರಾ ಜನರಿಗೆ ಈ ಕುರಿತು ಅರಿವು ಮೂಡಿಸಲು ಮುಂದಾಗಿದ್ದಾನೆ. ವಿಶೇಷ ಎಂದರೇ ಆತ ಗಾಂಧಿ ವೇಷ ತೊಟ್ಟು ಕೊರೋನಾ ಪರೀಕ್ಷೆಗೆ ಹಾಜರಾಗಿರುವುದು. ಗಾಂಧಿ ಜಯಂತಿ ಸಮಯದಲ್ಲಿ 10 ವರ್ಷದ ಪೋರ ಮಹಾತ್ಮರ ಧಿರಿಸಿನಲ್ಲಿ ಸ್ವಾಬ್ ಟೆಸ್ಟಿಂಗ್ಗೆ ಒಳಗಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನರಿಗೆ ಕೋವಿಡ್ ಬಗ್ಗೆ ಅರಿವು ಮೂಡಿಸಲು ಈ ರೀತಿ ಗಾಂಧಿಜೀ ವೇಷ ತೊಟ್ಟು ಬಂದಿದ್ದೇನೆ ಎಂದು ಎಎನ್ಐಗೆ ಬಾಲಕ ತಿಳಿಸಿದ್ದಾನೆ. ಬಾಲಕನ ಈ ಕಾರ್ಯಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.
Gujarat: A 10-year-old boy from Rajkot dressed up as Mahatma Gandhi and went for his #COVID19 test.
He said, "My swab samples have been taken for coronavirus test. People should not be apprehensive about the test. Our country will be healthy only if we cooperate." (29.09.2020) pic.twitter.com/pfFoSwsgUb
— ANI (@ANI) September 30, 2020
ಗಾಂಧಿ ವೇಷದಲ್ಲಿ ಅರಿವು ಮೂಡಿಸುವ ಮೂಲಕ ರಾಷ್ಟ್ರಪಿತರೇ ಜನರಿಗೆ ಸಂದೇಶ ಸಾರಿದಂತೆ ಆಗಿದೆ. ಇನ್ನಾದರೂ ಜನರು ಸ್ವಯಃ ಪ್ರೇರಿತರಾಗಿ, ಕೊರೋನಾ ಪರೀಕ್ಷೆಗೆ ಒಳಗಾಗಬೇಕು. ಜೊತೆಗೆ ಮಾಸ್ಕ್ ತೊಟ್ಟು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೊರೋನಾ ಹೋಗಲಾಡಿಸಲು ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಕೂಡ ಅವಶ್ಯ ಎಂದಿದ್ದಾರೆ ಇಲ್ಲಿನ ವೈದ್ಯರು.
ಭಾರತದಲ್ಲಿ ಇದುವರೆಗೆ 62 ಲಕ್ಷಕ್ಕೂ ಹೆಚ್ಚಿನ ಕೊರೋನಾ ಪ್ರಕರಣಗಳು ದಾಖಲಾಗುತ್ತಿದೆ. ದಿನವೊಂದಕ್ಕೆ 80 ಸಾವಿರ ಹೊಸ ಪ್ರಕರಣ ದಾಖಲಾಗುತ್ತಿದ್ದು, 1,179 ಜನರು ಸಾವನ್ನಪ್ಪುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ