ಮೀರತ್ ನಲ್ಲಿ ಟ್ಯೂಶನ್​ನಿಂದ ಮರಳುತ್ತಿದ್ದ 10ನೇ ತರಗತಿ ಬಾಲಕಿ ಮೇಲೆ ಗ್ಯಾಂಗ್​ರೇಪ್, ಮನೆಗೆ ಮರಳಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ

ಬಾಲಕಿಯ ಮನೆಯ ಬಳಿಯೇ ಇರುವ ಟವರ್ ಒಂದರ ಬಳಿ ಕಾಪಸಾಡ್ ಗ್ರಾಮದ ನಾಲ್ವರು ಯುವಕರು ಬಾಲಕಿಯನ್ನು ಅಪಹರಿಸಿ ರೇಪ್ ಮಾಡಿದ್ದಾರೆ. ದುರ್ಘಟನೆ ನಡೆದ ನಂತರ ಬಾಲಕಿ ಮನೆಗೆ ತೆರಳಿ ದಾರುಣ ಘಟನೆಯ ಕುರಿತು ತನ್ನ ಪೋಷಕರಿಗೆ ಎಲ್ಲಾ ವಿಚಾರವನ್ನೂ ತಿಳಿಸಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೀರತ್ (ಏಪ್ರಿಲ್ 03): ಮೀರತ್​ ಜಿಲ್ಲೆಯ ಗ್ರಾಮವೊಂದರಲ್ಲಿ ಟ್ಯೂಶನ್ ಮುಗಿಸಿ ಮನೆಗೆ ಮರಳುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳು ಅಪಹರಿಸಿ, ಬಲಾತ್ಕಾರ ಮಾಡಿದ ಘಟನೆ ಗುರುವಾರ (ಏಪ್ರಿಲ್ 01)ರಂದು ನಡೆದಿದೆ. ಸರ್ದಾನ ಕೋಟ್ವಾಲಿ ಪ್ರದೇಶಕ್ಕೆ ಸೇರಿದ ಬಾಲಕಿ ಮನೆಗೆ ಮರಳಿದ ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನಾಲ್ವರು ಯುವಕರು ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಮೀರತ್​ನ ಸೂಪರಿಂಟೆಂಡೆಂಟ್ ಆಫ್ ಪೋಲೀಸ್ ಕೇಶವ್ ಕುಮಾರ್ ತಿಳಿಸಿದ್ದಾರೆ. ಬಾಲಕಿ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ಅದರಲ್ಲಿ ಬರೆದಿರುವಂತೆ 4 ದುಷ್ಕರ್ಮಿಗಳಲ್ಲಿ ಇಬ್ಬರನ್ನು ಪೋಲೀಸರು ಬಂಧಿಸಿದ್ದಾರೆ, ಇನ್ನಿಬ್ಬರನ್ನು ವ್ಯಾಪಕವಾಗಿ ಹುಡುಕಲಾಗುತ್ತಿದೆ. ಬಾಲಕಿ ಬರೆದಿರುವ ಪತ್ರದಲ್ಲಿ ಆಕೆಯ ಪಕ್ಕದ ಹಳ್ಳಿಯ ನಿವಾಸಿಗಳಾದ ಸಂಜಯ್ ಎಂಬುವವರ ಮಗ ಲಖನ್ ಮತ್ತು ಬಲವಂತ್ ಅಲಿಯಾಸ್ ಮುರಳಿ ಎನ್ನುವವರ ಮಗ ವಿಕಾಸ್ ಮತ್ತು ಇನ್ನಿಬ್ಬರ ಹೆಸರು ಪ್ರಸ್ತಾಪವಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.

ಸದ್ಯ ಲಖನ್ ಮತ್ತು ವಿಕಾಸ್ ಬಂಧನವಾಗಿದ್ದು ಉಳಿದಿಬ್ಬರನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಎಸ್​ಪಿ ತಿಳಿಸಿದ್ದಾರೆ. ಬಾಲಕಿಯ ಮನೆಯ ಬಳಿಯೇ ಇರುವ ಟವರ್ ಒಂದರ ಬಳಿ ಕಾಪಸಾಡ್ ಗ್ರಾಮದ ನಾಲ್ವರು ಯುವಕರು ಬಾಲಕಿಯನ್ನು ಅಪಹರಿಸಿ ರೇಪ್ ಮಾಡಿದ್ದಾರೆ ಎಂದು ಎಸ್​ಪಿ ತಿಳಿಸಿದ್ದಾರೆ.

ದುರ್ಘಟನೆ ನಡೆದ ನಂತರ ಬಾಲಕಿ ಮನೆಗೆ ತೆರಳಿ ದಾರುಣ ಘಟನೆಯ ಕುರಿತು ತನ್ನ ಪೋಷಕರಿಗೆ ಎಲ್ಲಾ ವಿಚಾರವನ್ನೂ ತಿಳಿಸಿದ್ದಾಳೆ. ಸ್ವಲ್ಪ ಸಮಯದ ಬಳಿಕ ವಿಷ ಸೇವಿಸಿದ್ದಾಳೆ. ಆಕೆ ವಿಷ ಸೇವಿಸಿರುವುದು ತಿಳಿಯುತ್ತಿದ್ದಂತೆ ಪೋಷಕರು ಮಗಳನ್ನು ಮೋದಿಪುರಂನ ಗ್ಲೋಬಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ಎಸ್​ಪಿ ಕೇಶವ್ ಕುಮಾರ್ ತಿಳಿಸಿದ್ದಾರೆ.
Published by:Soumya KN
First published: