ನಮ್ಮ ದೇಶ (India) ವೈವಿಧ್ಯತೆಗಳಿಗೆ ಸರಳತೆಗೆ ಹೆಸರುವಾಸಿಯಾಗಿರುವ ತಾಣವಾಗಿದೆ. ಬಡವರೂ ಶ್ರೀಮಂತರಿಗೂ ನೆಲೆಯಾಗಿರುವ ನಮ್ಮ ದೇಶ ಪ್ರತಿಯೊಬ್ಬರಿಗೂ ಸಮಾನತೆಯ (Equality) ಪಾಠವನ್ನು ತಿಳಿಸಿಕೊಟ್ಟಿದೆ. ದೇಶದ ಯಾವ ಭಾಗಕ್ಕೆ ಹೋದರೂ ಬದುಕಿಕೊಳ್ಳಬಹುದು ಎಂಬ ಧೈರ್ಯವನ್ನು ಭಾರತ ಯಾವ ನಿವಾಸಿಗಾದರೂ ನೀಡುತ್ತದೆ. ಇದುವೇ ಭಾರತಕ್ಕಿರುವ ನೈತಿಕ (Morality) ಸಾಮರ್ಥ್ಯವಾಗಿದೆ. ಆಹಾರದ ವಿಷಯಕ್ಕೆ ಬಂದರೆ ದೇಶದ ಮೂಲೆ ಮೂಲೆಗಳಲ್ಲೂ ಬಗೆ ಬಗೆಯ ರುಚಿಕರ ಆಹಾರಗಳನ್ನು (Indian Foods) ಸವಿಯಬಹುದಾಗಿದೆ. ಕೈಗೆಟಕುವ ರುಚಿಯ ಖಾದ್ಯಗಳಿಗೆ ಹೆಸರುವಾಸಿಯಾಗಿರುವ ಪಶ್ಚಿಮ ಬಂಗಾಳ (West Bengal) ಬರೇ ಹತ್ತು ರೂಪಾಯಿಗಳಲ್ಲಿ ಸ್ವಾದಿಷ್ಟ ಬಿರಿಯಾನಿಯನ್ನು (Biryani) ಉಣಬಡಿಸುತ್ತದೆ ಎಂದರೆ ಆಶ್ಚರ್ಯವಲ್ಲದೆ ಮತ್ತಿನ್ನೇನು. ಇಲ್ಲಿನ ಶ್ರೀಗನಗರ ಹಬ್ರಾದಲ್ಲಿ ರೂ 10 ಕ್ಕೆ ಬಿರಿಯಾನಿ ಸವಿಯಬಹುದಾಗಿದ್ದು, ರುಚಿಯಲ್ಲಿ ರಾಜಿಮಾಡಿಕೊಳ್ಳದೇ ಬಿರಿಯಾನಿ ಪ್ರಿಯರು ಇಲ್ಲಿ ಆಹಾರ ಸವಿಯಬಹುದಾಗಿದೆ.
ಆರಂಭದಲ್ಲಿ ಪ್ರಾಯೋಗಿಕವಾಗಿ ಬಿರಿಯಾನಿ ಮಾಲೀಕರು 10 ರೂ ಬಿರಿಯಾನಿ ಆರಂಭಿಸಿದರು ಆದರೆ ಬೇಡಿಕೆ ಹೆಚ್ಚಾದಂತೆ ಎರಡೆರಡು ಬ್ಯಾಚ್ಗಳಲ್ಲಿ ಬಂದವರ ಹೊಟ್ಟೆ ತುಂಬಿಸುತ್ತಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ, ಮಾಧವಪುರ, ಡೈಮಂಡ್ ಹಾರ್ಬರ್ನಲ್ಲಿರುವ ಅನ್ನಪೂರ್ಣ ರೆಸ್ಟೋರೆಂಟ್ನಲ್ಲಿ 50 ರ ಬಿರಿಯಾನಿ ಹಾಗೂ ರೂ 10 ರ ಬಿರಿಯಾನಿ ಹೀಗೆ ವೈವಿಧ್ಯತೆಗಳಿವೆ.
ಬಿರಿಯಾನಿ ಸವಿಯಲು ಜಾನಜಾತ್ರೆಯೇ ನೆರೆಯುತ್ತದೆ
ಚಿಕನ್ ಮಟನ್ ಬಿರಿಯಾನಿಯನ್ನು ಸವಿಯಬಹುದು
ಚಿಕನ್ ಬಿರಿಯಾನಿಯನ್ನು ರೂ 50 ಕ್ಕೆ ನೀಡುವ ಈ ರೆಸ್ಟಾರೆಂಟ್ ಗ್ರಾಹಕರಿಗೆ ವೈವಿಧ್ಯಮಯವಾಗಿ ಬಿರಿಯಾನಿ ಉಣಬಡಿಸುತ್ತಾರೆ. ಅಕ್ಕಿ ಹಾಗೂ ಚಿಕನ್ ತುಂಡುಗಳೇ ಪ್ರಧಾನವಾಗಿರುವ ಈ ಬಿರಿಯಾನಿ ಸವಿಯಲು ಸುತ್ತಮುತ್ತಲಿನ ಜನರು ಸಾಲುಗಟ್ಟಿ ಬರುತ್ತಾರೆ ಎಂದರೆ ನೀವು ನಂಬಲೇಬೇಕು. ಇನ್ನು ಇಲ್ಲೇ ದೊರೆಯುವ ರೂ 10 ರ ಬಿರಿಯಾನಿ ಸ್ಥಳೀಯರಲ್ಲಿ ಜನಪ್ರಿಯತೆ ಗಳಿಸಿದೆ ಹಾಗೂ ನೂಕುನುಗ್ಗಲು ಆಗುವುದೂ ಇದೆ.
ರುಚಿ ಹಾಗೂ ಉತ್ತಮ ಗುಣಮಟ್ಟಕ್ಕೆ ಬಿರಿಯಾನಿ ಹೆಸರುವಾಸಿ
ಹೋಟೆಲ್ ಮಾಲೀಕರು ಹೇಳುವಂತೆ 10 ರೂಪಾಯಿ ಬಿರಿಯಾನಿಗೆ ಹೆಚ್ಚಿನ ಗ್ರಾಹಕರೆಂದರೆ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಹಾಗೂ ನಿವಾಸಿಗಳಾಗಿದ್ದಾರೆ. ಈ ಬಿರಿಯಾನಿಯನ್ನು ವಿಶೇಷವಾಗಿ ಅಕ್ಕಿ ಹಾಗೂ ಚಿಕನ್ ತುಂಡುಗಳಿಂದ ತಯಾರಿಸಲಾಗುತ್ತದೆ ಹಾಗೂ ಮಧ್ಯಾಹ್ನದ ಸಮಯದಲ್ಲಿ ಲಭ್ಯವಿರುತ್ತದೆ. ಇದಕ್ಕಾಗಿಯೇ ಜನ ಸಾಲುಗಟ್ಟಿ ಬರುತ್ತಾರೆ ಎಂದು ಹೇಳುವ ಹೋಟೆಲ್ ಸಿಬ್ಬಂದಿಗಳು, ಕೆಲವರು ಒಂದು ಪ್ಲೇಟ್ ಬಿರಿಯಾನಿ ತೆಗೆದುಕೊಂಡರೆ ಇನ್ನು ಕೆಲವರು ಹೆಚ್ಚಿನ ಪ್ಲೇಟ್ ಬಿರಿಯಾನಿ ಮುಗಿಸುತ್ತಾರೆ.
ವಿದ್ಯಾರ್ಥಿಗಳಿಗಾಗಿಯೇ ಆರಂಭಿಸಿದ ಯೋಜನೆ
ಗುಣಮಟ್ಟದಲ್ಲಿ ಕೂಡ ರಾಜಿಮಾಡಿಕೊಳ್ಳದೇ ಒಂದೇ ರುಚಿಯನ್ನು ಕಾಯ್ದುಕೊಂಡಿರುವ ರೂ 10 ರ ಬಿರಿಯಾನಿ ಆಹಾರ ಪ್ರಿಯರಿಗೆ ಮೆಚ್ಚಿನ ಆಯ್ಕೆಯಾಗಿದೆ. ವಿದ್ಯಾರ್ಥಿಗಳಿಗಾಗಿಯೇ ಈ ಕೈಗೆಟಕುವ ಹಾಗೂ ಅಗ್ಗದ ಬಿರಿಯಾನಿಯನ್ನು ಮಾಲೀಕರು ಆರಂಭಿಸಿದ್ದರು ಮಕ್ಕಳು ಮಧ್ಯಾಹ್ನದ ವೇಳೆಯಲ್ಲಿ ಹೊಟ್ಟೆ ತುಂಬಾ ರುಚಿಯಾದ ಊಟ ಮಾಡಬೇಕು ಎಂಬ ನಿಟ್ಟಿನಲ್ಲಿ ರೂ 10 ರ ಬಿರಿಯಾನಿಯನ್ನು ಪರಿಚಯಿಸಲಾಯಿತು ಎಂದು ತಿಳಿಸಿದ್ದಾರೆ.
ಬಿರಿಯಾನಿ ಪ್ರಿಯರಿಗೆ ಈ ಜಾಗ ಸುಗ್ಗಿ
ಶ್ರೀನಗರ ಹಬ್ರಾದಲ್ಲಿ 10 ರೂಪಾಯಿಗೆ ದೊರೆಯುವ ಬಿರಿಯಾನಿಯನ್ನು ಸಣ್ಣ ಪ್ರಮಾಣದಲ್ಲಿ ಆರಂಭಿಸಲಾಯಿತು. ಆದರೆ ಸುದ್ದಿ ಹರಡುತ್ತಿದ್ದಂತೆ ಸುತ್ತಮುತ್ತಲಿನವರು ಬಿರಿಯಾನಿಗಾಗಿ ಬೇಡಿಕೆ ಇಡತೊಡಗಿದರು ಹಾಗೂ ಹೊಸ ವರ್ಷದ ಮೊದಲು ಪ್ರದೇಶದಲ್ಲೇ ಖ್ಯಾತಿ ಪಡೆಯಿತು ಎಂಬುದು ಮಾಲೀಕರ ಮಾತಾಗಿದೆ.
ಹೆಚ್ಚೆಚ್ಚು ಜನರು ಬಿರಿಯಾನಿ ಸವಿಯಲು ಬರುತ್ತಿರುವುದರಿಂದ ಪ್ರತ್ಯೇಕ ಪ್ರತ್ಯೇಕ ಸಾಲಿನಲ್ಲಿ ಬಿರಿಯಾನಿ ಮಾಡಿ ಬಡಿಸಲಾಗುತ್ತಿದೆ ಎಂದು ಮಾಲೀಕರು ತಿಳಿಸುತ್ತಾರೆ. ಚಿಕನ್ ಬಿರಿಯಾನಿಯೊಂದಿಗೆ ರೂ 50 ಕ್ಕೆ ಮಟನ್ ಬಿರಿಯಾನಿ ಕೂಡ ದೊರೆಯುತ್ತದೆ ಎಂಬುದು ಮಾಲೀಕರು ಹೇಳುವ ಮಾತಾಗಿದೆ.
ವಿದ್ಯಾರ್ಥಿಗಳು ಹಾಗೂ ಸ್ಥಳೀಯರಲ್ಲಿ ಬಿರಿಯಾನಿ ಕಾಕು ಅಚ್ಚುಮೆಚ್ಚು
ಬಿರಿಯಾನಿ ಕಾಕು ಎಂದೇ ಪ್ರಸಿದ್ಧರಾಗಿರುವ ಈ ಮಾಲೀಕರು, ಕಡಿಮೆ ಬೆಲೆ ಎಂದು ಬಿರಿಯಾನಿಯಲ್ಲಿ ಯಾವುದೇ ರಾಜಿಮಾಡಿಕೊಳ್ಳುತ್ತಿಲ್ಲ ಎಂಬುದು ಸ್ಥಳೀಯರ ಮಾತಾಗಿದೆ. ಊಟದ ಸಮಯದಲ್ಲಿ ಇಲ್ಲಿ ವಿದ್ಯಾರ್ಥಿಗಳು ಹಾಗೂ ಸ್ಥಳೀಯರ ದಂಡೇ ನೆರೆದಿರುತ್ತದೆ. ಸಂಜೆಯಾದರೂ ಇಲ್ಲಿ ಜನಕಡಿಮೆಯಾಗುವುದಿಲ್ಲ. ಕೈಗೆಟಕುವ ದರದಲ್ಲಿ ಬಿರಿಯಾನಿ ಉಣಬಡಿಸುವ ಬಿರಿಯಾನಿ ಕಾಕು ಸ್ಥಳೀಯರಲ್ಲಿ ಜನಪ್ರಿಯರು ಹಾಗೂ ಪ್ರೀತಿಪಾತ್ರರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ